ಭಟ್ಟಾಕಳಂಕ
ಗೋಚರ
ಭಟ್ಟಾಕಳಂಕನ ಊರು ಹಾಡವಳ್ಳಿ. ಈತನ ಅಲಂಕಾರ ಪುಸ್ತಕ 'ಶಬ್ಧಾನುಶಾಸನ'. ಈತನು ದಕ್ಷಿಣ ಕನ್ನಡ ಜಿಲ್ಲೆಯ ಅಕಳಂಕದೇವನ ಶಿಷ್ಯನೆಂದು ಹೇಳಿಕೊಂಡಿದ್ದಾನೆ. ಮಹಾವಿದ್ವಾಂಸನಾದ ಈತನು ೮ ಭಾಷೆಗಳಲ್ಲಿ ಪಂಡಿತನು. “ಕರ್ಣಾಟಕ ಶಬ್ದಾನುಶಾಸನ” ಇದು ಈತ ರಚಿಸಿದ ವ್ಯಾಕರಣ ಗ್ರಂಥ. ಇದರಲ್ಲಿ ೫೬೨ ಸೂತ್ರಗಳಿವೆ. ಇದು ಕೇಶಿರಾಜನ “ಶಬ್ದಮಣಿ ದರ್ಪಣ”ದ ನಂತರ ರಚಿತವಾದ ಪ್ರಮಾಣ ಗ್ರಂಥ. ಈತನು ಭಟ್ಕಳದ ಹಾಡವಳ್ಳಿಯನ್ನು ತನ್ನ ಕೆಂದ್ರ ಸ್ಥಾನವನ್ನ್ನಾಗಿಸಿಕೊಂಡಿದ್ದನು.
(ಅಕಲಂಕ ಪರಂಪರೆಯ ಎರಡನೇ ವಿಜಯಕೀರ್ತಿ ತನ್ನ ಶಿಷ್ಯ ದೇವರಸಒಡೆಯ ಅಥವಾ ದೇವರಾಯ ನಿಗೆ ಭಟಕಳ ಎಂಬ ನಗರ ನಿರ್ಮಿಸಿದ್ದನೆಂದಿದೆ.)
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |