ವಿಷಯಕ್ಕೆ ಹೋಗು

ಭಗವಂತಿ ನವನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಗವಂತಿ ನವನಿ
ಜನನ(೧೯೪೦-೦೨-೦೧)೧ ಫೆಬ್ರವರಿ ೧೯೪೦
ಸಾವು22 October 1986(1986-10-22) (aged 46)
ರಾಷ್ಟ್ರೀಯತೆಭಾರತೀಯ
Other namesಸಿಂಧಿ ಕೋಯಿಲ್ (ಸಿಂಧಿ ಕೋಗಿಲೆ)
ಶಿಕ್ಷಣ(s)ಹಿನ್ನೆಲೆ ಗಾಯಕಿ, ಜಾನಪದ ಗಾಯಕಿ, ನಟಿ
Years active೧೯೬೦–೧೯೮೦

ಭಗವಂತಿ ನವನಿ (೧ ಫೆಬ್ರವರಿ ೧೯೪೦ - ೨೨ ಅಕ್ಟೋಬರ್ ೧೯೮೬) ಇವರು ಸಿಂಧಿ ಭಾಷೆಯ ಸಂಗೀತ ಮತ್ತು ಚಲನಚಿತ್ರಗಳಲ್ಲಿ ಕೆಲಸ ಮಾಡಿದ ಭಾರತೀಯ ಗಾಯಕಿ ಮತ್ತು ನಟಿ. ಇವರು ಜಾನಪದ ಮತ್ತು ಹಿನ್ನೆಲೆ ಗಾಯಕಿಯಾಗಿದ್ದು, ಅವರ ಮಧುರ ಧ್ವನಿಯಿಂದಾಗಿ, "ಸಿಂಧಿ ಕೋಯೆಲ್" (ಸಿಂಧಿ ಕೋಗಿಲೆ) ಎಂದು ಜನಪ್ರಿಯರಾಗಿದ್ದರು. "ಲಾಡಾ" ಎಂದು ಕರೆಯಲ್ಪಡುವ ಅವರ ವಿವಾಹ ಗೀತೆಗಳು ಭಾರತ ಮತ್ತು ಪಾಕಿಸ್ತಾನದಲ್ಲಿ ಜನಪ್ರಿಯವಾಗಿವೆ. ಅವರು ಸಿಂಧು ಜೇ ಕಿನಾರೇ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು ಮತ್ತು ಎಂಟು ಚಿತ್ರಗಳಲ್ಲಿ ಹಿನ್ನೆಲೆ ಗಾಯಕಿಯಾಗಿ ಪ್ರದರ್ಶನ ನೀಡಿದರು.

ಜೀವನಚರಿತ್ರೆ

[ಬದಲಾಯಿಸಿ]

ಭಗವಂತಿಯವರು ೧೯೪೦ ರ ಫೆಬ್ರವರಿ ೧ ರಂದು ಬ್ರಿಟಿಷ್ ಭಾರತದ ಸಿಂಧ್‌ನ ಕರಾಚಿಯಲ್ಲಿ ಜನಿಸಿದರು. ಅವರ ಪೋಷಕರು ಸಿಂಧ್‌ನ ಐತಿಹಾಸಿಕ ಪಟ್ಟಣವಾದ ನಾಸೆರ್ಪುರದವರು.[] ಅವರ ತಂದೆಯ ಹೆಸರು ಜಸ್ಸು ಮಲ್ ನವನಿ ಮತ್ತು ತಾಯಿಯ ಹೆಸರು ವಿಶ್ನಿ ಬಾಯಿ.[] ಭಗವಂತಿಯವರಿಗೆ ಮೂವರು ಸಹೋದರರು ಮತ್ತು ಇಬ್ಬರು ಸಹೋದರಿಯರು ಇದ್ದರು. ಪಾಕಿಸ್ತಾನ ರಚನೆಯಾದಾಗ ಅವರಿಗೆ ಕೇವಲ ಏಳು ವರ್ಷ ವಯಸ್ಸಾಗಿತ್ತು ಮತ್ತು ಅವರು ತಮ್ಮ ಹೆತ್ತವರೊಂದಿಗೆ ಭಾರತದ ಬಾಂಬೆಗೆ (ಈಗ ಮುಂಬೈ) ವಲಸೆ ಹೋಗಬೇಕಾಯಿತು. ವಲಸೆಯ ಸಮಯದಲ್ಲಿ, ಅವರು ಕರಾಚಿಯ ಇಂಡಿಯನ್ ಗರ್ಲ್ಸ್ ಪ್ರೈಮರಿ ಶಾಲೆಯಲ್ಲಿ ಅಧ್ಯಯನ ಮಾಡುತ್ತಿದ್ದರು. ಮುಂಬೈನಲ್ಲಿ, ಅವರು ಕಮಲಾ ಬಾಲಕಿಯರ ಪ್ರೌಢಶಾಲೆಯಲ್ಲಿ ಮತ್ತು ಸಿಂಧಿಗಳ ಪ್ರೌಢಶಾಲೆಯಲ್ಲಿ ಅಧ್ಯಯನ ಮಾಡಿದರು. ಅವರು ೧೯೫೭ ರಲ್ಲಿ, ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು.

ಭಗವಂತಿಯವರು ದೇವಘರ್ ಸಂಗೀತ ಶಾಲೆ, ಅರುಣ್ ಸಂಗೀತ ವಿದ್ಯಾಲಯದಲ್ಲಿ ಔಪಚಾರಿಕ ಸಂಗೀತ ಶಿಕ್ಷಣವನ್ನು ಪಡೆದರು. ನಂತರ, ಅವರು ಪೀಪಲ್ ಥಿಯೇಟರ್ ಅಸೋಸಿಯೇಷನ್‌ಗೆ ಸೇರಿದರು. ಅಲ್ಲಿ ಅವರ ಸಂಗೀತ ಪ್ರತಿಭೆಯು ಕಾನು ಘೋಷ್ ಮತ್ತು ಕಾನು ರೇ ಅವರ ಮಾರ್ಗದರ್ಶನದಲ್ಲಿ ಪ್ರವರ್ಧಮಾನಕ್ಕೆ ಬಂದಿತು.[] ಭಜನೆಗಳು, ದೋಹಿರಾಗಳು, ಕಲಾಂಗಳು, ಓರನ್‌ಗಳು, ಲಾರಿಗಳು, ಲಡಾಗಳು, ಸಖಿಯೂನ್ ಮತ್ತು ಸಹರಾಸ್ ಮುಂತಾದ ಸಿಂಧಿ ಜಾನಪದ ಸಂಗೀತದ ಪ್ರತಿಪಾದಕರಾಗಿ ಅವರು ಗುರುತಿಸಲ್ಪಟ್ಟರು. ಅವರು ಹಿಂದಿ ಚಲನಚಿತ್ರೋದ್ಯಮಕ್ಕಾಗಿ ಹಾಡುವುದರ ಜೊತೆಗೆ ಮಹೇಂದ್ರ ಕಪೂರ್, ಸಿ.ಎಚ್.ಆತ್ಮಾ ಮತ್ತು ಅವರ ಕಾಲದ ಇತರ ದಿಗ್ಗಜರೊಂದಿಗೆ ಯುಗಳಗೀತೆಗಳನ್ನು ಹಾಡಿದರು.

ಅವರು ೧೯೬೦ ಮತ್ತು ೧೯೭೦ ರ ದಶಕದ ಸಿಂಧಿ ಚಲನಚಿತ್ರಗಳಲ್ಲಿ ಅತ್ಯಂತ ಜನಪ್ರಿಯ ಹಿನ್ನೆಲೆ ಗಾಯಕರಲ್ಲಿ ಒಬ್ಬರಾಗಿದ್ದರು.[] ಆ ಚಿತ್ರಗಳಲ್ಲಿ ಜುಲೇಲಾಲ್, ಲಾಡ್ಲಿ, ಸಿಂಧು ಜೆ ಕಿನಾರೆ, ಶಾಲ್ ಧೀರ್ ನಾ ಜಮಾನ್, ಹೊಜಮಾಲೊ, ಕನ್ವರ್ ರಾಮ್, ಹಾಲು ತಾ ಭಾಜಿ ಹಲೂನ್ ಮತ್ತು ಪರದೇಸಿ ಪ್ರೀತಮ್ ಸೇರಿವೆ.

ಭಗವಂತಿಯವರು ಬಹುಮುಖ ನಟಿಯಾಗಿದ್ದು, ಪ್ರಮುಖ ಸಿಂಧಿ ಭಾಷಾ ಬರಹಗಾರ ಗೋವಿಂದ್ ಮಲ್ಹಿಯವರು ಸ್ಥಾಪಿಸಿದ ಕಲಾಕರ್ ಮಂಡಲದ ಭಾಗವಾಗಿದ್ದರು. ಅವರು ಭಾರತ ಮತ್ತು ವಿದೇಶಗಳಲ್ಲಿ ೩,೦೦೦ ಕ್ಕೂ ಹೆಚ್ಚು ವೇದಿಕೆ ಪ್ರದರ್ಶನಗಳನ್ನು ನೀಡಿದ್ದಾರೆ.[] ಅವರ ಅತ್ಯಂತ ಜನಪ್ರಿಯ ನಾಟಕಗಳೆಂದರೆ: ಮೆಹ್ಮಾನ್, ಗುಸ್ತಾಖಿ ಮಾಫ್, ತುಹಿಂಜೊ ಸೂ ಮುಹಿಂಜೊ ಮತ್ತು ದೇಶ್ ಜಿ ಲಾಲ್ಕರ್. ಅವರು ೧೯೬೮ ರ ಪ್ರಸಿದ್ಧ ಸಿಂಧಿ ಚಲನಚಿತ್ರ ಸಿಂಧು ಜೆ ಕಿನಾರೆ (ಸಿಂಧೂ ನದಿಯ ದಡದಲ್ಲಿ) ನಲ್ಲಿ ನಾಯಕಿಯಾಗಿದ್ದರು.

ಅವರು ಅಕ್ಟೋಬರ್ ೨೨, ೧೯೮೬ ರಂದು ನಿಧನರಾದರು. ಅವರ ನೆನಪಿಗಾಗಿ, "ಭಗವಂತಿ ನವನಿ ಚಾರಿಟಬಲ್ ಟ್ರಸ್ಟ್" ಅನ್ನು ೩ ಅಕ್ಟೋಬರ್ ೧೯೮೭ ರಂದು ರಚಿಸಲಾಯಿತು.[]

ಉಲ್ಲೇಖಗಳು

[ಬದಲಾಯಿಸಿ]
  1. "Bhagwanti Navani". Sindhyat (in ಇಂಗ್ಲಿಷ್). Retrieved 25 May 2020.
  2. Dr Asha, Dayal (31 January 2021). "سنڌين جي ڪوئل ڀڳونتي نواڻي". Hindvasi: 2.
  3. "Bhagwanti Navani". The Sindhu World. Retrieved 25 May 2020.
  4. "Sindhu-a Je Kinare". sindhiwiki.org. Encyclopedia of Sindhi.
  5. "سنڌوءَ جي ڪناري". Encyclopedia Sindhiana (in ಸಿಂಧಿ). Retrieved 25 May 2020.
  6. "Bhagwanti Navani Trust". gobindmalhi.com. Retrieved 25 May 2020.