ಭಗವಂತ್ ಖೂಬಾ

ವಿಕಿಪೀಡಿಯ ಇಂದ
(ಭಗವಂತಪ್ಪ ಖೂಬಾ ಇಂದ ಪುನರ್ನಿರ್ದೇಶಿತ)
Jump to navigation Jump to search

ಜೂನ್ ೧, ೧೯೬೭, ಗುರುವಾರದಂದು ಔರಾದಿನಲ್ಲಿ ಶ್ರೀಮತಿ ಮಹಾದೇವಿ ಖೂಬ ಮತ್ತು ಶ್ರೀ ಗುರುಬಸಪ್ಪ ಖೂಬ ರವರಿಗೆ ಜನಿಸಿದರು, ಮೇ ೯ ಮೇ ೧೯೯೯ ರಂದು ಶ್ರೀಮತಿ ಶೀಲ ಖೂಬಾರನ್ನು ಮದುವೆಯಾಗಿದ್ದಾರೆ. ಇವರಿಗೆ ಒಬ್ಬ ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇವರು ಸಿದ್ಧಗಂಗಾ ತಾಂತ್ರಿಕ ವಿದ್ಯಾಲಯ, ತುಮಕೂರಿನಿಂದ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

ಭಾರತೀಯ ಜನತಾ ಪಕ್ಷದಲ್ಲಿರುವ ಇವರು ಬೀದರ ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.

ಅಲಂಕರಿಸಿದ ಹುದ್ದೆಗಳು[ಬದಲಾಯಿಸಿ]

  • ೨೦೧೪ ಸೆಪ್ಟೆಂಬರ ೦೧ - ಲೋಕಸಭೆ ಸದಸ್ಯರು
  • ೨೦೧೪ ಸೆಪ್ಟೆಂಬರ ೧೫ - ಸದಸ್ಯರು, ಲೋಕಸಭೆ ಸದಸ್ಯರಿಗೆ ಗಣಕ ವಿತರಿಸುವ ಸಮಿತಿ ಮತ್ತು ಸದಸ್ಯರು, ಸಲಹಾ ಸಮಿತಿ, ರೈಲ್ವೆ ಮಂತ್ರಾಲಯ
  • ೨೦೧೬ ಅಕ್ಟೋಬರ ೧೯ - ಸದಸ್ಯರು, ಆಹಾರ, ನಾರೀಕ ಸೇವೆ ಮತ್ತು ಸಾರ್ವಜನಿಕ ಹಂಚಿಕೆ

ಸಾಧನೆಗಳು[ಬದಲಾಯಿಸಿ]

ವಿವಾದ[ಬದಲಾಯಿಸಿ]

ಹೈದರಾಬಾದ ಕರ್‍ನಾಟಕ ಜನಪರ ಸಂಘರ್ಷ ಸಮಿತಿಯು ಶ್ರೀಯುತರು ಕರ್ನಾಟಕದ ಕೆಲಸಗಳ ಬಗ್ಗೆ ಕಾಳಜಿ ವಹಿಸದೆ, ಮಹಾರಾಷ್ಟ್ರದಿಂದ ಆಯ್ಕೆಯಾದವರಂತೆ ವರ್ತಿಸುತ್ತಿದ್ದಾರೆ. ಕರ್ನಾಟಕಕ್ಕಿಂತ ಹಚ್ಚು ಮಹಾರಾಷ್ಟ್ರದ ರೈಲು ಯೋಜನೆಗಳಿಗೆ ಒತ್ತು ನೀಡಿದ್ದಾರೆ ಹಾಗು ಕಲಬುರಗಿ ರೈಲು ವಿಭಾಗಕ್ಕಾಗಿ ಶ್ರಮಿಸಿಲ್ಲವೆಂದು ಅಪಾದಿಸಿದೆ.[೧]

ಉಲ್ಲೇಖ[ಬದಲಾಯಿಸಿ]

  1. http://epaper.newindianexpress.com/c/37240006?fbclid=IwAR2QhrXbN00YKFx3GrRwj2tNAVfVqGQlqqq56NQ7zw3sopjvVuQ2t717BDM