ಮುಂಬಯಿನಗರದ ಕೆರೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಬೊಂಬಾಯಿನ ಕೆರೆಗಳು ಇಂದ ಪುನರ್ನಿರ್ದೇಶಿತ)
Jump to navigation Jump to search
ಚಿತ್ರ:Banganga.JPG
'ಮುಂಬಯಿಯ ಒಂದು ಅಳಿದುಳಿದ ಕೆರೆ'-'ಬಾಣಗಂಗಾ ಕೆರೆ'

ಮುಂಬಯಿನಗರದ ಕೆರೆಗಳ ಇತಿಹಾಸ, ಬಹಳ ಪುರಾತನವಾದದ್ದು. ಈಗ್ಗೆ ಸುಮಾರು, ೨೫೦ ವರ್ಷಗಳ ಹಿಂದೆ, ಬೊಂಬಾಯಿನಗರದಲ್ಲೂ|ಮುಂಬಯಿನಗರದಲ್ಲೂ ಕುಡಿಯುವ ನೀರಿಗೆ, ಜನರು ಕೆರೆ, ಬಾವಿ, ಕುಂಟೆಗಳನ್ನು ಅವಲಂಭಿಸಿದ್ದರು. ವಿಶಾಲ ಅರಬ್ಬಿ ಸಮುದ್ರ ಊರಿನ ದಕ್ಷಿಣತುದಿಗೆ ಅತಿ ಹತ್ತಿರವಿದ್ದಾಗ್ಯೂ ಸಿಹಿನೀರಿಗೆ ಸೌಕರ್ಯವೆಂದರೆ ಕೆರೆಗಳೆ. [೧] ಆಗ ಅನೇಕ ಸಾಹುಕಾರರು, ಹಣವನ್ನು ದಾನ ಮಾಡಿ ಕೆರೆಗಳನ್ನು ಕಟ್ಟಿಸಿದ್ದರು. ಹಾಗೆ ದ್ರವ್ಯ ಸಹಾಯ ಮಾಡಿದವರಲ್ಲಿ ’ಕವಾಸ್ ಜಿ ರುಸ್ತುಂ ಜಿ ಪಟೇಲ್’ ಅವರ ಹೆಸರು ಮೊದಲನೆಯದು. ೧೮ ಮತ್ತು ೧೯ ನೆಯ ಶತಮಾನದ ಮಧ್ಯಭಾಗದಲ್ಲಿ ಆ ಸಮಯದಲ್ಲಿ ಇದ್ದ ಕೆರೆಗಳ ಸಂಖ್ಯೆ ೧೦ ಎಂದು ಪಟ್ಟಿ ಮಾಡಿದ್ದಾರೆ.

ದಾಖಲೆಯಲ್ಲಿರುವ ಹತ್ತು ಕೆರೆಗಳು[ಬದಲಾಯಿಸಿ]

'ಹಿಂದಿನ ಸಿ.ಪಿ.ಟ್ಯಾಂಕ್ ಇದ್ದ ಜಾಗದಲ್ಲಿ ಒಂದು ಭವ್ಯ ಭವನವಿದೆ'
 1. ಸಿ.ಪಿ.ಟ್ಯಾಂಕ್- ಮುಂಬಯಿ ನಗರದ ಗಿರಿಗಾಂವ್ ಪರಿಸರದಲ್ಲಿ ಈಗಿನ 'ಮೆಟ್ರೊ ಸಿನಿಮಾ'ದ ಎದುರಿಗೆ, ೧೮೭೫ ರಲ್ಲಿ ಕಟ್ಟಿದರು. 'ಕವಾಸ್ ಜಿ ರುಸ್ತುಂ ಜೀ ಪಟೇಲ್' ರವರು ಕಟ್ಟಿಸಿದ್ದು. ಈ ಜಾಗದಲ್ಲಿ ಹಿಂದಿನ ಕೆರೆಯನ್ನು ಮುಚ್ಚಿಹಾಕಿದ್ದಾರೆ. ಅದನ್ನು ತಲುಪುವ ರಸ್ತೆಯ ಫಲಕವಿನ್ನೂ ಹಾಗೆಯೇ ಇದೆ. ಅದನ್ನು ಸಿ.ಪಿ ಟ್ಯಾಂಕ್ ರಸ್ತೆ ಯೆಂದು ಕರೆಯುತ್ತಾರೆ.
 2. ಗೋವಾಲಿಯ ಕೆರೆ.
 3. ಖಾರ್ ಕೆರೆ.
 4. ೨ ಕೆರೆಗಳು.
 5. ಬಬುಲ ಕೆರೆ.
 6. ನವಾಬ್ ಕೆರೆ.
 7. 'ಫ್ರಾಮ್ ಜಿ ಕವಾಸ್ ಜಿ ಕೆರೆ', ೧೮೩೧ ರಲ್ಲಿ 'ಎಸ್ ಪ್ಲನೇಡ್' ನ ಹತ್ತಿರ, ಈಗಲೂ ಒಂದು ಚಿಕ್ಕ ಫಲಕವಿದೆ. 'ಫ್ರಾಮ್ ಜಿ ಕವಾಸ್ ಜಿ' ಕಟ್ಟಡವನ್ನು ಈ ಕೆರೆಯಿದ್ದ ಜಾಗದಲ್ಲಿ ನಿರ್ಮಿಸಿದ್ದಾರೆ.
 8. ಮುಂಬಾದೇವಿ ಕೆರೆ. ಇದನ್ನು 'ಪುತ್ಲಿಬಾಯಿ' ಎಂಬ ಅಜ್ಜಿ ಕಟ್ಟಿಸಿದರು.
 9. ಬಾಂದ್ರ ಕೆರೆ. ಇದನ್ನು ಒಬ್ಬ 'ನವ್ ಪಾಡ'ದ ಕೊಂಕಣಿ ಮುಸಲ್ಮಾನ್ ಕಟ್ಟಿಸಿದರು.
 10. . *ಬಾಣಗಂಗ ಕೆರೆ.[೨]

ಇದು ಮುಂಬಯಿಯ ಮಲಬಾರ್ ಹಿಲ್ ಜಿಲ್ಲೆಯ 'ವಾಲ್ಕೇಶ್ವರ್ ದೇವಾಲಯ'ದ ಬಳಿ ಇರುವ, ಅತ್ಯಂತ ಪ್ರಾಚೀನವಾದ ಕೆರೆಯೆಂದು ಪ್ರತೀತಿ. ಬಹುಶಃ ಶ್ರೀರಾಮಚಂದ್ರಜಿ ಕಾಲದ್ದೆಂದು ತಿಳಿದವರು ಹೇಳುತ್ತಾರೆ. ಬಾಣಗಂಗಾ ಎನ್ನುವುದು ಒಂದು ಕೆರೆಯ ಹೆಸರು. ರಾಮಾಯಣದ ಲಕ್ಷ್ಮಣ, ಬಾಣ ಹೊಡೆದು ಗಂಗೆಯನ್ನು ತರಿಸಿದ ಎಂದು ಪುರಾಣ ಕಥೆ. ಇದರ ಬಗ್ಗೆ ವಿಸ್ತಾರವಾದ ಮಾಹಿತಿಯನ್ನು, ಇಂಗ್ಲೀಷ್ ವಿಕಿಪೀಡಿಯ ತಾಣದಲ್ಲಿ ಪಡೆಯಬಹುದು.

ಬಾವಿಗಳನ್ನು ಕೆಲವು ಕಡೆ ಕಾಣಬಹುದು[ಬದಲಾಯಿಸಿ]

ಸಾಮಾನ್ಯವಾಗಿ ಕೆರೆಗಳಲ್ಲಿ ಜಾನುವಾರುಗಳ ಮೈ ತೊಳೆಯಲು ಹಾಗೂ ಬಟ್ಟೆಒಗೆಯಲು, ಮತ್ತು ನಾಗರಿಕ ಸೌಲಭ್ಯಗಳಿಗಾಗಿ ನೀರನ್ನು ಬಳಸುತ್ತಿದ್ದರು. ಜನಸಂಖ್ಯೆ ಹೆಚ್ಚಾದಂತೆ, ಪರಿಸರ ಮಾಲೀನ್ಯತೆಯೂ ಹೆಚ್ಚಾಗಿ ಅಂತಹ ಪ್ರದೇಶದ ನೀರು ಅಶುದ್ಧಿಯಾದ್ದರಿಂದ ಬಳಸಲು ಕಷ್ಟ ವಾಯಿತು. ಬಾಂಬೆ ಗೆಝೆಟಿಯರ್ ತಿಳಿಸುವಂತೆ, ೧೯೦೯ ರಲ್ಲಿ ಅಂದಿನ ಕೆರೆಗಳು ಆಳವಿಲ್ಲದ್ದರಿಂದ ನೀರು ಬೇಗ ಖರ್ಚಾಗುತ್ತಿತ್ತು. ಆದ್ದರಿಂದ ಮಾನ್ಸೂನ್ ಬರುವಮುನ್ನ ಒಂದೆರಡು ಬಾವಿಗಳನ್ನು ತೋಡುವುದು ಸಾಮಾನ್ಯವಾದ ಸಂಗತಿಯಾಗಿತ್ತು. ಆಗಿನ ಸರ್ಕಾರದವರು, ಎತ್ತಿನ ಬಂಡಿಗಳಲ್ಲಿ ದೊಡ್ಡ ಮಡಕೆಗಳಲ್ಲಿ ನೀರನ್ನು ದೂರಪ್ರದೇಶದಿಂದ ತಂದು ಬೋರಿಬಂದರ್ ನ ಹಲವು ಬಾವಿಗಳಲ್ಲಿ ನೀರು ತುಂಬುತ್ತಿದ್ದರಂತೆ. ಜನರು ನೀರಿನ ಗಾಡಿಗಳನ್ನು ನಿರೀಕ್ಷಿಸುತ್ತಾ ನಿಂತ ದೃಶ್ಯ ಸರ್ವೇಸಾಮಾನ್ಯವಾಗಿತ್ತು. ತುಳಸಿ ಮತ್ತು ಬೇರೆ ಸರೋವರಗಳನ್ನು ಕಟ್ಟಿಸಿದ ನಂತರ ಬೊಂಬಾಯಿಗೆ ಕೊಳವೆಗಳಲ್ಲಿ ಕುಡಿಯುವನೀರಿನ ಪೂರೈಕೆಯನ್ನು ಮಾಡಿದನಂತರ ಕೆರೆ ಬಾವಿಗಳ ಉಪಯೋಗ ಕಡಿಮೆಯಾಗುತ್ತ ಬಂತು. ಈಗ ಪ್ರಸ್ತುತ ಮುಂಬಯಿನಗರದಲ್ಲಿ ಕೇವಲ ೨ ಕೆರೆಗಳು ಮಾತ್ರ ಅಸ್ತಿತ್ವದಲ್ಲಿವೆ.

 1. ಬಾಂದ್ರ ಕೆರೆ
 2. ಬಾಣಗಂಗ ಕೆರೆ

ಇವೆರಡೂ ಕಲುಷಿತವಾಗಿದ್ದು ಕುಡಿಯಲು ಅರ್ಹವಾಗಿಲ್ಲ. ಬಾವಿಗಳು ಇನ್ನೂ ಕೆಲವೆಡೆ ಕಾಣಿಸುತ್ತವೆ. ಆದರೆ ಅವುಗಳ ನೀರು ಕುಡಿಯಲು ಉಪಯೋಗಕ್ಕೆ ಬರುವುದಿಲ್ಲ.

ಕೆಲವು ಕೆರೆ-ಬಾವಿಗಳ ಹೆಸರುಗಳು[ಬದಲಾಯಿಸಿ]

 1. 'ಮಾಹಿಮ್ ಜಿಲ್ಲೆಯಲ್ಲಿರುವ, ಮನಮಾಲಾ ಟ್ಯಾಂಕ್ ರೋಡ್' ನಲ್ಲಿರುವ ಬಾವಿ.
 2. 'ಹೈಕೋರ್ಟ್ ಮುಂದಿರುವ ಬಾವಿ'.
 3. 'ಬೆಹ್ರಾಂ ಪಾರ್ಸಿ-ಬಾವಿ ಕ್ರಾಸ್ ಮೈದಾನ್'
 4. 'ಮಾಹಿಮ್ ನಲ್ಲಿ ಕಟಾರಿಯರೋಡ್ ನಲ್ಲಿರುವ ಬಾವಿ'.
 5. 'ಅಂಧೇರಿಯ ಗಣೇಶ್ ಮಂದಿರ ಹಾಗೂ ಅಸಾಲ್ಫಾ, ಘಾಟ್ಕೋಪರ್, ಹನುಮಾನ್ ಮಂದಿರಗಳ ಬಾವಿಗಳು'.
 6. 'ಮಾಹಿಮ್ ನ ಸಿತ್ಲಾದೇವಿ ದೇವಸ್ಥಾನದ ಪ್ರಾಂಗಣದಲ್ಲಿರುವ ಬಾವಿ'.
 7. 'ಥಾನೆಯಲ್ಲಿ ಕೆಲವು ಕೆರೆ-ಬಾವಿಗಳಿವೆ'.
 8. ಘಾಟ್ಕೋಪರ್ (ಪ) ದಲ್ಲಿರುವ ಹಿಮಾಲಯ ಹೌಸಿಂಗ್ ಕೋ.ಆಪ್. ಸೊಸೈಟಿಯ ಹತ್ತಿರವಿರುವ ಸಂಕಟ ವಿಮೋಚನ್ ಹನುಮಾನ್ ಮಂದಿರ್, ಘಾಟ್ಕೋಪರ್ (ಪ), ಮುಂಬಯಿ ನ ಪರಿರದಲ್ಲಿ ಒಂದು ಭಾವಿ ಈಗಲೂ ಬಳಕೆಯಲ್ಲಿದೆ.

ಉಲ್ಲೇಖಗಳು[ಬದಲಾಯಿಸಿ]

 1. 'Tanks of bombay'
 2. banaganga tank banaganga tank