ಬೆಳ್ಳಿತೆರೆ ಬೆಳಗಿದವರು

ವಿಕಿಪೀಡಿಯ ಇಂದ
Jump to navigation Jump to search

ಬೆಳ್ಳಿತೆರೆ ಬೆಳಗಿದವರು ಅ.ನಾ.ಪ್ರಹ್ಲಾದ ರಾವ್ ಬರೆದಿರುವ ೨೦೦೭ರಲ್ಲಿ ಬಿಡುಗಡೆ ಆದ ೨೨೦ ಪುಟಗಳ ಪುಸ್ತಕ. ಇದು ಕನ್ನಡ ಚಲನಚಿತ್ರ ರಂಗದ ಸರ್ವತೋಮುಖ ಅಭಿವೃದ್ಡಿಗೆ ಕೊಡುಗೆ ನೀಡಿದ ೧೧೫ ಮಂದಿ ಮಹಾನುಭಾವರ ಬಗ್ಗೆ ಈ ಪುಸ್ತಕದಲ್ಲಿ ಲೇಖನಗಳಿವೆ.ಕನ್ನಡ ಚಲನಚಿತ್ರರಂಗದ ಆದ್ಯ ಪಿತಾಮಹ ಗುಬ್ಬಿ ವೀರಣ್ಣ, ಕನ್ನಡದ ಮೊದಲ ಚಲನಚಿತ್ರ ಸತಿ ಸುಲೋಚನ ನಾಯಕ ಸುಬ್ಬಯ್ಯ ನಾಯ್ಡು, ಮೇರು ನಟ ಡಾ.ರಾಜ್‌ಕುಮಾರ್ ಸೇರಿದಂತೆ ಹಿರಿಯ ನಟ ನಟಿಯರು, ಸಂಗೀತ ನಿರ್ದೇಶಕರು, ತಂತ್ರಜ್ಙರು, ಹಿನ್ನೆಲೆ ಗಾಯಕರೇ ಮುಂತಾದವರ ಬಗ್ಗೆ ಪರಿಚಯ ಲೇಖನಗಳನ್ನು ಈ ಪುಸ್ತಕ ಒಳಗೊಂಡಿದೆ. ಖ್ಯಾತ ನಿದೇ೯ಶಕ ಗಿರೀಶ್ ಕಾಸರವಳ್ಳಿ ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ. ಪುಸ್ತಕವನ್ನು ಹಿರಿಯ ಕವಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಬಿಡುಗಡೆ ಮಾಡಿದರು. "ಯಾವುದೇ ಉತ್ಪ್ರೇಕ್ಷೆ ಇಲ್ಲದೆ, ಕೇವಲ ಅಂಕಿ-ಅಂಶಗಳ ಆಧಾರದ ಮೇಲೆ ವಿವರ ಕಟ್ಟುತ್ತಾ ಹೋಗುವ ಈ ಲೇಖನಗಳನ್ನು ಒಂದು ಒಳ್ಳೆಯ ಆಕರ ಸಾಮಾಗ್ರಿಯಾಗಿ ನೋಡಬಹುದು. ಲೇಖಕನ ವೈಯಕ್ತಿಕ ಅನಿಸಿಕೆಗಳನ್ನು ಇಲ್ಲಿ ಸೇರಿಸಿಲ್ಲವಾದ್ದರಿಂದ ವಿಷಯದ ಮೇಲ್ಮೈ ದಾಟಿ ಒಳನುಗ್ಗಿ ನೋಡುವವರಿಗೆ ಸ್ವಲ್ಪ ನಿರಾಶೆಯಾಗಬಹುದು. ಆದರೆ ಒಂದು ವಿಷಯ ಸೂಚಿ ಗ್ರಂಥ ಏನನ್ನು ಸಾಧಿಸಲು ಹೊರಟಿರುತ್ತದೆ ಅದು ಇಲ್ಲಿ ಪೂರ್ಣಗೊಂಡಿದೆ" ಎಂದು ಮುನ್ನುಡಿಯಲ್ಲಿ ಗಿರೀಶ್ ಕಾಸರವಳ್ಳಿ ಹೇಳಿದ್ದಾರೆ

ಮೂಲ[ಬದಲಾಯಿಸಿ]

http://www.hinduonnet.com/thehindu/thscrip

https://www.youtube.com/watch?v=izdcHZ95wfE

https://www.bookbrahma.com/book/bellitere-belagidavaru