ವಿಷಯಕ್ಕೆ ಹೋಗು

ಬೀಸು ಕಲ್ಲಿನ ಪದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೀಸು ಕಲ್ಲಿನ ಹಾಡು ಅಥಾವ ಬೀಸು ಕಲ್ಲಿನ ಪದಗಳು ಹಳ್ಳಿಯ ಹಿರಿಯ ಹೆಂಗಸರ ಮೂಲಕ ಮೌಖಿಕವಾಗಿ ಹಾಡುವ ಹಾಡು.

ಹಿರಿಯ ಹೆಂಗಸರ ಮೂಲಕ ಮೌಖಿಕವಾಗಿ ಹಾಡುವ ಬೀಸು ಕಲ್ಲಿನಹಾಡು.

ಈ ಹಾಡನ್ನು ಮೌಖಿಕವಾಗಿಯೇ ಪರಂಪರೆಯಾಗಿ ವರ್ಗಾಯಿಸಿರುವ, “ಬೀಸು ಕಲ್ಲು” ಉಪಕರಣದ ಸುತ್ತಲೂ ಗಾನವಾಗಿ ಉಕ್ಕುವ ಹಲವು ಪದಭಾಗಗಳನ್ನು ನಾವು ಗುರುತಿಸಬಹುದು. ಈ ಮೂಲಕ “ಬೀಸು ಕಲ್ಲಿನ ಹಾಡು” ಎಂದರೆ ಸರಿಯಾಗಿ ಹಳ್ಳಿಯ ಬೀಸುವ ಉಪಕರಣದ “ಬೀಸು ಕಲ್ಲು” ಅಥವಾ ಅದನ್ನು ಬಳಸಿ ಹಾಡಲ್ಪಡುವ ಗಾನ ಶೈಲಿ ಎಂದು ಹೇಳಬಹುದು. []

ಒಂದು ಬೀಸು ಕಲ್ಲಿನ ಪದ್ಯ

[ಬದಲಾಯಿಸಿ]
ಬೀಸು ಕಲ್ಲು ಪದ್ಯ- ಸೋಬಾನ ಹಾಡು - ಅಕ್ಕಮ್ಮ ಹೊಲದೂರುಮಠ, ಬಸ್ಸವ್ವ ಗುಡದಪ್ಪನವರ್, ಪಾರ್ವತಿ ಭೀಮನಗೌಡರ್, ಶಿವವ್ವ ಕಧಾಪೂರ

ಕಲ್ಲಮ್ಮ ತಾಯಿ ಮೆಲ್ಲಮ್ಮ ರಾಗಿಯ
ಜಲ್ಲಜಲ್ಲಾನೆ ಉದುರಮ್ಮ। ನಾ ನಿನಗೆ
ಬೆಲ್ಲಾದಾರತಿಯಾ ಬೆಳಗೇನು ॥
ಅಂದುಳ್ಳ ಅಡಿಗಲ್ಲು ಚಂದುಳ್ಳ ಮೇಗಲ್ಲು
ಚಂದ್ರಮತಿಯೆಂಬ ಹಿಡಿಗೂಟ । ಹಿಡುಕೊಂಡು
ತಂದೆ ತಾಯಿಗಳ ನೆನೆದೇನ ॥
ರಾಗಿಯು ಮುಗಿದಾವು ರಾಜಾನ್ನ ಹೆಚ್ಚ್ಯಾವು
ನಾನ್ಹಿಡಿದ ಕೆಲಸ ವದಗ್ಯಾವು। ರಾಗೀಕಲ್ಲೆ
ನಾ ತೂಗಿ ಬಿಡುತೀನಿ ಬಲದೋಳು ॥
ಕಲ್ಲು ಬಿಟ್ಟೇನೆಂದು ಸಿಟ್ಯಾಕೆ ಸರಸತಿಯೇ
ಕುಕ್ಕೇಲಿ ರಾಗಿ ಬೆಳೆಯಾಲಿ । ತಕ್ಕೊಂಡು
ಮತ್ತೆ ರಾತ್ರೀಗೆ ಬರುತೀನಿ ॥[]

ಉಲ್ಲೇಖಗಳು

[ಬದಲಾಯಿಸಿ]
  1. ಸ್ವಾಮಿ, ನಾ ಮಂಜುನಾಥ. "ದೇಸಿಪದಗಳಿಗೆ ಧ್ವನಿಯಾಗುವ ರಾಜಮ್ಮ". Prajavani.
  2. "ಬೀಸೋಕಲ್ಲಿನ ಪದ (ಪದ್ಯ) – 4ನೇ ತರಗತಿ ಕನ್ನಡ | hulkutrischool.in".