ವಿಷಯಕ್ಕೆ ಹೋಗು

ಬೀರೇಂದ್ರ ನಾಥ್ ದತ್ತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೀರೇಂದ್ರ ನಾಥ್ ದತ್ತ
ದತ್ತರವರು ಮತ್ತು ಅವರ ಪತ್ನಿ ಇಭಾ ಬರುವಾ
ಜನನ(೧೯೩೫-೦೩-೦೧)೧ ಮಾರ್ಚ್ ೧೯೩೫
ನಾಗಾಂವ್, ಅಸ್ಸಾಂ ಪ್ರಾಂತ್ಯ, ಬ್ರಿಟಿಷ್ ಭಾರತ
ಮರಣ೨೩ ಅಕ್ಟೋಬರ್ ೨೦೨೩ (ವಯಸ್ಸು ೮೮)
ಗುವಾಹಟಿ, ಅಸ್ಸಾಂ, ಭಾರತ
ಮುಖ್ಯ ಹವ್ಯಾಸಗಳುಜಾನಪದ
ಪ್ರಮುಖ ಕಾರ್ಯಗಳುಈಶಾನ್ಯ ಭಾರತದ ಸಾಂಸ್ಕೃತಿಕ ರೂಪರೇಷೆಗಳು

ಬೀರೇಂದ್ರ ನಾಥ್ ದತ್ತ (೧ ಮಾರ್ಚ್ ೧೯೩೫ - ೨೩ ಅಕ್ಟೋಬರ್ ೨೦೨೩) ಇವರು ಭಾರತೀಯ ಶಿಕ್ಷಣತಜ್ಞ, ಭಾಷಾಶಾಸ್ತ್ರಜ್ಞ, ಲೇಖಕ, ಜಾನಪದ ಸಂಶೋಧಕ, ಗಾಯಕ ಮತ್ತು ಗೀತರಚನೆಕಾರರಾಗಿದ್ದು, ತಮ್ಮ ವೃತ್ತಿಜೀವನದಲ್ಲಿ, ಅವರು ಮುಖ್ಯವಾಗಿ ಅಸ್ಸಾಂನ ವಿವಿಧ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.[][] ೨೦೦೯ ರಲ್ಲಿ, ಅವರಿಗೆ ಸಾಹಿತ್ಯ ಮತ್ತು ಶಿಕ್ಷಣಕ್ಕಾಗಿ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀಯನ್ನು ನೀಡಲಾಯಿತು ಮತ್ತು ೨೦೧೦ ರಲ್ಲಿ, ಅವರು ಜಗಧಾತ್ರಿ-ಹರ್ಮೋಹನ್ ದಾಸ್ ಸಾಹಿತ್ಯ ಪ್ರಶಸ್ತಿಯನ್ನು ಪಡೆದರು. ದತ್ತಾ ಅವರು ೨೦೦೩ ರ ಉತ್ತರ ಲಖಿಂಪುರ ಅಧಿವೇಶನ ಮತ್ತು ೨೦೦೪ ರ ಹೊಜೈ ಅಧಿವೇಶನಕ್ಕಾಗಿ ಅಸ್ಸಾಂ ಸಾಹಿತ್ಯ ಸಭಾದ ಅಧ್ಯಕ್ಷರಾಗಿ ಆಯ್ಕೆಯಾದರು.[]

ಆರಂಭಿಕ ಜೀವನ

[ಬದಲಾಯಿಸಿ]

ಬೀರೇಂದ್ರ ನಾಥ್ ದತ್ತರವರು ಮಾರ್ಚ್ ೧, ೧೯೩೫ ರಂದು ಅಸ್ಸಾಂನ ನಾಗಾವ್‌ನಲ್ಲಿ ಶಾಲಾ ಶಿಕ್ಷಕ ಕಲ್ಪನಾಥ್ ದತ್ತಾ ಮತ್ತು ಮಂದಾಕಿನಿ ದತ್ತಾ ದಂಪತಿಗೆ ಜನಿಸಿದರು. ಅವರ ಮೂಲ ಮನೆ ಬೈಹತಾ ಚರಿಯಾಲಿ ಬಳಿಯ ಪನೇರಾ ಗ್ರಾಮದಲ್ಲಿತ್ತು.

ದತ್ತರವರು ತಮ್ಮ ಶಿಕ್ಷಣವನ್ನು ಗುವಾಹಟಿಯ ಚೆನಿಕುಥಿ ಎಲ್ಪಿ ಶಾಲೆಯಲ್ಲಿ ಪ್ರಾರಂಭಿಸಿದರು ಮತ್ತು ನಂತರ, ಗೋಲ್ಪಾರಾದಲ್ಲಿ ಅಧ್ಯಯನ ಮಾಡಿದರು. ೧೯೩೩ ರಲ್ಲಿ, ದತ್ತರವರು ಗುವಾಹಟಿ ವಿಶ್ವವಿದ್ಯಾಲಯದಲ್ಲಿ ಮೆಟ್ರಿಕ್ಯುಲೇಷನ್ ಮತ್ತು ಐ.ಎಸ್‌ಸಿ ಪರೀಕ್ಷೆಗಳಲ್ಲಿ ಅಗ್ರ ೧೦ ರಲ್ಲಿ ಸ್ಥಾನ ಪಡೆದರು. ಅವರು ವಿಶ್ವಭಾರತಿ ವಿಶ್ವವಿದ್ಯಾಲಯದಿಂದ ಪದವಿ ಮತ್ತು ಗುವಾಹಟಿ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದರು.

ವೃತ್ತಿಜೀವನ

[ಬದಲಾಯಿಸಿ]

೧೯೫೭ ರಲ್ಲಿ, ಬಿ.ಬೊರೂವಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದರು. ೧೯೬೪ ರಲ್ಲಿ, ಅವರು ಕೆಳ ಅಸ್ಸಾಂನ ಗೌರಿಪುರದ ಪ್ರಮಥೇಶ್ ಬರುವಾ ಕಾಲೇಜಿಗೆ ಸ್ಥಾಪಕ ಪ್ರಾಂಶುಪಾಲರಾಗಿ ಸೇರಿದರು. ಅವರು ಗೋಲ್ಪಾರಾ ಕಾಲೇಜು ಮತ್ತು ಪಾಂಡು ಕಾಲೇಜು ಎಂಬ ಇತರ ಎರಡು ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡಿದರು.

೧೯೭೪ ರಲ್ಲಿ, ಅವರು ಪ್ರಫುಲ್ಲ ದತ್ತಾ ಗೋಸ್ವಾಮಿ ಅವರ ಮೇಲ್ವಿಚಾರಣೆಯಲ್ಲಿ ಜಾನಪದದಲ್ಲಿ ಪಿಎಚ್‌ಡಿ ಪದವಿ ಪಡೆದರು.

೧೯೭೯ ರಲ್ಲಿ, ಅವರು ಗುವಾಹಟಿ ವಿಶ್ವವಿದ್ಯಾಲಯದಲ್ಲಿ ಓದುಗರಾಗಿ ಸೇರಿದರು ಮತ್ತು ನಂತರ, ಜಾನಪದ ಸಂಶೋಧನಾ ವಿಭಾಗದ ಮುಖ್ಯಸ್ಥರಾದರು. ೧೯೯೫ ರಲ್ಲಿ, ಗುವಾಹಟಿ ವಿಶ್ವವಿದ್ಯಾಲಯವನ್ನು ತೊರೆದ ನಂತರ, ಅವರು ತೇಜ್ಪುರ ವಿಶ್ವವಿದ್ಯಾಲಯದಲ್ಲಿ ಸಾಂಪ್ರದಾಯಿಕ ಸಂಸ್ಕೃತಿ ಮತ್ತು ಕಲಾ ಪ್ರಕಾರಗಳ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇರಿದರು.

ಸಾಹಿತ್ಯ ವೃತ್ತಿಜೀವನ

[ಬದಲಾಯಿಸಿ]

ದತ್ತರವರು ಹಲವಾರು ವಿದ್ವತ್ಪೂರ್ಣ ಪುಸ್ತಕಗಳನ್ನು ಸಹ ಬರೆದಿದ್ದಾರೆ. ಅವರ ಪುಸ್ತಕಗಳಲ್ಲಿ ಒಂದಾದ ಕಲ್ಚರಲ್ ಕಾಂಟೋರ್ಸ್ ಆಫ್ ನೋರ್ತೆಸ್ಟ್ ಇಂಡಿಯಾವನ್ನು ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್ ಪ್ರಕಟಿಸಿತು. ಶಂಕರ್ ಮಾಧವರ್ ಮನಿಷಾ ಅರು ಅಸೋಮರ್ ಸನಸ್ಖೃಟಿಕ್ ಉತ್ತರಾಧಿಕಾರ್ ಎಂಬ ಅವರ ಪುಸ್ತಕಕ್ಕಾಗಿ, ಅವರು ೧೨ ನೇ ಜಗದ್ಧಾತ್ರಿ-ಹರ್ಮೋಹನ್ ದಾಸ್ ಸಾಹಿತ್ಯ ಪ್ರಶಸ್ತಿಯನ್ನು ಗೆದ್ದರು.[]

ಸಂಗೀತ ವೃತ್ತಿಜೀವನ

[ಬದಲಾಯಿಸಿ]

ದತ್ತ ಅವರು ಗಾಯಕ ಮತ್ತು ಸಂಯೋಜಕರೂ ಆಗಿದ್ದರು. ಅವರು ರಾಗ ಸಂಯೋಜಿಸಿದ ಹಾಡುಗಳಲ್ಲಿ "ಮೊನೊರ್ ಖೋಬಾರ್", "ಬಹುದಿನ್ ಬೊಕುಲೋರ್ ಗೊಂಡ್ ಪೋವಾ ನಾಯ್", "ಮೇಲಿ ದಿಲೋ ಮನ್", "ರೋಹಿಮಾಲಾ ಉರೋನಿರ್ ಮಾಜೆರೆ", "ಸೌ ಸಿರೀಶ್ ದಾಲತ್", "ತೋಮಾರ್ ಕಾರಾನೆ ಜಾವು", "ಆಹಿನಾಕ್ ಕೋನೆ ಅನಾನೆ", "ಮೌ ದಾಪೋನಾರ್", "ಸೀತಾ ಬನಾಬಾಶ್", "ಬೋಗೋಲಿ ಬೋಗಾ ಫೋಟ್ ಡಿ ಜಾ", "ಜಿಲಿರ್ ಮಾತೆ", "ಓ ಘನ್ ಚಿರಿಕಾ", "ಆಕಾಶ್ ತೋಮಾ" ಸೇರಿವೆ. ಅವರು ಅಸ್ಸಾಮಿ ಭಾಷೆಯ ಚಲನಚಿತ್ರಕ್ಕಾಗಿ ಹಾಡುಗಳನ್ನು ಹಾಡಿದ್ದು, ಇದನ್ನು ಸ್ಮೃತಿರ್ ಪರಶ್ ಮತ್ತು ಬ್ರೋಜೆನ್ ಬರುವಾರವರು ನಿರ್ದೇಶಿಸಿದ್ದಾರೆ.[]

ಬೀರೇಂದ್ರ ನಾಥ್ ದತ್ತ ಅವರು ಅಕ್ಟೋಬರ್ ೨೩, ೨೦೨೩ ರಂದು ತಮ್ಮ ೮೮ ನೇ ವಯಸ್ಸಿನಲ್ಲಿ ಗುವಾಹಟಿಯಲ್ಲಿ ನಿಧನರಾದರು.[]

ಪ್ರಶಸ್ತಿಗಳು

[ಬದಲಾಯಿಸಿ]
  • ಪದ್ಮಶ್ರೀ (೨೦೦೯)[][]
  • ಜಗಧಾತ್ರಿ-ಹರ್ಮೋಹನ್ ದಾಸ್ ಸಾಹಿತ್ಯ ಪ್ರಶಸ್ತಿ (೨೦೧೦)

ಉಲ್ಲೇಖಗಳು

[ಬದಲಾಯಿಸಿ]
  1. "Music Not Solely For Entertainment". Archived from the original on 4 March 2016. Retrieved 11 March 2013.
  2. "Cultural Contours of North-East India". Oxford University Press. Archived from the original on 12 March 2012. Retrieved 11 March 2013.
  3. "List of Asam Sahitya Sabha presidents". Archived from the original on 29 January 2013. Retrieved 7 December 2012.
  4. "Dr Birendra Nath Datta conferred literary award". Assam Tribune. Archived from the original on 3 March 2016. Retrieved 11 March 2013.
  5. "Birendranath Datta". srimanta.net. Archived from the original on 29 September 2013. Retrieved 7 April 2013.
  6. Assam: Eminent academician, singer and lyricist Birendra Nath Datta passes away at 88
  7. "Padma awards 2009". Archived from the original on 4 March 2016. Retrieved 13 March 2013.
  8. "Padma Awards Directory (1954–2009)" (PDF). Ministry of Home Affairs. Archived from the original (PDF) on 10 May 2013.