ಬೀನಾ ಅಗರ್ವಾಲ್
ಬೀನಾ ಅಗರ್ವಾಲ್ | |
|---|---|
2012ರಲ್ಲಿ ಅಗರ್ವಾಲ್ | |
| ಕ್ಷೇತ್ರ | ಅಭಿವೃದ್ಧಿ ಅರ್ಥಶಾಸ್ತ್ರ[೧] |
| ಶಿಕ್ಷಣ | ಕೇಂಬ್ರಿಡ್ಜ್ ವಿಶ್ವವಿದ್ಯಾಲಯ (ಬಿ.ಎ., ಎಂ.ಎ.) ದೆಹಲಿ ವಿಶ್ವವಿದ್ಯಾಲಯ (ಪಿಎಚ್.ಡಿ.) |
| ಪ್ರಶಸ್ತಿಗಳು | ಆನಂದ ಕೆಂಟಿಶ್ ಕುಮಾರಸ್ವಾಮಿ ಪುಸ್ತಕ ಪ್ರಶಸ್ತಿ1996 ಎಡ್ಗರ್ ಗ್ರಹಾಂ ಪುಸ್ತಕ ಪ್ರಶಸ್ತಿ1996 ಕೆ. ಎಚ್. ಬತೇಜಾ ಪ್ರಶಸ್ತಿ 1995–96 ಲಿಯೋಂಟಿಫ್ ಪ್ರಶಸ್ತಿ 2010 ಕೆನ್ನೆತ್ ಬೌಲ್ಡಿಂಗ್ ಪ್ರಶಸ್ತಿ 2023 |
| Notes | |
ಬೀನಾ ಅಗರ್ವಾಲ್ ಅವರು ಭಾರತೀಯ ಪದ್ಮಶ್ರೀ ಪುರಸ್ಕೃತ, ಅಭಿವೃದ್ಧಿ ಅರ್ಥಶಾಸ್ತ್ರಜ್ಞೆ (development economist) ಮತ್ತು ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯದ ಜಾಗತಿಕ ಅಭಿವೃದ್ಧಿ ಸಂಸ್ಥೆಯಲ್ಲಿ ಅಭಿವೃದ್ಧಿ ಅರ್ಥಶಾಸ್ತ್ರ ಮತ್ತು ಪರಿಸರ ವಿಭಾಗದ ಪ್ರಾಧ್ಯಾಪಕಿ.
ಅವರು ಜಮೀನು, ಜೀವನೋಪಾಯ ಮತ್ತು ಆಸ್ತಿ ಹಕ್ಕುಗಳು; ಪರಿಸರ ಮತ್ತು ಅಭಿವೃದ್ಧಿ; ಲಿಂಗಾಧರಿತ ಆರ್ಥಿಕತೆ; ಬಡತನ ಮತ್ತು ಅಸಮಾನತೆ; ಕಾನೂನು ಪರಿವರ್ತನೆ; ಕೃಷಿ ಮತ್ತು ತಾಂತ್ರಿಕ ರೂಪಾಂತರದ ಕುರಿತು ವ್ಯಾಪಕವಾಗಿ ಬರೆದಿದ್ದಾರೆ.
ಅವರು "ಎ ಫೀಲ್ಡ್ ಆಫ್ ಒನ್ಸ್ ಓನ್: ಜೆಂಡರ್ ಅಂಡ್ ಲ್ಯಾಂಡ್ ರೈಟ್ಸ್ ಇನ್ ಸೌತ್ ಏಷ್ಯಾ" (ಸ್ವಂತ ಭೂಮಿ: ದಕ್ಷಿಣ ಏಷ್ಯಾದ ಲಿಂಗಾಧರಿತ ಆಸ್ತಿ ಹಕ್ಕುಗಳು) ಎಂಬ ಪುಸ್ತಕದ ಲೇಖಕಿಯಾಗಿದ್ದು, ಇದು ಸರ್ಕಾರಗಳು, ಎನ್‌ಜಿಒಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಮೇಲೆ ಭೂಮಿ ಮತ್ತು ಆಸ್ತಿಯ ಮೇಲಿನ ಮಹಿಳೆಯರ ಹಕ್ಕುಗಳನ್ನು ಉತ್ತೇಜಿಸುವಲ್ಲಿ ಪ್ರಭಾವ ಬೀರಿದೆ.[೨] ದಕ್ಷಿಣ ಏಷ್ಯಾವಷ್ಟೇ ಅಲ್ಲದೇ, ಇದು ದಕ್ಷಿಣ ಅಮೆರಿಕ ಸಹಿತವಾಗಿ ಜಾಗತಿಕ ಸಂಶೋಧನೆಗೆ ಸ್ಫೂರ್ತಿ ನೀಡಿದೆ. [೩]
ಆರಂಭಿಕ ಜೀವನ ಮತ್ತು ಶಿಕ್ಷಣ
[ಬದಲಾಯಿಸಿ]ಅಗರ್ವಾಲ್ ಅವರ ತಂದೆ ಸೂರಜ್ ಮಾಲ್ ಮತ್ತು ತಾಯಿ ಶ್ಯಾಮಾ ದೇವಿ ಅಗರ್ವಾಲ್. (ಅವರ ಪೊಷಕರ ಗೌರವಾರ್ಥವಾಗಿ ಅಗರ್ವಾಲ್‍ರವರು ಪುಸ್ತಕ ಬಹುಮಾನವನ್ನೂ ನೀಡುತ್ತಿದ್ದಾರೆ.)[೪] ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಬಿಎ ಮತ್ತು ಎಂಎ ಪದವಿಗಳನ್ನು ಪಡೆದರು ಮತ್ತು ದೆಹಲಿ ವಿಶ್ವವಿದ್ಯಾಲಯದ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದರು, ಅವರ ಪ್ರಬಂಧವು "Mechanization in Indian Agriculture: An Analytical Study Based on the Punjab." (ಭಾರತೀಯ ಕೃಷಿಯಲ್ಲಿ ಯಾಂತ್ರೀಕರಣ: ಪಂಜಾಬ್ ಆಧಾರಿತ ವಿಶ್ಲೇಷಣಾತ್ಮಕ ಅಧ್ಯಯನ).
ವೃತ್ತಿಜೀವನ
[ಬದಲಾಯಿಸಿ]ಅವರು ಪ್ರಿನ್ಸ್‌ಟನ್, ಹಾರ್ವರ್ಡ್ ವಿಶ್ವವಿದ್ಯಾಲಯ, ಮಿಚಿಗನ್ ವಿಶ್ವವಿದ್ಯಾಲಯ, ಮಿನ್ನೇಸೋಟ ವಿಶ್ವವಿದ್ಯಾಲಯ ಮತ್ತು ನ್ಯೂಯಾರ್ಕ್ ವಿಶ್ವವಿದ್ಯಾಲಯಗಳನ್ನು ಸೇರಿದಂತೆ ಹಲವಾರು ವಿವಿಗಳಲ್ಲಿ ಬೇರೆ ಬೇರೆ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಹಾರ್ವರ್ಡ್‌ನಲ್ಲಿ, ಅವರು ಮೊಟ್ಟಮೊದಲ "ಡೇನಿಯಲ್ ಇಂಗಲ್ಸ್ ಸಂದರ್ಶಕ ಪ್ರಾಧ್ಯಾಪಕ"ರಾಗಿದ್ದರು [೫] ಅಗರ್ವಾಲ್ "ಅಂತರರಾಷ್ಟ್ರೀಯ ಪರಿಸರ ವಿಜ್ಞಾನದ ಅರ್ಥಶಾಸ್ತ್ರ" ಸಂಘದ ಅಧ್ಯಕ್ಷರೂ ಆಗಿದ್ದರು. [೬] ಅಂತರರಾಷ್ಟ್ರೀಯ ಆರ್ಥಿಕ ಸಂಘದ ಉಪಾಧ್ಯಕ್ಷರು, [೫] ಅಂತರರಾಷ್ಟ್ರೀಯ ಸ್ತ್ರೀವಾದಿ ಅರ್ಥಶಾಸ್ತ್ರದ ಸಂಘದ ಅಧ್ಯಕ್ಷರು, [೭] ಜಾಗತಿಕ ಅಭಿವೃದ್ಧಿ ಜಾಲದ ಮಂಡಳಿಯಲ್ಲಿ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಜೋಸೆಫ್ ಸ್ಟಿಗ್ಲಿಟ್ಜ್ ಅಧ್ಯಕ್ಷತೆಯ ಆರ್ಥಿಕ ಕಾರ್ಯಕ್ಷಮತೆ ಮತ್ತು ಸಾಮಾಜಿಕ ಪ್ರಗತಿಯ ಮಾಪನ ಆಯೋಗದ ಇಪ್ಪತ್ತೊಂದು ಸದಸ್ಯರಲ್ಲಿ ಒಬ್ಬರು. [೮] ಅವರು ಅಭಿವೃದ್ಧಿ ನೀತಿಗಾಗಿ ವಿಶ್ವಸಂಸ್ಥೆಯ ಸಮಿತಿ (ನ್ಯೂಯಾರ್ಕ್) ಮತ್ತು UNRISD (ಜಿನೀವಾ) ಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರು ನೆದರ್‌ಲ್ಯಾಂಡ್ಸ್‌ನ ಸಾಮಾಜಿಕ ಅಧ್ಯಯನ ಸಂಸ್ಥೆ ಮತ್ತು ಬೆಲ್ಜಿಯಂನ ಆಂಟ್ವೆರ್ಪ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ಗಳನ್ನು ಹೊಂದಿದ್ದಾರೆ. [೫]
ಗ್ರಾಮೀಣ ಆರ್ಥಿಕತೆಗೆ ಸಂಬಂಧಿಸಿದ ವಿಷಯಗಳ ಮೇಲೆ ಅಗರ್ವಾಲ್ ಪರಿಣತರು. ಭೂಮಿ, ಜೀವನೋಪಾಯ ಮತ್ತು ಆಸ್ತಿ ಹಕ್ಕುಗಳು; ಪರಿಸರ ಮತ್ತು ಅಭಿವೃದ್ಧಿ; ಲಿಂಗದ ರಾಜಕೀಯ ಆರ್ಥಿಕತೆ; ಬಡತನ ಮತ್ತು ಅಸಮಾನತೆ; ಕಾನೂನು; ಮತ್ತು ಕೃಷಿ ಮತ್ತು ತಾಂತ್ರಿಕ ಬದಲಾವಣೆಯ ಕುರಿತು ಒಳನೋಟಗಳನ್ನು ಒದಗಿಸಲು ಅವರು ವೈವಿಧ್ಯಮಯ ವಿಧಾನಗಳನ್ನು ( ಆರ್ಥಿಕ ಮಾಪನ ವಿಶ್ಲೇಷಣೆಯಿಂದ ಗುಣಾತ್ಮಕ ಮೌಲ್ಯಮಾಪನಗಳವರೆಗೆ) ಮತ್ತು ಅಂತರವಿಭಾಗೀಯ ವಿಧಾನವನ್ನು ಬಳಸಿದ್ದಾರೆ. ಅವರು ವಿಶೇಷವಾಗಿ ಆರ್ಥಿಕ ಅಭಿವೃದ್ಧಿಯ ಮೇಲೆ, ಲಿಂಗ ಅಸಮಾನತೆ ಮತ್ತು ಸಾಮಾಜಿಕ ಬಹಿಷ್ಕಾರಗಳ ಪ್ರಭಾವದ ಕುರಿತು ಅಭ್ಯಸಿಸುತ್ತಾರೆ. ಅವರ ಪ್ರವರ್ತಕ ಕೆಲಸವು ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತು ನೀತಿ ನಿರೂಪಕರು ಮತ್ತು ವೃತ್ತಿಪರರಲ್ಲಿ ಜಾಗತಿಕವಾಗಿ ಪ್ರಭಾವ ಬೀರಿದೆ.
ಅವರ ಕೆಲಸದ ಬಹುಪಾಲು ದಕ್ಷಿಣ ಏಷ್ಯಾದತ್ತ ಕೇಂದ್ರಿತವಾಗಿದೆ. ಅವರ ಅತ್ಯಂತ ಪ್ರಸಿದ್ಧ ಕೃತಿಯಾದ ಎ ಫೀಲ್ಡ್ ಆಫ್ ಒನ್ಸ್ ಓನ್ (ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್, 1994) ನಲ್ಲಿ, ಅಗರ್ವಾಲ್ "ಮಹಿಳೆಯರ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುವ ಏಕೈಕ ಪ್ರಮುಖ ಅಂಶವೆಂದರೆ ಲಿಂಗ ಆಧರಿತ ಆಸ್ತಿ ಹಕ್ಕು" ಎಂದು ಹೇಳುತ್ತಾರೆ. [೯] ಅವರು ಜರ್ನಲ್ ಆಫ್ ವುಮೆನ್, ಪಾಲಿಟಿಕ್ಸ್ & ಪಾಲಿಸಿಯ ಸಂಪಾದಕೀಯ ಮಂಡಳಿಯಲ್ಲೂ ಇದ್ದಾರೆ. [೧೦]
2004–2005ರಲ್ಲಿ ಅವರು ನಡೆಸಿದ ಯಶಸ್ವಿ ಚಳುವಳಿಯಿಂದ ಪ್ರೇರಿತರಾಗಿ, ಭಾರತೀಯ ಕಾನೂನು ನಿರೂಪಕರು (ಶಾಸಕಾಂಗ) 2005 ರಲ್ಲಿ ಹಿಂದೂ ಉತ್ತರಾಧಿಕಾರ (ತಿದ್ದುಪಡಿ) ಕಾಯ್ದೆಯನ್ನು ಅಂಗೀಕರಿಸಿದರು. ಈ ಕಾಯ್ದೆಯು ಎಲ್ಲಾ ಹಿಂದೂ ಮಹಿಳೆಯರಿಗೆ (ವಿವಾಹಿತರು ಮತ್ತು ಅವಿವಾಹಿತರು) ಆಸ್ತಿಹಕ್ಕು ಮತ್ತು ಉತ್ತರಾಧಿಕಾರದಲ್ಲಿ, ವಿಶೇಷವಾಗಿ ಕೃಷಿ ಭೂಮಿಯಲ್ಲಿ ಪುರುಷರೊಂದಿಗೆ ಸಮಾನ ಹಕ್ಕುಗಳನ್ನು ನೀಡುತ್ತದೆ. [೧೧]
ತಮ್ಮ ವೃತ್ತಿಜೀವನದುದ್ದಕ್ಕೂ, ಅಗರ್ವಾಲ್‍ರವರು ಪ್ರಮಾಣಿತ ಆರ್ಥಿಕ ವಿಶ್ಲೇಷಣೆ ಮತ್ತು ನಂಬಿಕೆಗಳನ್ನು ನಿರಂತರವಾಗಿ ಪ್ರಶ್ನಿಸಿದ್ದಾರೆ. ಕುಟುಂಬದೊಳಗಿನ ಸಂಬಂಧಗಳಿಗೆ "ಚೌಕಾಶಿ ವಿಧಾನ"ದ ಕುರಿತಾದ ಅವರ ಬರಹಗಳಲ್ಲಿ, ಅವರು ಏಕೀಕೃತ ಮನೆಯ ಮಾದರಿಗಳನ್ನು ಸವಾಲು ಮಾಡುತ್ತಾರೆ. ಸ್ತ್ರೀಯರ ಪ್ರಾಮುಖ್ಯತೆಗೆ, ಸಾಮಾಜಿಕ ರೂಢಿಗಳು ಮತ್ತು ಆಸ್ತಿ ಹಕ್ಕು ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ತೋರಿಸಲು ಔಪಚಾರಿಕ ಚೌಕಾಶಿ ಮಾದರಿಗಳನ್ನು ವಿಸ್ತರಿಸುತ್ತಾರೆ. ಯಾವುದೇ ಒಂದು ಕ್ಷೇತ್ರದಲ್ಲಿ ವ್ಯಕ್ತಿಯ ಚೌಕಾಶಿ ಶಕ್ತಿಯನ್ನು ನಿರ್ಧರಿಸುವಲ್ಲಿ ಕುಟುಂಬ, ಸಮುದಾಯ, ಮಾರುಕಟ್ಟೆ ಮತ್ತು ಸರ್ಕಾರದ ಪರಸ್ಪರ ಸಂಬಂಧವನ್ನು ಅವರು ಪರಾಮರ್ಶಿಸಿದ್ದಾರೆ. ಅವರ "ಚೌಕಾಶಿ ಮತ್ತು ಲಿಂಗ ಸಂಬಂಧಗಳು" ಎಂಬ ಪ್ರಬಂಧವು ಫೆಮಿನಿಸ್ಟ್ ಎಕನಾಮಿಕ್ಸ್ ಜರ್ನಲ್‌ನಲ್ಲಿ ಇಲ್ಲಿಯವರೆಗೆ ಅತೀಹೆಚ್ಚು ಬಾರಿ ಉಳಿಸಿಕೊಳ್ಳಲಾದ (ಡೌನ್‍ಲೋಡ್) ಏಕೈಕ ಪ್ರಬಂಧವಾಗಿದೆ. [೧೨] "ಚೌಕಾಶಿ ಮತ್ತು ಕಾನೂನು ಬದಲಾವಣೆ" ಎಂಬ ಮತ್ತೊಂದು ಲೇಖನದಲ್ಲಿ, ಭಾರತದಲ್ಲಿ ಮಹಿಳೆಯರು 1956 ರ ಉತ್ತರಾಧಿಕಾರದ ಕಾನೂನುಗಳನ್ನು ಅಂಗೀಕರಿಸಲು ಮತ್ತು 2005 ರಲ್ಲಿ ಅದರ ತಿದ್ದುಪಡಿಯನ್ನು ತರಲು ಸರ್ಕಾರದೊಂದಿಗೆ ಚೌಕಾಶಿ ಮಾಡಲು ಹೇಗೆ ಸಾಧ್ಯವಾಯಿತು ಎಂಬುದನ್ನು ಅಗರ್ವಾಲ್ ಪ್ರಸ್ತಾಪಿಸಿದ್ದಾರೆ [೧೩]
ಅಗರ್ವಾಲ್ ಅವರು ತಮ್ಮ "ಕೌಟುಂಬಿಕ ಹಿಂಸಾಚಾರದಿಂದ ಸ್ವತಂತ್ರ್ಯದ ಕಡೆಗೆ" ಎಂಬ ಪ್ರಾಯೋಗಿಕ ಲೇಖನದಲ್ಲಿ, ಮಹಿಳೆಯರ ಆನುವಂಶಿಕ ಆಸ್ತಿಹಕ್ಕಿನ ಸಾಮರ್ಥ್ಯವು ಕೌಟುಂಬಿಕ ಹಿಂಸಾಚಾರವನ್ನು ಕುಗ್ಗಿಸುತ್ತದೆ ಎಂದು ಪ್ರತಿಪಾದಿಸುತ್ತಾರೆ.
ಪುಸ್ತಕಗಳು
[ಬದಲಾಯಿಸಿ]- ಮನೋವಿಜ್ಞಾನ, ವೈಚಾರಿಕತೆ ಮತ್ತು ಆರ್ಥಿಕ ನಡವಳಿಕೆ (ಸಹ-ಸಂಪಾದನೆ; ಪಾಲ್ಗ್ರೇವ್, 2005) [೧೪]
- ಸಾಮರ್ಥ್ಯಗಳು, ಸ್ವಾತಂತ್ರ್ಯ ಮತ್ತು ಸಮಾನತೆ (ಸಹ-ಸಂಪಾದನೆ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯ, ದೆಹಲಿ, 2006) [೧೫]
- ಲಿಂಗ ಮತ್ತು ಪರಿಸರಪ್ರೇಮಿ ಆಡಳಿತ (ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯ, ಆಕ್ಸ್‌ಫರ್ಡ್ ಮತ್ತು ದೆಹಲಿ, 2010): ಇದನ್ನು ಶೈಕ್ಷಣಿಕ ನಿಯತಕಾಲಿಕೆಗಳು ಮತ್ತು ಜನಪ್ರಿಯ ಪತ್ರಿಕೆಗಳಲ್ಲಿ (ಇಪಿಡಬ್ಲ್ಯೂ ಮತ್ತು ಇಂಡಿಯನ್ ಎಕ್ಸ್‌ಪ್ರೆಸ್) ವ್ಯಾಪಕವಾಗಿ ಉಲ್ಲೇಖಿಸಿ, ಧನಾತ್ಮಕ ವಿಮರ್ಶೆ ಮಾಡಲಾಗಿದೆ.[೧೬]
ಹುದ್ದೆಗಳು ಮತ್ತು ಪ್ರಶಸ್ತಿಗಳು
[ಬದಲಾಯಿಸಿ]- ಹಾರ್ವರ್ಡ್ ವಿಶ್ವವಿದ್ಯಾಲಯ (ಸಂಶೋಧನಾ ಸಹೋದ್ಯೋಗಿ)
- ಮಿಚಿಗನ್ ವಿಶ್ವವಿದ್ಯಾಲಯ (ಸಂಶೋಧನಾ ಸಹೋದ್ಯೋಗಿ)
- ಮಿನ್ನೇಸೋಟ ವಿಶ್ವವಿದ್ಯಾಲಯ (ವಿಂಟನ್ ಚೇರ್)
- ನ್ಯೂಯಾರ್ಕ್ ವಿಶ್ವವಿದ್ಯಾಲಯ ಕಾನೂನು ಶಾಲೆಯಲ್ಲಿ ಮೊದಲ ಡೇನಿಯಲ್ ಇಂಗಾಲ್ಸ್ ಸಂದರ್ಶಕ ಪ್ರಾಧ್ಯಾಪಕಿ
- ಹಾರ್ವರ್ಡ್ ವಿಶ್ವವಿದ್ಯಾಲಯದ ಹಾರ್ವರ್ಡ್ ಕೆನಡಿ ಶಾಲೆಯಲ್ಲಿ ಸಂದರ್ಶಕ ಸಂಶೋಧನಾ ಸಹೋದ್ಯೋಗಿ
- ಅಂತರರಾಷ್ಟ್ರೀಯ ಆರ್ಥಿಕ ಸಂಘದ ಉಪಾಧ್ಯಕ್ಷರು
- ಅಂತರರಾಷ್ಟ್ರೀಯ ಸ್ತ್ರೀವಾದಿ ಅರ್ಥಶಾಸ್ತ್ರ ಸಂಘದ ಅಧ್ಯಕ್ಷರು[೧೭]
- ಜಾಗತಿಕ ಅಭಿವೃದ್ಧಿ ಜಾಲದ ಮಂಡಳಿ ಸದಸ್ಯರು
- ಪರಿಸರ ವಿಜ್ಞಾನ ಅರ್ಥಶಾಸ್ತ್ರ ಸಂಘದ ಸ್ಥಾಪಕ ಸದಸ್ಯರು
- ಆರ್ಥಿಕ ಕಾರ್ಯಕ್ಷಮತೆ ಮತ್ತು ಸಾಮಾಜಿಕ ಪ್ರಗತಿಯ ಮಾಪನ ಆಯೋಗದಲ್ಲಿ ಸೇವೆ ಸಲ್ಲಿಸಿದ ಕೇವಲ ಇಬ್ಬರು ಮಹಿಳೆಯರಲ್ಲಿ ಅವರು ಒಬ್ಬರು
- ಭಾರತದ ಯೋಜನಾ ಆಯೋಗದ ಸಲಹೆಗಾರರು [ ಉಲ್ಲೇಖದ ಅಗತ್ಯವಿದೆ ]
- ಜಾಗತಿಕ ಅಭಿವೃದ್ಧಿ ಮತ್ತು ಪರಿಸರ ಸಂಸ್ಥೆ (GDAE)ಯ 2010 ರ ಲಿಯೊಂಟಿಫ್ ಪ್ರಶಸ್ತಿ (ಮಾರ್ಚ್ 29, 2010). [ ಉಲ್ಲೇಖದ ಅಗತ್ಯವಿದೆ ]
- ಅಂತರರಾಷ್ಟ್ರೀಯ ಪರಿಸರ ಅರ್ಥಶಾಸ್ತ್ರ ಸಂಘದ ಅಧ್ಯಕ್ಷೆ
- ಭಾರತದ 12 ನೇ ಪಂಚವಾರ್ಷಿಕ ಯೋಜನೆಯ "ಮಹಿಳೆಯರು ಸೇರಿದಂತೆ ಅನಾನುಕೂಲಕರ ರೈತರ ಕಾರ್ಯನಿರತ ಗುಂಪಿನ" ಮುಖ್ಯಸ್ಥರು
- ಭಾರತೀಯ ಪ್ರಧಾನ ಮಂತ್ರಿಗಳ ಭೂ ಸುಧಾರಣೆ ಸಮಿತಿ ಸದಸ್ಯರು
- ಶೈಕ್ಷಣಿಕ ಬಡತನದ ವಿರುದ್ಧ ನಿಲುವು (ASAP) ಸಲಹಾ ಮಂಡಳಿ ಸದಸ್ಯರು
- 2017 ರ ಬಲ್ಜನ್ ಪ್ರಶಸ್ತಿ - ಭಾರತದಲ್ಲಿ ಕೃಷಿಗೆ ಮಹಿಳೆಯರ ಕೊಡುಗೆಯನ್ನು ಅಧ್ಯಯನಕ್ಕೆ[೧೮]
ಇನ್ನಿತರ ಗೌರವಗಳು
[ಬದಲಾಯಿಸಿ]- ಅಭಿವೃದ್ಧಿ ಅಧ್ಯಯನಗಳಿಗೆ ನೀಡಿದ ವಿಶಿಷ್ಟ ಕೊಡುಗೆಗಳಿಗಾಗಿ ೨೦೦೨ ರ ಮಾಲ್ಕಮ್ ಆದಿಶೇಷಯ್ಯ ಪ್ರಶಸ್ತಿ. [೩]
- ಆನಂದ ಕೆಂಟಿಶ್ ಕುಮಾರಸ್ವಾಮಿ ಪುಸ್ತಕ ಪ್ರಶಸ್ತಿ 1996, ಅಸೋಸಿಯೇಷನ್ ಫಾರ್ ಏಷ್ಯನ್ ಸ್ಟಡೀಸ್ (ಯುಎಸ್ಎ) (ಈ ಪ್ರಶಸ್ತಿಯನ್ನು ಗೆದ್ದ ಮೊದಲ ದಕ್ಷಿಣ ಏಷ್ಯಾದವರು.) [೩]
- ಲಂಡನ್ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗ, ಓರಿಯೆಂಟಲ್ ಮತ್ತು ಆಫ್ರಿಕನ್ ಅಧ್ಯಯನ ಶಾಲೆಯಿಂದ ಪ್ರತಿ ಎರಡು ವರ್ಷಗಳಿಗೊಮ್ಮೆ ನೀಡಲಾಗುವ ಎಡ್ಗರ್ ಗ್ರಹಾಂ ಪುಸ್ತಕ ಪ್ರಶಸ್ತಿ 1996. [೩]
- ಭಾರತ ಮತ್ತು ಅಭಿವೃದ್ಧಿಯ ಬಗ್ಗೆ ಅತ್ಯಂತ ಅರ್ಹವಾದ ಕೃತಿಗಳನ್ನು ಗುರುತಿಸಿ ಬಾಂಬೆ ವಿಶ್ವವಿದ್ಯಾಲಯ ಮತ್ತು ಬತೇಜಾ ಟ್ರಸ್ಟ್ ಪ್ರತಿ ಎರಡು ವರ್ಷಗಳಿಗೊಮ್ಮೆ ನೀಡುವ 1995–96 ರ ಕೆ.ಎಚ್. ಬತೇಜಾ ಪ್ರಶಸ್ತಿ. [೩]
- ೨೦೦೮ ರಲ್ಲಿ ಭಾರತದ ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ [೧೯]
ಆಯ್ದ ಕೃತಿಗಳು
[ಬದಲಾಯಿಸಿ]- Agarwal, Bina (1976). Monsoon poems. USA: Ind-U. S. Incorporated. ISBN 9780892538089.
- Agarwal, Bina (1986). Mechanization in Indian agriculture: an analytical study based on the Punjab. New Delhi u.a: Allied Publishing. ISBN 9788170230793.
- Agarwal, Bina (1986). Cold hearths and barren slopes: the woodfuel crisis in the Third World. New Delhi: Allied Publishers. ISBN 9788170230076.
- Agarwal, Bina; Afshar, Haleh (1989). Women, poverty and ideology in Asia: contradictory pressures, uneasy resolutions. Houndmills, Basingstoke, Hampshire England: Macmillan. ISBN 9780333444092.
- Agarwal, Bina (1994). A field of one's own: gender and land rights in South Asia. Cambridge England New York, NY, USA: Cambridge University Press. ISBN 9780521429269.
- Agarwal, Bina (1988). Structures of patriarchy: state, community, and household in modernising Asia. New Delhi: Kali for Women. ISBN 9788185107066.
- Agarwal, Bina; Vercelli, Alessandro (2005). Psychology, rationality, and economic behaviour: challenging standard assumptions. Houndmills, Basingstoke, Hampshire New York: Palgrave Macmillan in association with International Economic Association. ISBN 9781403942531.
- Agarwal, Bina (2007). Capabilities, freedom, and equality: Amartya Sen's work from a gender perspective. New Delhi New York: Oxford University Press. ISBN 9780195692372.
- Agarwal, Bina (2010). Gender and green governance: the political economy of women's presence within and beyond community forestry. Oxford England New York USA: Oxford University Press. ISBN 9780191614309.
ಸಹ ನೋಡಿ
[ಬದಲಾಯಿಸಿ]- ಸ್ತ್ರೀವಾದಿ ಅರ್ಥಶಾಸ್ತ್ರ
- ಸ್ತ್ರೀವಾದಿ ಅರ್ಥಶಾಸ್ತ್ರಜ್ಞರ ಪಟ್ಟಿ
ಉಲ್ಲೇಖಗಳು
[ಬದಲಾಯಿಸಿ]- ↑ "Enotes page on Bina Agarwal"
- ↑ Agarwal, Bina (1994). A field of one's own: gender and land rights in South Asia. Cambridge England New York, NY, USA: Cambridge University Press. ISBN 9780521429269.
- 1 2 3 4 5 "Notes on contributors". Feminist Economics. 9 (2–3): 333–335. 2003. doi:10.1080/1354570032000114554.
- ↑ Staff writer (9 November 2017). "SEED's Bina Agarwal launches book prize". Archived from the original on 23 January 2018. Retrieved 23 January 2018.
- 1 2 3 "ಬೀನಾ ಅಗರ್ವಾಲ್". World Resources Forum. Archived from the original on 7 October 2015. Retrieved 5 October 2015.
- ↑ "About". International Society for Ecological Economics. 23 January 2012. Retrieved 5 October 2015.
- ↑ "Board Members". International Association for Feminist Economics. Archived from the original on 14 May 2019. Retrieved 5 October 2015.
- ↑ Stiglitz, Joseph; Sen, Amartya; Fitoussi, Jean-Paul. "Report by the Commission on the Measurement of Economic Performance and Social Progress" (PDF). Archived from the original (PDF) on 7 October 2015. Retrieved 5 October 2015.
- ↑ Agarwal, Bina (1994). A field of one's own: gender and land rights in South Asia. Cambridge England New York, NY, USA: Cambridge University Press. p. 576. ISBN 9780521429269.
- ↑ "Journal of Women, Politics & Policy – Editorial board". Taylor and Francis. Retrieved 3 June 2014.
- ↑ "Lincei, all'indiana Bina Agarwal il distintivo di accademico". Askanews (News article) (in ಇಟಾಲಿಯನ್). Rome, Italy. 14 November 2016. Archived from the original on 20 December 2016. Retrieved 5 December 2016."Nel 2005 - ha raccontato Bina Agarwal - ho guidato una campagna per modificare la legge di successione in modo da consentire in India l'ereditarietà della terra anche alle donne. Dopo 9 mesi di battaglia, la modifica è passata e oggi la legge sull'ereditarietà è completamente paritaria, uomini e donne hanno gli stessi diritti di proprietà. E questo riguarda l'80% delle donne in India.
- ↑ Agarwal, Bina (1997). ""Bargaining" and gender relations: within and beyond the household". Feminist Economics. 3 (1): 1–51. doi:10.1080/135457097338799. Pdf. Archived 26 May 2024[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- ↑ Agarwal, Bina (October 2002). Bargaining and legal change: toward gender equality in India's inheritance laws (PDF). IDS Working Paper 165. Brighton, England: Institute of Development Studies.
- ↑ Agarwal, Bina; Vercelli, Alessandro (2005). Psychology, rationality, and economic behaviour: challenging standard assumptions. Houndmills, Basingstoke, Hampshire New York: Palgrave Macmillan in association with International Economic Association. ISBN 9781403942531.
- ↑ Agarwal, Bina (2007). Capabilities, freedom, and equality: Amartya Sen's work from a gender perspective. New Delhi New York: Oxford University Press. ISBN 9780195692372.
- ↑ Agarwal, Bina (2010). Gender and green governance: the political economy of women's presence within and beyond community forestry. Oxford England New York USA: Oxford University Press. ISBN 9780191614309.
- ↑ "International Association for Feminist Economics (IAFFE) – Board members". University of Nebraska-Lincoln. Archived from the original on 14 May 2019. Retrieved 17 April 2014.
- ↑ AP (12 September 2017). "Indian economist wins prestigious Balzan Prize, US scientists among awardees". Hindustan Times (in ಇಂಗ್ಲಿಷ್). Retrieved 13 September 2017.
- ↑ "Padma Awards" (PDF). Ministry of Home Affairs, Government of India. 2015. Archived from the original (PDF) on 15 October 2015. Retrieved 21 July 2015.
- ಅಗರ್ವಾಲ್, ಬಿನಾ ಮತ್ತು ಪಾಂಡ ಪ್ರದೀಪ್ (9/7/2003) "ಹೋಮ್ ಅಂಡ್ ದಿ ವರ್ಲ್ಡ್: ರೀವಿಸಿಟಿಂಗ್ ವಯಲೆನ್ಸ್" ಇನ್ ದಿ ಇಂಡಿಯನ್ ಎಕ್ಸ್‌ಪ್ರೆಸ್
- ಅಗರ್ವಾಲ್, ಬಿನಾ (25 ಸೆಪ್ಟೆಂಬರ್ 2005) ದಿ ಹಿಂದೂದಲ್ಲಿ "ಲಿಂಗ ಸಮಾನತೆಗೆ ಹೆಗ್ಗುರುತು ಹೆಜ್ಜೆ"