ಬಿ. ವೈ. ವಿಜಯೇಂದ್ರ
ಬಿ. ವೈ. ವಿಜಯೇಂದ್ರ | |
---|---|
ಹಾಲಿ | |
ಅಧಿಕಾರ ಸ್ವೀಕಾರ ೧೩ ಮೇ ೨೦೨೩ | |
ಪೂರ್ವಾಧಿಕಾರಿ | ಬಿ. ಎಸ್. ಯಡಿಯೂರಪ್ಪ |
ಮತಕ್ಷೇತ್ರ | ಶಿಕಾರಿಪುರ |
ಹಾಲಿ | |
ಅಧಿಕಾರ ಸ್ವೀಕಾರ ೧೦ ನವೆಂಬರ್ ೨೦೨೩ | |
ಪೂರ್ವಾಧಿಕಾರಿ | ನಳಿನ್ ಕುಮಾರ್ ಕಟೀಲ್ |
ವೈಯಕ್ತಿಕ ಮಾಹಿತಿ | |
ಜನನ | ಶಿಕಾರಿಪುರ, ಕರ್ನಾಟಕ. | ೫ ನವೆಂಬರ್ ೧೯೭೫
ರಾಜಕೀಯ ಪಕ್ಷ | ಭಾರತೀಯ ಜನತಾ ಪಕ್ಷ |
ಸಂಗಾತಿ(ಗಳು) | ಪ್ರೇಮಾ ವಿಜಯೇಂದ್ರ |
ಮಕ್ಕಳು |
|
ಅಭ್ಯಸಿಸಿದ ವಿದ್ಯಾಪೀಠ | ಬೆಂಗಳೂರು ವಿಶ್ವವಿದ್ಯಾಲಯ |
ಬೂಕನಕೆರೆ ಯಡಿಯೂರಪ್ಪ ವಿಜಯೇಂದ್ರರವರು ಕರ್ನಾಟಕದ ರಾಜಕಾರಣಿ, ಇವರು ಪ್ರಸ್ತುತ ಬಿಜೆಪಿ ಕರ್ನಾಟಕದ ರಾಜ್ಯಾಧ್ಯಕ್ಷರು, ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಶಾಸಕರು. ಇವರು ಈ ಮೊದಲು ಬಿಜೆವೈಎಂ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯಾಧ್ಯಕ್ಷರಾಗಿ ಕೂಡ ಕಾರ್ಯನಿರ್ವಹಿಸಿದ್ದರು. [೧][೨]
ವೈಯಕ್ತಿಕ ಜೀವನ
[ಬದಲಾಯಿಸಿ]ವಿಜಯೇಂದ್ರರವರು ೫ ನವೆಂಬರ್ ೧೯೭೫ ರಂದು ಕರ್ನಾಟಕದ ಶಿಕಾರಿಪುರ ಪಟ್ಟಣದ, ಕನ್ನಡಿಗ ಲಿಂಗಾಯತ ಕುಟುಂಬದ ಬಿ. ಎಸ್. ಯಡಿಯೂರಪ್ಪ , ಮೈತ್ರಾದೇವಿ ದಂಪತಿಗೆ ಜನಿಸಿದರು. ವಿಜಯೇಂದ್ರರವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕಾನೂನು (ಎಲ್.ಎಲ್.ಬಿ.) ಪದವಿಯನ್ನು ಪಡೆದಿದ್ದಾರೆ. ವಿಜಯೇಂದ್ರರವರು ಪ್ರೇಮಾರವರನ್ನು ಮದುವೆಯಾಗಿದ್ದಾರೆ, ಈ ದಂಪತಿಗೆ ಬಿ. ವಿ. ಮೈತ್ರಿ ಮತ್ತು ಬಿ. ವಿ. ಜಾನ್ಸಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.[೩] ವಿಜಯೇಂದ್ರರವರ ತಂದೆ ಬಿ. ಎಸ್. ಯಡಿಯೂರಪ್ಪನವರು ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ಮತ್ತು ಇವರ ಅಣ್ಣ ಬಿ. ವೈ. ರಾಘವೇಂದ್ರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರು, ಯಡಿಯೂರಪ್ಪನವರ ಕುಟುಂಬವು ಬಸವಣ್ಣ ಮತ್ತು ಯಡಿಯೂರು ಸಿದ್ಧಲಿಂಗೇಶ್ವರರ ಅನುಯಾಯಿಗಳಾಗಿದ್ದಾರೆ.[೪]
ಚುನಾವಣಾ ಅಂಕಿಅಂಶಗಳು
[ಬದಲಾಯಿಸಿ]ವರ್ಷ | ಚುನಾವಣೆ | ಕ್ಷೇತ್ರದ ಹೆಸರು | ಪಕ್ಷ | ಫಲಿತಾಂಶ | ಗಳಿಸಿದ ಮತ | ಮತಗಳ ಶೇಕಡಾ% | ಅಂತರ | ಉಲ್ಲೇಖ |
---|---|---|---|---|---|---|---|---|
೨೦೨೩ | ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ | ಶಿಕಾರಿಪುರ | ಬಿಜೆಪಿ | ಗೆಲುವು | ೮೧,೮೧೦ | ೪೯.೦೭% | ೧೧,೦೦೮ | [೫] |
ಚಿತ್ರಗಳು
[ಬದಲಾಯಿಸಿ]ಇವನ್ನೂ ನೋಡಿ
[ಬದಲಾಯಿಸಿ]ಉಲ್ಲೇಖ
[ಬದಲಾಯಿಸಿ]- ↑ "B.Y. Vijayendra — Yediyurappa's trusted son and nemesis". The Hindu.
- ↑ "Yediyurappa's Achilles heel: His son BY Vijayendra". The News Minute.
- ↑ "Election Commission of India".
- ↑ Pradeep Kaushal. "Many yatras later, finally there". Online Edition of The Indian Express, dated 11 November 2007. Archived from the original on 14 ನವೆಂಬರ್ 2007. Retrieved 12 ನವೆಂಬರ್ 2007.
- ↑ https://www.elections.in/karnataka/assembly-constituencies/shikaripura.html