ವಿಷಯಕ್ಕೆ ಹೋಗು

ಬಿ. ವಾಮನ ರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಿ. ವಾಮನ ರಾವ್ (B. VAMANA RAO) ಜನನ: ೧೫-೮-೧೯೩೨, ನಿಧನ: ೨೯-೧-೨೦೨೧. ಮದ್ರಾಸು ಪ್ರಾಂತ್ಯದ ಸೌತ್ ಕೆನರಾ ಜಿಲ್ಲೆಯ (ದಕ್ಷಿಣ ಕನ್ನಡ) ತುಳು ಮತ್ತು ಕನ್ನಡ ಭಾಷೆಯ ಕರಾವಳಿ ಪ್ರದೇಶವಾದ ಕಾಸರಗೋಡಿನಲ್ಲಿ ಇವರು ಜನಿಸಿದರು.

ವಿದ್ಯಾಭ್ಯಾಸ

[ಬದಲಾಯಿಸಿ]
  1. 1950ರಲ್ಲಿ ಮದ್ರಾಸು ವಿಶ್ವವಿದ್ಯಾನಿಲಯದವರು ಏರ್ಪಡಿಸಿದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತೇರ್ಗಡೆ.
  2. ಮೈಸೂರು ವಿಶ್ವವಿದ್ಯಾನಿಲಯದ ಅಂಚೆ ತೆರಪಿನ ಶಿಕ್ಷಣ. ಎಸ್.ಎಸ್.ಎಲ್.ಸಿ.ಯಿಂದ ನೇರವಾಗಿ (1977-1979) ಇಂಗ್ಲಿಷ್ ಭಾಷೆಯಲ್ಲಿ ಎಂ.ಎ. (ಇತಿಹಾಸ) ಪರೀಕ್ಷೆಯಲ್ಲಿ ತೇರ್ಗಡೆ.

ಉದ್ಯೋಗ

[ಬದಲಾಯಿಸಿ]

ಸರ್ಕಾರದ ವ್ಯಾಪ್ತಿಯ ಕಛೇರಿಗಳಾದ ಸೆನ್ಸಸ್ ಆಪರೇಶನ್ ಡೆಪ್ಯುಟಿ ಸೂಪರಿಂಟೆಂಡ್‌ರ ಕಛೇರಿ ಮಂಗಳೂರು, ಹೊಸದುರ್ಗ (ಸೌತ್ ಕೆನರಾ) ರೆಂಟ ಸೆಟ್‌ಮೆಂಟ್ ಕಛೇರಿಯಲ್ಲಿ ಹಂಗಾಮಿ ನೌಕರಿ. ಸೌತ್ ಕೆನರಾ ಜಿಲ್ಲೆಯ ಪುತ್ತೂರು ಡಿಸ್ಟ್ರಿಕ್ಟ್ ಮುನ್ಸಿಫ್ ಕೋರ್ಟು ಮತ್ತು ಮಂಗಳೂರು ಡಿಸ್ಟ್ರಿಕ್ಟ್ ಆ್ಯಂಡ್ ಸೆನ್ಸನ್ಸ್ ಕೋರ್ಟಿನಲ್ಲಿ ಉದ್ಯೋಗ, ಮದ್ರಾಸು ಸರ್ವಿಸ್ ಕಮೀಷನ್ (ಆಯೋಗ)ದವರು ಏರ್ಪಡಿಸಿದ ಪರೀಕ್ಷೆಯಲ್ಲಿ ಉತ್ತೀರ್ಣ. ಮಂಗಳೂರು ಡಿಸ್ಟ್ರಿಕ್ಟ್ ಕಲೆಕ್ಟರ್ (ಕಂದಾಯ ಇಲಾಖೆ)ಯಲ್ಲಿ ಖಾಯಂ ಉದ್ಯೋಗ ಸೌತ್ ಕೆನರಾ (ದಕ್ಷಿಣ ಕನ್ನಡ) ಜಿಲ್ಲೆಯಲ್ಲಿ 1/4 ಶತಮಾನಗಳ ಕಾಲ ಹದಿನಾರು ಐ.ಎ.ಎಸ್. ಡೆಪ್ಯುಟಿ ಕಮೀಷನರ ಕ್ಯಾಂಪ್ ಕ್ಲಾರ್ಕ್ (ಸ್ಟೆನೋಗ್ರಾಫರ್) ಪರ್ಸನಲ್ ಅಸಿಸ್ಟೆಂಟ್ (ಪಿ.ಎ.) ಕರ್ತವ್ಯ 1985ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಯವರ ಆಪ್ತ ಕಾರ್ಯದರ್ಶಿಯಾಗಿ ಎರಡು ವರ್ಷಗಳ ಕಾಲ ನಿಯೋಜಿತ ಆಧಾರದಲ್ಲಿ ಕರ್ತವ್ಯ 1987ರಿಂದ ಪುನಃ 1990ರ ವರೆಗೆ ಡೆಪ್ಯುಟಿ ಕಮೀಷನವರ ಆಪ್ತ ಕಾರ್ಯದರ್ಶಿಯಾಗಿ (ಡೆಪ್ಯುಟಿ ತಹಸೀಲ್ದಾರ್) ಹುದ್ದೆಯಲ್ಲಿ ಕರ್ತವ್ಯ ಸಲ್ಲಿಸಿ ಆಗೋಸ್ತು ಮೂವತ್ತೊಂದು 1990ರಲ್ಲಿ ಸರ್ಕಾರಿ ಕರ್ತವ್ಯದಿಂದ ನಿವೃತ್ತ.

ಬರವಣಿಕೆ

[ಬದಲಾಯಿಸಿ]

ಮಂಗಳೂರು ಆಕಾಶವಾಣಿ (ಬಾನುಲಿಯಲ್ಲಿ) ಕನ್ನಡ, ಕೊಂಕಣಿ ಭಾಷೆಯಲ್ಲಿ ಹಲವಾರು ಕಾರ್ಯಕ್ರಮಗಳ ಪ್ರಸಾರ. ಸೌತ್ ಕೆನರಾ ಜಿಲ್ಲೆಯ ನಾಡು ನುಡಿ, ತುಳು ಸಂಸ್ಕೃತಿಯ ಹಲವಾರು ಲೇಖನಗಳು ಕರ್ನಾಟಕ ಮತ್ತು ಮುಂಬಯಿ ಪ್ರಾಂತ್ಯದ ಕನ್ನಡ ಪತ್ರಿಕೆಗಳಲ್ಲಿ ಪ್ರಕಟಣೆ.

  • 'ಏಕ್ ಗೋಟು ಹಾಸು' ಕೊಂಕಣಿ ಹಾಸ್ಯ ನಾಟಕ (2004).
  • ರಾಣಿ ಅಬ್ಬಕ್ಕ ಕನ್ನಡ ಐತಿಹಾಸಿಕ ನಾಟಕ (2007)

ಪ್ರಕಟಿತ ಕೃತಿಗಳು

[ಬದಲಾಯಿಸಿ]
  1. ತುಳುನಾಡು ಪ್ರಾಚೀನ ತುಳುವ ಸಂಶೋಧನಾ ಹೊತ್ತಗೆ ಕನ್ನಡ ಕಿರು ಕೃತಿ (2009) ರಚನೆ ಮತ್ತು ಪ್ರಕಟಣೆ.
  2. ಕಡಲ ತಡಿಯ ನೆನಪಿನಲೆಗಳು,(ದಕ್ಷಿಣ ಕನ್ನಡ ಜಿಲ್ಲಾದಿಕಾರಿಗಳ ಆಡಳಿತ ಮತ್ತು ನನ್ನ ಸೇವಾನುಭವಗಳು, ೨೦೧೪, ಪುಟ.೩೪೪

ಪ್ರಶಸ್ಠಿ ಪುರಸ್ಕಾರಗಳು

[ಬದಲಾಯಿಸಿ]

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಸಮಿತಿ 2003ರಲ್ಲಿ 'ನಿವೃತ್ತಿ ಸರ್ಕಾರಿ ನೌಕರ-ಸಮಾಜ ಸೇವೆ ಪ್ರಶಸ್ತಿ', 'ದೆಹಲಿ ಕನ್ನಡಿಗ' ಎಂಬ ಕನ್ನಡ ಮಾಸಪತ್ರಿಕೆ 2012ರಲ್ಲಿ ದೆಹಲಿಯಲ್ಲಿ ನಡೆದ 29ನೇ ರಾಷ್ಟ್ರೀಯ ಕನ್ನಡ ಸಮ್ಮೇಳನದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಸನ್ಮಾನ. ಶ್ರೀ ಸಿದ್ದಿ ವಿನಾಯಕ ಪ್ರತಿಷ್ಟಾನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಮಂಗಳೂರು ದಿನಾಂಕ 11.09.2013ರಂದು ಜರಗಿದ್ದ ಧಾರ್ಮಿಕ ವೇದಿಕೆಯಲ್ಲಿ ಶ್ರೀ ಗಣೇಶೋತ್ಸವ ದಶಮ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಸಾಹಿತಿ, ಸಮಾಜ ಸೇವಾ ಧುರೀಣ ಎಂದು ಗುರುತಿಸಿ ಸನ್ಮಾನ.

ನಿವೃತ್ತಿ ಹೊಂದಿದ ಬಳಿಕ ಮಾಡಿರುವ ಸೇವೆಗಳು

[ಬದಲಾಯಿಸಿ]

1990ರಂದು ಸರ್ಕಾರಿ ಸೇವೆಯಿಂದ ನಿವೃತ್ತಿಯಾದ ನಂತರ ಸರ್ಕಾರದ ಅಂಗಸಂಸ್ಥೆ ಗಳಾದ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ, ಕೊಂಕಣ ರೈಲ್ವೇ ನಿಗಮ ಮತ್ತು ಕೆ.ಯು.ಐ.ಡಿ.ಎಫ್.ಸಿ. (ಕರ್ನಾಟಕ ನಗರಾಭಿವೃದ್ಧಿ ಹಾಗೂ ಕರಾವಳಿ ಪರಿಸರ ನಿರ್ವಹಣಾ ಯೋಜನೆ) ಕಛೇರಿಯಲ್ಲಿ ಒಟ್ಟಿಗೆ 20 ವರ್ಷಗಳ ಕಾಲ ಗುತ್ತಿಗೆ ಆಧಾರದಲ್ಲಿ ರೆವೆನ್ಯೂ ಸಂಪರ್ಕಾಧಿಕಾರಿ. 30-09-2009ರಲ್ಲಿ ಸೇವಾ ವಿಶ್ರಾಂತಿ.