ಬಿ. ಎಂ. ಹೆಗ್ಡೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಮಣಿಪಾಲ್ ವೈದ್ಯಕೀಯ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ, ಪ್ರಸಿದ್ಧ ವೈದ್ಯ, ವಾಗ್ಮಿ, ಚಿಂತಕ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ, 'ಡಾ.ಬಿ.ಎಂ.ಹೆಗ್ಡೆ' ಯವರು, ಮುಂಬೈನ 'ಚೆಂಬೂರು ಕರ್ನಾಟಕ ಸಂಘ'ದ ೨೦೧೨ ರ ಸಾಲಿನ,'ರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ'ಗೆ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿ, ೩೫ ಸಾವಿರ ರೂಪಾಯಿ ನಗದುನಿಧಿ, 'ವಿಶೇಷ ಸ್ಮರಣಿಕೆ', ಮತ್ತು 'ಮಾನಪತ್ರ'ಗಳನ್ನು ಒಳಗೊಂಡಿದೆ. ಈ ಸನ್ಮಾನ, ಹೊರನಾಡು ಕನ್ನಡಿಗರಿಗೆ ಸಿಗುವ ಗರಿಷ್ಟ ಮಟ್ಟದ ಮಾನನಿಧಿಯ ಸನ್ಮಾನವೆಂದು ಪರಿಗಣಿಸಲ್ಪಟ್ಟಿದೆ. ಪ್ರಸಿದ್ಧ ಸಂವಿಧಾನ ತಜ್ಞ ಜ್ಯೂರಿ, ದಿವಂಗತ, ನಾನಿ ಪಾಲ್ಖಿವಾಲಾರವರು, ಡಾ.ಹೆಗ್ಡೆಯವರನ್ನು, ಒಬ್ಬ 'ಹೃದಯವಂತ ಹೃದಯ ತಜ್ಞ'ರೆಂದು ಗುಣಗಾನಮಾಡಿದ್ದರು. 'ಡಾ.ಬಿ.ಎಂ.ಹೆಗ್ಡೆ'ಯವರು, ನಾಲ್ಕು ದಶಕಗಳ ಕಾಲ 'ಮಣಿಪಾಲದ ಕಸ್ತೂರಿ ಬಾಯಿ ಮೆಡಿಕಲ್ ಕಾಲೇಜ್ ಗೆ, ಮತ್ತು 'ಮಂಗಳೂರಿನಲ್ಲಿವೈದ್ಯಕೀಯ ಉನ್ನತ ವ್ಯಾಸಂಗ ವಿಭಾಗ' ದಲ್ಲಿ ಪ್ರಾಧ್ಯಾಪಕರಾಗಿ, ಡೀನ್ ಆಗಿ, ಮುಂದೆ ಅದು ಡೀಮ್ಡ್ ವಿಶ್ವವಿದ್ಯಾಲಯ ದ ದರ್ಜೆಗಳಿಸಿದಾಗ, ಅದರ 'ಉಪಕುಲಪತಿಯಾಗಿಸೇವೆ'ಸಲ್ಲಿಸಿದ್ದರು. ಈಗ ಅವರು, 'ರಾಷ್ಟ್ರದ ಸುಪ್ರಸಿದ್ಧ ಹೃದ್ರೋಗ ತಜ್ಞ'ರೆಂದು ಹೆಸರಾಗಿದ್ದಾರೆ.

ಜನನ,ವಿದ್ಯಾಭ್ಯಾಸ,ಹಾಗೂ ವೃತ್ತಿಜೀವನ[ಬದಲಾಯಿಸಿ]

ಬಿ.ಎಂ.ಹೆಗ್ಡೆಯವರು, ಉಡುಪಿಯ ಬೆಳ್ಳೆ ಯಲ್ಲಿ ಸನ್,೧೯೩೮ ರಲ್ಲಿ, ಜನಿಸಿದರು. ಎಂ.ಜಿ.ಎಂ.ಕಾಲೇಜ್ ನಲ್ಲಿ ವಿದ್ಯಾಭ್ಯಾಸಮಾಡಿದರು. 'ಎಮ್.ಬಿ.ಬಿ.ಎಸ್', ಪದವಿಯನ್ನು 'ಮದ್ರಾಸ್ ನ ಸ್ಟಾನ್ಲಿ ಮೆಡಿಕಲ್ ಕಾಲೇಜ್' ನಲ್ಲಿ 'ಎಂ.ಡಿ.ಪದವಿ'ಯನ್ನು ಲಖ್ನೋ ದ, 'ಕಿಂಗ್ ಜಾರ್ಜ್ ಮೆಡಿಕಲ್ ಕಾಲೇಜ್' ನಲ್ಲಿ ಗಳಿಸಿದರು. ಪದವಿಯ ನಂತರ, ಬ್ರಿಟನ್, ಅಮೆರಿಕ ದೇಶಗಳಲ್ಲಿ, ಎಮ್.ಆರ್.ಸಿ.ಪಿ, ಮತ್ತು ಎಫ್.ಆರ್.ಸಿ.ಪಿ, ಸೇರಿದಂತೆ ಹತ್ತಾರು ಉನ್ನತ ವೈದ್ಯಕೀಯ ಪದವಿಗಳನ್ನು ಗಳಿಸಿದ್ದಾರೆ. ಅಧ್ಯಾಪನ, ಸತತ ಅಧ್ಯಯನ,ಮತ್ತು ಸಂಶೋಧನೆ, ಸಂಶೋಧನಾ-ಲೇಖಗಳ ವ್ಯವಸಾಯ ನಿರಂತರವಾಗಿ ನಡೆದುಕೊಂಡುಬಂದಿದೆ. ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಬರೆದ ಪುಸ್ತಕಗಳು ೩೫ ಕ್ಕೂ ಮಿಗಿಲು. ಹೆಗ್ಡೆಯವರು, ಹತ್ತಾರು ವೈದ್ಯಕೀಯ ಪತ್ರಿಕೆಗಳಿ ಲೇಖನಗಳನ್ನು ಬರೆಯುತ್ತಿದ್ದಾರೆ. ೮ ಕ್ಕೂ ಮಿಗಿಲಾದ ಭಾಷೆಗಳಲ್ಲಿ ಯಾವ ಅಡೆತಡೆಯಿಲ್ಲದೆ ವ್ಯವಹರಿಸಬಲ್ಲರು. ಕನ್ನಡದ ಕವಿ,ಕನ್ನಡಪರ ಚಟುವಟಿಗೆಕಾರರಿಗಿಂತಾ ಹೆಚ್ಚಿನ ಆಸಕ್ತಿಯಿಂದ ಕರ್ನಾಟಕದಲ್ಲಿ,ಮುಂಬೈನಲ್ಲಿ ಹಾಗೂ ಹೊರನಾಡಿನಲ್ಲೂ ಕನ್ನಡದ ಸಂಸ್ಕೃತಿಯನ್ನು ಪಸರಿಸಲು ಸದಾಸಿದ್ಧರಾಗಿದ್ದಾರೆ.