ಬಿ.ಎಸ್. ಶೈಲಜ

ವಿಕಿಪೀಡಿಯ ಇಂದ
Jump to navigation Jump to search
ಚಿತ್ರ:DrBSShylaja (f).jpg
'ಡಾ.ಬಿ.ಎಸ್.ಶೈಲಜ, ವಿಜ್ಞಾನ ಲೇಖಕಿ'

'ಡಾ.ಬಿ.ಎಸ್.ಶೈಲಜಾ',[೧]ಕನ್ನಡದಲ್ಲಿ ವಿಜ್ಞಾನದ ಕುರಿತ ಲೇಖನ-ಪುಸ್ತಕಗಳನ್ನು ಬರೆಯುತ್ತಿರುವ ಅಪರೂಪದ ಸಂವಹನಕಾರರು. ಪ್ರಸ್ತುತದಲ್ಲಿ ಅವರು 'ಬೆಂಗಳೂರಿನ ಜವಾಹರಲಾಲ್ ನೆಹರೂ ತಾರಾವೀಕ್ಷಣಾಲಯದ ನಿರ್ದೇಶಕಿ'ಯಾಗಿ ಕೆಲಸಮಾಡುತ್ತಿದ್ದಾರೆ. ಮುಖ್ಯವಾಗಿ ಇವರು ವಿಷಯವನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಬರೆಯುತ್ತಾರೆ ಎನ್ನುವುದನ್ನು ಗಮನಾರ್ಹ. ಇಂಗ್ಲಿಷಿನಲ್ಲಿ ಹಲವು ಖ್ಯಾತನಾಮರ ಪುಸ್ತಕಗಳನ್ನೂ ಓದಿದ್ದಾರೆ. ಅಂಕಣಗಳನ್ನು ಬರೆಯುತ್ತಿದ್ದ 'ಹಾಲ್ಡೇನ್' ಮುಂತಾದ ವಿದೇಶೀಯರ ಲೇಖನಗಳು ಅವರಿಗೆ ಪ್ರಿಯವಾದವು. ಬಹುಸಮಯದಿಂದ ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಲೇಖನ-ಅಂಕಣಗಳನ್ನು ಬರೆಯುತ್ತಿದ್ದಾರೆ. ಅವುಗಳು ಹೀಗಿವೆ.

  1. ‘ಬಾನಿಗೊಂದು ಕೈಪಿಡಿ’,
  2. ‘ಸಫಾರಿ ಎಂಬ ಲಕ್ಷುರಿ’,
  3. ‘ಏನು...? ಗಣಿತ ಅಂದ್ರಾ...?’

ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ಪಾದಾರ್ಪಣೆ[ಬದಲಾಯಿಸಿ]

ಮೂಲತಃ ವಿಜ್ಞಾನಿಯಾದ ಶೈಲಜಾ, ಸಂವಹನ ಕ್ಷೇತ್ರದಲ್ಲೂ ಸಿದ್ಧಿಯನ್ನು ಹಾಸಿಲ್ ಮಾಡಿದ್ದಾರೆ. ಆದರೆ ಕನ್ನಡದ ಮಕ್ಕಳ ಬಗ್ಗೆ ಕಾಳಜಿ, ಅವರಿಗೆ ಅತ್ಯುತ್ತಮ ಪುಸ್ತಕಗಳನ್ನು ತಲುಪಿಸಬೇಕು, ಎಂಬ ಆಸಕ್ತಿ ಮತ್ತು ಬಾಲ್ಯದಲ್ಲಿ ಓದಿದ್ದ ಅನೇಕ ಪುಸ್ತಕಗಳ ಪ್ರಭಾವ ಅವರನ್ನು ಬರೆಯುವಂತೆ ಪ್ರೇರೇಪಿಸಿತು. ಡಾ.ಶೈಲಜಾರವರ ಮೆಚ್ಚುಗೆಗೆ ಪಾತ್ರರಾದ ಇತರ ವಿಜ್ಞಾನ ಸಂವಹನಕಾರರು.

ಗೌರವ ಸನ್ಮಾನಗಳು[ಬದಲಾಯಿಸಿ]

‘ಶುಕ್ರಗ್ರಹದ ಸಂಕ್ರಮಣ’,ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ. ‘ಆಗಸದ ಅಲೆಮಾರಿಗಳು’,ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.

ಶಿವಮೊಗ್ಗ ಕರ್ನಾಟಕ ಸಂಘದ ‘ಹಸೂಡಿ ವೆಂಕಟಾಚಲಶಾಸ್ತ್ರಿ ವಿಜ್ಞಾನ ಸಾಹಿತ್ಯ ಪ್ರಶಸ್ತಿ’[ಬದಲಾಯಿಸಿ]

  • ‘ಶುಕ್ರಗ್ರಹದ ಸಂಕ್ರಮಣ’ [೨]
  • ‘ಆಗಸದ ಅಲೆಮಾರಿಗಳು’
  • ೨೦೧೩ 'ಬಾಲಂಕೃತ ಚುಕ್ಕಿ:
  • ಧೂಮಕೇತು'

ಸಂವಹನಕಾರರ ಕೆಲಸಗಳ ಬಗ್ಗೆ[ಬದಲಾಯಿಸಿ]

ಸಮರ್ಥವಾಗಿ ಅಧ್ಯಯನಮಾಡಿದ ಹೊಸಲೇಖಕರು ಮತ್ತು ಅನುಭವಿ ಲೇಖಕರ ಬಗ್ಗೆ ಚರ್ಚಿಸುವಾಗ, ಅಳತೆಗೋಲುಗಳು ವಿಭಿನ್ನ ರೀತಿಯಲ್ಲಿರುತ್ತವೆ. ಔಪಚಾರಿಕ ಹೇಳಿಕೆಗಳಿಗೆ ಬೆಲೆಯಿಲ್ಲ. ವಿಮರ್ಶೆಗಳು ಕೆಲವೊಮ್ಮೆ ಸಾಂಪ್ರದಾಯಿಕವಾಗಿ ಇರುತ್ತವೆ. ಇಂದಿನ ದಿನಗಳಲ್ಲಿ ಸಂವಹನಕಾರರಿಗೂ ಅನುವಾದಕರಿಗೂ ಹೆಚ್ಚಿನ ವ್ಯತ್ಯಾಸವಿಲ್ಲ. ಈ ನಿಟ್ಟಿನಲ್ಲಿ ಆದ ಕೆಲಸಗಳು ಹೆಚ್ಚಿನ ಓದುಗರನ್ನು ಆಕರ್ಷಿಸುವಲ್ಲಿ ಸಮರ್ಥವಾಗಿಲ್ಲ. ಬರೆಯುವವರು ಮೂಲತಃ ಅದೇ ಕ್ಷೇತ್ರದಲ್ಲಿ ಪರಿಣತಿ ಪಡೆದಿದ್ದರೆ ಲೇಖನ ಅಥವಾ ಪುಸ್ತಕದ ಗುಣಮಟ್ಟ ಉತ್ತಮವಾಗಿರುತ್ತದೆ.

ಇನ್ನೂ ಮಾಡಬೇಕಾದಕಾರ್ಯಗಳು[ಬದಲಾಯಿಸಿ]

ಕೆಲವು ಇಂಗ್ಲಿಷ್ ಪುಸ್ತಕಗಳನ್ನು ಕನ್ನಡಕ್ಕೆ ತರುವುದು. ಕನ್ನಡದ ಮಕ್ಕಳಿಗೆ ಇವು ಸರಿಯಾದ ಸಮಯದಲ್ಲಿ ದೊರಕದೆ ವಂಚನೆಯಾಗುತ್ತಿದೆ. ಇತ್ತೀಚಿನ ಪ್ರಚಲಿತದಲ್ಲಿರುವ ಕೆಲವು ಅನುವಾದಗಳು ಉತ್ತಮಮಟ್ಟದಲ್ಲಿಲ್ಲ.

ಇನ್ನಿತರ ಆಸಕ್ತಿಗಳು[ಬದಲಾಯಿಸಿ]

ಪರಿಸರದಲ್ಲಿ ವಿಜ್ಞಾನದ ಅಂಶಗಳನ್ನು ಹುಡುಕುವುದು, ಸಣ್ಣಕತೆಗಳನ್ನು ಬರೆಯುವುದು ಹಾಗೂ ಸಂಗೀತ ಕೇಳುವುದು.

ಉಲ್ಲೇಖಗಳು[ಬದಲಾಯಿಸಿ]

  1. ಡಾ. ಶೈಲಜಾ ಹೇಳುತ್ತಾರೆ."ಬಾಲ್ಯದಲ್ಲಿ ಓದಿದ್ದ ಅನೇಕ ಪುಸ್ತಕಗಳ ಪ್ರಭಾವ ನನ್ನನ್ನು ಬರೆಯುವಂತೆ ಪ್ರೇರೇಪಿಸಿತು" ಇ-ಜ್ಞಾನ,ಶ್ರೀನಿಧಿ ಅಂಕಣ
  2. ಶಿವಮೊಗ್ಗ ಕರ್ನಾಟಕ ಸಂಘದ 2013ರ ಪ್ರಶಸ್ತಿ ಘೋಷಣೆ one india (ಕನ್ನಡ) June 13, 2014

ಬಾಹ್ಯ ಸಂಪರ್ಕಗಳು[ಬದಲಾಯಿಸಿ]