ಬಿ.ಎಂ.ಇದಿನಬ್ಬ

ವಿಕಿಪೀಡಿಯ ಇಂದ
Jump to navigation Jump to search
ಬಿ.ಎಂ.ಇದಿನಬ್ಬ
ಜನನ(೧೯೨೦-೦೯-೧೭)೧೭ ಸೆಪ್ಟೆಂಬರ್ ೧೯೨೦.
ಉಪ್ಪಿನಂಗಡಿ, ಪುತ್ತೂರು, ಕರ್ನಾಟಕ
ಮರಣಏಪ್ರಿಲ್ ೧೧, ೨೦೦೯(2009-04-11) (aged ೮೮)
ಉಳ್ಳಾಲ, ಕರ್ನಾಟಕ
ವೃತ್ತಿಕವಿ, ಕಾದಂಬರಿಕಾರ,ಪತ್ರಕರ್ತ
ರಾಷ್ಟ್ರೀಯತೆಭಾರತ
ಜನಾಂಗೀಯತೆಬ್ಯಾರಿ
ಪೌರತ್ವಭಾರತೀಯ
ಪ್ರಮುಖ ಪ್ರಶಸ್ತಿ(ಗಳು)ರಾಜ್ಯೋತ್ಸವ ಪ್ರಶಸ್ತಿ
೧೯೮೭
ಮಕ್ಕಳು6 (4 daughters and 2 sons)


'ಬಿ.ಎಂ.ಇದಿನಬ್ಬ' (ಸೆಪ್ಟೆಂಬರ್ 17, 1920 – ಎಪ್ರಿಲ್ 11, 2009) ಕನ್ನಡದ ಕವಿ, ಪತ್ರಕರ್ತ, ರಾಜಕಾರಣಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ. ಉಳ್ಳಾಲಕ್ಷೇತ್ರದಿಂದ ಮೂರು ಬಾರಿ ವಿದಾನಸಭೆಗೆ ಆಯ್ಕೆಯಾಗಿದ್ದರು. ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂದು ಹೋರಾಟಮಾಡಿದರಲ್ಲಿ ಪ್ರಮುಖರು. ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ಇವರು ಉಪ್ಪಿನಂಗಡಿಯಲ್ಲಿ ಜನಿಸಿ, ಪುತ್ತೂರಿನಲ್ಲಿ ಶಿಕ್ಷಣ ಪಡೆದು ಮಂಗಳೂರಿನಲ್ಲಿ ನೆಲೆಸಿದ್ದರು. ಏಪ್ರಿಲ್ ೧೧, ೨೦೦೯ ರಂದು ನಿಧನರಾದರು.