ವಿಷಯಕ್ಕೆ ಹೋಗು

ಬಿಹಾರ ದಲಿತ ಅಭಿವೃದ್ಧಿ ಸಂಸ್ಥೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಿಹಾರ ದಲಿತ
ಅಭಿವೃದ್ಧಿ ಸಂಸ್ಥೆ
ಬಿಹಾರ ದಲಿತ ವಿಕಾಸ ಸಮಿತಿ
ಸಂಕ್ಷಿಪ್ತ ಹೆಸರುಬಿಡಿವಿಎಸ್
Established೧೯೮೨
ಪ್ರಧಾನ ಕಚೇರಿಬೈಲಿ ರೋಡ್, ರುಕುನಪುರ
ಬರ್ಹ್, ಪಾಟ್ನಾ, ಭಾರತ
ಸ್ಥಾಪಕ
ಜೋಸ್ ಕನನೈಕಿಲ್
ನಿರ್ದೇಶಕ
ಆಂಟೊ ಜೋಸೆಫ್
ಅಂಗಸಂಸ್ಥೆಗಳುಜೆಸ್ಯೂಟ್, ಕ್ಯಾಥೋಲಿಕ್
ಅಧಿಕೃತ ಜಾಲತಾಣBDVS
Formerly called
ಹರಿಜನ ಉತಾನ್ ಸಮಿತಿ

ಬಿಹಾರ ದಲಿತ ಅಭಿವೃದ್ಧಿ ಸಂಸ್ಥೆ (ಬಿಹಾರ್ ದಲಿತ ವಿಕಾಸ್ ಸಮಿತಿ) ಯನ್ನು ೧೯೮೨ ರಲ್ಲಿ, ಜೋಸ್ ಕನನೈಕಿಲ್ ಅವರು ದಲಿತ ಪುರುಷರು ಮತ್ತು ಮಹಿಳೆಯರ ಗ್ರಾಮ ಮಟ್ಟದ ಸಜ್ಜುಗೊಳಿಸುವಿಕೆ, ಒಗ್ಗಟ್ಟು ನಿರ್ಮಾಣ, ದಲಿತರ ಶೈಕ್ಷಣಿಕ ಮತ್ತು ಆರ್ಥಿಕ ಸಬಲೀಕರಣ ಮತ್ತು ಜಾತಿ ತಾರತಮ್ಯದ ನಿರ್ಮೂಲನೆಗಾಗಿ ಬಿಹಾರದಲ್ಲಿ ಸ್ಥಾಪಿಸಿದರು.[]

ಇದು ೧೦೦,೦೦೦ ಕುಟುಂಬಗಳನ್ನು ಒಳಗೊಂಡ ೫೦೦ ಹಳ್ಳಿಗಳ ಸಂಘವಾಗಿ ಬೆಳೆದಿದೆ. ೧೪ ಸಂಯೋಜಿತ ಕೇಂದ್ರಗಳು ಮತ್ತು ಬರ್ಹ್‌ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ.[] ಸುಶಿಕ್ಷಿತ, ನ್ಯಾಯವನ್ನು ಬಯಸುವ ದಲಿತ ಸಮಾಜವನ್ನು ಸ್ಥಾಪಿಸುವುದು ಇದರ ಗುರಿಯಾಗಿದೆ. ಕನನೈಕಿಲ್‌ರವರು ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದರು.[][]

ಇತಿಹಾಸ

[ಬದಲಾಯಿಸಿ]

ಜೋಸ್ ಕನನೈಕಲ್‌ರವರು ಬಿಹಾರ ರಾಜ್ಯದ ಜನರ ನಡುವೆ ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು ಹರಿಜನ ಉಥಾನ್ ಸಮಿತಿ (ಹರಿಜನ ಉನ್ನತೀಕರಣ ಸಂಘ) ಅನ್ನು ಸ್ಥಾಪಿಸಿದರು. ಆದರೆ, ನಂತರ ಅವರು ಮೇಲ್ವರ್ಗದ ಶೂದ್ರರಿಗಾಗಿ ಕೆಲಸ ಮಾಡುವ ಬಡ ಜನರ ಮೇಲೆ ಕೇಂದ್ರೀಕರಿಸಲು ಅದರ ಹೆಸರನ್ನು "ಬಿಹಾರ ದಲಿತ ವಿಕಾಸ್ ಸಮಿತಿ" ಎಂದು ಬದಲಾಯಿಸಿದರು.[][][]

ಇದನ್ನೂ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. AMAN panchayat. Accessed 14 July 2016.
  2. "National Institutions on Minority Rights". www.mcrg.ac.in. Retrieved 2017-02-20.
  3. "Beyond the priestly call". www.bihartimes.in. Archived from the original on 2012-08-27. Retrieved 2017-02-20.
  4. "BDSAkademi Bharatiya Dalit Sahitya Academy". bdsakademi.com. Archived from the original on 2016-12-22. Retrieved 2017-02-20.
  5. Dalits in Action: An Evaluation of Bihar Dalit Vikas Samiti. New Delhi: Concept. 1997. p. 46.
  6. Lal, A. K. (2003). Social Exclusion: Essays in Honour of Dr. Bindeshwar Pathak (in ಇಂಗ್ಲಿಷ್). Concept Publishing Company. p. 87. ISBN 9788180690532.
  7. Narula, Smita; (Organization), Human Rights Watch (1999). Broken People: Caste Violence Against India's "untouchables" (in ಇಂಗ್ಲಿಷ್). Human Rights Watch. p. 50. ISBN 9781564322289.