ಬಾರ್ಡರ್-ಗವಾಸ್ಕರ್ ಪ್ರಶಸ್ತಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಬಾರ್ಡರ್-ಗವಾಸ್ಕರ್ ಪ್ರಶಸ್ತಿ ಭಾರತ ಮತ್ತು ಆಸ್ಟ್ರೇಲಿಯಗಳ ಕ್ರಿಕೆಟ್ ತಂಡಗಳ ನಡುವೆ ನಡೆಯುವ ಟೆಸ್ಟ್ ಪಂದ್ಯ ಸರಣಿಗಳ ವಿಜಯರಿಗೆ ನೀಡಲಾಗುವ ಪ್ರಶಸ್ತಿ. ಈ ಪ್ರಶಸ್ತಿಯ ಮೊದಲ ಸರಣಿ ೧೯೯೬ರಲ್ಲಿ ನಡೆದು ಭಾರತ ಇದನ್ನು ೧-೦ ಪಂದ್ಯಗಳಿಂದ ಗೆದ್ದಿತು. ಟೆಸ್ಟ್ ಪಂದ್ಯಗಳಲ್ಲಿ ಹ್ತ್ತು ಸಾವಿರ ರನ್ನುಗಳನ್ನು ಬಾರಿಸಿದ ಮೊದಲೆರಡು ಬ್ಯಾಟ್ಸಮನ್ ಗಳಾದ ಆಲನ್ ಬಾರ್ಡರ್ ಮತ್ತು ಸುನೀಲ್ ಗವಾಸ್ಕರ್ ಇವರ ಹೆಸರಿನಲ್ಲೆ ಈ ಟ್ರೋಫಿಯನ್ನು ಸ್ಥಾಪಿಸಲಾಗಿದೆ. ಟೆಸ್ಟ್ ಪಂದ್ಯಗಳಲ್ಲಿ ಇತ್ತೀಚಿನ ದಿನಗಳಲ್ಲಿ ಇದು ಕುತೂಹಲಕರವಾದ ಮತ್ತು ಜಿದ್ದಜಿದ್ದಿನಿಂದ ಕೂಡಿದ ಸರಣಿಯಾಗಿದೆ. ಇಲ್ಲಿಯವರೆಗಿನ ಸರಣಿಗಳು ಈ ಪಟ್ಟಿಯಲ್ಲಿ ಇವೆ:

ವರ್ಷ ಆಡಲಾದ ದೇಶ ಫಲಿತಾಂಶ ಸರಣಿ ಪುರುಷೋತ್ತಮ
೧೯೯೬-೧೯೯೭ ಭಾರತ ಒಂದೇ ಪಂದ್ಯವನ್ನು ಭಾರತ ೧-೦ಯಿಂದ ಗೆದ್ದುಕೊಂಡಿತು. ನಯನ್ ಮೊಂಗಿಯ
೧೯೯೭-೧೯೯೮ ಭಾರತ ೩ ಮ್ಯಾಚುಗಳ ಸರಣಿಯನ್ನು ಭಾರತ ೨-೧ರಿಂದ ಗೆದ್ದುಕೊಂಡಿತು. ಸಚಿನ್ ತೆಂಡೂಲ್ಕರ್
೧೯೯೯-೨೦೦೦ ಆಸ್ಟ್ರೇಲಿಯಾ ೩ ಮ್ಯಾಚುಗಳ ಸರಣಿಯನ್ನು ಆಸ್ಟ್ರೇಲಿಯಾ ೩-೦ಯಿಂದ ಗೆದ್ದುಕೊಂಡಿತು. ಸಚಿನ್ ತೆಂಡೂಲ್ಕರ್
೨೦೦೦-೨೦೦೧ ಭಾರತ ೩ ಮ್ಯಾಚುಗಳ ಸರಣಿಯನ್ನು ಭಾರತ ೨-೧ರಿಂದ ಗೆದ್ದುಕೊಂಡಿತು. ಹರ್ಭಜನ್ ಸಿಂಗ್
೨೦೦೩-೨೦೦೪ ಆಸ್ಟ್ರೇಲಿಯಾ ೪ ಮ್ಯಾಚುಗಳ ಸರಣಿ ೧-೧ರಲ್ಲಿ ಸಮ ರಾಹುಲ್ ದ್ರಾವಿಡ್
೨೦೦೪-೨೦೦೫ ಭಾರತ ೪ ಮ್ಯಾಚುಗಳ ಸರಣಿಯನ್ನು ಆಸ್ಟ್ರೇಲಿಯಾ ೨-೧ರಿಂದ ಗೆದ್ದುಕೊಂಡಿತು. ಡೇಮಿಯನ್ ಮಾರ್ಟಿನ್
೨೦೦೭-೨೦೦೮ ಆಸ್ಟ್ರೇಲಿಯಾ ೪ ಮ್ಯಾಚುಗಳ ಸರಣಿಯನ್ನು ಆಸ್ಟ್ರೇಲಿಯಾ ೨-೧ರಿಂದ ಗೆದ್ದುಕೊಂಡಿತು. ಬ್ರೆಟ್ ಲೀ
೨೦೦೮-೨೦೦೯ ಭಾರತ ೪ ಮ್ಯಾಚುಗಳ ಸರಣಿಯನ್ನು ಭಾರತ ೨-೦ಯಿಂದ ಗೆದ್ದುಕೊಂಡಿತು. ಇಶಾಂತ್ ಶರ್ಮ