ಬಾಕರ್ವಡಿ
ಬಾಕರ್ವಡಿ ಭಾರತದ ಪಶ್ಚಿಮ ರಾಜ್ಯವಾದ ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಜನಪ್ರಿಯವಾಗಿರುವ ಒಂದು ಸಾಂಪ್ರದಾಯಿಕ, ಗರಿಗರಿಯಾದ, ಎಣ್ಣೆಯಲ್ಲಿ ಕರಿದ, ಬಿಲ್ಲೆ ಆಕಾರದ, ಸಿಹಿ ಮತ್ತು ಮಸಾಲೆಯುಕ್ತ ತಿಂಡಿಯಾಗಿದೆ.[೧] ೧೯೬೦ ಕ್ಕಿಂತ ಮೊದಲೇ ಇದು ಗುಜರಾತ್ ಅಥವಾ ಮಹಾರಾಷ್ಟ್ರ ರಾಜ್ಯಗಳ ರಚನೆಯಾಗಿರದ ಕಾಲದಲ್ಲೇ ಜನಪ್ರಿಯವಾಗಿತ್ತು; ಅವು ಎರಡೂ ಬಾಂಬೆ ರಾಜ್ಯದ ಭಾಗವಾಗಿದ್ದವು ಮತ್ತು ಎರಡೂ ಸಂಸ್ಕೃತಿಗಳು ಒಂದು ಇನ್ನೊಂದರ ಪಾಕವಿಧಾನಗಳಿಗೆ ತಮ್ಮದೇ ಆದ ರುಚಿಗಳನ್ನು ಸೇರಿಸಿದವು.
ಇತಿಹಾಸ
[ಬದಲಾಯಿಸಿ]ಭಾಕರ್ ಶಬ್ದವು ಭಕ್ರಿಯಿಂದ ಬರುತ್ತದೆ ಮತ್ತು ಒಮ್ಮೆ ಮಸಾಲೆಯ ಹೂರಣವನ್ನು (ವಡಿ) ತುಂಬಿ ಸುತ್ತಿ ಕತ್ತರಿಸಿ ಕರಿದರೆ, ಅದು ಭಾಕರ್-ವಡಿ ಆಗುತ್ತದೆ ಎಂದು ನಂಬಲಾಗಿದೆ. ಪುಣೆಯ ಚಿತಳೆ ಬಂಧು ಮತ್ತು ವಡೋದರಾದ ಜಗದೀಶ್-ಫರ್ಸಾಣ್ ಈ ತಿಂಡಿಯನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿತರಿಸುವ ಮೂಲಕ ಜನಪ್ರಿಯಗೊಳಿಸಿದರು.[೨][೩] ಇದನ್ನು ಮರಾಠಿ ಉದ್ಯಮಿ ರಘುನಾಥರಾವ್ ಚಿತಳೆ ಜನಪ್ರಿಯಗೊಳಿಸಿದರು.
ಪಾಕವಿಧಾನ
[ಬದಲಾಯಿಸಿ]ಬಾಕರ್‌ವಡಿಯನ್ನು ಕಡಲೆ ಹಿಟ್ಟಿನ ಕಣಕದಿಂದ ತಯಾರಿಸಲಾಗುತ್ತದೆ. ಇದರಲ್ಲಿ ಕಾಯಿ ತುರಿ, ಗಸಗಸೆ ಮತ್ತು ಎಳ್ಳಿನ ಮಿಶ್ರಣವನ್ನು ತುಂಬಿ ಸುರುಳಿಯಾಕಾರದಲ್ಲಿ ಸುತ್ತಲಾಗುತ್ತದೆ. ನಂತರ ಇದನ್ನು ಗರಿಗರಿಯಾಗುವವರೆಗೆ ಕರಿಯಲಾಗುತ್ತದೆ. ಇದನ್ನು ವಾರಗಳವರೆಗೆ[೪] ಸಂಗ್ರಹಿಸಿಡಬಹುದು ಮತ್ತು ಸಂಜೆ ತಿಂಡಿಯಾಗಿ ಆನಂದಿಸಬಹುದು.[೫]
ಉಲ್ಲೇಖಗಳು
[ಬದಲಾಯಿಸಿ]- ↑ "Easy Simple Indian Snack Bhakarwadi Recipe". Varevah (in ಅಮೆರಿಕನ್ ಇಂಗ್ಲಿಷ್). 15 February 2019. Retrieved 23 February 2019.
- ↑ Iyer, Satyanarayan. "Pune's vendor of sweets". Business Line (in ಇಂಗ್ಲಿಷ್). Retrieved 14 June 2021.
- ↑ "कौतुकास्पद… चितळे बंधू कर्मचाऱ्यांसाठी बांधतायत निवासस्थान; पार पडलं इमारतीचं भूमिपूजन". Loksatta (in ಮರಾಠಿ). June 7, 2021. Archived from the original on 14 June 2021. Retrieved 14 June 2021.
- ↑ Das, Soumitra (July 13, 2015). "Monsoon delights Barodians love to gorge on". The Times of India. Archived from the original on September 4, 2024. Retrieved October 16, 2016.
- ↑ Kapoor, Sanjeev. "Bhakarwadi Vegetarian Recipe". sanjeev kapoor (in ಇಂಗ್ಲಿಷ್). Archived from the original on 4 April 2019. Retrieved 23 February 2019.