ಬಸನಗೌಡ ಪಾಟೀಲ(ಯತ್ನಾಳ)
ಗೋಚರ
ಬಸನಗೌಡ ಪಾಟೀಲ(ಯತ್ನಾಳ) | |
---|---|
ವೈಯಕ್ತಿಕ ಮಾಹಿತಿ | |
ಜನನ | ಯತ್ನಾಳ, ವಿಜಯಪುರ, ಕರ್ನಾಟಕ | ೧೩ ಡಿಸೆಂಬರ್ ೧೯೬೩
ಸಂಗಾತಿ(ಗಳು) | ಶೈಲಜಾ |
ಮಕ್ಕಳು | 2 |
ಬಸನಗೌಡ ಪಾಟೀಲ(ಯತ್ನಾಳ)ರು ವಿಜಯಪುರ ಲೋಕಸಭಾ ಕ್ಷೇತ್ರದ ಮಾಜಿ ಸಂಸದರು ಮತ್ತು ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಶಾಸಕರು.
ಜನನ
[ಬದಲಾಯಿಸಿ]ಪಾಟೀಲರು 1963ರ ಡಿಸೆಂಬರ್ 13ರಂದು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಯತ್ನಾಳ ಗ್ರಾಮದಲ್ಲಿ ಜನಿಸಿದ್ದಾರೆ. ಶ್ರೀಯುತರಿಗೆ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ.
ಶಿಕ್ಷಣ
[ಬದಲಾಯಿಸಿ]ಶ್ರೀಯುತರು ವಾಣಿಜ್ಯ ವಿಭಾಗದಲ್ಲಿ ಬಿ.ಕಾಂ. ಪದವಿ ಹೊಂದಿದ್ದಾರೆ.
ರಾಜಕೀಯ
[ಬದಲಾಯಿಸಿ]13 ಮತ್ತು 14ನೇ ಲೋಕಸಭೆಯಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. 10 ಮತ್ತು 15ನೇಯ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.
2013ರಲ್ಲಿ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‍ದಿಂದ ಸ್ಪರ್ಧಿಸಿ ಪರಾಜಿತರಾದರು.[೧]
2018ರಲ್ಲಿ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ.
ನಿರ್ವಹಿಸಿದ ಖಾತೆಗಳು
[ಬದಲಾಯಿಸಿ]- 1994 [೨]ರಲ್ಲಿ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ.
- 1999 ಮತ್ತು 2004ರಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸಂಸದರಾಗಿ ಆಯ್ಕೆ.
- ಸಂಸತ್ತಿನ ಕೈಗಾರಿಕಾ ಸಮಿತಿಯ ಸದಸ್ಯರು.
- ಖಾಸಗಿ ಸದಸ್ಯರ ಬಿಲ್ಲುಗಳು ಮತ್ತು ನಿರ್ಣಯಗಳ ಮೇಲೆ ಸಂಸತ್ತಿನ ಸಮಿತಿ ಸದಸ್ಯರು.
- ಸಂಸತ್ತಿನ ಸಲಹಾ ಸಮಿತಿ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸದಸ್ಯರು.
- 2002-2003 - ಕೇಂದ್ರ ಸರ್ಕಾರದ ರಾಜ್ಯ ಜವಳಿ ಸಚಿವರು.
- 2003-2004 - ಕೇಂದ್ರ ಸರ್ಕಾರದ ರಾಜ್ಯ ರೈಲ್ವೆ ಸಚಿವರು.
- ಕಾರ್ಮಿಕರ ಸಂಸತ್ತು ಸಮಿತಿಯ ಸದಸ್ಯರು.
- ಪಾರ್ಲಿಮೆಂಟ್ ಹೌಸ್ ಸಮಿತಿಯ ಸದಸ್ಯರು.
- ಸಂಸತ್ತಿನ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ ಸದಸ್ಯರ ಸಂಸತ್ತು ಸಮಿತಿಯ ಸದಸ್ಯರು.
- 2008ರಲ್ಲಿ ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಪರಾಜಿತರಾದರು.
- 2013ರಲ್ಲಿ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‍ದಿಂದ ಸ್ಪರ್ಧಿಸಿ ಪರಾಜಿತರಾದರು.
- 2015ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು.
- 2018ರಲ್ಲಿ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಶಾಸಕರಾಗಿ ಆಯ್ಕೆ.[೩]
ಉಲ್ಲೇಖಗಳು
[ಬದಲಾಯಿಸಿ]- ↑ "Basanagouda Patil Yatnal joins JD(S) in Vijayapura". ದಿ ಹಿಂದೂ. Archived from the original on 2 ಮಾರ್ಚ್ 2020. Retrieved 6 February 2012.
- ↑ https://vijaykarnataka.indiatimes.com/district/vijayapura/vijayapur-city/articleshow/64177837.cms
- ↑ http://kannadamma.net/2015/12/%E0%B2%B5%E0%B2%BF%E0%B2%9C%E0%B2%AF%E0%B2%AA%E0%B3%81%E0%B2%B0-%E0%B2%95%E0%B3%8D%E0%B2%B7%E0%B3%87%E0%B2%A4%E0%B3%8D%E0%B2%B0%E0%B2%A6%E0%B2%BF%E0%B2%82%E0%B2%A6-%E0%B2%B5%E0%B2%BF%E0%B2%A7%E0%B2%BE/[ಶಾಶ್ವತವಾಗಿ ಮಡಿದ ಕೊಂಡಿ]