ಬಸನಗೌಡ ಪಾಟೀಲ್ ಯತ್ನಾಳ್
| ಬಸನಗೌಡ ಪಾಟೀಲ್ ಯತ್ನಾಳ್ | |
|---|---|
ಕರ್ನಾಟಕ ವಿಧಾನಸಭೆ ಸದಸ್ಯರು. | |
| ಹಾಲಿ | |
| ಅಧಿಕಾರ ಸ್ವೀಕಾರ ಮೇ 15, 2018 | |
| ಪೂರ್ವಾಧಿಕಾರಿ | ಮಕ್ಬುಲ್ ಎಸ್ ಬಾಗವಾನ್ |
| ಮತಕ್ಷೇತ್ರ | ಬಿಜಾಪುರ ನಗರ |
| ಅಧಿಕಾರ ಅವಧಿ 1994 - 1999 | |
| ಪೂರ್ವಾಧಿಕಾರಿ | ಉಸ್ತಾದ್ ಪಟೇಲ್ |
| ಉತ್ತರಾಧಿಕಾರಿ | ಉಸ್ತಾದ್ ಮೆಹಬೂಬ್ ಪಟೇಲ್ |
| ವೈಯಕ್ತಿಕ ಮಾಹಿತಿ | |
| ಜನನ | ೧೩ ಡಿಸೆಂಬರ್ ೧೯೬೩ ಬಿಜಾಪುರ, ಕರ್ನಾಟಕ |
| ರಾಜಕೀಯ ಪಕ್ಷ | ಭಾರತೀಯ ಜನತಾ ಪಕ್ಷ (1994-2010,2013-2015;2018-2025) |
| ಇತರೆ ರಾಜಕೀಯ ಸಂಲಗ್ನತೆಗಳು |
ಜನತಾ ದಳ (ಜಾತ್ಯಾತೀತ) (2010-2013) |
| ಸಂಗಾತಿ(ಗಳು) | ಶೈಲಜಾ ಬಸನಗೌಡ ಪಾಟೀಲ್ |
| ಮಕ್ಕಳು | 2 ಗಂಡು ಮಕ್ಕಳು |
| ತಂದೆ/ತಾಯಿ | ರಾಮನಗೌಡ ಬಿ.ಪಾಟೀಲ್ ಯತ್ನಾಳ್ ಮತ್ತು ಕಾಶಿಬಾಯಿ ಆರ್.ಪಾಟೀಲ್ ಯತ್ನಾಳ್ |
| ವಾಸಸ್ಥಾನ | ವಿಜಯಪುರ |
ಬಸನಗೌಡ ರಾಮನಗೌಡ ಪಾಟೀಲ್ ಯತ್ನಾಳ್ (ಜನನ ೧೩ ಡಿಸೆಂಬರ್ ೧೯೬೩) ಒಬ್ಬ ಭಾರತೀಯ ರಾಜಕಾರಣಿ ಮತ್ತು ಹಿಂದೂ ನಾಯಕ, ಅವರು ಜುಲೈ ೧, ೨೦೦೨ ರಿಂದ ಸೆಪ್ಟೆಂಬರ್ ೮, ೨೦೦೩ ರವರೆಗೆ ಜವಳಿ ರಾಜ್ಯ ಸಚಿವರಾಗಿದ್ದರು ಮತ್ತು ಸೆಪ್ಟೆಂಬರ್ ೮, ೨೦೦೩ ರಿಂದ ಮೇ ೧೬, ೨೦೦೪ ರವರೆಗೆ ರೈಲ್ವೆ ರಾಜ್ಯ ಸಚಿವರಾಗಿದ್ದರು ಮತ್ತು ೨೦೧೮ ರಿಂದ ಬಿಜಾಪುರ ನಗರ ವಿಧಾನಸಭಾ ಕ್ಷೇತ್ರದ ಪ್ರಸ್ತುತ ಶಾಸಕರು. ಅವರು ಎರಡು ಅವಧಿಗೆ ಬಿಜಾಪುರ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿದ್ದಾರೆ ಮತ್ತು ಒಂದು ಅವಧಿಗೆ ಬಿಜಾಪುರ ಸ್ಥಳೀಯ ಪ್ರಾಧಿಕಾರಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿನ ಸದಸ್ಯರಾಗಿದ್ದಾರೆ.ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಮಾರ್ಚ್ 26, 2025 ರಂದು "ಪಕ್ಷ ವಿರೋಧಿ" ಹೇಳಿಕೆಗಳಿಗಾಗಿ ಆರು ವರ್ಷಗಳ ಕಾಲ ಬಿಜೆಪಿಯಿಂದ ಉಚ್ಚಾಟಿಸಲಾಯಿತು [೧]
ಜನನ
[ಬದಲಾಯಿಸಿ]ಪಾಟೀಲರು 1963ರ ಡಿಸೆಂಬರ್ 13ರಂದು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಯತ್ನಾಳ ಗ್ರಾಮದಲ್ಲಿ ಜನಿಸಿದ್ದಾರೆ. ಶ್ರೀಯುತರಿಗೆ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ.
ಶಿಕ್ಷಣ
[ಬದಲಾಯಿಸಿ]ಶ್ರೀಯುತರು ವಾಣಿಜ್ಯ ವಿಭಾಗದಲ್ಲಿ ಬಿ.ಕಾಂ. ಪದವಿ ಹೊಂದಿದ್ದಾರೆ.
ರಾಜಕೀಯ
[ಬದಲಾಯಿಸಿ]13 ಮತ್ತು 14ನೇ ಲೋಕಸಭೆಯಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. 10 ಮತ್ತು 15ನೇಯ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.
2013ರಲ್ಲಿ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‍ದಿಂದ ಸ್ಪರ್ಧಿಸಿ ಪರಾಜಿತರಾದರು.[೨]
2018ರಲ್ಲಿ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ.
ನಿರ್ವಹಿಸಿದ ಖಾತೆಗಳು
[ಬದಲಾಯಿಸಿ]- 1994 [೩]ರಲ್ಲಿ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ.
- 1999 ಮತ್ತು 2004ರಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸಂಸದರಾಗಿ ಆಯ್ಕೆ.
- ಸಂಸತ್ತಿನ ಕೈಗಾರಿಕಾ ಸಮಿತಿಯ ಸದಸ್ಯರು.
- ಖಾಸಗಿ ಸದಸ್ಯರ ಬಿಲ್ಲುಗಳು ಮತ್ತು ನಿರ್ಣಯಗಳ ಮೇಲೆ ಸಂಸತ್ತಿನ ಸಮಿತಿ ಸದಸ್ಯರು.
- ಸಂಸತ್ತಿನ ಸಲಹಾ ಸಮಿತಿ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸದಸ್ಯರು.
- 2002-2003 - ಕೇಂದ್ರ ಸರ್ಕಾರದ ರಾಜ್ಯ ಜವಳಿ ಸಚಿವರು.
- 2003-2004 - ಕೇಂದ್ರ ಸರ್ಕಾರದ ರಾಜ್ಯ ರೈಲ್ವೆ ಸಚಿವರು.
- ಕಾರ್ಮಿಕರ ಸಂಸತ್ತು ಸಮಿತಿಯ ಸದಸ್ಯರು.
- ಪಾರ್ಲಿಮೆಂಟ್ ಹೌಸ್ ಸಮಿತಿಯ ಸದಸ್ಯರು.
- ಸಂಸತ್ತಿನ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ ಸದಸ್ಯರ ಸಂಸತ್ತು ಸಮಿತಿಯ ಸದಸ್ಯರು.
- 2008ರಲ್ಲಿ ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಪರಾಜಿತರಾದರು.
- 2013ರಲ್ಲಿ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‍ದಿಂದ ಸ್ಪರ್ಧಿಸಿ ಪರಾಜಿತರಾದರು.
- 2015ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು.
- 2018ರಲ್ಲಿ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಶಾಸಕರಾಗಿ ಆಯ್ಕೆ.[೪]
ಉಲ್ಲೇಖಗಳು
[ಬದಲಾಯಿಸಿ]- ↑ "'Will not deter my fight': Karnataka MLA Basanagouda Patil Yatnal after BJP expels him for six years over 'anti-party' activities". The Times of India. 26 March 2025. Archived from the original on 26 March 2025. Retrieved 26 March 2025.
- ↑ "Basanagouda Patil Yatnal joins JD(S) in Vijayapura". ದಿ ಹಿಂದೂ. Archived from the original on 2 ಮಾರ್ಚ್ 2020. Retrieved 6 February 2012.
- ↑ https://vijaykarnataka.indiatimes.com/district/vijayapura/vijayapur-city/articleshow/64177837.cms
- ↑ http://kannadamma.net/2015/12/%E0%B2%B5%E0%B2%BF%E0%B2%9C%E0%B2%AF%E0%B2%AA%E0%B3%81%E0%B2%B0-%E0%B2%95%E0%B3%8D%E0%B2%B7%E0%B3%87%E0%B2%A4%E0%B3%8D%E0%B2%B0%E0%B2%A6%E0%B2%BF%E0%B2%82%E0%B2%A6-%E0%B2%B5%E0%B2%BF%E0%B2%A7%E0%B2%BE/