ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ | |
---|---|
IUCN category II (national park) | |
ನೆಲೆ | ಕರ್ನಾಟಕ, ಭಾರತ |
ಅತಿ ಹತ್ತಿರದ ನಗರ | ಬೆಂಗಳೂರು |
ನಿರ್ದೇಶಾಂಕಗಳು | 12°48′03″N 77°34′32″E / 12.80083°N 77.57556°ECoordinates: 12°48′03″N 77°34′32″E / 12.80083°N 77.57556°E |
ವಿಸ್ತೀರ್ಣ | 104.27 km². |
ಸ್ಥಾಪಿತ | 1974 |
ಆಡಳಿತ ಮಂಡಳಿ | Ministry of Environment and Forests, ಭಾರತ ಸರ್ಕಾರ |
ಬನ್ನೇರುಘಟ್ಟ. ರಾಷ್ಟ್ರೀಯ ಉದ್ಯಾನವನ ಭಾರತ ದ ಕರ್ನಾಟಕದಲ್ಲಿರುವ ಬೆಂಗಳೂರಿನ ದಕ್ಷಿಣಭಾಗದಲ್ಲಿ ಸುಮಾರು 22 km ದೂರದಲ್ಲಿದೆ. ಬೆಂಗಳೂರಿನಿಂದ ಸುಮಾರು ಒಂದೂವರೆ ಗಂಟೆಗಳ ಪ್ರಯಾಣ ಮಾಡಬೇಕಾಗುತ್ತದೆ. ಝೂವಲಾಜಿಕಲ್ ರಿಸರ್ವ್‌ಗೆ ಅತ್ಯಂತ ಯೋಗ್ಯವಾದ ಅತ್ಯಂತ ಶ್ರೀಮಂತ ನೈಸರ್ಗಿಕ ಪ್ರದೇಶಗಳಲ್ಲೊಂದಾದ ಗುಡ್ಡಗಾಡು ಪ್ರದೇಶವಾಗಿದೆ. 25,000 acre (104.27 km²)ಗಳ ಝೂವಲಾಜಿಕಲ್ ಪಾರ್ಕ್ ಬೆಂಗಳೂರಿನ ಪ್ರವಾಸಿಗರ ಅತ್ಯಂತ ಆಕರ್ಷಣೀಯ ಸ್ಥಳವಾಗಿದೆ.
ದಿ ಝೂವಲಾಜಿಕಲ್ ರಿಸರ್ವ್[ಬದಲಾಯಿಸಿ]

ಬನ್ನೇರುಘಟ್ಟದ ಹುಲಿ ಮತ್ತು ಸಿಂಹಧಾಮವು ಇಂಡಿಯನ್ಬಿಳಿ ಹುಲಿಗಳನ್ನೊಳಗೊಂಡು ಇಂಡಿಯನ್ ಹುಲಿಗಳನ್ನು ,ಸಿಂಹಗಳನ್ನು ಮತ್ತು ಇತರೆ ಸಸ್ತನಿಗಳನ್ನು ಹೊಂದಿದೆ. ಸಫಾರಿಗಳು - ಹುಲಿ ಮತ್ತು ಸಿಂಹದ ಸಫಾರಿ ಮತ್ತು ಗ್ರ್ಯಾಂಡ್ ಸಫಾರಿ(ಸಸ್ಯಹಾರಿಗಳನ್ನೊಳಗೊಂಡಿದೆ) - KSTDC, ರಿಸರ್ವ್‌ಗೆ ಹಣದ ನೆರವು ನೀಡಲು, KSTDCಯು ಇದನ್ನು ನಿರ್ವಹಿಸುತ್ತದೆ. ಪಾರ್ಕ್‌ನ ಹುಲಿ ರಿಸರ್ವ್, ಇಂಡಿಯಾದ ಫಾರೆಸ್ಟ್ ಡಿಪಾರ್ಟ್‌ಮೆಂಟ್‌ನಿಂದ ಗುರುತಿಸಲ್ಪಟ್ಟಿದೆ.
ಪ್ರವಾಸದ ಮಾಹಿತಿ[ಬದಲಾಯಿಸಿ]
ಎತ್ತರ: ಸಮುದ್ರ ಮಟ್ಟದಿಂದ 1245 ರಿಂದ 1634 ಮೀಟರ್ ಎತ್ತರದಲ್ಲಿದೆ
ಸಂದರ್ಶನದ ಸಮಯ: 9AM ರಿಂದ 5PM
ರಜಾದಿನಗಳು: ಮಂಗಳವಾರಗಳಲ್ಲಿ ಮುಚ್ಚಲಾಗುತ್ತದೆ
ವೀಕ್ಷಣೆಗೆ ಉತ್ತಮ ಸಮಯ: ಸೆಪ್ಟೆಂಬರ್‌ನಿಂದ ಜನವರಿ
ಹೇಗೆ ತಲುಪುವುದು: ಮೆಜೆಸ್ಟಿಕ್‌ನಿಂದ 365 , ಮಾರ್ಕೆಟ್‌ನಿಂದ 366 , ಶಿವಾಜಿನಗರದಿಂದ 368 , ಬ್ರಿಗೇಡ್ ರಸ್ತೆಯಿಂದ G-4
ಮೃಗಾಲಯ[ಬದಲಾಯಿಸಿ]

ಮೃಗಾಲಯದಲ್ಲಿ ಒಂದು ಚಿಕ್ಕ ವಸ್ತು ಸಂಗ್ರಹಾಲಯವಿದೆ ಅದರಲ್ಲಿ ಪ್ರಾಣಿವಿಜ್ಞಾನಕ್ಕೆ ಸಂಬಂಧಿಸಿದ ವಸ್ತುಗಳ ಪ್ರದರ್ಶನ ಮಾಡಲಾಗಿದೆ. ಈ ಪ್ರದೇಶದ ಅತ್ಯಂತ ಆಕರ್ಷಣೀಯ ಸ್ಠಳ ಮೃಗಾಲಯದಲ್ಲಿ ರೆಪ್ಟೈಲ್ ಪಾರ್ಕ್ ಹಾಗೂ ಒಂದು ಸಣ್ಣ ಥಿಯೇಟರ್ ಕೂಡಾ ಇದೆ. ಪ್ರದರ್ಶನದ ನಿರ್ವಹಣೆಯ ಬಗ್ಗೆ ಮೃಗಾಲಯವು ಆಗಾಗ್ಗೆ ವಿಮರ್ಶೆಗೊಳಗಾಗುತ್ತದೆ. ಪ್ರತಿ ಮಂಗಳವಾರದಂದು ಮೃಗಾಲಯವು ಮುಚ್ಚಿರುತ್ತದೆ (ವಾರದ ರಜೆ)
ಸಫಾರಿ[ಬದಲಾಯಿಸಿ]
ಮೃಗಾಲಯವು ವಾರದ ದಿನಗಳಲ್ಲಿ ಹಾಗೂ ವಾರದ ಕೊನೆಯ ದಿನಗಳಲ್ಲಿ (ರಜಾದಿನಗಳಲ್ಲಿ) ಬೇರೆ ಬೇರೆ ಪ್ರವೇಶ ಶುಲ್ಕವನ್ನು ಹೊಂದಿರುತ್ತದೆ ಈಗಿನಂತೆ ಪ್ರವೇಶ ಶುಲ್ಕಗಳು ಹೀಗಿವೆ ಗ್ರ್ಯಾಂಡ್ ಸಫಾರಿ— ಸಿಂಹಗಳು, ಹುಲಿಗಳು, ಕರಡಿಗಳು ಮತ್ತು ಇತರೆ ಸಸ್ಯಹಾರಿಗಳ ಪ್ರವೇಶ ಶುಲ್ಕ ವಾರದ ದಿನಗಳಲ್ಲಿ Rs. 100 ಮತ್ತು ವಾರದ ಕೊನೆಯ ದಿನಗಳಲ್ಲಿ (ಮತ್ತು ರಜಾದಿನಗಳಲ್ಲಿ) Rs. 135, ಪಾರ್ಕ್‌ನಲ್ಲಿ ತಿರುಗಾಡಲು ನಿಮಗೆ ಖರ್ಚಾಗುವ ವೆಚ್ಚ 35.00. ಹುಲಿ ಮತ್ತು ಸಿಂಹದ ಸಫಾರಿ, ಇದರಲ್ಲಿ ದೊಡ್ಡ ಗಾತ್ರದ ಬೆಕ್ಕುಗಳನ್ನು ಮಾತ್ರ ತೋರಿಸಲಾಗುತ್ತದೆ, ಇದು ಆಸಕ್ತಿಯುಳ್ಳದ್ದಾಗಿದ್ದು ಇದರ ಪ್ರವೇಶ ಶುಲ್ಕವೂ ಕಡಿಮೆ ಇದ್ದು ಪ್ರವಾಸಿಗರು ಸುಲಭವಾಗಿ ತೆಗೆದುಕೊಳ್ಳಬಹುದಾಗಿದೆ (Rs.65 ಮತ್ತು 90 ವಾರದ ಕೊನೆಯ ದಿನಗಳು ಹಾಗೂ ರಜಾದಿನಗಳಲ್ಲಿ). ಕ್ಯಾಮೆರಾದ ಬಳಕೆ (ಸ್ಟಿಲ್ ಹಾಗೂ ವೀಡಿಯೋ)ಗಾಗಿ ಹೆಚ್ಚುವರಿ ಶುಲ್ಕಗಳು Rs.20 and Rs. 110.
ಮೇ ಪೂರ್ಣ ತಿಂಗಳಲ್ಲಿ ರಜಾದಿನಗಳ ಶುಲ್ಕವಿರುತ್ತದೆ, ಇಂಡಿಯಾದ ಮಕ್ಕಳಿಗೆ ಮೇ ತಿಂಗಳಿನಲ್ಲಿ ಬೇಸಿಗೆ ರಜೆ ಇರುತ್ತದೆ.
ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್‌ನ್ನು ಸಂಪರ್ಕಿಸಬೇಕಾದಲ್ಲಿ ಟೆಲಿಫೋನ್ ಸಂಖ್ಯೆ: +91-80-27828540
ಬಟರ್‌ಫ್ಲೈ ಪಾರ್ಕ್[ಬದಲಾಯಿಸಿ]
ದೇಶದ ಪ್ರಪ್ರಥಮ ಬಟರ್‌ಫ್ಲೈ ಪಾರ್ಕ್ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್‌ನಲ್ಲಿ ಸ್ಥಾಪಿತಗೊಂಡಿತು. ಇದು 2006ರ ನವೆಂಬರ್ 25ರ ಶನಿವಾರದಂದು ವಿಜ್ಞಾನ ಮತ್ತು ತಂತ್ರಜ್ಞಾನದ ಯೂನಿಯನ್ ಮಿನಿಸ್ಟರ್ ಕಪಿಲ್ ಸಾಬಿಲ್ ಅವರಿಂದ ಉದ್ಘಾಟನೆಯಾಯಿತು.

ಬಟರ್‌ಫ್ಲೈ ಪಾರ್ಕ್ ಆ ಪ್ರದೇಶದ ಸುತ್ತೆಲ್ಲ ಹರಡಿಕೊಂಡಿದೆ7.5 acres (30,000 m2) . ಇದರಲ್ಲಿ ಬಟರ್‌ಫ್ಲೈಗಳ ಸಂರಕ್ಷಣಾ ಸ್ಥಳ, ವಸ್ತು ಸಂಗ್ರಹಾಲಯ ಮತ್ತು ಒಂದು ಆಡಿಯೋ-ವಿಶುಯಲ್ ಕೋಣೆಯೂ ಸಹ ಇವೆ. ಬಟರ್‌ಫ್ಲೈ ಸಂರಕ್ಷಣೆ ಮಾಡುವ ಸ್ಥಳವು ಒಂದು ಪಾಲಿಕಾರ್ಬೊನೇಟ್ ಮೇಲ್ಛಾವಣಿಯನ್ನು ಹೊಂದಿದೆ ಮತ್ತು 10,000 sq ft (1,000 m²) ವಿಸ್ತಾರವಾಗಿದೆ. ಗೋಳಾಕೃತಿಯ ಸುತ್ತುವರಿಕೆ ಇದ್ದು, ಒಳಭಾಗದಲ್ಲಿ ಸುಮಾರು 20 ತಳಿಗಳ ಬಟರ್‌ಫ್ಲೈಗಳು ವಾಸಿಸಲು ಬೇಕಾದ ವಾತಾವರಣವನ್ನು ಅತ್ಯಂತ ಎಚ್ಚರಿಕೆಯಿಂದ ವಿನ್ಯಾಸಗೊಳಿಸಿದ್ದಾರೆ
ಈ ವಾತಾವರಣವು ಉಷ್ಣತೆಯ ಮಟ್ಟ ಸಮಾನವಾಗಿರುವಂತೆ - ಪೂರ್ಣ ಒದ್ದೆಯಾದ ವಾತಾವರಣ, ಒಂದು ಕೃತಕ ಝರಿ, ಒಂದು ಕಿರಿದಾದ ನಡೆದಾಡುವ ಸೇತುವೆ ಮತ್ತು ಬಟರ್‌ಫ್ಲೈಗಳು ಆಕರ್ಷಿತವಾಗುವಂತೆ ತಿನ್ನಲು ಯೋಗ್ಯವಾದ ಸಸ್ಯಗಳು ಮತ್ತು ಪೊದರುಗಳನ್ನು ಸಹ ಅಲ್ಲಿ ಸೃಷ್ಟಿಸಿದ್ದಾರೆ.
ಈ ಸಂರಕ್ಷಣಾ ಸ್ಥಳವು ಎರಡನೆ ಮತ್ತು ಮೂರನೆಯ ಮನೆಗಳಿಗೆ ಕರೆದೊಯ್ಯುತ್ತದೆ, ಅದು ಚಿಕ್ಕ ಥಿಯೇಟರ್ ಇರುವ ವಸ್ತುಸಂಗ್ರಹಾಲಯವನ್ನು ಹೊಂದಿದೆ ಮತ್ತು ಅತ್ಯಂತ ಎಚ್ಚರಿಕೆಯಿಂದ ಸಂರಕ್ಷಿಸಿದ, ಸೊಗಸಾದ ಬಟರ್‌ಫ್ಲೈಗಳನ್ನು ಪ್ರದರ್ಸಿಸಲಾಗುತ್ತದೆ.
ಇಲ್ಲಿ ಜೊತೆಗೂಡಿದ ಏಜೆನ್ಸಿಗಳೆಂದರೆ ಝೂ ಅಥಾರಿಟಿ ಆಫ್ ಕರ್ನಾಟಕ,Kseeb solution ಯೂನಿವರ್ಸಿಟಿ ಆಫ್ ಅಗ್ರಿಕಲ್ಚರಲ್ ಸೈನ್ಸಸ್ ಮತ್ತು ಅಶೋಕ ಟ್ರಸ್ಟ್ ಫಾರ್ ರೀಸರ್ಚ್ ಇನ್ ಎಕಾಲಜಿ ಅಂಡ್ ಎನ್ವಿರಾನ್‌ಮೆಂಟ್ (ATREE).
ಬಯೋಲಾಜಿಕಲ್ ರಿಸರ್ವ್[ಬದಲಾಯಿಸಿ]
ಪಾರ್ಕ್‌ನ ಸುತ್ತಮುತ್ತಲಿನ ಬಯೋಲಾಜಿಕಲ್ ರಿಸರ್ವ್ ಪ್ರದೇಶವು ಫಾರೆಸ್ಟ್ ಡಿಪಾರ್ಟ್‌ಮೆಂಟ್‌ಗೆ ಸೇರುತ್ತದೆ. ಮತ್ತು ಇದು ಆನೆಗಳು, ಹಲ್ಲಿಗಳು, ಜಿಂಕೆಗಳು ಮತ್ತು ಇತರೆ ವೈವಿಧ್ಯಮಯ ಪ್ರಾಣಿಗಳ ವಾಸಸ್ಥಾನವಾಗಿದೆ
ಈ ರಿಸರ್ವ್ ಆನೆಗಳ ಕಾರಿಡಾರ್‌ಗೆ ಸೇರುತ್ತದೆ ಮತ್ತು ಸತ್ಯಮಂಗಲಂ ಕಾಡಿನ ಬಿ.ಆರ್.ಹಿಲ್ಸ್‌ಗೆ ವೇನಾಡಿನ ಮೂಲಕವಾಗಿ ಸಂಪರ್ಕವನ್ನು ಕಲ್ಪಿಸುತ್ತದೆ
ವಿಶೇಷ ಸಂದರ್ಭಗಳ ವರದಿಯಂತೆ ಬಯೋಲಾಜಿಕರ್ ರಿಸರ್ವ್‌ನ ಸುತ್ತಮುತ್ತ ಪ್ರಯಾಣಮಾಡುವಾಗ ಆನೆಗಳು ಬನ್ನೇರುಘಟ್ಟ- ಆನೆಕಲ್ ದಾರಿಯಲ್ಲಿ ಓಡಾಡುತ್ತಿರುತ್ತವೆ. ಒಂದು ಶಾಲೆ 3 ದಿನಗಳವರೆಗೆ ರಜೆ ಇದ್ದು ಬಾಗಿಲು ಮುಚ್ಚಿರುವಾಗ ಒಂದು ಚಿರತೆಯು ತನ್ನ ಮರಿಗಳ ಜೊತೆಯಲ್ಲಿ ಓಡಾಡಿಕೊಂಡಿತ್ತು ಎಂಬ ವರದಿ ಪ್ರಕಟವಾಗಿತ್ತು.http://bangalorebuzz.blogspot.com/2007/09/leopards-on-prowl-on-bannerghatta-main.html
ಬಾಹ್ಯ ಕೊಂಡಿಗಳು ಮತ್ತು ಆಕರಗಳು[ಬದಲಾಯಿಸಿ]

- ಬನ್ನೇರುಘಟ್ಟ ಬಯೋ ಪಾರ್ಕ್ Archived 2011-03-17 ವೇಬ್ಯಾಕ್ ಮೆಷಿನ್ ನಲ್ಲಿ.
ವಿಕಿಟ್ರಾವೆಲ್ ನಲ್ಲಿ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಪ್ರವಾಸ ಕೈಪಿಡಿ (ಆಂಗ್ಲ)

- ದಿ ಹಿಂದು ನಲ್ಲಿ ಪ್ರಕಟವಾದ ನ್ಯಾಷನಲ್ ಪಾರ್ಕ್‌ನ ವಿಮರ್ಶೆಗಳು Archived 2010-09-01 ವೇಬ್ಯಾಕ್ ಮೆಷಿನ್ ನಲ್ಲಿ.
- Report from 5tigers.org about a child fatality in 1992 Archived 2005-04-06 ವೇಬ್ಯಾಕ್ ಮೆಷಿನ್ ನಲ್ಲಿ.
- Lions’ club grows at Bannerghatta park
- ದಿ ಹಿಂದು ನಲ್ಲಿನ ಬಟರ್‌ಫ್ಲೈ ಪಾರ್ಕ್ Archived 2007-03-14 ವೇಬ್ಯಾಕ್ ಮೆಷಿನ್ ನಲ್ಲಿ.
- News:Elephants stray into villages on periphery of BNP, Oct 17, 2006 Archived April 30, 2010[Date mismatch], ವೇಬ್ಯಾಕ್ ಮೆಷಿನ್ ನಲ್ಲಿ.
- BMTC Volvo bus no. Archived 2009-03-17 ವೇಬ್ಯಾಕ್ ಮೆಷಿನ್ ನಲ್ಲಿ.V365 to Bannerghatta National Park - Route and Schedule timings Archived 2009-03-17 ವೇಬ್ಯಾಕ್ ಮೆಷಿನ್ ನಲ್ಲಿ.
- Bangalore Accomadation Details for tourists Archived 2018-04-03 ವೇಬ್ಯಾಕ್ ಮೆಷಿನ್ ನಲ್ಲಿ.
- Pages using duplicate arguments in template calls
- IUCN Category II
- Coordinates on Wikidata
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Commons link is locally defined
- Commons category with page title different than on Wikidata
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Webarchive template warnings
- ಕರ್ನಾಟಕದಲ್ಲಿರುವ ನ್ಯಾಷನಲ್ ಪಾರ್ಕ್ಗಳು
- 1974ರಲ್ಲಿ ಸ್ಥಾಪಿತವಾದ ರಕ್ಷಿತ ಪ್ರದೇಶಗಳು
- ರಾಷ್ಟ್ರೀಯ ಉದ್ಯಾನಗಳು