ಬನಾವಲಿ
ಬನಾವಲಿ (ದೇವನಾಗರಿ : बनावली) ಭಾರತದ ಹರಿಯಾಣ ರಾಜ್ಯದ ಫತೇಹಾಬಾದ್ ಜಿಲ್ಲೆಯಲ್ಲಿರುವ, ಸಿಂಧೂ ಕಣಿವೆ ನಾಗರಿಕತೆಯ ಅವಧಿಗೆ ಸೇರಿದ ಪುರಾತತ್ವ ಸ್ಥಳವಾಗಿದೆ. ಇದು ಕಲಿಬಂಗನ್‌ನಿಂದ ಈಶಾನ್ಯಕ್ಕೆ ಸುಮಾರು 120 ಕಿ.ಮಿ. ಮತ್ತು ಫತೇಹಾಬಾದ್‌ನಿಂದ 16 ಕಿ.ಮೀ. ದೂರದಲ್ಲಿದೆ. ಈ ಹಿಂದೆ ವನವಾಲಿ ಎಂದು ಕರೆಯಲ್ಪಡುತ್ತಿದ್ದ ಬನವಾಲಿ ಒಣಗಿ ಹೋಗಿರುವ ಸರಸ್ವತಿ ನದಿಯ ಎಡದಂಡೆಯಲ್ಲಿದೆ.[೧] ಒಣಗಿದ ಸರಸ್ವತಿ ನದಿಯ ಕೆಳ ಮಧ್ಯದ ಕಣಿವೆಯಲ್ಲಿ ಸ್ಥಾಪಿತವಾದ ಪಟ್ಟಣವಾದ ಕಾಲಿಬಂಗನ್‌ಗೆ ಹೋಲಿಸಿದರೆ, ಬನವಾಲಿಯನ್ನು ಸರಸ್ವತಿ ನದಿಯ ಮೇಲಿನ ಮಧ್ಯದ ಕಣಿವೆಯ ಮೇಲೆ ನಿರ್ಮಿಸಲಾಗಿದೆ.[೨]
ವಾಸ್ತುಕಲೆ
[ಬದಲಾಯಿಸಿ]ಭಾರತದ ಪುರಾತತ್ವ ಸರ್ವೇಕ್ಷಣೆಯು ಈ ಸ್ಥಳದಲ್ಲಿ ಉತ್ಖನನ ನಡೆಸಿದ್ದು ಹರಪ್ಪನ್ ಅವಧಿಯ ಉತ್ತಮವಾಗಿ ನಿರ್ಮಿತವಾದ ಕೋಟೆ ಪಟ್ಟಣವನ್ನು ಬಹಿರಂಗಪಡಿಸಿದೆ.[೩] 4.5 ಮೀಟರ್ ಎತ್ತರ ಮತ್ತು 6 ಮೀ ದಪ್ಪವಿರುವ ರಕ್ಷಣಾ ಗೋಡೆಯೂ ಕಂಡುಬಂದಿದೆ, ಇದನ್ನು 105 ಮೀ ದೂರದಲ್ಲಿ ಕಂಡುಹಿಡಿಯಲಾಯಿತು.[೧]
ಬಲವಾಗಿ ಬಡಿದ ಮಣ್ಣಿನ ಮಹಡಿಗಳನ್ನು ಹೊಂದಿರುವ ಮನೆಗಳನ್ನು ಕೋಣೆಗಳು ಮತ್ತು ಶೌಚಾಲಯಗಳಿರುವಂತೆ ಉತ್ತಮವಾಗಿ ಯೋಜಿಸಲಾಗಿತ್ತು. ಮನೆಗಳನ್ನು ಬೀದಿಗಳು ಮತ್ತು ಓಣಿಗಳ ಎರಡೂ ಬದಿಗಳಲ್ಲಿ ನಿರ್ಮಿಸಲಾಗಿತ್ತು.[೧]
ಸಿಕ್ಕಿದ ಪ್ರಾಕ್ತನ ಕೃತಿಗಳು
[ಬದಲಾಯಿಸಿ]ಎಸ್ ಆಕಾರದ ಜಾಡಿಗಳು, ಅಡುಗೆ ಪಾತ್ರೆಗಳು, ಒಲೆಗಳು, ತಂದೂರ್‌ಗಳು, ಚಿತ್ರಿತ ಮಣ್ಣಿನ ಮಡಿಕೆಗಳು ಇತ್ಯಾದಿ ಸಿಕ್ಕಿವೆ. ಚಿತ್ರಿತ ಅಲಂಕೃತ ಕೃತಿಗಳಲ್ಲಿ, ನವಿಲುಗಳು, ಪೀಪಲ್ ಎಲೆಗಳು, ಮರ, ಜಿಂಕೆ, ನಕ್ಷತ್ರ, ಮೀನು, ಹೂಗಳು, ಛೇದಿಸುವ ವರ್ತುಲಗಳು, ಚೆಕರ್ ಬೋರ್ಡ್ ಮಾದರಿಗಳು, ಜೇನುಗೂಡು ಮಾದರಿಗಳು ಸೇರಿವೆ. ಖಡ್ಗಮೃಗ, ಕಾಡು ಮೇಕೆ, ಐಬೆಕ್ಸ್, ಏಕಶೃಂಗಿ, ಹುಲಿ ದೇಹವಿರುವ ಸಂಯೋಜಿತ ಪ್ರಾಣಿಗಳ ಚಿತ್ರಗಳನ್ನು ಹೊತ್ತ ಹರಪ್ಪನ್ ಮುದ್ರೆಗಳು ಸಿಕ್ಕಿವೆ. ಚಿನ್ನ, ತಾಮ್ರ, ಕಂಚಿನ ತುಂಡುಗಳು, ಚಿನ್ನದ ಮಣಿಗಳು, ತಾಮ್ರ, ವೈಡೂರ್ಯ, ಚಿಪ್ಪುಗಳ ಬಳೆಗಳು ಇತ್ಯಾದಿಗಳು ಸಿಕ್ಕಿವೆ.[೧][೨]
ಉಲ್ಲೇಖಗಳು
[ಬದಲಾಯಿಸಿ]