ಫ್ರೀಡರಿಚ್ ವಿಲ್ಹೆಲ್ಮ್ ಕೋಲ್ರಾಷ್
| ಫ್ರೀಡರಿಚ್ ವಿಲ್ಹೆಲ್ಮ್ ಕೋಲ್ರಾಷ್ | |
|---|---|
Friedrich Wilhelm Georg Kohlrausch (1840–1910) | |
| ಜನನ | ೧೪ ಅಕ್ಟೋಬರ್ ೧೮೪೦ Rinteln |
| ಮರಣ | 17 January 1910 (aged 69) Marburg |
| ಕಾರ್ಯಕ್ಷೇತ್ರ | Physicist |
| ಸಂಸ್ಥೆಗಳು | University of Frankfurt/Main University of Göttingen ETH Zurich Darmstadt University University of Würzburg Strasbourg University Humboldt University |
| ಅಭ್ಯಸಿಸಿದ ವಿದ್ಯಾಪೀಠ | University of Erlangen University of Göttingen |
| ಡಾಕ್ಟರೇಟ್ ಸಲಹೆಗಾರರು | Wilhelm Eduard Weber |
| ಡಾಕ್ಟರೇಟ್ ವಿದ್ಯಾರ್ಥಿಗಳು | Walther Nernst Erasmus Kittler |
| Other notable students | Svante Arrhenius |
| ಪ್ರಸಿದ್ಧಿಗೆ ಕಾರಣ | Work on electrolytes Conductometry Kohlrausch bridge |
| ಗಮನಾರ್ಹ ಪ್ರಶಸ್ತಿಗಳು | Pour le Mérite (1896) ForMemRS (1895) |
ಟಿಪ್ಪಣಿಗಳು He was the son of Rudolf Kohlrausch, the grandson of Friedrich Kohlrausch, and the nephew of Otto Kohlrausch. | |
ಫ್ರೀಡರಿಚ್ ವಿಲ್ಹೆಲ್ಮ್ ಕೋಲ್ರಾಷ್ 1840-1910. ಜರ್ಮನಿಯ ಭೌತವಿಜ್ಞಾನಿ.
ಜನನ ಮತ್ತು ವಿದ್ಯಾಭ್ಯಾಸ
[ಬದಲಾಯಿಸಿ]ಜನನ ವೀಸರ್ ನದಿ ದಡದ ಮೇಲಿರುವ ರಿಂಟೆಲ್ನ್‍ನಲ್ಲಿ 1840ರ ಅಕ್ಟೋಬರ್ 14ರಂದು. ಈತನ ತಂದೆ ರುಡಾಲ್ಫ್ ಕೋಲ್‍ರಾಷ್ ಕೂಡ ಭೌತಶಾಸ್ತ್ರದಲ್ಲಿ ಅನೇಕ ಹೆಚ್ಚಿನ ಮಟ್ಟದ ಪ್ರಯೋಗಗಳನ್ನು ನಡೆಸಿದ್ದ. ಕೋಲ್‍ರಾಷನ ವಿದ್ಯಾಭ್ಯಾಸ ಗಟಿಂಗನ್ ಮತ್ತು ಎರ್‍ಲಾಂಗೆನ್ ಪಟ್ಟಣಗಳಲ್ಲಿ ಆಯಿತು. ಅತ್ಯಂತ ಮೇಧಾವಿಯೆಂದು ಪರಿಗಣಿಸಲ್ಪಟ್ಟಿದ್ದರಿಂದ ಇವನಿಗೆ ತತ್‍ಕ್ಷಣವೇ ಗಟಿಂಗೆನ್‍ನಲ್ಲಿ ಪ್ರಾಧ್ಯಾಪಕನಾಗಲು ಅವಕಾಶ ದೊರಕಿತು.
ವೃತ್ತಿ ಜೀವನ
[ಬದಲಾಯಿಸಿ]ಅನಂತರ ಫ್ರ್ಯಾಂಕ್‍ಫರ್ಟ್, ಡಾರ್ಮ್‍ಸ್ಟಾಟ್, ವುರ್ಸ್‍ಬರ್ಗ್, ಸ್ಟ್ರಾಸ್‍ಬರ್ಗ್ ಇಲ್ಲಿನ ಕಾಲೇಜುಗಳಲ್ಲಿ ಕೆಲಸ ಮಾಡಿ ಮುಂದೆ ಚಾರ್ಲ್‍ಟನ್‍ಬರ್ಗ್‍ನಲ್ಲಿನ ರೀಕನ್ ಸ್ಟಾಲ್ಟ್‍ನ ಅಧ್ಯಕ್ಷನಾಗಿ ಹೆಲ್ಮ್‍ಹೋಲ್ಟ್ಸ್‍ನ ಉತ್ತರಾಧಿಕಾರಿಯಾದ. ಈತನನ್ನು 1900ರಲ್ಲಿ ಬರ್ಲಿನ್ ವಿಶ್ವವಿದ್ಯಾಲಯದ ಗೌರವಪ್ರಾಧ್ಯಾಪಕನನ್ನಾಗಿ ನೇಮಿಸಿದರು. ಲಂಡನ್ನಿನ ರಾಯಲ್ ಸೊಸೈಟಿ ಮತ್ತು ಫಿಸಿಕಲ್ ಸೊಸೈಟಿ, ಯೂರೋಪಿನ ಅನೇಕ ವೈಜ್ಞಾನಿಕ ಸಂಘ-ಇವು ಈತನನ್ನು ತಮ್ಮ ಗೌರವ ಸದಸ್ಯನನ್ನಾಗಿ ಚುನಾಯಿಸಿದ್ದುವು. ಕೋಲ್‍ರಾಷನ ಸಂಶೋಧನೆಗಳು ಮುಖ್ಯವಾಗಿ ವಿದ್ಯುತ್ ಮತ್ತು ಕಾಂತ ಭಾಗಗಳಲ್ಲಿ ಇದ್ದವು. ಭೂಮಿಯ ಕಾಂತದ ಕ್ಷಿತಿಜೀಯ ಘಟಕವನ್ನೂ ವಿದ್ಯುತ್ ಪ್ರವಾಹವನ್ನೂ ಏಕಕಾಲದಲ್ಲಿ ಅಳೆಯಲು ಒಂದು ವಿಧಾನವನ್ನು ರೂಪಿಸಿದ. ಎಲೆಕ್ಟ್ರೊಲೈಟಿನ ಧ್ರುವೀಕರಣವನ್ನು ಕಡಿಮೆ ಮಾಡಲು ಸೇತುವೆಯಲ್ಲಿ ಪರ್ಯಾಯ ವಿದ್ಯುತ್ತನ್ನು ಬಳಸಲು ಸಲಹೆ ಕೊಟ್ಟವನು ಈತನೇ. ಇದಕ್ಕೆ ಕೋಲ್‍ರಾಷ್ ಸೇತುವೆ ಎಂದೇ ಹೆಸರು. ಇಂದಿಗೂ ಕೂಡ ಈ ವಿಧಾನವನ್ನು ಬಳಸುತ್ತಾರೆ. ದ್ರಾವಣದ ಸಾರರಿಕ್ತತೆಗೂ ಅದರ ವಿದ್ಯುದ್ವಹನತೆಗೂ ಇರುವ ಸಂಬಂಧವನ್ನು ಪರಿಶೀಲಿಸಿ ಇದರಿಂದ ಅಯಾನುಗಳ ನಿರಪೇಕ್ಷವೇಗವನ್ನು ಕಂಡುಹಿಡಿದ.
ನಿಧನ
[ಬದಲಾಯಿಸಿ]ಕೋಲ್ರಾಷ್ ಕಾಲವಾದದ್ದು 1910 ನೆಯ ಇಸವಿ ಜನವರಿ 17ರಂದು.
ಉಲ್ಲೇಖಗಳು
[ಬದಲಾಯಿಸಿ]