ವಿಷಯಕ್ಕೆ ಹೋಗು

ಫ್ರಾನ್ಸ್‌ನ ಚಾರ್ಲ್ಸ್ X

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಾರ್ಲ್ಸ್ X ನ ಪಟ್ಟಾಭಿಷೇಕದ ಭಾವಚಿತ್ರ (೧೮೨೫)

ಚಾರ್ಲ್ಸ್ X 1824-30ರಲ್ಲಿ ಫ್ರಾನ್ಸಿನ ದೊರೆಯಾಗಿದ್ದ. ಈತ 15ನೆಯ ಲೂಯಿಯ ಮೊಮ್ಮಗ. ಈತನ ಜನನ 1757ರಲ್ಲಿ ಆಯಿತು. ಈತ ಆರ್ಟ್ವಾದ ಕೌಂಟ್ ಆಗಿದ್ದ. ತಾರುಣ್ಯದಲ್ಲಿ ಫ್ರೆಂಚ್ ಸೇನೆಯಲ್ಲಿ ಸೇವೆ ಸಲ್ಲಿಸಿ, ಕ್ರಾಂತಿಯಾದಾಗ ದೇಶಭ್ರಷ್ಟರಾದ ಶ್ರೀಮಂತರೊಂದಿಗೆ ವಿದೇಶಕ್ಕೆ ತೆರಳಿ ರಾಜಪಕ್ಷಕ್ಕೆ ಬೆಂಬಲಗಳಿಸಲು ಯೂರೋಪಿನಲ್ಲೆಲ್ಲ ಸಂಚರಿಸಿದ. ನೆಪೋಲಿಯನ್ನನ ಪತನಾನಂತರ ಫ್ರಾನ್ಸಿಗೆ ಮರಳಿ,[೧] ತನ್ನ ಸೋದರ 18ನೆಯ ಲೂಯಿಯ ಆಡಳಿತ ಕಾಲದಲ್ಲಿ ತೀವ್ರವಾದ ರಾಜಪಕ್ಷದ ನಾಯಕನಾಗಿದ್ದ; ಲೂಯಿಯ ನಿಧನಾನಂತರ ಸಿಂಹಾಸನವನ್ನೇರಿದನಾದರೂ ಶೀಘ್ರವೇ ಇವನ ಜನಪ್ರಿಯತೆ ಕಡಿಮೆಯಾಯಿತು. 1789ರ ಕ್ರಾಂತಿ ನಡೆಯಲೇ ಇಲ್ಲವೇನೋ ಎನ್ನುವಂತೆ ಜನಾಭಿಪ್ರಾಯವನ್ನು ಕಡೆಗಣಿಸಿ ಆಳಲು ಯತ್ನಿಸಿ. 1830ರ ಜುಲೈ ಕ್ರಾಂತಿಯಿಂದ ಪದಚ್ಯುತನಾದ. ಇಂಗ್ಲೆಂಡಿಗೆ ಪಲಾಯನ ಮಾಡಿ 1836ರಲ್ಲಿ ತೀರಿಕೊಂಡ.[೨] ಈತ ಬೂರ್ಬೊ ವಂಶದ ಕೊನೆಯ ದೊರೆ.

ಉಲ್ಲೇಖಗಳು

[ಬದಲಾಯಿಸಿ]
  1. ↑ Nagel, Susan (18 March 2008). Marie Thérèse: Child of Terror. Bloomsbury Publishing USA. p. 65. ISBN 978-1-5969-1057-7. OCLC 177826440. OL 12443706M.
  2. ↑ Price, Munro (2007). The Perilous Crown: France between Revolutions. Macmillan. pp. 185–187.