ವಿಷಯಕ್ಕೆ ಹೋಗು

ಫ್ರಾನ್ಸ್‌ನ ಚಾರ್ಲ್ಸ್ VIII

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
೧೬ನೇ ಶತಮಾನದ ಭಾವಚಿತ್ರ

ಚಾರ್ಲ್ಸ್ VIII 1483-98ರಲ್ಲಿ ಫ್ರಾನ್ಸ್‌ನ ದೊರೆಯಾಗಿದ್ದ. ಈತ ಹನ್ನೊಂದನೆಯ ಲೂಯಿಯ ಮಗ.[೧] 1470ರಲ್ಲಿ ಈತನ ಜನನವಾಯಿತು. ಇವನು ಪಟ್ಟಕ್ಕೆ ಬಂದಾಗ ಕೇವಲ ಬಾಲಕನಾಗಿದ್ದನು. ಈತ ವಯಸ್ಸಿಗೆ ಬರುವವರೆಗೆ ಇವನ ಸೋದರಿ ಆನ್ ಇವನ ಅಧಿಕಾರ ರಕ್ಷಣೆ ಮಾಡಿದಳು. ಬ್ರಿಟನ್ನಿನ ಆನಳೊಂದಿಗೆ ಚಾರ್ಲ್ಸನ ಮದುವೆ ಏರ್ಪಡಿಸಿ, ಆ ಪ್ರಾಂತ್ಯ ಫ್ರಾನ್ಸಿಗೆ ಸೇರುವಂತೆ ಮಾಡಿದಳು. ಕಾನ್‍ಸ್ಟಾಂಟಿನೋಪಲಿನ ಸಮ್ರಾಟನಾಗಬೇಕೆಂದು ಕನಸು ಕಂಡ ಚಾರ್ಲ್ಸ್ ಬ್ರಿಟನ್ ಮತ್ತು ಆರಗಾನ್‌ಗಳ ಜೊತೆಗೆ ಫ್ರಾನ್ಸಿಗೆ ಘಾತಕವೆನಿಸುವ ಒಪ್ಪಂದಗಳನ್ನು ಮಾಡಿಕೊಂಡು (1494), ಇಟಲಿಯ ನೇಪಲ್ಸ್‌ನ ಅಧಿಕಾರಕ್ಕೆ ಹಾತೊರೆದು ಅಲ್ಲಿಗೆ ಹೋದ (1495). ನೇಪಲ್ಸಿನಿಂದ ಮುಂದೆ ಪೂರ್ವಕ್ಕೆ ಆರಗಾನ್‍ನ ಪಡೆಗಳು ದಂಡಯಾತ್ರೆಯನ್ನು ವಿಫಲಗೊಳಿಸಿದವು. ಈತ ಫ್ರಾನ್ಸಿಗೆ ಮರಳಿ ಮತ್ತೆ ದಂಡಯಾತ್ರೆ ನಡೆಸುವ ಯತ್ನದಲ್ಲಿದ್ದಾಗ ಅಪಘಾತದಲ್ಲಿ ಸತ್ತ.[೨]

ಉಲ್ಲೇಖಗಳು

[ಬದಲಾಯಿಸಿ]
  1. ↑ Fletcher 1999, p. 76.
  2. ↑ Heiner Gillmeister, Tennis: A Cultural History (London: Leicester University Press, 1998) p. 21. (ISBN 978-0718501471)

ಗ್ರಂಥಸೂಚಿ

[ಬದಲಾಯಿಸಿ]
  • Fletcher, Stella (1999). The Longman Companion to Renaissance Europe, 1390–1530. Routledge.