ವಿಷಯಕ್ಕೆ ಹೋಗು

ಫ್ರಾನ್ಸ್‌ನ ಚಾರ್ಲ್ಸ್ VI

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡಾಯಲಾಗ್ಸ್ ಆಫ಼್ ಪಿಯೇರ್ ಸ್ಯಾಲ್ಮನ್‍ನಲ್ಲಿ ಚಾರ್ಲ್ಸ್ VI

ಚಾರ್ಲ್ಸ್ VI 1380-1422ರಲ್ಲಿ ಫ್ರಾನ್ಸಿನ ದೊರೆಯಾಗಿದ್ದವ. ಈತ ಐದನೆಯ ಚಾರ್ಲ್ಸನ ಮಗನಾಗಿದ್ದನು. ಈತ 1368ರಲ್ಲಿ ಜನಿಸಿದನು.[೧] ಈತ ಪಟ್ಟಕ್ಕೆ ಬಂದಾಗ ಇನ್ನೂ ಎಳೆಯನಾಗಿದ್ದ. ರಾಜನ ಸಂಬಂಧಿಗಳೂ ಕೆಲವು ಗಣ್ಯ ಶ್ರೀಮಂತರೂ ಆರಂಭದಲ್ಲಿ ಆಡಳಿತ ನಿರ್ವಹಿಸಿದರು. ಆದರೆ ಈತ ಪಟ್ಟಕ್ಕೆ ಬಂದಾಗಲೇ ಫ್ರಾನ್ಸಿನ ಅನೇಕ ನಗರಗಳು ಭಾರಿ ಕರಭಾರದ ವಿರುದ್ಧವಾಗಿ ಬಂಡೆದ್ದುವು. ಫ್ಲಾಂಡರ್ಸಿನ ನಗರಗಳಿಗೆ ಇಂಗ್ಲೆಂಡು ನೆರವು ಕಳುಹಿಸಿತು. 1392ರಲ್ಲಿ ಚಾರ್ಲ್ಸನಿಗೆ ಹುಚ್ಚು ಹಿಡಿಯಿತು. ಬರ್ಗಂಡಿ ಮತ್ತು ಆರ್ಲಿಯನ್ಸಿನ ಡ್ಯೂಕರ ನಡುವಣ ಈರ್ಷ್ಯೆಯು ಅಂತಃಕಲಹಕ್ಕೆ ಅವಕಾಶವಾಯಿತು. ಈ ಕಲಹದಲ್ಲಿ ಬ್ರಿಟನ್‍ಗೆ ಅವಕಾಶವಾಯಿತು. ಬರ್ಗಂಡಿಯ ಡ್ಯೂಕನಾದ ಜಾನ್ ಈ ಕಲಹದಲ್ಲಿ ಬ್ರಿಟನ್ನಿನ ನೆರವು ಕೇಳಿದ. 1407ರಲ್ಲಿ ಆರ್ಲಿಯನ್ಸ್ ಡ್ಯೂಕನ ಕೊಲೆಯಾಯಿತು. ಅವನ ಉತ್ತರಾಧಿಕಾರಿ ಆರ್ಮಾನ್ಯಾಕ್ ಎಂಬ ಪಕ್ಷ ಕಟ್ಟಿದ. ಇಂಗ್ಲೆಂಡಿನ 5ನೆಯ ಹೆನ್ರಿ ಫ್ರಾನ್ಸಿನ ಮೇಲೆ ದಂಡೆತ್ತಿ ಬಂದ. ಎಜಿನ್‌ಕೋರ್ಟ್ ಯುದ್ಧದಲ್ಲಿ ಚಾರ್ಲ್ಸನ ಇಬ್ಬರು ಹಿರಿಯ ಮಕ್ಕಳು ತೀರಿಕೊಂಡರು (1415). ಬರ್ಗಂಡಿಯವರು ರಾಜನ ಮಿತ್ರರಾದ ಆರ್ಮಾನ್ಯಾಕ್ ಪಕ್ಷದವರ ಮೇಲೆ ಸೇಡು ತೀರಿಸಿಕೊಳ್ಳಲು ರಾಣಿ ಇಸಬೆಲ್ಲಳನ್ನು ಬಂಧಿಸಿ 1418ರಲ್ಲಿ ಪ್ಯಾರಿಸನ್ನು ಗೆದ್ದುಕೊಂಡರು. 5ನೆಯ ಹೆನ್ರಿ ನಾರ್ಮಂಡಿಯನ್ನು ಗೆದ್ದ.[೨] 1420ರಲ್ಲಿ ರಾಣಿ ಬ್ರಿಟಿಷರೊಂದಿಗೆ ಟ್ರೂವ ಒಪ್ಪಂದ ಮಾಡಿಕೊಂಡು ಇಂಗ್ಲೆಂಡಿನ ಹೆನ್ರಿಯನ್ನು ಫ್ರಾನ್ಸಿನ ರಾಜ್ಯರಕ್ಷಕನೆಂದು ಮಾನ್ಯ ಮಾಡಿದಳು. ಚಾರ್ಲ್ಸನ ಹುಚ್ಚು ಹೋಗಲೇ ಇಲ್ಲ. ಹುಚ್ಚ ಚಾರ್ಲ್ಸ್ ಎಂದೇ ಇವನಿಗೆ ಹೆಸರಾಯಿತು. 1422ರಲ್ಲಿ ಈತ ತೀರಿಕೊಂಡ.[೩]

ಉಲ್ಲೇಖಗಳು

[ಬದಲಾಯಿಸಿ]
  1. ↑ Roux 2009, p. 244.
  2. ↑ Allmand 1992, p. 134.
  3. ↑ William W. Kibler; Grover A. Zinn (1995). Medieval France: An Encyclopedia. Psychology Press. p. 379. ISBN 978-0-8240-4444-2.

ಗ್ರಂಥಸೂಚಿ

[ಬದಲಾಯಿಸಿ]
  • Roux, Simone (2009). Paris in the Middle Ages. Translated by McNamara, Jo Ann. University of Pennsylvania Press.
  • Allmand, Christopher (1992). Henry V. London: Methuen London. ISBN 9780413532800.