ಫಾತ್ಮಾ ಬೇಗಂ
ಫಾತ್ಮಾ ಬೇಗಂ | |
---|---|
![]() | |
ಜನನ | ಫಾತ್ಮಾ ೧೮೯೨ |
ಸಾವು | 1983 (ವಯಸ್ಸು ೯೦–೯೧) |
Other names | ಭಾರತೀಯ ಚಿತ್ರರಂಗದ ಮೊದಲ ಮಹಿಳಾ ಚಲನಚಿತ್ರ ನಿರ್ದೇಶಕಿ. |
ಶಿಕ್ಷಣs |
|
Years active | ೧೯೨೨–೧೯೪೦ |
Spouse | ನವಾಬ್ ಸಿಡಿ ಇಬ್ರಾಹಿಂ ಮುಹಮ್ಮದ್ ಯಾಕುತ್ ಖಾನ್ III (ಆಪಾದಿತ) |
ಮಕ್ಕಳು | ಜುಬೇದಾ ಮತ್ತು ಸುಲ್ತಾನಾ ಸೇರಿದಂತೆ ೩ ಮಂದಿ. |
ಸಂಬಂಧಿಕರು | ಜಮೀಲಾ ರಜಾಕ್ (ಮೊಮ್ಮಗಳು) ರಿಯಾ ಪಿಳ್ಳೈ (ಮರಿಮೊಮ್ಮಗಳು) |
ಫಾತ್ಮಾ ಬೇಗಂ (೧೮೯೨-೧೯೮೩) ಇವರು ಭಾರತೀಯ ನಟಿ, ನಿರ್ದೇಶಕಿ, ನಿರ್ಮಾಪಕಿ ಮತ್ತು ಚಿತ್ರಕಥೆಗಾರ್ತಿಯಾಗಿದ್ದು, ಭಾರತೀಯ ಚಿತ್ರರಂಗದ ಮೊದಲ ಮಹಿಳಾ ಚಲನಚಿತ್ರ ನಿರ್ದೇಶಕಿಯಾಗಿದ್ದರು.[೧][೨] ನಾಲ್ಕು ವರ್ಷಗಳಲ್ಲಿ, ಅವರು ಅನೇಕ ಚಲನಚಿತ್ರಗಳನ್ನು ಬರೆದು, ನಿರ್ಮಿಸಿ ಮತ್ತು ನಿರ್ದೇಶಿಸಿದ್ದಾರೆ. ಅವರು ತಮ್ಮದೇ ಆದ ನಿರ್ಮಾಣ ಸಂಸ್ಥೆಯಾದ ಫಾತ್ಮಾ ಫಿಲ್ಮ್ಸ್ ಅನ್ನು ಪ್ರಾರಂಭಿಸಿದರು. ನಂತರ, ಅದು ವಿಕ್ಟೋರಿಯಾ-ಫಾತ್ಮಾ ಫಿಲ್ಮ್ಸ್ ಆಗಿ ಮಾರ್ಪಟ್ಟಿತು ಮತ್ತು ೧೯೨೬ ರಲ್ಲಿ, ಅವರ ಮೊದಲ ಚಿತ್ರ ಬುಲ್ಬುಲ್-ಎ-ಪರಿಸ್ತಾನ್ ಅನ್ನು ನಿರ್ದೇಶಿಸಿತು.[೩][೪]
ಆರಂಭಿಕ ಜೀವನ
[ಬದಲಾಯಿಸಿ]ಫಾತ್ಮಾ ಬೇಗಂ ಅವರು ಭಾರತದಲ್ಲಿ ಉರ್ದು ಮಾತನಾಡುವ ಮುಸ್ಲಿಂ ಕುಟುಂಬದಲ್ಲಿ ಜನಿಸಿದರು ಹಾಗೂ ಉರ್ದು ಭಾಷೆಯ ರಂಗಭೂಮಿಯ ಹಿನ್ನೆಲೆಯಿಂದ ಬಂದವರು. ಅವರ ಮುಸ್ಲಿಂ ಹಿನ್ನೆಲೆಯ ಕುಟುಂಬದವರು ಉರ್ದು ಭಾಷೆಯನ್ನು ಮಾತನಾಡುತ್ತಿದ್ದರು. ಅವರು ರಂಗಭೂಮಿಯಲ್ಲಿ ತರಬೇತಿ ಪಡೆದರು ಮತ್ತು ಹೆಚ್ಚಾಗಿ ಉರ್ದು ಮತ್ತು ಹಿಂದಿ ನಾಟಕಗಳಲ್ಲಿ ನಟಿಸಿದ್ದಾರೆ.
ವೃತ್ತಿಜೀವನ
[ಬದಲಾಯಿಸಿ]ಅವರು ಉರ್ದು ರಂಗಭೂಮಿಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ, ಅವರು ಚಲನಚಿತ್ರಗಳಿಗೆ ಸ್ಥಳಾಂತರಗೊಂಡರು ಮತ್ತು ಅರ್ದೇಶಿರ್ ಇರಾನಿ ಅವರ ಮೂಕ ಚಿತ್ರ ವೀರ್ ಅಭಿಮನ್ಯು (೧೯೨೨) ಚಿತ್ರಕ್ಕೆ ಪಾದಾರ್ಪಣೆ ಮಾಡಿದರು. ಪುರುಷರು ನಾಟಕಗಳು ಮತ್ತು ಚಲನಚಿತ್ರಗಳಲ್ಲಿ ಮಹಿಳೆಯರಾಗಿ ನಟಿಸುವುದು ಸಾಮಾನ್ಯ ಅಭ್ಯಾಸವಾಗಿತ್ತು, ಆದ್ದರಿಂದ, ಅವರು ದೊಡ್ಡ ಮಹಿಳಾ ಸೂಪರ್ಸ್ಟಾರ್ ಆದರು. ಫಾತ್ಮಾ ಬೇಗಂ ಅವರು ಬಿಳಿ ಚರ್ಮದವರಾಗಿದ್ದರು ಮತ್ತು ಪರದೆಯ ಮೇಲಿನ ಸೆಪಿಯಾ / ಕಪ್ಪು ಮತ್ತು ಬಿಳಿ ಚಿತ್ರಗಳಿಗೆ ಸರಿಹೊಂದುವಂತಹ ಗಾಢ ಮೇಕಪ್ ಧರಿಸಿದ್ದರು. ಹೆಚ್ಚಿನ ಪಾತ್ರಗಳಿಗೆ ನಾಯಕ ಮತ್ತು ನಾಯಕಿಯರಿಗೆ ಕೂದಲ ಕುಲಾವಿಗಳ ಅಗತ್ಯವಿತ್ತು.
೧೯೨೬ ರಲ್ಲಿ, ಅವರು ಫಾತ್ಮಾ ಫಿಲ್ಮ್ಸ್ ಅನ್ನು ಸ್ಥಾಪಿಸಿದರು. ನಂತರ, ೧೯೨೮ ರಲ್ಲಿ ವಿಕ್ಟೋರಿಯಾ-ಫಾತಿಮಾ ಫಿಲ್ಮ್ಸ್ ಎಂದು ಕರೆಯಲ್ಪಟ್ಟಿತು. ಅವರು ಫ್ಯಾಂಟಸಿ ಸಿನೆಮಾದ ಪ್ರವರ್ತಕರಾದರು. ಅಲ್ಲಿ ಅವರು ಆರಂಭಿಕ ವಿಶೇಷ ಪರಿಣಾಮಗಳನ್ನು ಹೊಂದಲು ಟ್ರಿಕ್ ಛಾಯಾಗ್ರಹಣವನ್ನು ಬಳಸಿದರು. ಅವರು ಕೊಹಿನೂರ್ ಸ್ಟುಡಿಯೋಸ್ ಮತ್ತು ಇಂಪೀರಿಯಲ್ ಸ್ಟುಡಿಯೋಸ್‌ನಲ್ಲಿ ನಟಿಯಾಗಿದ್ದರು. ಫಾತ್ಮಾ ಫಿಲ್ಮ್ಸ್‌ನಲ್ಲಿ ತಮ್ಮದೇ ಆದ ಚಲನಚಿತ್ರಗಳನ್ನು ಬರೆಯುವುದು, ನಿರ್ದೇಶಿಸುವುದು, ನಿರ್ಮಿಸುವುದು ಮತ್ತು ನಟಿಸುವುದು ಅವರ ಹವ್ಯಾಸವಾಗಿತ್ತು.
ಬೇಗಂರವರು ೧೯೨೬ ರಲ್ಲಿ, ಬುಲ್ಬುಲ್-ಎ-ಪರಿಸ್ತಾನ್ ಚಿತ್ರದ ಮೂಲಕ ಭಾರತೀಯ ಚಿತ್ರರಂಗದ ಮೊದಲ ಮಹಿಳಾ ನಿರ್ದೇಶಕಿಯಾದರು. ಚಿತ್ರದ ಯಾವುದೇ ಮುದ್ರಣಗಳು ಪ್ರಸ್ತುತ ಅಸ್ತಿತ್ವದಲ್ಲಿಲ್ಲವಾದರೂ, ಹೆಚ್ಚಿನ ಬಜೆಟ್ ನಿರ್ಮಾಣವನ್ನು ಅನೇಕ ವಿಶೇಷ ಪರಿಣಾಮಗಳನ್ನು ಒಳಗೊಂಡಿರುವ ಫ್ಯಾಂಟಸಿ ಚಿತ್ರವೆಂದು ವಿವರಿಸಲಾಗಿದೆ. ಇದು ನಿಜವಾಗಿದ್ದರೆ, ಈ ಚಿತ್ರವು ಬೇಗಂ ಅವರನ್ನು ಜಾರ್ಜ್ ಮೆಲಿಸ್‌ನಂತಹ ಫ್ಯಾಂಟಸಿ ಸಿನೆಮಾದ ಆರಂಭಿಕ ಪ್ರವರ್ತಕರಲ್ಲಿ ಒಬ್ಬರನ್ನಾಗಿ ಮಾಡುತ್ತದೆ.[೫] ಅವರು ಇನ್ನೂ ಅನೇಕ ಚಲನಚಿತ್ರಗಳನ್ನು ನಿರ್ದೇಶಿಸಿದರು. ಅವರ ಕೊನೆಯ ಚಿತ್ರ ೧೯೨೯ ರಲ್ಲಿ, ಗೋಡೆಸ್ ಆಫ್ ಲಕ್. ೧೯೩೮ ರಲ್ಲಿ, ಫಾತ್ಮಾರವರು ತಮ್ಮ ಸ್ವಂತ ಕೃತಿಯಲ್ಲಿ ನಿರ್ಮಾಣ ಮತ್ತು ಪ್ರದರ್ಶನವನ್ನು ಮುಂದುವರಿಸುವಾಗ, ದುನಿಯಾ ಕ್ಯಾ ಹೈ? ಚಿತ್ರದಲ್ಲಿ ಕೊಹಿನೂರ್ ಸ್ಟುಡಿಯೋಸ್ ಮತ್ತು ಇಂಪೀರಿಯಲ್ ಸ್ಟುಡಿಯೋಸ್ಗಾಗಿ ಕೆಲಸ ಮಾಡಿದರು.
ಅವರು ೧೯೪೦ ರಲ್ಲಿ ತಮ್ಮ ಕೊನೆಯ ಚಿತ್ರ ಡೈಮಂಡ್ ಕ್ವೀನ್‌ನಲ್ಲಿ ಫೈಮಾ ಪಾತ್ರದಲ್ಲಿ ಕೆಲಸ ಮಾಡಿದರು.
ವೈಯಕ್ತಿಕ ಜೀವನ
[ಬದಲಾಯಿಸಿ]ಅವರು ಸಚಿನ್ ರಾಜ್ಯದ ಮೂರನೇ ನವಾಬ್ ಸಿದಿ ಇಬ್ರಾಹಿಂ ಮುಹಮ್ಮದ್ ಯಾಕುತ್ ಖಾನ್ ಅವರನ್ನು ವಿವಾಹವಾದರು ಎಂದು ಹೇಳಲಾಗುತ್ತದೆ.[೬] ಆದಾಗ್ಯೂ, ನವಾಬ್ ಮತ್ತು ಫಾತ್ಮಾರವರು, ನವಾಬ್ ನಡುವೆ ಮದುವೆ ಅಥವಾ ನವಾಬ್ ಅವರ ಯಾವುದೇ ಮಕ್ಕಳನ್ನು ತಮ್ಮದೇ ಎಂದು ಗುರುತಿಸಿದ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಇದು ಮುಸ್ಲಿಂ ಕುಟುಂಬ ಕಾನೂನಿನಲ್ಲಿ ಕಾನೂನುಬದ್ಧ ಪಿತೃತ್ವಕ್ಕೆ ಪೂರ್ವಾಪೇಕ್ಷಿತವಾಗಿದೆ. ಅವರು ಮೂಕ ಸೂಪರ್‌ಸ್ಟಾರ್‌ಗಳಾದ ಜುಬೇದಾ, ಸುಲ್ತಾನಾ ಮತ್ತು ಶಹಜಾದಿ ಅವರ ತಾಯಿಯಾಗಿದ್ದರು. ಅವರು ಹುಮಾಯೂನ್ ಧನರಾಜ್‌ಗೀರ್ ಮತ್ತು ದುರ್ರೆಶಹ್ವಾರ್ ಧನರಾಜ್‌ಗೀರ್ ಅವರ ಅಜ್ಜಿಯಾಗಿದ್ದರು, ಹೈದರಾಬಾದ್‌ನ ಜುಬೇದಾ ಮತ್ತು ಮಹಾರಾಜ ನರಸಿಂಗಿರ್ ಧನರಾಜ್‌ಗೀರ್ ಮತ್ತು ಸುಲ್ತಾನಾ ಮತ್ತು ಕರಾಚಿಯ ಪ್ರಮುಖ ಉದ್ಯಮಿ ಸೇಠ್ ರಜಾಕ್ ಅವರ ಪುತ್ರಿ ಜಮಿಲಾ ರಜಾಕ್ ಅವರ ಪುತ್ರಿ. ಅವರು ಮಾಡೆಲ್ ಆಗಿ ಬದಲಾದ ನಟಿ ರಿಯಾ ಪಿಳ್ಳೈ ಅವರ ಮುತ್ತಜ್ಜಿಯೂ ಆಗಿದ್ದರು. ಅವರು ಅವರ ಮೊಮ್ಮಗಳು ದುರ್ರೆಶಹ್ವಾರ್ ಧನರಾಜ್‌ಗೀರ್ ಅವರ ಮಗಳಾಗಿದ್ದರು.[೭]
ಮರಣ
[ಬದಲಾಯಿಸಿ]ಬೇಗಂರವರು ೧೯೮೩ ರಲ್ಲಿ, ತಮ್ಮ ೯೧ ನೇ ವಯಸ್ಸಿನಲ್ಲಿ ನಿಧನರಾದರು.[೮]
ಚಲನಚಿತ್ರಗಳು
[ಬದಲಾಯಿಸಿ]ಮೂಕ ಚಲನಚಿತ್ರಗಳು
[ಬದಲಾಯಿಸಿ]ವರ್ಷ | ಚಲನಚಿತ್ರ | ಪಾತ್ರ | ಟಿಪ್ಪಣಿಗಳು |
---|---|---|---|
೧೯೨೨ | ವೀರ್ ಅಭಿಮನ್ಯು | ಸುಭದ್ರಾ | ಅರ್ದೇಶಿರ್ ಇರಾನಿ ಅವರ ಮೂಕಿ ಚಿತ್ರದಲ್ಲಿ ಪಾದಾರ್ಪಣೆ ಮಾಡಿದರು. |
೧೯೨೪ | ಪೃಥ್ವಿ ವಲ್ಲಭ | ಮೃಣಾಲವತಿ | ಮೂಕ ಚಿತ್ರ |
ಕಲಾ ನಾಗ್ | ಮೂಕ ಚಿತ್ರ | ||
ಸತಿ ಸರ್ದರ್ಬ | ಮೂಕ ಚಿತ್ರ | ||
ಗುಲ್-ಎ-ಬಕಾವಲಿ | ಮೂಕ ಚಿತ್ರ | ||
ರಾಜಾ ಹರಿಶ್ಚಂದ್ರ | ಮೂಕ ಚಿತ್ರ | ||
೧೯೨೫ | ಸಾಮಾಜಿಕ ಪೈರೇಟ್ಸ್ | ಮೋಹಿನಿ | ಮೂಕ ಚಿತ್ರ |
ನಹರ್ ಸಿಂಗ್ | ಮೂಕ ಚಿತ್ರ | ||
ಗೌಡ ಬಂಗಲ್ | ಮೂಕಿ ಚಿತ್ರ | ||
ದೇವದಾಸಿ | ಕಾದಂಬರಿ ಆಧಾರಿತ | ||
ನಹರಸಿಂಗ್ ಡಾಕು | ಮೂಕಿ ಚಿತ್ರ | ||
ದಿ ಮ್ಯಾಜಿಷಿಯನ್ ಆಫ್ ಬೆಂಗಾಲ್ | ಮೂಕಿ ಚಿತ್ರ | ||
೧೯೨೬ | ಇಂದ್ರಜಲ್ | ಮೂಕಿ ಚಿತ್ರ | |
ಖುಬ್ಸುರತ್ ಬಾಲಾ | ನಟಿ | ಮೂಕಿ ಚಿತ್ರ | |
ಬುಲ್ಬುಲ್-ಎ-ಪಾರಿಸ್ತಾನ್ | ನಟಿ | ಭಾರತೀಯ ಸಿನಿಮಾದ ಮೊದಲ ಮಹಿಳಾ ನಿರ್ದೇಶಕಿ. | |
ಸ್ವರ್ಗ ಕಂಕನ್ | ಮೂಕ ಚಿತ್ರ | ||
೧೯೨೭ | ಮುಂಬೈ ನಿ ಬಿಲಾಡಿ | ಮೂಕ ಚಿತ್ರ | |
ಕುಲ್ ದೀಪಕ್ | ಮೂಕ ಚಿತ್ರ | ||
೧೯೨೮ | ರೂಪ ಬಸಂತ್ | ಮೂಕ ಚಿತ್ರ | |
ನೇಕಿ ಕಾ ತಾಜ್ ಅಥವಾ ಚಂದ್ರಾವಳಿ | ನಟಿ | ನೂರ್ ಜೆಹಾನ್ ಜೊತೆ ನಟಿಸಿದ್ದಾರೆ | |
೧೯೨೯ | ಮಹಾ ಸುಂದರ್ | ಮೂಕ ಚಿತ್ರ | |
ಮಹಾಸುಂದರ್ | ಮೂಕ ಚಿತ್ರ | ||
ನಾಸಿಬ್ ನಿ ದೇವಿ | ಮೂಕ ಚಿತ್ರ | ||
೧೯೩೦ | ಆಮ್ ರಾಂಡೆ ದೇರ್ ಸಹಾರಾ | ಮೂಕ ಚಿತ್ರ | |
ಝಲಿಂ ಜುಲೇಖಾ | ಜುಲೇಖಾ | ಮೂಕ ಚಿತ್ರ |
ಟಾಕಿ ಚಲನಚಿತ್ರಗಳು
[ಬದಲಾಯಿಸಿ]ವರ್ಷ | ಚಲನಚಿತ್ರ | ಪಾತ್ರ |
---|---|---|
೧೯೩೪ | ಸೇವಾ ಸದನ | ನಟಿ |
೧೯೩೮ | ದುನಿಯಾ ಕ್ಯಾ ಹೈ? | ನಟಿ |
ಲೇಖಕಿ
[ಬದಲಾಯಿಸಿ]ವರ್ಷ | ಚಲನಚಿತ್ರ | ಪಾತ್ರ | ಟಿಪ್ಪಣಿಗಳು |
---|---|---|---|
೧೯೨೬ | ಬಲ್ಬುಲ್-ಎ-ಪಾರಿಸ್ತಾನ್ | ಬರಹಗಾರ್ತಿ | ಚಿತ್ರಕಥೆ |
೧೯೨೮ | ಹೀರ್ ರಂಝಾ | ಬರಹಗಾರ್ತಿ | ಚಿತ್ರಕಥೆ |
೧೯೨೯ | ವಂಡರ್‌ಫುಲ್ ಪ್ರಿನ್ಸ್ | ಬರಹಗಾರ್ತಿ | ಚಿತ್ರಕಥೆ |
ನಿರ್ದೇಶಕಿ
[ಬದಲಾಯಿಸಿ]ವರ್ಷ | ಚಲನಚಿತ್ರ | ಪಾತ್ರ | ಟಿಪ್ಪಣಿಗಳು |
---|---|---|---|
೧೯೨೬ | ಬಲ್ಬುಲ್-ಇ-ಪಾರಿಸ್ತಾನ್ | ನಿರ್ದೇಶಕಿ | ಭಾರತೀಯ ಸಿನಿಮಾದ ಮೊದಲ ಮಹಿಳಾ ನಿರ್ದೇಶಕಿ, ಬಳಸಿದ ಸ್ವಂತ ನಿರ್ಮಾಣ ಸಂಸ್ಥೆ 'ಫ್ಯಾಟ್ಮಾ ಫಿಲ್ಮ್ಸ್'. |
೧೯೨೭ | ಗಾಡೆಸ್ ಆಫ್ ಲವ್ | ನಿರ್ದೇಶಕಿ | |
೧೯೨೮ | ಚಂದ್ರಾವಳಿ | ನಿರ್ದೇಶಕಿ | |
ಹೀರ್ ರಾಂಜಾ | ನಿರ್ದೇಶಕಿ | ನಿರ್ದೇಶಕಿ ಮತ್ತು ಬರಹಗಾರ್ತಿ | |
೧೯೨೯ | ಗಾಡೆಸ್ ಆಫ್ ಲಕ್ | ನಿರ್ದೇಶಕಿ | ನಿರ್ದೇಶಕಿ |
ಕನಕತರ | ನಿರ್ದೇಶಕಿ | ||
ಮಿಲನ್ ದಿನಾರ್ | ನಿರ್ದೇಶಕಿ | ||
ಶಕುಂತಲಾ | ನಿರ್ದೇಶಕಿ | ||
ಕನಕ್ ತಾರಾ | ನಿರ್ದೇಶಕಿ | ||
ನಸೀಬ್ ನಿ ದೇವಿ | ನಿರ್ದೇಶಕಿ | ಅವರು ಚಿತ್ರದಲ್ಲಿಯೂ ನಟಿಸಿದ್ದಾರೆ. |
ನಿರ್ಮಾಪಕಿ
[ಬದಲಾಯಿಸಿ]ವರ್ಷ | ಚಲನಚಿತ್ರ | ಪಾತ್ರ | ಟಿಪ್ಪಣಿಗಳು |
---|---|---|---|
೧೯೨೮ | ಹೀರ್ ರಾಂಜಾ | ನಿರ್ಮಾಪಕಿ | ನಿರ್ಮಾಪಕಿ, ನಿರ್ದೇಶಕಿ ಮತ್ತು ಬರಹಗಾರ್ತಿ |
ಪರಂಪರೆ
[ಬದಲಾಯಿಸಿ]ಅವರ ಪರಂಪರೆಯನ್ನು ಅವರ ಪುತ್ರಿಯರಾದ ಸುಲ್ತಾನಾ, ಶಹಜಾದಿ ಮತ್ತು ಜುಬೇದಾ ಅವರು ಭಾರತದ ಮೊದಲ ಟಾಕಿ ಆಲಂ ಅರಾದಲ್ಲಿ ಅಭಿನಯಿಸಿದರು.
ಉಲ್ಲೇಖಗಳು
[ಬದಲಾಯಿಸಿ]- ↑ "A Southasian filmmaker unlike any other". Himal Southasian. April 19, 2022.
- ↑ Rajadhyaksha, Ashish; Willemen, Paul, eds. (1999). Encyclopedia of Indian Cinema (2 ed.). New York: Routledge. p. 95. ISBN 1579581463.
- ↑ Khurana, Ashleshaa. "Bollywood's unforgettable women - Times of India". The Times of India. Archived from the original on 2 February 2017. Retrieved 31 March 2016.
- ↑ Pandya, Sonal. "Fatma Begum, Jaddanbai: The earliest female filmmakers of Indian cinema". Cinestaan. Archived from the original on 26 February 2020. Retrieved 26 February 2020.
- ↑ "100 Years of Indian Cinema: The first women directors". IBNLive. Archived from the original on 12 March 2016. Retrieved 4 March 2016.
- ↑ "Sachin Princely State (9 gun salute)". Archived from the original on 23 April 2017. Retrieved 25 June 2014.
- ↑ "Who is Rhea Pillai- Daily Bhaskar". Archived from the original on 22 August 2019. Retrieved 22 August 2019.
- ↑ "Women's Day 2023: Lost in history! A look back at the 'FIRSTS' of Indian Cinema". Times of India. March 8, 2023.
ಬಾಹ್ಯ ಕೊಂಡಿಗಳು
[ಬದಲಾಯಿಸಿ]Media related to ಫಾತ್ಮಾ ಬೇಗಂ at Wikimedia Commons
- ಫಾತ್ಮಾ ಬೇಗಂ ಐ ಎಮ್ ಡಿ ಬಿನಲ್ಲಿ