ಪ್ರೇಮ್ ಮಾಥುರ್

ವಿಕಿಪೀಡಿಯ ಇಂದ
Jump to navigation Jump to search

ಪ್ರೇಮ್ ಮಾಥುರ್ ಮೊದಲ ಭಾರತೀಯ ಮಹಿಳಾ ವಾಣಿಜ್ಯ ಪೈಲಟ್. ಅವರು ಡೆಕ್ಕನ್ ಏರ್ವೇಸ್ ನಲ್ಲಿ ವಿಮಾನ ಚಾಲಕರಾಗಿದ್ದರು. ಅವರು 1947 ರಲ್ಲಿ ತನ್ನ ವಾಣಿಜ್ಯ ಪೈಲಟ್ ಪರವಾನಗಿಯನ್ನು ಪಡೆದು, [೧] [೨] [೩] 1949 ರಲ್ಲಿ ರಾಷ್ಟ್ರೀಯ ವಾಯು ಸ್ಪರ್ಧೆಯನ್ನು ಸಹ ಗೆದ್ದರು. [೪]

ಆರಂಭಿಕ ಜೀವನ[ಬದಲಾಯಿಸಿ]

ಮಾಥುರ್ 1910 ರ ಜನವರಿ 17 ರಂದು ಜನಿಸಿದರು. [೫]

ವೃತ್ತಿ[ಬದಲಾಯಿಸಿ]

1947 ರಲ್ಲಿ ಹೈದರಾಬಾದ್‌ನ ಡೆಕ್ಕನ್ ಏರ್‌ವೇಸ್‌ನಲ್ಲಿ ಕೆಲಸ ಪಡೆಯುವ ಮೊದಲು ಮಾಥುರ್ ಅವರನ್ನು ಎಂಟು ವಿಮಾನಯಾನ ಸಂಸ್ಥೆಗಳು ತಿರಸ್ಕರಿಸಿದವು. [೫] 38 ನೇ ವಯಸ್ಸಿನಲ್ಲಿ ಆಕೆಗೆ ಉದ್ಯೋಗವನ್ನು ನೀಡಲಾಯಿತು, ಅಲ್ಲಿ ಅವರು ವಾಣಿಜ್ಯ ವಿಮಾನವನ್ನು ಹಾರಿಸಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲಹಾಬಾದ್ ಫ್ಲೈಯಿಂಗ್ ಕ್ಲಬ್‌ನಿಂದ ಆಕೆ ತನ್ನ ಪರವಾನಗಿಯನ್ನು ಪಡೆದಳು. ಸಹ-ಪೈಲಟ್ ಆಗಿ ಅವರು ತನ್ನ ಮೊದಲ ವಿಮಾನವನ್ನು ಹಾರಿಸಿದರು. ಡೆಕ್ಕನ್ ಏರ್ವೇಸ್ನಲ್ಲಿ ತನ್ನ ವೃತ್ತಿಜೀವನದ ಸಮಯದಲ್ಲಿ, ಇಂದಿರಾ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಲೇಡಿ ಮೌಂಟ್ ಬ್ಯಾಟನ್ ನಂತಹ ಉನ್ನತ ವ್ಯಕ್ತಿಗಳ ಚಾಲಕರಾಗಿದ್ದರು. [೬]

ಮಾಥುರ್ ಅವರು ಕಾಕ್‌ಪಿಟ್‌ನ ಸಂಪೂರ್ಣ ಹತೋಟಿಯನ್ನು ಬಯಸಿದ್ದರು. ಆದರೆ ಅಗತ್ಯವಾದ ಹಾರಾಟದ ಸಮಯವನ್ನು ಅವಳು ಪೂರೈಸಿದ ನಂತರವೂ, ಡೆಕ್ಕನ್ ಏರ್‌ವೇಸ್ ಅವರು ಅದನ್ನು ನಿರಾಕರಿಸಿದರು. [೬] ಶೀಘ್ರದಲ್ಲೇ, ಅವರು ದೆಹಲಿಗೆ ತೆರಳಿ, ಅಲ್ಲಿ ಜಿಡಿ ಬಿರ್ಲಾ ಅವರ ಖಾಸಗಿ ಜೆಟ್ ಪೈಲಟ್ ಆದರು. [೫] ನಂತರ 1953 ರಲ್ಲಿ ಇಂಡಿಯನ್ ಏರ್ಲೈನ್ಸ್ ಗೆ ಸೇರಿ, ವೃತ್ತಿಜೀವನದ ಉಳಿದ ಅವಧಿಯಲ್ಲಿ ಅಲ್ಲಿಯೇ ಕೆಲಸ ಮಾಡಿದರು.

ಪ್ರಶಸ್ತಿಗಳು[ಬದಲಾಯಿಸಿ]

1949 ರಲ್ಲಿ ಮಾಥುರ್ ಅವರು "ರಾಷ್ಟ್ರೀಯ ವಾಯು ಸ್ಪರ್ಧೆ" ಗೆದ್ದರು. [೫]


ವೈಯಕ್ತಿಕ ಜೀವನ[ಬದಲಾಯಿಸಿ]

ಮಾಥುರ್ ಉತ್ತರ ಪ್ರದೇಶದ ಅಲಹಾಬಾದ್ ಮೂಲದ ಹರಿ ಕೃಷ್ಣ ಮಾಥುರ್ ಅವರನ್ನು ವಿವಾಹವಾದರು ಮತ್ತು ಅವರಿಗೆ ಆರು ಜನ ಮಕ್ಕಳಿದ್ದಾರೆ. ಮಾಥುರ್ 1992 ರ ಡಿಸೆಂಬರ್ 22 ರಂದು ತಮ್ಮ 82 ನೇ ವಯಸ್ಸಿನಲ್ಲಿ ನಿಗೂಢವಾಗಿ ನಿಧನರಾದರು. [೫]

ಉಲ್ಲೇಖಗಳು[ಬದಲಾಯಿಸಿ]

  1. Kumar, Ganesh (2010). Modern General Knowledge. Upkar Prakashan. ISBN 9788174821805.
  2. KRISHNASWAMY, MURALI N. (November 1, 2011). "One hundred years of flying high". The Hindu. Retrieved 22 March 2013.
  3. Neelam Raaj,, Amrita Singh (Jun 17, 2007). "Women in the cockpit". Times of India. Retrieved 22 March 2013.CS1 maint: extra punctuation (link)
  4. "Strong Indian women". 10 December 2012. Retrieved 22 March 2013.
  5. ೫.೦ ೫.೧ ೫.೨ ೫.೩ ೫.೪ "Prem Mathur, India's Badass First Female Pilot, Was Licensed Back In 1947!". iDiva.com. 2018-03-01. Retrieved 2019-03-08.
  6. ೬.೦ ೬.೧ "Navrang India: First indian woman commercial pilot - Ms. Prem Mathur". Navrang India. Retrieved 2019-03-08.