ವಿಷಯಕ್ಕೆ ಹೋಗು

ಪ್ರೆಟ್ಸಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರೆಟ್ಸಲ್‍ಗಳ ಸಮೂಹ

ಪ್ರೆಟ್ಸಲ್ ಒಂದು ಬಗೆಯ ಬೇಕ್ ಮಾಡಿದ ಪೇಸ್ಟ್ರಿ. ಇದನ್ನು ಕಣಕದಿಂದ ತಯಾರಿಸಲಾಗುತ್ತದೆ. ಇದು ಸಾಮಾನ್ಯವಾಗಿ ಗಂಟಿನ ಆಕಾರದಲ್ಲಿರುತ್ತದೆ. ಇಂದು ಪ್ರೆಟ್ಸಲ್‍ಗಳು ವಿವಿಧ ಆಕಾರಗಳು, ರಚನೆಗಳು ಮತ್ತು ಬಣ್ಣಗಳಲ್ಲಿ ಬರುತ್ತವೆ, ಆದರೆ ಮೂಲ ಮೃದು ಪ್ರೆಟ್ಸಲ್ ಅತ್ಯಂತ ಸಾಮಾನ್ಯ ಪ್ರೆಟ್ಸಲ್ ಬಗೆಗಳಲ್ಲಿ ಒಂದಾಗಿ ಉಳಿದುಕೊಂಡಿದೆ.

ಪ್ರೆಟ್ಸಲ್‍ಗಳಿಗೆ ಉಪ್ಪು ಅತ್ಯಂತ ಸಾಮಾನ್ಯ ಮಸಾಲೆ ಪದಾರ್ಥ ಅಥವಾ ವ್ಯಂಜನ ವಸ್ತುವಾಗಿದೆ. ಇದು ಪ್ರೆಟ್ಸಲ್‍ಗಳಿಗೆ ಅವುಗಳ ಸಾಂಪ್ರದಾಯಿಕ ಪದರ ಮತ್ತು ಪರಿಮಳ ಕೊಡುವ, ತೊಳೆಯುವ ಸೋಡಾ ಅಥವಾ ಲೈ ಸಂಸ್ಕರಣೆಗೆ ಪೂರಕವಾಗಿದೆ. ಇತರ ವ್ಯಂಜನ ವಸ್ತುಗಳೆಂದರೆ ಮಸ್ಟರ್ಡ್, ಗಿಣ್ಣುಗಳು, ಸಕ್ಕರೆ, ಚಾಕೋಲೆಟ್, ದಾಲ್ಚಿನ್ನಿ, ಸಿಹಿ ಲೇಪ, ಬೀಜಗಳು ಮತ್ತು ನಟ್‍ಗಳು. ಪ್ರೆಟ್ಸಲ್‍ಗಳ ಬಗೆಗಳಲ್ಲಿ ತಯಾರಿಕೆಯ ನಂತರ ಸ್ವಲ್ಪ ಸಮಯದಲ್ಲೇ ತಿನ್ನಬೇಕಾದ ಮೃದು ಪ್ರೆಟ್ಸಲ್‍ಗಳು, ಮತ್ತು ದೀರ್ಘ ಬಡು ಅವಧಿಯನ್ನು ಹೊಂದಿರುವ ಬೇಕ್ ಮಾಡಿದ ಗಟ್ಟಿ ಪ್ರೆಟ್ಸಲ್‍ಗಳು ಸೇರಿವೆ.[]

ಇತಿಹಾಸ

[ಬದಲಾಯಿಸಿ]

ಪ್ರೆಟ್ಸಲ್‍ಗಳ ಮೂಲಕ್ಕೆ, ಜೊತೆಗೆ ಅದರ ಹೆಸರಿನ ಮೂಲಕ್ಕೆ ಸಂಬಂಧಿಸಿದಂತೆ ಅಸಂಖ್ಯಾತ ಕಥನಗಳಿವೆ; ಅವು ಕ್ರೈಸ್ತ ಹಿನ್ನೆಲೆಗಳನ್ನು ಹೊಂದಿವೆ ಮತ್ತು ಐರೋಪ್ಯ ಸಂನ್ಯಾಸಿಗಳಿಂದ ಆವಿಷ್ಕರಿಸಲ್ಪಟ್ಟವು ಎಂದು ಬಹುತೇಕ ಕಥನಗಳು ಹೇಳುತ್ತವೆ.[]

ಉಲ್ಲೇಖಗಳು

[ಬದಲಾಯಿಸಿ]
  1. Miller, Jeffrey (26 April 2018). "How the pretzel went from soft to hard – and other little-known facts about one of the world's favorite snacks". The Conversation. Retrieved 26 April 2018.
  2. Silverman, Sharon Hernes (2001). Pennsylvania Snacks. Stackpole Books. p. 30. ISBN 9780811728744.