ಪ್ರಿಯಾ ವಾರಿಯರ್

ವಿಕಿಪೀಡಿಯ ಇಂದ
Jump to navigation Jump to search


Icono aviso borrar.png
ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ.
ಅಳಿಸುವಿಕೆಗೆ ಗುರುತು ಮಾಡಲು ಕಾರಣ: ವಿಕಿಪೀಡಿಯ:ಜೀವಂತ ವ್ಯಕ್ತಿಗಳ ವ್ಯಕ್ತಿಚಿತ್ರಕ್ಕೆ ತಕ್ಕುದಾಗಿಲ್ಲ

ಪ್ರಿಯಾ ಪ್ರಕಾಶ್ ವಾರಿಯರ್ ಮಲಯಾಳಂ ಚಿತ್ರ ನಟಿ ಹಾಗು ರೂಪದರ್ಶಿ. ಓರು ಅದರ್ ಲವ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಒಂದು ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಹರಿದಾಡಿತು. ಈ ಸಂದರ್ಭದಲ್ಲಿ ಗೂಗಲ್ ನಲ್ಲಿ ಅತಿಹೆಚ್ಚು ಹುಡುಕಾಡಿದ ವ್ಯಕ್ತಿಯಾಗಿದ್ದರು.

ಬಾಲ್ಯ ಮತ್ತು ಜೀವನ[ಬದಲಾಯಿಸಿ]

ಪ್ರಿಯಾ ಪ್ರಕಾಶ್ ವಾರಿಯರ್ ಸೆಪ್ಟೆಂಬರ್ ೧೨, ೧೯೯೯ ರಲ್ಲಿ ಕೇರಳದ ತ್ರಿಚೂರ್ ಜಿಲ್ಲೆಯ ಪೂಂಕುಣಂನಲ್ಲಿ ಜನಿಸಿದರು. ಹಾಲಿ ತ್ರಿಚೂರಿನ ವಿಮಲಾ ಕಾಲೇಜಿನಲ್ಲಿ ಒಂದನೇ ವರ್ಷದ ಬಿ. ಕಾಂ ಒದುತ್ತಿದ್ದಾರೆ.

ವೃತ್ತಿ ಜೀವನ[ಬದಲಾಯಿಸಿ]

ಇವರು ಬಾಲ್ಯದಿಂದಲೇ ಮೋಹಿನಿ ಅಟ್ಟಂ ಕಲಿಯುತ್ತಿದ್ದಾರೆ. ತಮ್ಮ ವೃತ್ತಿಜೀವನವನ್ನು ರೂಪದರ್ಶಿಯಾಗಿ ಆರಂಭಿಸಿದರು. ಅನೇಕ ಫ಼್ಯಾಶನ್ ಶೋ ಗಳಲ್ಲಿ ಭಾಗವಹಿಸಿದ್ದಾರೆ. ಇವರು ೧೨ನೇ ತರಗತಿಯಲ್ಲಿ ಒದುತ್ತಿರುವಾಗಲೇ ಇವರಿಗೆ ನಟಿಸಲು ಅವಕಾಶ ಸಿಕ್ಕಿತು. ಆದರೆ ವಿದ್ಯಾಭ್ಯಾಸಕ್ಕೆ ಒತ್ತು ನೀಡಲು ಅದನ್ನು ನಿರಾಕರಿಸಿದರು. ನಂತರ ಅನೇಕ ಕಿರು ಚಿತ್ರಗಳಲ್ಲಿ ನಟಿಸಿದ್ದಾರೆ. ಲೂಯಿನ್ ಲೂಯಿಸ್ ತಟ್ಟಿಲ್ ನಿರ್ದೆಶಿಸಿರುವ "ಕದಲಸು ತೋಣಿ" ಹಾಗು "ಥರ್ಡ್ ಫ಼್ಲಿಪ್" ಗಳಲ್ಲಿ ನಟಿಸಿದ್ದಾರೆ.

ಇವರ ಮೊದಲ ಪೂರ್ಣ ಪ್ರಮಾಣದ ಮಲಯಾಳ್ಂ ಚಲನ ಚಿತ್ರ "ಒರು ಅದರ್ ಲವ್" ಮಾರ್ಚ್ ೩, ೨೦೧೮ ರಂದು ಬಿಡುಗಡೆಯಾಗುತ್ತಿದೆ. ಓಮರ್ ಲೂಲು ಇದರ ನಿರ್ದೇಶಕರು. ಈ ಚಿತ್ರದ "ಮಾಣಿಕ್ಯಾ ಮಲರಾಯ ಪೂವಿ" ಹಾಡಿನ ಒಂದು ತುಣುಕು ಫ಼ೆಬ್ರವರಿ ೯ ರಂದು ಬಿಡುಗಡೆಯಾಗಿ ಫ಼ೆಬ್ರವರಿ ೧೪ ರ ಒಳಗೆ ೧ ಕೋಟಿಗೂ ಹೆಚ್ಚು ಜನರು ಅದನ್ನು ವೀಕ್ಶಿಸಿದ್ದರು. ಈ ವೇಳೆಯಲ್ಲಿ ಅಂತರ್ಜಾಲದಲ್ಲಿ ಅತ್ಯಂತ ಹೆಚ್ಚು ಭಾರಿ ಹುಡುಕಲಾದ ವ್ಯಕ್ತಿಯಾಗಿದ್ದರು.

ಈ ತುಣುಕಿನಲ್ಲಿ ಅವರ ಅಭಿನಯ ಪ್ರಶಂಸೆಗೆ ಒಳಗಾಯಿತು. ರಿಶಿ ಕಪೂರ್ ಇವರು ಅತ್ಯಂತ ಉತ್ತಮ ನಟಿ ಹಾಗು ಪ್ರಸಿದ್ದ ತಾರೆಯಾಗುತ್ತಾರೆ ಎಂದು ಹೇಳಿದ್ದಾರೆ.[೧]

ವಿವಾದ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

[೧] [೨] [೩]

  1. http://priyavarrier.com/about-us
  2. http://www.rediff.com/getahead/report/priya-prakash-varrier-the-girl-internet-is-crushing-over-right-now/20180213.htm
  3. http://www.news18.com/news/movies/priya-prakash-varrier-beats-sunny-leone-and-deepika-padukone-to-become-google-most-searched-celebrity-1662347.html