ಪ್ರಶಾಂತ ಚಂದ್ರ ಮಹಾಲನೊಬಿಸ್
Prasanta Chandra Mahalanobis ಪ್ರಶಾಂತ ಚಂದ್ರ ಮಹಲನೊಬಿಸ್ | |
---|---|
![]() Prasanta Chandra | |
ಜನನ | ಬಂಗಾಳಿ:প্রশান্ত চন্দ্র মহালানবিস ೨೯ ಜೂನ್ ೧೮೯೩ ಕಲ್ಕತ್ತಾ, ಬಂಗಾಳ, ಬ್ರಿಟಿಷ್ ಭಾರತ |
ಮರಣ | ೨೮ ಜೂನ್ ೧೯೭೨ (ವಯಸ್ಸು ೭೮) ಕಲ್ಕತ್ತ, ಪಶ್ಚಿಮ ಬಂಗಾಳ, ಭಾರತ |
ರಾಷ್ಟ್ರೀಯತೆ | ಭಾರತೀಯ |
ಕಾರ್ಯಕ್ಷೇತ್ರ | ಗಣಿತ, ಸಂಖ್ಯಾಶಾಸ್ತ್ರ |
ಸಂಸ್ಥೆಗಳು | ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆ |
ಅಭ್ಯಸಿಸಿದ ವಿದ್ಯಾಪೀಠ | ಪ್ರೆಸಿಡೆನ್ಸಿ ಕಾಲೇಜ್, ಕಲ್ಕತ್ತಾ ಕಿಂಗ್ಸ್ ಕಾಲೇಜ್, ಕೇಂಬ್ರಿಡ್ಜ್ |
ಡಾಕ್ಟರೇಟ್ ಸಲಹೆಗಾರರು | W. H. ಮಕಾಲೆ[೧] |
ಡಾಕ್ಟರೇಟ್ ವಿದ್ಯಾರ್ಥಿಗಳು | ಸಮರೇಂದ್ರ ರಾಯ್[೧] |
Other notable students | ರಾಜ್ ಚಂದ್ರ ಬೋಸ್ C.R. ರಾವ್ |
ಪ್ರಸಿದ್ಧಿಗೆ ಕಾರಣ | ಮಹಲನೋಬಿಸ್ ಅಳತೆ ಫೆಲ್ಡ್‌ಮನ್-ಮಹಲನೋಬಿಸ್ ಮಾದರಿ |
ಗಮನಾರ್ಹ ಪ್ರಶಸ್ತಿಗಳು | ಪದ್ಮ ವಿಭೂಷಣ (1968) ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ (OBE, 1942) |
ಸಂಗಾತಿ | ನಿರ್ಮಲ್ ಕುಮಾರಿ ಮಹಲನೋಬಿಸ್ [೨] |
ಹಸ್ತಾಕ್ಷರ |
ಪ್ರಶಾಂತ ಚಂದ್ರ ಮಹಲನೋಬಿಸ್ (ಒಬಿಇ, ಎಫ್ಎನ್ಎ, ಎಫ್ಎಎಸ್ಸಿ, ಎಫ್ಆರ್ಎಸ್) (29 ಜೂನ್ 1893 - 28 ಜೂನ್ 1972) ಭಾರತೀಯ ವಿಜ್ಞಾನಿ ಮತ್ತು ಅನ್ವಯಿಕ ಸಂಖ್ಯಾಶಾಸ್ತ್ರಜ್ಞರಾಗಿದ್ದರು. ಸ್ವತಂತ್ರ ಭಾರತದ ಪ್ರಥಮ ಯೋಜನಾ ಆಯೋಗದ ಸದಸ್ಯರಾಗಿದ್ದರು. ಸಂಖ್ಯಾಶಾಸ್ತ್ರಕ್ಕೆ ಅವರು ಕೊಟ್ಟ ಮಹತ್ತರ ಕೊಡುಗೆಯೆಂದರೆ ಮಹಲನೋಬಿಸ್ ಅಳತೆ. ಅವರು ಭಾರತದಲ್ಲಿ ಮಾನವಶಾಸ್ತ್ರದಲ್ಲಿ ಗಮನಾರ್ಹ ಅಧ್ಯಯನಗಳನ್ನು ಮಾಡಿದರು. ಅವರು ಭಾರತೀಯ ಸಂಖ್ಯಾಶಾಸ್ತ್ರೀಯ ಸಂಸ್ಥೆಯನ್ನು ಸ್ಥಾಪಿಸಿದರು ಮತ್ತು ದೊಡ್ಡ ಪ್ರಮಾಣದ ಮಾದರಿ ಸಮೀಕ್ಷೆಗಳ ವಿನ್ಯಾಸಕ್ಕೆ ಕೊಡುಗೆ ನೀಡಿದ್ದಾರೆ. ೨೦೦೭ ರಿಂದ ಅವರು ಹುಟ್ಟಿದ ದಿನವನ್ನು ಭಾರತದಲ್ಲಿ ರಾಷ್ಟ್ರೀಯ ಸಾಂಖ್ಯಿಕ(ಅಂಕಿಅಂಶ) ದಿನವನ್ನಾಗಿ ಆಚರಿಸಲಾಗುತ್ತಿದೆ[೩].
ಆರಂಭಿಕ ಜೀವನ
[ಬದಲಾಯಿಸಿ]ಮಹಲನೋಬಿಸ್ ಅವರು ಬಿಕ್ರಮ್‌ಪುರದಲ್ಲಿ (ಈಗ ಬಾಂಗ್ಲಾದೇಶದಲ್ಲಿದೆ) ಜನಿಸಿದರು. ಅವರ ಅಜ್ಜ ಗುರುಚರಣ್ (1833-1916) 1854 ವ್ಯಾಪಾರದ ಸಲುವಾಗಿ ಕಲ್ಕತ್ತಾಗೆ ತೆರಳಿದರು ಮತ್ತು 1860 ರಲ್ಲಿ ರಾಸಾಯನಿಕಗಳನ್ನು ಮಾರುವ ಅಂಗಡಿಯನ್ನು ಆರಂಭಿಸಿದರು. ದೇವೇಂದ್ರನಾಥ ಟಾಗೋರ್ ( ನೊಬೆಲ್ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ ಟಾಗೋರರ ತಂದೆ) (1817-1905) ಗುರುಚರಣರ ಮೇಲೆ ಪ್ರಭಾವ ಬೀರಿದ ಕಾರಣ, ಬ್ರಹ್ಮಸಮಾಜದಂತಹ ಸಾಮಾಜಿಕ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. (ಖಜಾಂಚಿ ಮತ್ತು ಅಧ್ಯಕ್ಷರಾಗಿ) ಕಾರ್ನ್‍ವಾಲೀಸ್ ರಸ್ತೆಯಲ್ಲಿ ಅವರ ಮನೆಯೇ ಬ್ರಹ್ಮಸಮಾಜದ ಕೇಂದ್ರವಾಗಿತ್ತು. ಗುರುಚರಣ್ ಒಬ್ಬ ವಿಧವೆಯನ್ನು ವಿವಾಹವಾಗುವ ಮೂಲಕ ಸಾಮಾಜಿಕ ಮೂಢನಂಬಿಕೆಗಳನ್ನು ವಿರೋಧಿಸಿದರು.ಗುರುಚರಣರಿಗೆ ಇಬ್ಬರು ಮಕ್ಕಳು. ಸುಭೋದಚಂದ್ರ (೧೮೬೭-೧೯೫೩) ಮತ್ತು ಪ್ರಭೋದಚಂದ್ರ(೧೮೬೯-೧೯೪೨).ಪ್ರಭೋದಚಂದ್ರರ ಮಗನೇ ಮಹಲನೋಬಿಸ್.
ಗೌರವಗಳು
[ಬದಲಾಯಿಸಿ]- ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ ಫೆಲೋ (FASC, 1935)
- ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಫೆಲೋ (ಎಫ್ಎನ್ಎ, 1935)
- ಆರ್ಡರ್ ಆಫ್ ದ ಬ್ರಿಟೀಷ್ ಎಂಪೈರ್ (ನಾಗರಿಕ ವಿಭಾಗ), 1942 ಹೊಸ ವರ್ಷದ ಗೌರವಗಳ ಪಟ್ಟಿ
- ಆಕ್ಸ್ಫರ್ಡ್ ವಿಶ್ವವಿದ್ಯಾಲಯದಿಂದ ವೆಲ್ಡನ್ ಮೆಮೋರಿಯಲ್ ಪ್ರಶಸ್ತಿ (1944)
- ರಾಯಲ್ ಸೊಸೈಟಿಯ ಫೆಲೋ, ಲಂಡನ್ (1945)
- ಭಾರತೀಯ ವಿಜ್ಞಾನ ಕಾಂಗ್ರೆಸ್ನ ಅಧ್ಯಕ್ಷರು (1950)
- ಎಕನಾಮೆಟ್ರಿಕ್ ಸೊಸೈಟಿ ಫೆಲೋ ಆಫ್ ಅಮೇರಿಕಾ (1951)
- ಪಾಕಿಸ್ತಾನ್ ಸ್ಟ್ಯಾಟಿಸ್ಟಿಕಲ್ ಅಸೋಸಿಯೇಷನ್ ಫೆಲೋ (1952)
- ರಾಯಲ್ ಸ್ಟಾಟಿಸ್ಟಿಕಲ್ ಸೊಸೈಟಿ, ಯುಕೆ (1954) ನ ಗೌರವ ಫೆಲೋ
- ಸರ್ ದೇವಿಪ್ರಸಾದ್ ಸರ್ವಾಧಿಕರಿ ಚಿನ್ನದ ಪದಕ (1957)
- ಯುಎಸ್ಎಸ್ಆರ್ನ ಅಕಾಡೆಮಿ ಆಫ್ ಸೈನ್ಸಸ್ನ ವಿದೇಶಿ ಸದಸ್ಯ (1958)
- ಕಿಂಗ್ಸ್ ಕಾಲೇಜ್, ಕೇಂಬ್ರಿಡ್ಜ್ನ ಗೌರವ ಫೆಲೋ (1959)
- ಫೆಲೋ ಆಫ್ ದಿ ಅಮೇರಿಕನ್ ಸ್ಟ್ಯಾಟಿಸ್ಟಿಕಲ್ ಅಸೋಸಿಯೇಷನ್ (1961)
- ದುರ್ಗಾಪ್ರಸಾದ್ ಖೈತಾನ್ ಚಿನ್ನದ ಪದಕ (1961)
- ಪದ್ಮ ವಿಭೂಷನ (1968)
- ಶ್ರೀನಿವಾಸ ರಾಮನುಜನ್ ಚಿನ್ನದ ಪದಕ (1968)
- ಭಾರತ ಸರ್ಕಾರವು 2006 ರಲ್ಲಿ ಮಹಲನೋಬಿಸ್ ಅವರ ಹುಟ್ಟುಹಬ್ಬವನ್ನು ರಾಷ್ಟ್ರೀಯ ಸಂಖ್ಯಾಶಾಸ್ತ್ರ ದಿನವಾಗಿ ಆಚರಿಸಲು ನಿರ್ಧರಿಸಿತು.
- 125ನೇ ಜನ್ಮದಿನದಂದು ಗೂಗಲ್ ಡೂಡಲ್ ಪ್ರದರ್ಶಿಸಿ ಗೌರವ ನೀಡಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ ಪ್ರಶಾಂತ ಚಂದ್ರ ಮಹಾಲನೊಬಿಸ್ at the Mathematics Genealogy Project
- ↑ [೧] Prasanta Chandra Mahalanobis: a Biography by Ashok Rudra. Delhi: Oxford University Press, 1996
- ↑ ""Statistics Day" will be celebrated on June 29, 2024 Theme: Use of Data for Decision-Making". PIB Delhi. 28 JUN 2024. p. 1. Retrieved 03 JUN 2025.
{{cite news}}
: Check date values in:|access-date=
and|date=
(help)CS1 maint: url-status (link)