ವಿಷಯಕ್ಕೆ ಹೋಗು

ಪೌಲ್ ಕ್ರೂಗರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪೌಲ್ ಕ್ರೂಗರ್
Paul Kruger circa 1890
Kruger c. 1890

ಅಧಿಕಾರ ಅವಧಿ
9 May 1883  31 May 1902
In exile from 11 September 1900
ಪೂರ್ವಾಧಿಕಾರಿ Triumvirate
ಉತ್ತರಾಧಿಕಾರಿ Schalk Willem Burger (acting)
Office abolished

ಅಧಿಕಾರ ಅವಧಿ
8 August 1881  9 May 1883
Serving with Marthinus Pretorius and Piet Joubert
ಪೂರ್ವಾಧಿಕಾರಿ Thomas Burgers (as President)
ವೈಯಕ್ತಿಕ ಮಾಹಿತಿ
ಜನನ Stephanus Johannes Paulus Kruger
(೧೮೨೫-೧೦-೧೦)೧೦ ಅಕ್ಟೋಬರ್ ೧೮೨೫
Steynsburg, Cape Colony ಟೆಂಪ್ಲೇಟು:Avoid wrap
ಮರಣ 14 July 1904(1904-07-14) (aged 78)
Clarens, Switzerland
ಸಮಾಧಿ ಸ್ಥಳ Heroes' Acre, Pretoria
ಸಂಗಾತಿ(ಗಳು)
  • Maria du Plessis(m. ೧೮೪೨
    her death೧೮೪೬)
  • Gezina du Plessis(m. ೧೮೪೭
    her death೧೯೦೧)
ಮಕ್ಕಳು 18
ಸಹಿ

ಕ್ರೂಗರ್, ಸ್ಟೀಫಾನಸ್ ಜೆಹಾನೀಸ್ ಪಾಲಸ್ (1825-1904). ದಕ್ಷಿಣ ಆಫ್ರಿಕ ಗಣರಾಜ್ಯದ ಅಧ್ಯಕ್ಷ (1883-1900): ಬೋಯರ್ ಜನಾಂಗದ ನಾಯಕ.

ಬಾಲ್ಯ ಜೀವನ

[ಬದಲಾಯಿಸಿ]

ದಕ್ಷಿಣ ಆಫ್ರಿಕದ ಕೇಪ್ ಕಾಲೊನಿಯಲ್ಲಿ 1825ರ ಅಕ್ಟೋಬರ್ 10ರಂದು ಜನಿಸಿದ. 1841ರಲ್ಲಿ ಇವನ ತಂದೆ ತಾಯಿಗಳು ಕ್ರೂಗರನೊಂದಿಗೆ ಟ್ರಾನ್ಸ್‍ವಾಲಿನಲ್ಲಿ ನೆಲೆಸಿದರು. ಕ್ರೂಗರನಿಗೆ ದೊರಕಿದ ಶಿಕ್ಷಣ ಅತ್ಯಲ್ಪ. ಆದರೆ ಇವನು ಧರ್ಮಶುದ್ಧಿವಾದದಲ್ಲಿ ನಿಷ್ಠೆ ಬೆಳಸಿಕೊಂಡನಲ್ಲದೆ ಟ್ರಾನ್ಸ್‍ವಾಲ್ ಪ್ರಾಂತ್ಯದ ಏಕೀಕರಣ ಮತ್ತು ಸರ್ವತೋಮುಖ ಪ್ರಗತಿಗಳಿಗಾಗಿ ದುಡಿದ.

ಹೋರಾಟದ ಬದುಕು

[ಬದಲಾಯಿಸಿ]

ಕ್ರೂಗರ್ 1857ರಲ್ಲಿ ಲೈಡನ್‍ಬರ್ಗಿನ ದಬ್ಬಾಳಿಕೆಯ ವಿರುದ್ಧ ಪೊಚೆಸ್ಟ್ರಮ್ ದಂಗೆಯಲ್ಲಿ ಪ್ರಿಟೋರಿಯಸ್ಸನ ಜೊತೆಗೆ ಸೇರಿಕೊಂಡು ಅದರಲ್ಲಿ ಮಹತ್ತ್ವದ ಪಾತ್ರ ವಹಿಸಿದ. ಅನಂತರ 1861-64ರ ವರೆಗೆ ನಡೆದ ಅಂತರ್ಯುದ್ಧದಲ್ಲಿ ಭಾಗವಹಿಸಿದ. 1852ರ ಸ್ಯಾಂಡ್ ರಿವರ್ ಸಂಧಾನದಲ್ಲೂ 1871ರ ಬ್ಲೋಮ್‍ಹಾಫ್ ಪಂಚಾಯಿತಿಯಲ್ಲೂ ಇವನದು ಪ್ರಮುಖ ಪಾತ್ರವಾಗಿತ್ತು. ಮತ್ತೆ 1877 ಮತ್ತು 1878ರಲ್ಲಿ ಆಫ್ರಿಕ ಸ್ವಾತಂತ್ರ್ಯ ಸಾಧನೆಗಾಗಿ ಇಂಗ್ಲೆಂಡಿನೊಂದಿಗೆ ನಡೆಸಿದ ಮಾತುಕತೆಗಳಲ್ಲೂ ಭಾಗವಹಿಸಿ ಆಫ್ರಿಕದ ಮೇಲೆ ಅಧಿಕಾರ ನಡೆಸಲು ಬ್ರಿಟಿಷರಿಗಿದ್ದ ಹಕ್ಕನ್ನೇ ಪ್ರಶ್ನಿಸಿದ. 1881ರಲ್ಲಿ ಮಜುಬದಲ್ಲಿ ಬೋಯರರು ವಿಜಯ ಗಳಿಸಿದ ತರುವಾಯ ಈತ ವಿರುದ್ಧ ಸರ್ಕಾರದ ನಾಯಕನಾಗಿ ಬ್ರಿಟಿಷರೊಂದಿಗೆ ಸಂಧಾನ ನಡೆಸಿದ. ಗಣರಾಜ್ಯದ ಅಧ್ಯಕ್ಷ ಪದವಿಗೆ ಈತನನ್ನು ಡೋಪರ್ ಪಕ್ಷ ತನ್ನ ಅಭ್ಯರ್ಥಿಯಾಗಿ ಆರಿಸಿತು. 1883ರಲ್ಲಿ ನಡೆದ ಚುನಾವಣೆಯಲ್ಲಿ ಕ್ರೂಗರ್ ಅಧ್ಯಕ್ಷನಾಗಿ ಆಯ್ಕೆಯಾದ. ಮತ್ತೆ ಮೂರು ಬಾರಿ ಆಯ್ಕೆ ಹೊಂದಿ 1900ರ ವರೆಗೆ ಈ ಸ್ಥಾನದಲ್ಲಿದ್ದ. ವಿದೇಶಿ ಜನರ (ಉಯಿಟ್ ಲ್ಯಾಂಡರ್ಸ್) ಮತದಾನದ ಹಕ್ಕಿನಲ್ಲಿ ಇವನಿಗೆ ನಂಬಿಕೆ ಇರಲಿಲ್ಲ. ಆ ಹಕ್ಕನ್ನು ಕ್ರಮೇಣ ಮೊಟಕು ಮಾಡಲು ಕ್ರೂಗರನೇ ಕಾರಣ. ವಿದೇಶೀಯರಿಗಾಗಿ ಬೇರೊಂದು ವಿಧಾನಸಭೆಯನ್ನು ಸ್ಥಾಪಿಸಿ ಅದರ ಪ್ರವೇಶದ ಅರ್ಹತೆಗಳನ್ನು ಹೆಚ್ಚಿಸಿದ. ಕ್ರೂಗರನ ಆಡಳಿತ ನೀತಿಯಿಂದ ಬ್ರಿಟಿಷರು ಇವನ ವಿರೋಧಿಗಳಾದರು. 1900ರಲ್ಲಿ ಬ್ರಿಟಿಷ್ ಸೈನ್ಯ ಪ್ರಿಟೋರಿಯವನ್ನು ವಶಪಡಿಸಿಕೊಂಡಾಗ ಈತ ತಲೆ ತಪ್ಪಿಸಿಕೊಂಡು ಯೂರೋಪಿಗೆ ಓಡಿಹೋದ.

ಅಂತ್ಯ

[ಬದಲಾಯಿಸಿ]

1904ರ ಜುಲೈ 14ರಂದು ಸ್ವಿಟ್ಸರ್ಲೆಂಡಿನ ಕ್ಲಾರೆನ್ಸಿನಲ್ಲಿ ಕ್ರೂಗರ್ ತೀರಿಕೊಂಡ.ಕ್ರೂಗರ್ ಲೇಖಕನೂ ಆಗಿದ್ದ. ಈತ ತನ್ನ ಜೀವನದ ಸ್ಮೃತಿಗಳನ್ನು ಬರೆದಿಟ್ಟಿದ್ದಾನೆ.

ಉಲ್ಲೇಖಗಳು

[ಬದಲಾಯಿಸಿ]