ಪೆಸ್ಟೊ
ಪೆಸ್ಟೊ ಜಜ್ಜಿದ ಬೆಳ್ಳುಳ್ಳಿ, ಪೈನ್ ನಟ್‍ಗಳು, ಉಪ್ಪು, ಕಾಮಕಸ್ತೂರಿ ಎಲೆಗಳು, ಪಾರ್ಮೆಸನ್ ಅಥವಾ ಪೆಕೊರಿನೊ ಸಾರ್ಡೊದಂತಹ ತುರಿದ ಗಿಣ್ಣು ಮತ್ತು ಆಲಿವ್ ಎಣ್ಣೆಯಿಂದ ತಯಾರಿಸಲಾದ ಪೇಸ್ಟ್.[೧][೨] ಇದು ಇಟಲಿಯ ನಗರವಾದ ಜಿನೋವಾದಲ್ಲಿ ಹುಟ್ಟಿಕೊಂಡಿತು ಮತ್ತು ಇದನ್ನು ಪಾಸ್ತಾಕ್ಕೆ ಸೇರಿಸಲು ಮತ್ತು ಜಿನೋಯೀಸ್ ಮಿನೆಸ್ಟ್ರೋನ್ ಸೂಪ್‍ಗೆ ಸುವಾಸನೆ ನೀಡಲು ಬಳಸಲಾಗುತ್ತದೆ.[೩]
ಇತಿಹಾಸ
[ಬದಲಾಯಿಸಿ]ಪ್ರಾಚೀನ ಕಾಲದಲ್ಲಿ ಪೆಸ್ಟೊಗೆ ಎರಡು ಪೂರ್ವವರ್ತಿಗಳಿದ್ದವು ಎಂದು ಭಾವಿಸಲಾಗಿದೆ. ಇವು ರೋಮನ್ ಯುಗದಷ್ಟು ಹಿಂದಿನವಾಗಿವೆ. ಪ್ರಾಚೀನ ರೋಮನ್ನರು "ಮೊರೆಟಮ್ " ಎಂದು ಕರೆಯಲ್ಪಡುವ ಇದೇ ರೀತಿಯ ಪೇಸ್ಟ್ ಅನ್ನು ತಿನ್ನುತ್ತಿದ್ದರು. ಇದನ್ನು ಬೆಳ್ಳುಳ್ಳಿ, ಉಪ್ಪು, ಗಿಣ್ಣು, ಮೂಲಿಕೆಗಳು, ಆಲಿವ್ ಎಣ್ಣೆ ಮತ್ತು ವಿನೆಗರ್ (ಮತ್ತು ಕೆಲವೊಮ್ಮೆ ಪೈನ್ ನಟ್‍ಗಳು) ಒಟ್ಟಿಗೆ ಜಜ್ಜಿ ತಯಾರಿಸಲಾಗುತ್ತಿತ್ತು.[೩][೪] ರೋಮನ್ ಪಾಕಪದ್ಧತಿಯಲ್ಲಿ ಈ ಪೇಸ್ಟ್‌ನ ಬಳಕೆಯನ್ನು ಕವಿತೆಗಳ ಪ್ರಾಚೀನ ಸಂಗ್ರಹವಾದ ಅಪೆಂಡಿಕ್ಸ್ ವರ್ಜಿಲಿಯಾನಾದಲ್ಲಿ ಉಲ್ಲೇಖಿಸಲಾಗಿದೆ. ಇದರಲ್ಲಿ ಲೇಖಕನು ಮೊರೆಟಮ್ ತಯಾರಿಕೆಯನ್ನು ವಿವರಿಸಿದ್ದಾನೆ.[೪] ಮಧ್ಯಯುಗದಲ್ಲಿ, ಜಿನೋವನ್ ಪಾಕಪದ್ಧತಿಯಲ್ಲಿ ಆಗ್ಲಿಯಾಟಾ ಜನಪ್ರಿಯ ಸಾಸ್ ಆಗಿತ್ತು. ಇದು ಬೆಳ್ಳುಳ್ಳಿ ಮತ್ತು ಅಖ್ರೋಟ್‌ಗಳ ಚೂರ್ಣವಾಗಿತ್ತು, ಏಕೆಂದರೆ ಬೆಳ್ಳುಳ್ಳಿಯು ಲಿಗುರಿಯನ್ನರ ಪೋಷಣೆಯಲ್ಲಿ, ವಿಶೇಷವಾಗಿ ಸಮುದ್ರಯಾನಗಾರರಿಗೆ ಪ್ರಧಾನ ಆಹಾರವಾಗಿತ್ತು.[೩]
ಉಲ್ಲೇಖಗಳು
[ಬದಲಾಯಿಸಿ]- ↑ "Pesto Genovese: Where to Eat the Original Italian Sauce". La Cucina Italiana. Retrieved 18 June 2024.
- ↑ Campionato Mondiale Pesto al Mortaio. "Pesto's official recipe". Archived from the original on 16 May 2021. Retrieved 16 May 2021.
- ↑ ೩.೦ ೩.೧ ೩.೨ Scarpato, Rosario. "Pesto Genovese: an Ageless Benchmark of Great Italian Cuisine". Archived from the original on 15 July 2020. Retrieved 11 October 2011.
- ↑ ೪.೦ ೪.೧ "Moretum – Appendix Vergiliana". Archived from the original on 13 January 2016. Retrieved 19 January 2016.