ಪೆರ್ಣಂಕಿಲ ಮಹಾಗಣಪತಿ ದೇವಸ್ಥಾನ

ವಿಕಿಪೀಡಿಯ ಇಂದ
Jump to navigation Jump to search


ಸ್ಥಳ[ಬದಲಾಯಿಸಿ]

ಪೆರ್ಣಂಕಿಲ ಎಂಬ ಗ್ರಾಮವು ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿದೆ. ಇಲ್ಲಿ ಸುಮಾರು ೨೧೪೭ ಮಂದಿ ಜನಸಂಖ್ಯೆ ವಾಸಿಸುತ್ತದೆ. ಇದು ಉಡುಪಿಯಿಂದ ಸುಮಾರು ೨೨ ಕಿಲೋ ಮೀಟರ್ ಅಂತರದಲ್ಲಿದೆ. ಇಲ್ಲಿನ ಮಹಾಗಣಪತಿ ದೇವಸ್ಥಾನವು ಗ್ರಾಮದ ಜನರ ಹೊಲಗಳ ನಟ್ಟ ನಡುವಿನಲ್ಲಿ ಸ್ಥಾಪಿತವಾಗಿದೆ.

ಇತಿಹಾಸ[ಬದಲಾಯಿಸಿ]

ಈ ಗ್ರಾಮದಲ್ಲಿ ಮೊದಲು ಪೆರ್ಣ ಎಂಬ ರೈತ ವಾಸಿಸುತ್ತಿದ್ದ. ಈತ ಕೆಳಜಾತಿಯವನಾಗಿದ್ದು ಉಳುಮೆ ಮಾಡುವಾಗ ಅವನಿಗೆ ಮಣ್ಣಲ್ಲಿ ಹೂತಿದ್ದ ಗಣಪತಿಯ ವಿಗ್ರಹ ದೊರಕಿತು. ಆದರೆ ಅದನ್ನು ತೆಗೆಯಲಾಗುತ್ತಿರಲಿಲ್ಲ. ವಿಶೇಷ ಎಂದರೆ ವಿಗ್ರಹದ ಕೇವಲ ತಲೆಭಾಗ ಹೊರಗಿತ್ತು. ಗ್ರಾಮದ ಪುರೋಹಿತ ವರ್ಗದವರೆಲ್ಲ ಸೇರಿ ಅಕ್ಕಿ, ತುಪ್ಪ, ತೆಂಗಿನಕಾಯಿ ಹಾಗು ಬೆಲ್ಲದಿಂದ ತಯಾರಿಸಲಾದ "ಅಪ್ಪೆ" ಪ್ರಸಾದವನ್ನು ಒಂದು ಬುಟ್ಟಿ ಅಂದರೆ ಕೊಪ್ಪರಿಗೆಯಲ್ಲಿ ಹಾಕಿ ವಿಗ್ರಹವನ್ನು ಸಂಪೂರ್ಣವಾಗಿ ಮುಚ್ಚಿ ವಿಗ್ರಹ ಪೂರ್ಣವಾಗಿ ಮೇಲೆ ಬರುವಂತೆ ಹರಕೆ ಸಲ್ಲಿಸಿದರು. ಮರುದಿನ ಬುಟ್ಟಿಯನ್ನು ಎತ್ತಿ ನೋಡಿದಾಗ ಕೇವಲ ಅರ್ಧದಷ್ಟು ಅಪ್ಪೆ ಉಳಿದಿತ್ತು. ಆದರೆ ವಿಗ್ರಹ ತಲೆಯ ಭಾಗದಷ್ಟು ಮಾತ್ರವಿತ್ತು. ಇದಕ್ಕೆ ಕಾರಣ ಊರಿನ ಶೆಟ್ಟಿ ಜನಾಂಗದವರು ತನ್ನ ಅಹಂಕಾರದಿಂದ ಇದೆಲ್ಲ ಮೂಢನಂಬಿಕೆ ಎಂದು ಹೇಳಿ ವಿಗ್ರಹ ಪೂರ್ಣ ಹೊರಬರುವ ಮೊದಲೇ ಬುಟ್ಟಿಯನ್ನು ತುಳಿದದ್ದು ಎಂಬ ಹೇಳಿಕೆಯೂ ಇದೆ. ಅಂದಿನಿಂದ ಈ ಗ್ರಾಮದಲ್ಲಿ "ಶೆಟ್ಟಿ" ಜಾತಿಯವರು ಉಳಿದುಕೊಂಡಿಲ್ಲ. ಇದ್ದರೂ ಅವರಿಗೆ ಒಳಿತಾಗುವುದಿಲ್ಲ ಎಂದು ಹಿರಿಯರು ಹೇಳುತ್ತಾರೆ. ಪೆರ್ಣ ನಿಗೆ ಗಣಪನು ದೊರೆತದ್ದರಿಂದ ಈ ಗ್ರಾಮಕ್ಕೆ ಪೆರಣಂಕಿಲ ಎಂಬ ಹೆಸರು ಬಂತು. ಈ ದೇವಾಲಯದಲ್ಲಿ ಗಣಪತಿಯ ವಿಗ್ರಹವು ಪಶ್ಚಿಮಕ್ಕೆ ಮುಖ ಮಾಡಿದ್ದು ಶಿವನ ದೇವಾಲಯ ಪೂರ್ವಕ್ಕೆ ಮುಖ ಮಾಡಿದೆ. ಪ್ರತಿವರ್ಷವೂ ಜನರು ಕೊಪ್ಪರಿಗೆ ಅಪ್ಪೆ ಸೇವೆಯನ್ನು ಗಣಪನಿಗೆ ಸಲ್ಲಿಸುತ್ತಾರೆ.