ಪೂರ್ವ ಗೋದಾವರಿ ಜಿಲ್ಲೆ
ಪೂರ್ವ ಗೋದಾವರಿ ಜಿಲ್ಲೆ | |
---|---|
ಆಂಧ್ರ ಪ್ರದೇಶದ ಜಿಲ್ಲೆ | |
ಮೇಲೆ ಎಡಕ್ಕಿಂದ ಪ್ರದಕ್ಷಿಣಾಕಾರದಲ್ಲಿ: ಕೊವ್ವೂರ್ ಶಿವಾಲಯಮ್, ಬಿಕ್ಕವೊಲು ಹತ್ತಿರ ಗೋಲಿಂಗೇಶ್ವರ ದೇವಾಲಯ,
ರಾಜಮಹೇಂದ್ರಿ ಹತ್ತಿರ ಗೋದಾವರಿ ಸೇತುವೆಗಳು | |
![]() ಆಂಧ್ರ ಪ್ರದೇಶದಲ್ಲಿ ನೆಲೆ | |
Coordinates: 16°57′N 82°15′E / 16.950°N 82.250°E | |
ದೇಶ | ![]() |
ರಾಜ್ಯ | [[File:|23x15px|border |alt=|link=]]ಆಂಧ್ರ ಪ್ರದೇಶ |
ಪ್ರದೇಶ | ಕರಾವಳಿ ಆಂಧ್ರ |
ಪ್ರಧಾನ ಕಾರ್ಯಸ್ಥಳ | ರಾಜಮಹೇಂದ್ರಿ |
ಮಂಡಲಗಳು | 19[೧] |
Government | |
• ಜಿಲ್ಲಾ ಕಲೆಕ್ಟರು | ಡಾ. ಕೆ ಮಾಧವಿ ಲತಾ, ಐಎಎಸ್[೨] |
• ಲೋಕ ಸಭಾ ಕ್ಷೇತ್ರಗಳು | ರಾಜಮಹೇಂದ್ರಿ |
• ವಿಧಾನ ಸಭಾ ಕ್ಷೇತ್ರಗಳು | 7 |
Area | |
• ಒಟ್ಟು | ೨,೫೬೦.೭೦ km2 (೯೮೮.೬೯ sq mi) |
Population | |
• ಒಟ್ಟು | ೧೮,೩೨,೩೩೨ |
• Density | ೭೨೦/km2 (೧೯೦೦/sq mi) |
ಜನಸಂಖ್ಯಾ ಅಂಕಿಅಂಶಗಳು | |
• ಸಾಕ್ಷರತೆ | 71.35% |
• ಲಿಂಗ ಅನುಪಾತ | 1005 |
Vehicle registration | AP-05 (ಹಿಂದೆ)]] AP–39 (30 ಜನವರಿ 2019ರಿಂದ)[೫] |
ಪ್ರಮುಖ ಹೆದ್ದಾರಿಗಳು | NH 16, NH 216, NH 516E, NH 216A, NH-365BB, NH-516D. |
Website | eastgodavari |
ಪೂರ್ವ ಗೋದಾವರಿ ಜಿಲ್ಲೆಯು ಆಂಧ್ರ ಪ್ರದೇಶದಲ್ಲಿರುವ ಒಂದು ಜಿಲ್ಲೆ. ಇದರ ಪಕ್ಕದಲ್ಲಿ ಪಶ್ಚಿಮ ಗೋದಾವರಿ ಜಿಲ್ಲೆಯಿದೆ. ಕೆಳಗೋದಾವರಿಯ ಆಚೀಚೆ ಸಮುದ್ರದ ಅಂಚಿನವರೆಗೂ ಹಬ್ಬಿರುವ ಈ ಎರಡು ಜಿಲ್ಲೆಗಳು ಪರಸ್ಪರವಾಗಿ ಗೋದಾವರಿ ನದಿಯಿಂದ ಪ್ರತ್ಯೇಕಿಸಲ್ಪಟ್ಟು, ಗೋದಾವರಿಯ ಪೂರ್ವಕ್ಕಿರುವ ಭಾಗ ಪೂರ್ವ ಗೋದಾವರೀ ಜಿಲ್ಲೆಯೆಂದೂ, ಪಶ್ಚಿಮಕ್ಕಿರುವ ಭಾಗ ಪಶ್ಚಿಮ ಗೋದಾವರೀ ಜಿಲ್ಲೆಯೆಂದೂ ಪ್ರಣೀತವಾಗಿವೆ. ಪೂರ್ವ ಗೋದಾವರಿಯ ವಿಸ್ತೀರ್ಣ 988.69 ಚ. ಮೈ.; ಜನಸಂಖ್ಯೆ 18,32,332 (2011). ಪೂರ್ವ ಗೋದಾವರಿಯ ಆಡಳಿತ ಕೇಂದ್ರ ರಾಜಮಹೇಂದ್ರಿ. ಹಿಂದೆ ಕಾಕಿನಾಡ ಇದರ ಆಡಳಿತ ಕೇಂದ್ರವಾಗಿತ್ತು; ಕಾಕಿನಾಡ ಗೋದಾವರಿ ನದಿಯ ಕವಲುಗಳಲ್ಲೊಂದರ ದಡದ ಮೇಲಿದೆ.
ಪೂರ್ವ ಮತ್ತು ಪಶ್ಚಿಮ ಗೋದಾವರೀ ಜಿಲ್ಲೆಗಳ ಪ್ರದೇಶದ ಸ್ವಾಭಾವಿಕ ಲಕ್ಷಣ ಒಂದೇ ಸಮನಾಗಿಲ್ಲ. ವಾಯುವ್ಯ ಭಾಗ ಹೆಚ್ಚು ಫಲವತ್ತಾಗಿಲ್ಲ. ಅದು ಹಿಂದುಳಿದಿದೆ. ಗೋದಾವರಿಯ ಮುಖಜ ಭೂಮಿ ಪ್ರದೇಶ ತುಂಬ ಫಲವತ್ತಾಗಿದೆ. ದಕ್ಷಿಣ ಭಾರತದ ಬತ್ತದ ಕಣಜವೆಂದು ಇದು ಪ್ರಸಿದ್ಧವಾಗಿದೆ. ಈ ಎರಡೂ ಪ್ರದೇಶಗಳ ನಡುವಣ ಭಾಗ ಎತ್ತರವಾಗಿದೆ.
ಸಮುದ್ರದಿಂದ 64 ಕಿ.ಮೀ. ದೂರದಲ್ಲಿ ಧವಳೇಶ್ವರದ ಬಳಿ ಗೋದಾವರಿಗೆ ಅಣೆಕಟ್ಟನ್ನು ಕಟ್ಟಲಾಗಿದೆ. ಈ ಅಣೆಕಟ್ಟಿನಿಂದಾಗಿ ಗೋದಾವರೀ ಮುಖಜಭೂಮಿಯ ಪ್ರದೇಶದಲ್ಲಿ ವರ್ಷವಿಡೀ ಬತ್ತದ ಸಾಗುವಳಿ ಸಾಧ್ಯವಾಗಿದೆ. ಇಲ್ಲಿ ಬತ್ತವೇ ಮುಖ್ಯ ಬೆಳೆ. ಇತರ ಆಹಾರ ಧಾನ್ಯಗಳನ್ನೂ, ಬೇಳೆ, ಎಣ್ಣೆ ಬೀಜ, ಹೊಗೆಸೊಪ್ಪು ಮತ್ತು ಕಬ್ಬನ್ನೂ ಬೆಳೆಯುತ್ತಾರೆ.
ಹಿಂದೆ ಪೂರ್ವ ಗೋದಾವರಿ ಜಿಲ್ಲೆಯಲ್ಲಿದ್ದ, ಕಬ್ಬು ಬೆಳೆಯುವ ಪ್ರದೇಶದ ನಡುವೆ ಇರುವ ಸಮಾಲ್ಕೋಟ್ನಲ್ಲಿ ಸಕ್ಕರೆ ಉತ್ಪಾದನೆಯಾಗುತ್ತದೆ. ಪೂರ್ವ ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿ ಉತ್ತಮ ಕೈಮಗ್ಗದ ಬಟ್ಟೆಗಳು ತಯಾರಾಗುತ್ತಿದ್ದುವು. ರಾಜಮಹೇಂದ್ರಿ ಒಂದು ತೀರ್ಥಕ್ಷೇತ್ರ. ಹನ್ನೆರಡು ವರ್ಷಗಳಿಗೊಮ್ಮೆ `ಪುಷ್ಕರಂ' ದಿನದಂದು ಗೋದಾವರಿಯ ನೀರಿನಲ್ಲಿ ಮೀಯಲು ನಾನಾ ಕಡೆಗಳಿಂದ ಹಿಂದೂ ಆಸ್ತಿಕರು ಇಲ್ಲಿಗೆ ಬರುತ್ತಾರೆ.
ಇತಿಹಾಸ
[ಬದಲಾಯಿಸಿ]ಗೋದಾವರಿ ಜಿಲ್ಲೆ ಪ್ರದೇಶಗಳು ಒರಿಸ್ಸಾ ಮತ್ತು ವೆಂಗಿ ರಾಜರ ಆಳ್ವಿಕೆಗೆ ಒಳಪಟ್ಟಿದ್ದವು. ಸ್ಥಳೀಯ ಪಾಳೆಯಗಾರರು ಸ್ವತಂತ್ರರಾಗಲು ಆಗಿಂದಾಗ್ಗೆ ಪ್ರಯತ್ನಿಸುತ್ತಿದ್ದರು. 16ನೆಯ ಶತಮಾನದ ಆರಂಭದಲ್ಲಿ ಇಡೀ ಜಿಲ್ಲೆ ಮುಸ್ಲಿಂ ಆಕ್ರಮಣಕಾರರ ವಶವಾಯಿತು. ಕರ್ಣಾಟಕ ಪ್ರದೇಶದಲ್ಲಿ ಫ್ರೆಂಚ್ ಮತ್ತು ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಗಳ ಬಡಿದಾಟಗಳ ಅಂತ್ಯದಲ್ಲಿ ಇದು ಬ್ರಿಟಿಷರಿಗೆ ಸೇರಿತು (1765). ಸು. 6 ಚ.ಮೈ. ವಿಸ್ತೀರ್ಣದ ಯಾನಾನ್ ಮಾತ್ರ ಫ್ರೆಂಚರ ವಶದಲ್ಲಿ ಉಳಿದಿತ್ತು. ಭಾರತ ಸ್ವತಂತ್ರವಾದ ಮೇಲೆ, 1954ರಲ್ಲಿ ಅದು ಭಾರತಕ್ಕೆ ವರ್ಗವಾಯಿತು.[೬] ಹಳೆಯ ಗೋದಾವರಿ ಮತ್ತು ಕೃಷ್ಣಾ ಜಿಲ್ಲೆಗಳಿಂದ ಪೂರ್ವ ಮತ್ತು ಪಶ್ಚಿಮ ಗೋದಾವರೀ ಜಿಲ್ಲೆಗಳ ರಚನೆಯಾದ್ದು 1925ರಲ್ಲಿ.[೭][೮]
ಉಲ್ಲೇಖಗಳು
[ಬದಲಾಯಿಸಿ]- ↑ "District – East Godavari". Andhra Pradesh Online Portal. Archived from the original on 18 June 2015. Retrieved 23 August 2014.
- ↑ "Collectors, SPs appointed for new districts in Andhra Pradesh". The Hindu (in ಇಂಗ್ಲಿಷ್). 30 April 2022. Retrieved 30 April 2022.
- ↑ "District Census Hand Book – West Godavari" (PDF). Census of India. Registrar General and Census Commissioner of India.
- ↑ "District Census Hand Book – East Godavari" (PDF). Census of India. Registrar General and Census Commissioner of India.
- ↑ "New 'AP 39&40' code to register vehicles in Andhra Pradesh launched". The New Indian Express. Vijayawada. 31 January 2019. Archived from the original on 3 February 2019. Retrieved 9 June 2019.
- ↑ More, J. B. Prashant (2007). The Telugus of Yanam and Masulipatnam: from French rule to integration with India (in ಇಂಗ್ಲಿಷ್). M.S. pp. 30, 201, 268.
- ↑ "Rank of Districts in Andhra Pradesh according to Composite Index" (PDF). Archived from the original (PDF) on 24 July 2015. Retrieved 20 June 2015.
- ↑ "District Census Handbook – Guntur" (PDF). Census of India. The Registrar General & Census Commissioner. Archived (PDF) from the original on 22 April 2016. Retrieved 13 May 2016.

- Pages using gadget WikiMiniAtlas
- Pages with non-numeric formatnum arguments
- CS1 ಇಂಗ್ಲಿಷ್-language sources (en)
- Articles with short description
- Short description is different from Wikidata
- Pages using infobox settlement with bad settlement type
- Coordinates on Wikidata
- ಆಂಧ್ರ ಪ್ರದೇಶದ ಜಿಲ್ಲೆಗಳು
- ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ