ಪೂರ್ಣಿಮಾ ಶೆಟ್ಟಿ
ಪೂರ್ಣಿಮಾ ಶೆಟ್ಟಿ ಅಥವಾ ಪೂರ್ಣಿಮಾ ಯತೀಶ್ ರೈ ಅವರು ಪ್ರಸಿದ್ಧ ಯಕ್ಷಗಾನ ಕಲಾವಿದೆ.[೧][೨]
ಹುಟ್ಟು
[ಬದಲಾಯಿಸಿ]ಪೂರ್ಣಿಮಾ ಸುರತ್ಕಲ್ ಬಳಿಯ ಬಾಳ ಗ್ರಾಮದಲ್ಲಿ ಶ್ರೀಮತಿ ಶಾರದಾ ಶೆಟ್ಟಿ ಮತ್ತು ಸೇಸಪ್ಪ ಶೆಟ್ಟಿ ದಂಪತಿಗಳಿಗೆ ಮಗಳಾಗಿ ಜನಿಸಿದರು.[೧][೨]
ಬಾಲ್ಯ
[ಬದಲಾಯಿಸಿ]ಬಾಲ್ಯದಲ್ಲಿ ಬಾಲನಟಿಯಾಗಿ ನಾಟಕಗಳಲ್ಲಿ ಪಾತ್ರಗಳನ್ನು ನಿರ್ವಹಿಸಲು ಪ್ರಾರಂಭಿಸಿದರು. ಶಾಲಾ ದಿನಗಳಲ್ಲಿ, ಅವರು ಯಕ್ಷಗಾನ ಕಲೆಯತ್ತ ಆಕರ್ಷಿತರಾಗಿದ್ದರು.
ಯಕ್ಷಗಾನ ನಾಟ್ಯಾಭ್ಯಾಸ
[ಬದಲಾಯಿಸಿ]ಬಾಳದ ಶ್ರೀ ರಾಮಚಂದ್ರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಟ್ಯಗುರು ಶ್ರೀ ಶಿವರಾಮ ಪಣಂಬೂರು ಅವರಿಂದ ಆರಂಭಿಕ ಯಕ್ಷಗಾನ ಶಿಕ್ಷಣವನ್ನು ಪಡೆದರು. ಅವರು ಉತ್ಸಾಹದಿಂದ ನೃತ್ಯಾಭ್ಯಾಸ ಮಾಡಿದರು ಮತ್ತು ಪ್ರಪಂಚದಾದ್ಯಂತ ನಡೆದ ಯಕ್ಷಗಾನ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಗೆದ್ದರು. ಹಿಮ್ಮೇಳಕ್ಕೆ ಶ್ರೀ ಹರಿನಾರಾಯಣ ಬೈಪಡಿತ್ತಾಯ, ಮಾಂಬಾಡಿ ಸುಬ್ರಹ್ಮಣ್ಯ ಭಟ್ ಮತ್ತು ಶ್ರೀಮತಿ ಲೀಲಾವತಿ ಬೈಪಡಿತ್ತಾಯ ಪೂರ್ಣಿಮಾರ ಯಕ್ಷ ಗುರುಗಳು[೧][೨]
ಸಂಘಟಕಿಯಾಗಿ
[ಬದಲಾಯಿಸಿ]ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘ, ಬಾಳ, ಕಾಟಿಪಳ್ಳ ತಂಡವು ಇವರ ಮಾತೃ ಸಂಘ. ಇವರ ಈ ಸಂಘದವರದ್ದೇ ೪೦೦ ಕ್ಕಿಂತಲೂ ಹೆಚ್ಚು ಆಡಿದ ಪ್ರಸಂಗವೆಂದರೆ ಆದು ಶ್ರಿದೇವಿ ಮಾಹಾತ್ಮೆ. ಆ ಪ್ರಸಂಗದಲ್ಲಿ ಮಹಿಷಾಸುರನಾಗಿ ವಿಜೃಂಭಿಸಿದ್ದು ಶ್ರೀಮತಿ ಪೂರ್ಣಿಮಾ ಶೆಟ್ಟಿ.[೩]
ಕಾಟಿಪಳ್ಳ ಅಲ್ಲದೆ, ಇವರು ಅನೇಕ ಸಂಘ ಸಂಸ್ಥೆಗಳಿಗೆ ಅತಿಥಿ ಕಲಾವಿದೆ, ನಿರ್ದೇಶಕಿ ಮತ್ತು ಸಂಘಟಕಿಯಾಗಿ ಅನೇಕರೊಂದಿಗೆ ಯಕ್ಷಗಾನದ ಅಭಿರುಚಿಯನ್ನು ಹಂಚಿಕೊಂಡಿದ್ದಾರೆ. ಅವರ ಮಾತೃ ಸಂಘ ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘ ಬಾಳ-ಕಾಟಿಪಳ್ಳ ಮಾತ್ರವಲ್ಲದೆ, ಅವರು ಅನೇಕ ಸಂಘಗಳಿಗೆ ಅತಿಥಿ ಕಲಾವಿದೆಯಾಗಿ, ನಿರ್ದೇಶಕಿಯಾಗಿ ಮತ್ತು ಸಂಘಟಕಿಯಾಗಿ ಅನೇಕರೊಂದಿಗೆ ಯಕ್ಷಗಾನದ ಅಭಿರುಚಿಯನ್ನು ಹಂಚಿಕೊಂಡಿದ್ದಾರೆ.[೨]
ಮಹಿಷಾಸುರ ಖ್ಯಾತಿ
[ಬದಲಾಯಿಸಿ]ಸಾಮಾನ್ಯವಾಗಿ ಮಹಿಳೆಯರ ಶ್ರೀದೇವಿ ಮಹಾತ್ಮೆ ಯಕ್ಷಗಾನದಲ್ಲಿಯೂ ಕೂಡಾ ಮಹಿಷಾಸುರನ ವೇಷ ಹಾಕುತಿದ್ದದ್ದು ಗಂಡಸರೇ. ಅಂತಹದರಲ್ಲಿ ಸರಿ ಸಾಟಿ ಎಂಬಂತೆ ಮಹಿಷಾಸುರ ವೇಷ ಮಾಡಿ ಹೆಣ್ಣು ಮಕ್ಕಳೂ ಮಹಿಷಾಸುರ ವೇಷವನ್ನು ಹಾಕಬಲ್ಲರು ಹಾಕಿ ವೇಷವನ್ನು ಗೆಲ್ಲಿಸಿಕೊಡಬಲ್ಲರು ಎಂಬುದನ್ನು ತೋರಿಸಿಕೊಟ್ಟ ಕೀರ್ತಿ ಶ್ರೀಮತಿ ಪೂರ್ಣಿಮಾ ಶೆಟ್ಟರದ್ದು. ಇವರ ಮಹಿಷಾಸುರ ವೇಷವನ್ನು ನೋಡಿ ಕಟೀಲು ಮೇಳದ ಮಹಿಷಾಸುರ ಖ್ಯಾತಿಯ ದಿ. ಗಂಗಯ್ಯ ಶೆಟ್ಟಿಯವರು ಮೆಚ್ಚಿ ನುಡಿದ ಮಾತುಗಳನ್ನು ಈಗಲೂ ಮತಿ ಪೂರ್ಣಿಮಾರವರು ಸ್ಮರಿಸುತ್ತಾರೆ.[೪]
ಸಾಧನೆಗೆ ಪುರಸ್ಕಾರ
[ಬದಲಾಯಿಸಿ]ಪೂರ್ಣಿಮಾ ಶೆಟ್ಟಿ / ಪೂರ್ಣಿಮಾ ಯತೀಶ್ ರೈ, ಯಕ್ಷ ಪೂರ್ಣಿಮಾ ಎಂದು ಪ್ರಸಿದ್ಧರಾದವರು. ಅವರ ಭವಿಷ್ಯದ ಸಾಧನೆಗಳಿಗಾಗಿ,
ಸಂಸಾರ ಜೀವನ
[ಬದಲಾಯಿಸಿ]ಉದ್ಯಮಿ ಯತೀಶ್ ರೈ ಅವರನ್ನು ಮದುವೆಯಾಗಿ ಒಂದು ಗಂಡು (ಸತ್ವಿಕ್) ಮತ್ತು ಒಂದು ಹೆಣ್ಣು (ಸಾಕ್ಷ) ಮಗುವಿನೊಂದಿಗೆ ಜೀವನ ನಡೆಸುತ್ತಿದ್ದಾರೆ.
ಉಲ್ಲೇಖಗಳು
[ಬದಲಾಯಿಸಿ]- 1 2 3 "ಯಕ್ಷ ರಂಗದ ಮಹಾನ್ ಸಾಧಕಿ "ಯಕ್ಷ ಪೂರ್ಣಿಮಾ…!'". Archived from the original on 2024-03-01. Retrieved 2025-02-20.
- 1 2 3 4 "ಬಹುಮುಖ ಪ್ರತಿಭೆ ಯಕ್ಷಗಾನ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ ಯತೀಶ್ ರೈ".
- 1 2 "ಯಕ್ಷ ರಂಗದ ಮಹಾನ್ ಸಾಧಕಿ "ಯಕ್ಷ ಪೂರ್ಣಿಮಾ…!'". Archived from the original on 2024-03-01. Retrieved 2025-02-21.
- ↑ "ಬಹುಮುಖ ಪ್ರತಿಭೆ ಯಕ್ಷಗಾನ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ ಯತೀಶ್ ರೈ". Upayuktha News (in ಇಂಗ್ಲಿಷ್).
- 1 2 "Kittur Rani Chennamma awards announced".
- ↑ "ಪ್ರಶಸ್ತಿ ಸಿಗದಿದ್ದರೂ ಕಲಾವಿದ ಸಣ್ಣವನಾಗಲ್ಲ: ರಾಮಚಂದ್ರ ಹೆಗಡೆ".
- ↑ "2024 Patla Sambrama". Archived from the original on 2025-12-11. Retrieved 2025-02-21.