ಪೂರ್ಣಾಲು
ಗೋಚರ
ಪೂರ್ಣಾಲು ತೆಲುಗು ಹಬ್ಬಗಳಲ್ಲಿ ತಯಾರಿಸಲಾಗುವ ಸಾಂಪ್ರದಾಯಿಕ ಭಾರತೀಯ ಸಿಹಿ ತಿನಿಸಾಗಿದೆ.[೧] ಅಕ್ಕಿ ಹಿಟ್ಟಿನ ಉಂಡೆಯಲ್ಲಿ ಬೆಲ್ಲ ಸೇರಿದ ಬೇಳೆ ಮತ್ತು ಒಣಫಲಗಳ ಹೂರಣ ತುಂಬಿ ಇದನ್ನು ತಯಾರಿಸಲಾಗುತ್ತದೆ. ಇದನ್ನು ಹಲವುವೇಳೆ ಬಿಸಿಯಾಗಿ ತುಪ್ಪದೊಂದಿಗೆ ಬಡಿಸಲಾಗುತ್ತದೆ.[೨] ಪೂರ್ಣಾಲು ಎಲ್ಲ ದಕ್ಷಿಣ ಭಾರತೀಯ ಪಾಕಶೈಲಿಗಳಿಗೆ ಸಾಮಾನ್ಯವಾದ ಸಾಂಪ್ರದಾಯಿಕ ವಿಧಾನಗಳನ್ನು ಅನುಸರಿಸುತ್ತದೆ. ಸಾಂಪ್ರದಾಯಿಕವಾಗಿ ಪೂರ್ಣಾಲುವನ್ನು ಅಕ್ಕಿ ಉದ್ದಿನ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಒಳಗೆ ತುಂಬಲಾದ ಹೂರಣವನ್ನು ಅಸ್ಪೂರ್ಣಮ್ ಎಂದು ಕರೆಯಲಾಗುತ್ತದೆ. ನಂತರ ಇದನ್ನು ಬಂಗಾರ ಕಂದು ಬಣ್ಣ ಬರುವವರೆಗೆ ಎಣ್ಣೆಯಲ್ಲಿ ಕರಿಯಲಾಗುತ್ತದೆ.
ದಕ್ಷಿಣ ಭಾರತದ ವಿವಿಧ ಭಾಗಗಳಲ್ಲಿ ಪೂರ್ಣಾಲುವನ್ನು ಸುಯ್ಯಂ, ಸೀಯಮ್, ಸುಖಿಯಾನ್, ಸುಗೀಲು ಅಥವಾ ಸುಗುಂಟಾ ಎಂದೂ ಕರೆಯಲಾಗುತ್ತದೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಇದನ್ನು ಹಲವುವೇಳೆ ಪೂರ್ಣಂ ಬೂರೇಲು ಎಂದು ಕರೆಯಲಾಗುತ್ತದೆ.