ಪುಂಗಿ
ಪುಂಗಿಯು ಭಾರತೀಯ ಉಪಖಂಡದಲ್ಲಿ ಹಾವಾಡಿಗರು ನುಡಿಸುವ ಒಂದು ಗಾಳಿವಾದ್ಯ. ಈ ವಾದ್ಯವು ಬಾಯಿಯಿಂದ ಊದಲಾದ ಗಾಳಿಗೆ ಬುರುಡೆಯಿಂದ ತಯಾರಿಸಲಾದ ಕೋಶವನ್ನು ಹೊಂದಿರುತ್ತದೆ. ಇದು ಗಾಳಿಯನ್ನು ಎರಡು ಪೀಪಿಗಳೊಳಗೆ ಸಾಗಿಸುತ್ತದೆ. ಪುಂಗಿಯನ್ನು ಯಾವುದೇ ವಿರಾಮವಿಲ್ಲದೇ ನುಡಿಸಲಾಗುತ್ತದೆ, ಮತ್ತು ನುಡಿಸುವವನು ವರ್ತುಲಗತಿಯ ಉಸಿರಾಟವನ್ನು ಬಳಸುತ್ತಾನೆ. ಪುಂಗಿಯು ಭಾರತದಲ್ಲಿ ಹುಟ್ಟಿಕೊಂಡಿತು ಮತ್ತು ಹಾವಾಡಿಗರು ಬೀದಿ ಪ್ರದರ್ಶನಗಳಲ್ಲಿ ಈಗಲೂ ಇದನ್ನು ನುಡಿಸುತ್ತಾರೆ.
ಪುಂಗಿಯನ್ನು ಸಾಮಾನ್ಯವಾಗಿ ಒಣಗಿದ ಸೋರೆಕಾಯಿಯಿಂದ ತಯಾರಿಸಲಾಗುತ್ತದೆ. ಹಲವುವೇಳೆ, ಸೋರೆಕಾಯಿಯ ಕಂಠವನ್ನು ಸೌಂದರ್ಯಾತ್ಮಕ ಕಾರಣಗಳಿಗಾಗಿ ಕೆತ್ತಲಾಗುತ್ತದೆ. ಮತ್ತೊಂದು ತುದಿಯಲ್ಲಿ, ಎರಡು (ಕೆಲವೊಮ್ಮೆ ಒಂದು ಅಥವಾ ಮೂರು) ಜೊಂಡು ಅಥವಾ ಬಿದಿರನ ನಳಿಕೆಗಳನ್ನು ಜೋಡಿಸಲಾಗುತ್ತದೆ. ಒಂದು ನಳಿಕೆಯು ೫-೯ ರಂಧ್ರಗಳನ್ನು ಹೊಂದಿದ್ದು ಸುಸ್ವರವನ್ನು ನುಡಿಸುತ್ತದೆ; ಮತ್ತೊಂದು ನಳಿಕೆಯು ಝೇಂಕಾರಕ್ಕಾಗಿರುತ್ತದೆ. ಪುಂಗಿಯು ಸಾಮಾನ್ಯವಾಗಿ ಒಂದು ಅಥವಾ ಎರಡು ಅಡಿ ಉದ್ದವಿರುತ್ತದೆ.[೧]
ಉಲ್ಲೇಖಗಳು
[ಬದಲಾಯಿಸಿ]- ↑ Courtney, David. "PUNGI OR BIN". https://chandrakantha.com. David Courtney. Archived from the original on 1 ಡಿಸೆಂಬರ್ 2017. Retrieved 21 November 2017.
{{cite web}}
: External link in
(help)|website=