ವಿಷಯಕ್ಕೆ ಹೋಗು

ಪಿ ಎನ್ ಪಣಿಕ್ಕರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಣಿಕ್ಕರ್_ಸ್ಮಾರಕ ಶಾಲೆ_ಅಂಬಲಪ್ಪುಳ
ಪಿ ಎನ್ ಪಣಿಕ್ಕರ್ ಕೆಲಸ ಮಾಡಿದ ಶಾಲೆ_ನೀಲಪೆರೂರ್
ಪಿ.ಎನ್. ಪಣಿಕ್ಕರ್ 2004 ರ ಭಾರತದ ಅಂಚೆಚೀಟಿ

ಪಿ ಎನ್ ಪಣಿಕ್ಕರ್ (1 ಮಾರ್ಚ್ 1909 - ಜೂನ್ 1995) ಇವರ ಪೂರ್ಣ ಹೆಸರು ಪುತ್ತುವೈಲ್ ನಾರಾಯಣ ಪಣಿಕ್ಕರ್. ಅವರನ್ನು ಕೇರಳದ ಗ್ರಂಥಾಲಯ ಚಳವಳಿಯ ಪಿತಾಮಹ ಎಂದು ಪರಿಗಣಿಸಲಾಗಿದೆ. ಅವರು ಸಾಕ್ಷರತಾ ಚಳವಳಿಯ ಪಿತಾಮಹರೂ ಆಗಿದ್ದರು. ಅವರ ಪುಣ್ಯತಿಥಿ ಜೂನ್ 19ನೇ ತಾರೀಕನ್ನು ಕೇರಳ ಸರಕಾರವು ಓದುವ ದಿನವೆಂದು (ವಾಯನ ದಿನಂ)ಎಂದು ಘೋಷಿಸಿತು. 2017 ರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಕೂಡಾ ಜೂನ್ ೧೯ನೇ ತಾರೀಕನ್ನು ಭಾರತದಾದ್ಯಂತ ರಾಷ್ಟ್ರೀಯ ಓದುವ ದಿನವೆಂದು ಘೋಷಿಸಿದರು

ಪಿ ಎನ್ ಪಣಿಕ್ಕರ್ ಅವರು 1 ಮಾರ್ಚ್ 1909 ರಂದು ಅಲಪ್ಪುಲಾ ಜಿಲ್ಲೆಯ ನೀಲಂಪೆರೂರ್‌ನಲ್ಲಿ ಗೋವಿಂದ ಪಿಳ್ಳೈ ಮತ್ತು ಜಾನಕಮ್ಮ ದಂಪತಿಗೆ ಜನಿಸಿದರು[]. ಅದಾದ ನಂತರ, ಅವರು ವಿದ್ಯಾಭ್ಯಾಸದ ನಂತರ ೧೯೨೬ ರಲ್ಲಿ ತಮ್ಮ ಗ್ರಾಮದಲ್ಲಿ ಶಿಕ್ಷಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು ಸನಾತನ ಧರ್ಮ ಎಂಬ ಗ್ರಂಥಾಲಯವನ್ನು ಪ್ರಾರಂಭಿಸಿದರು.

ಕೊಡುಗೆ

[ಬದಲಾಯಿಸಿ]

ಪಣಿಕ್ಕರ್ 1945ರಲ್ಲಿ 47 ಗ್ರಾಮೀಣ ಗ್ರಂಥಾಲಯದೊಂದಿಗೆ ತಿರುವಿತಂಕೂರ್ ಗ್ರಂಥಶಾಲಾ ಸಂಘವನ್ನು ( ತಿರುವಾಂಕೂರು ಗ್ರಂಥಾಲಯ ಸಂಘ)ಸ್ಥಾಪಿಸುವಲ್ಲಿ ನೇತೃತ್ವ ವಹಿಸಿದರು. ಸಂಘದ ಘೋಷಣೆ "ಓದಿ ಮತ್ತು ಬೆಳೆಯಿರಿ". ಮತ್ತೆ 1956 ರಲ್ಲಿ ಕೇರಳ ರಾಜ್ಯ ರಚನೆ ಆದನಂತರ ಅದು ಕೇರಳ ರಾಜ್ಯ ಗ್ರಂಥಶಾಲಾ ಸಂಘ (ಕೆಜಿಎಸ್). ಆಯಿತು. ಕೇರಳದ ಹಳ್ಳಿ ಹಳ್ಳಿಗಳಿಗೆ ಹೋಗಿ ಓದುವ ಸಂದೇಶವನ್ನು ಪ್ರಚಾರ ಮಾಡಿ ಮತ್ತು ಜನರು ಸಕ್ರಿಯವಾಗಿ ಭಾಗವಹಿಸುತಂತೆ ವಿನಂತಿಸಿದರು . ಈ ಜಾಲದಲ್ಲಿ ಸುಮಾರು 6000 ಗ್ರಂಥಾಲಯ ಸೇರಿತು. 1975 ರಲ್ಲಿ ಗ್ರಂಥಶಾಲಾ ಸಂಘ ಯುನೆಸ್ಕೋದ ಪ್ರತಿಷ್ಠಿತ 'ಕೃಪಸಕಾಯ ಪ್ರಶಸ್ತಿಯನ್ನು ಗೆದ್ದುಕೊಂಡಿತು . 1977 ರಲ್ಲಿ ಕೇರಳ ರಾಜ್ಯ ಸರ್ಕಾರ ಸಂಘವನ್ನು ಸ್ವಾಧೀನ ಮಾಡುವ ತನಕ ಅವರು 32 ವರ್ಷ ಕಾಲ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದರು.ಈಗ ಇದನ್ನು ಕೇರಳ ರಾಜ್ಯ ಗ್ರಂಥಾಲಯ ಮಂಡಳಿ ನಡೆಸುತ್ತದೆ, ಪಣಿಕ್ಕರ್ ಸಮಾಜಕ್ಕಾಗಿ ಇನ್ನೂ ಹೆಚ್ಚಿನ ಕೆಲಸ ಮಾಡುಬೇಕೆಂದು 1977 ರಲ್ಲಿ ಅವರು ಕೇರಳ ಅನೌಪಚಾರಿಕ ಶಿಕ್ಷಣ ಮತ್ತು ಅಭಿವೃದ್ಧಿ ಸಂಘವನ್ನು(KANFED)ಸ್ಥಾಪಿಸಿದರು. ಕೇರಳ ರಾಜ್ಯ ಸಾಕ್ಷರತಾ ಮಿಷನ್ ಸುರು ಮಾಡುವಲ್ಲಿ KANFED ಮುಖ್ಯ ಪಾತ್ರವಹಿಸಿದರು ಇದು ಕೇರಳವನ್ನು ಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಮುಂದುವರಿಯುವಂತೆ ಮಾಡಿತು,ಮತ್ತು ಕೇರಳ ಸಂಪೂರ್ಣ ಸಾಕ್ಷರತೆ ಪಡೆದ ಮೊದಲ ರಾಜ್ಯವಾಯಿತು. ಕೃಷಿ ಪುಸ್ತಕಗಳ ಕಾರ್ನರ್, ಫ್ರೆಂಡ್‌ಶಿಪ್ ವಿಲೇಜ್ ಆಂದೋಲನ (ಸೌಹೃದಗ್ರಾಮ), ಕುಟುಂಬಗಳಿಗೆ ಓದುವ ಕಾರ್ಯಕ್ರಮಗಳು, ಪುಸ್ತಕಗಳಿಗೆ ದೇಣಿಗೆ ಮತ್ತು ಗ್ರಂಥಾಲಯ ನಿರ್ಮಾಣ ಮತ್ತು ಪಿಎನ್ ಪಣಿಕರ್ ಫೌಂಡೇಶನ್‌‌ನ ಉತ್ತಮ ಓದುಗರ ಬಹುಮಾನಕ್ಕೆ ಉತ್ತೇಜನ ಕೊಡುವುದಕ್ಕೆ ಅವರು ಜಾಸ್ತಿ ಆಸಕ್ತಿ ತೋರಿಸಿದರು.

ಅವರು ಜೂನ್ 19, 1995 ರಂದು ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾದರು.[]

ಓದುವ ದಿನ

[ಬದಲಾಯಿಸಿ]

ಕೇರಳ ಸರ್ಕಾರ ಪಿ.ಎನ್. ಪಣಿಕ್ಕರ್ ಅವರ ಕೊಡುಗೆಯನ್ನು ಗೌರವಿಸಲು ಜೂನ್ 19 ನ್ನು ವಾರ್ಷಿಕವಾಗಿ ವಯನಾ ದಿನಂ (ಓದುವ ದಿನ) ಎಂದು ಆಚರಿಸಲು ಆದೇಶಿಸಿದೆ. ಇದರೊಂದಿಗೆ, ಪಣಿಕ್ಕರ್ ಅವರ ಸಾಕ್ಷರತೆ, ಶಿಕ್ಷಣ ಮತ್ತು ಗ್ರಂಥಾಲಯ ಚಳುವಳಿಗೆ ನೀಡಿದ ಕೊಡುಗೆಯನ್ನು ಗೌರವಿಸಲು ಶಾಲೆಗಳು ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ಸಾಪ್ತಾಹಿಕ ಚಟುವಟಿಕೆಗಳೊಂದಿಗೆ ಓದುವ ವಾರವನ್ನು ಆಚರಿಸಲು ಪ್ರಾರಂಭಿಸಲಾಯಿತು.

ಪ್ರತಿಫಲ

[ಬದಲಾಯಿಸಿ]

ಜೂನ್ 21, 2004 ರಂದು ಅಂಚೆ ಇಲಾಖೆಯು ಪಣಿಕ್ಕರ್ ಅವರ ಅಂಚೆ ಚೀಟಿಯನ್ನು ಬಿಡುಗಡೆ ಮಾಡುವ ಮೂಲಕ ಅವರನ್ನು ಗೌರವಿಸಿತು. ೨೦೧೦ ರಲ್ಲಿ, ಪಣಿಕ್ಕರ್ ಫೌಂಡೇಶನ್ ಆಶ್ರಯದಲ್ಲಿ ಪಿ.ಎನ್. ಅವರ ಜನ್ಮ ಶತಮಾನೋತ್ಸವವನ್ನು ಆಚರಿಸಲಾಯಿತು.

ಉಲ್ಲೇಖ

[ಬದಲಾಯಿಸಿ]
  1. "പി.എൻ. പണിക്കർ: ഒറ്റയ്ക്കൊരു സംഘം". ManoramaOnline. Retrieved 2019-04-24.
  2. "പി.എന്‍. പണിക്കര്‍; വായനയുടെ അണയാത്ത വഴിവിളക്ക് | PN Panicker Readers Day 2020". www.mathrubhumi.com (in Malayalam). 19 June 2020. Archived from the original on 19 June 2020. Retrieved 2 March 2021.{{cite web}}: CS1 maint: unrecognized language (link)

ಬಾಹ್ಯ ಕೊಂಡಿಗಳು

[ಬದಲಾಯಿಸಿ]