ಪಾಲ್ ಕಾರರ್
| Professor Paul Karrer | |
|---|---|
ಪಾಲ್ ಕಾರರ್ | |
| ಜನನ | ೨೧ ಏಪ್ರಿಲ್ ೧೮೮೯ Moscow, Russia |
| ಮರಣ | 18 June 1971 (aged 82) Zürich, Switzerland |
| ಕಾರ್ಯಕ್ಷೇತ್ರ | Chemistry |
| ಸಂಸ್ಥೆಗಳು | University of Zurich |
| ವಿದ್ಯಾಭ್ಯಾಸ | Old Cantonal School Aarau (Matura) University of Zurich (PhD) |
| ಪ್ರಸಿದ್ಧಿಗೆ ಕಾರಣ | Vitamins |
| ಗಮನಾರ್ಹ ಪ್ರಶಸ್ತಿಗಳು | Marcel Benoist Prize (1922) Nobel Prize for Chemistry (1937) |
ಪಾಲ್ ಕಾರರ್ 1889-1971 ರಷ್ಯದಲ್ಲಿ ಜನಿಸಿದ (ಏಪ್ರಿಲ್ 21, 1889) ಸ್ವಿಸ್ ಜೀವರಸಾಯನ ವಿಜ್ಞಾನಿ. ನೊಬೆಲ್ ಪ್ರಶಸ್ತಿ ವಿಜೇತ (1937). ಪ್ರಖ್ಯಾತ ರಸಾಯನ ವಿಜ್ಞಾನಿ ಆಲ್ಫ್ರೆಡ್ ವೆರ್ನರನ ಶಿಷ್ಯವಾಗಿ ಜ್ಯೂರಿಚ್ ವಿಶ್ವವಿದ್ಯಾಲಯದಲ್ಲಿ ಡಾಕ್ಟೊರೇಟ್ ಪದವಿಯನ್ನು ಪಡೆದ (1911). ಮುಂದೆ ಪಾಲ್ ಏರ್ಲಿಕ್ ಎಂಬ ವಿಜ್ಞಾನಿಯೊಡನೆ ಕೆಲಸಮಾಡಿ 1919ರಲ್ಲಿ ಜ್ಯೂರಿಚಿಗೆ ಮರಳಿದ ಅಲ್ಲಿ ವೆರ್ನರನ ಮರಣದಿಂದ ತೆರವಾಗಿದ್ದ ಸ್ಥಾನದಲ್ಲಿ ನೇಮಕಗೊಂಡ.
ಸಂಶೋಧನೆಗಳು
[ಬದಲಾಯಿಸಿ]ಈತನ ಪ್ರಧಾನ ಸಂಶೋಧನಕಾರ್ಯ ಸಸ್ಯಗಳಲ್ಲಿನ ವರ್ಣದ್ರವ್ಯಗಳನ್ನು ಕುರಿತದ್ದು. ಅದರಲ್ಲಿಯೂ ಹಳದಿವರ್ಣದ ಕ್ಯಾರೋಟಿನಾಯ್ಡುಗಳನ್ನು ಕುರಿತದ್ದು. ಇವು ರಕ್ತ ವರ್ಣದ ಕ್ಯಾರೆಟ್ ಎಂಬ ಗೆಡ್ಡೆಗಳಲ್ಲಿ ವರ್ಣದ್ರವ್ಯಗಳಿಗೆ ಸಂಬಂಧಪಟ್ಟಿವೆ. ಈ ವರ್ಣ ದ್ರವ್ಯಗಳ ರಚನೆಯ ರಾಸಾಯನಿಕ ಸೂತ್ರಗಳನ್ನು ಕಾರರ್ ವಿಶದಪಡಿಸಿದುದಲ್ಲದೆ ಇವುಗಳಲ್ಲಿ ಕೆಲವು ವರ್ಣದ್ರವ್ಯಗಳು ಪ್ರಾಣಿಗಳ ಅಂಗಗಳಲ್ಲಿ ಎ ಜೀವಸತ್ತ್ವವಾಗಿ ಮಾರ್ಪಾಡು ಹೊಂದುತ್ತವೆ ಎಂದು ಸಹ ತೋರಿಸಿಕೊಟ್ಟ. ಈ ಸಂಶೋಧನೆಯಿಂದಾಗಿ ಎ ಜೀವಸತ್ತ್ವದ ಉಪಗಾಮಿಯಾದ ಬೀಟ ಕ್ಯಾರೋಟಿನ್ ಎಂಬ ರಾಸಾಯನಿಕ ವಸ್ತುವಿನ ರಾಸಾಯನಿಕ ಸೂತ್ರ ಸ್ಥಿರಪಟ್ಟಿತು. ಹೀಗೆ ಮೊಟ್ಟಮೊದಲಿಗೆ ಒಂದು ಜೀವ ಸತ್ತ್ವದ ಸೂತ್ರವನ್ನು ಆವಿಷ್ಕರಿಸಿದ ಕೀರ್ತಿ ಕಾರರನದು.ಮುಂದೆ ಈತ ಸಂಶೋಧನೆಯನ್ನು ಜೀವಸ್ತ್ವ ಬಿ2, ಈ , ಕೆ, ಸಿ ಕ್ಷೇತ್ರಗಳಿಗೆ ವಿಸ್ತರಿಸಿ ಅವುಗಳ ರಾಸಾಯನಿಕ ಸೂತ್ರಗಳನ್ನು ಸಹ ಕಂಡುಹಿಡಿದ.
ಸಂಶೋಧನಾ ಬರಹಗಳು
[ಬದಲಾಯಿಸಿ]ಮೇಲ್ಕಂಡ ವಿಷಯಗಳ ಬಗ್ಗೆ ಸಾವಿರಕ್ಕೂ ಮಿಗಿಲಾಗಿ ಸಂಶೋಧನ ಪತ್ರಗಳನ್ನು ಕಾರರ್ ಪ್ರಕಟಿಸಿದ್ದಾನೆ. ಈತನ ಪ್ರಖ್ಯಾತ ಗ್ರಂಥವಾದ ಲೆಹರ್‍ಬುಕ್‍ಡೆರ್ ಆರ್ಗಾನಿಷೆ ಕೆಮಿಷೆನ್ (1930) ಎಂಬುದು ವಿಶ್ವದ ಪ್ರಮುಖ ಭಾಷೆಗಳಿಗೆ ತುರ್ಜುಮೆಗೊಂಡಿದೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |