ಪಾಮೀರ್ ಮನೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಾಮಿರ್ ಮನೆಗಳು

ಇವರ ಮನೆ ನಿರ್ಮಾಣದಲ್ಲಿ ವಿಶಿಷ್ಟ ನಿರ್ಮಾಣ ಶಯಿಲಿಯ ಕಾಣಬಹುದು. ಇವು ಭೂಕಂಪವನ್ನು ತಡೆಯಬಲ್ಲ ಶಯಿಲಿಯಲ್ಲಿ ನಿರ್ಮಾಣವಾಗಿರುತ್ತವೆ. ಕಂಬಗಳು, ಒಲೆ, ಜಗುಲಿ ನಿರ್ಮಾಣ ಜೊರಾಸ್ಟ್ರಿಯನ್ ಪದ್ಧತಿಯದ್ದು ಎನ್ನಲಾಗಿದೆ. ಕಲ್ಲು ಮತ್ತು ಇಟ್ಟಿಗೆಗಳಲ್ಲಿ ನಿರ್ಮಿಸಲಾದ ಈ ಮನೆಗಳು ಮೇಲ್ಭಾಗದಲ್ಲಿ ಬೆಳಕಿಗಾಗಿ ತೆರೆದುಕೊಂಡ ೨-೩ ಹಂತದ ಮರದ ಚವುಕಾಕಾರದ ಗಾವಾಕ್ಷಿಗಳನ್ನು ಹೊಂದಿರುತ್ತವೆ. ಪಾಮಿರ್ ಮನೆ ನಿರ್ಮಾಣದಲ್ಲಿ ನಮ್ಮದೇ ರೀತಿಯ ೭ ಅಂಶಗಳ ವಾಸ್ತು ವಿಶೇಷವನ್ನು (ಸಂದ್ಜ್) ಅನುಸರಿಲಾಗುತ್ತದೆ. ಅವುಗಳೆಂದರೆ ಮಾನವ, ಪ್ರಾಣಿ, ತರಕಾರಿ, ನೆಲ (ಚಲಕ್), ಒಲೆ, ಕೋಣೆಗಳಲ್ಲಿ ಎತ್ತರಿಸಿದ ಜಗುಲಿ (ಲೋಶ ನುಕ್ ಮತ್ತು ಬರ್ನೆಕ್). ಮನೆಯಲ್ಲಿ ಐದು ಕಂಬಗಳಿದ್ದು ಇವನ್ನು ಯಜಾತ ಎಂದು ಕರೆಯಲಾಗುತ್ತದೆ. ಮೊದಲ ಕಂಬವು ಪ್ರಜ್ಞೆ ಮತ್ತು ಜ್ಞಾನವನ್ನು ಪ್ರತಿನಿಧಿಸುವ ಶೋಖ್ಸುತಾನ್, ಎರಡನೇ ಕಂಬವು ಪ್ರಾಮಾಣಿಕತೆ ಮತ್ತು ಗೆಳೆತನದ ಪ್ರತೀಕವಾದ ಮೆಹ್ರ್ ಎಂದೂ, ೩ನೇ ಕಂಬವು ಜಲದೇವತೆಯಾದ ಅನಾಹಿತದ ಪ್ರತೀಕವಾಗಿ ತಲೆ ಬಾಗಿಲ ಬಲಭಾಗದಲ್ಲಿರುತ್ತದೆ. ೪ನೇ ಮತ್ತು ೫ನೇ ಕಂಬವನ್ನು ಜಂಯೋದ್ ಮತ್ತು ಅಜರ್ ಎಂದು ಕರೆಯಲಾಗುತ್ತದೆ. ಇವು ರಕ್ಷಕ ದೇವತೆಗಳ ಮತ್ತು ನ್ಯಾಯದೇವತೆಗಳ ಪ್ರತೀಕವಾಗಿದೆ. ಮನೆ ನಿರ್ಮಾಣಕ್ಕೆ ಜೂನಿಪರ್ ಅಥವಾ ವಿಲ್ಲೋ ಮರ ಬಳಸಲಾಗುತ್ತದೆ.

ಒಳ ಗೋಡೆಗಳಿಗೆ ಕೆಮ್ಮಣ್ಣಿನ ಗಿಲಾವು ಮಾಡಲಾಗಿರುತ್ತವೆ.ಆ ಗೋಡೆಗಳ ಮೇಲೆ ಸಾಂಪ್ರದಾಯಿಕ ಚಿತ್ರಕಲೆಗಳನ್ನು ಬಿಡಿಸುತ್ತಾರೆ. ಈ ರೀತಿಯ ಗೋಡೆ ಚಿತ್ರಗಳನ್ನು ಇಲ್ಲಿನ ಪುರಾತನ ಮಸೀದಿಗಳಲ್ಲೂ ಕಾಣಬಹುದು. ಇಲ್ಲಿನ ಸಾಂಪ್ರದಾಯಿಕ ಕಲಾಕಾರರು ತಮ್ಮ ಕುಂಬಾರಿಕೆ, ಮರ ಕೆತ್ತನೆ, ಅಕ್ಕಸಾಲಿಕೆ ಕೆಲಸಗಳಿಗೆ ಪ್ರಸಿದ್ಧರಾಗಿದ್ದಾರೆ. ಹಿಂದೆ ಊರಿನ ನಡುವೆ ಚಾಯ್ ಖಾನ ಎಂದು ಕರೆಯಲಾಗುವ ಚಹ ಕುಡಿಯುವ ಸ್ಥಳ ಇರುತ್ತಿತ್ತು. ೫ ಊರ ಜನ ಸೇರಿ ಚರ್ಚೆಮಾಡಲು ವೇದಿಕೆಯನ್ನು ಒದಗಿಸುತ್ತಿತ್ತು.