ವಿಷಯಕ್ಕೆ ಹೋಗು

ಪಶ್ಚಿಮ ಗೋದಾವರಿ ಜಿಲ್ಲೆ

ನಿರ್ದೇಶಾಂಕಗಳು: 16°07′N 81°01′E / 16.117°N 81.017°E / 16.117; 81.017
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಶ್ಚಿಮ ಗೋದಾವರಿ ಜಿಲ್ಲೆ
ಆಂಧ್ರ ಪ್ರದೇಶದ ಜಿಲ್ಲೆ
ಮೇಲೆ ಎಡಕ್ಕಿಂದ ಪ್ರದಕ್ಷಿಣಾಕಾರವಾಗಿ: ಭೀಮಾವರಮ್ ಹತ್ತಿರ ಭತ್ತದ ಗದ್ದೆಗಳು, ರಾಚುರು ಗ್ರಾಮ, ಕ್ಷೀರರಾಮದಲ್ಲಿ ರಾಮಲಿಂಗೇಶ್ವರಸ್ವಾಮಿ ದೇವಾಲಯ, ಅಚಂತಾದಲ್ಲಿ ಗೋದಾವರಿ ನದಿ, ಸೋಮೇಶ್ವರ ಸ್ವಾಮಿ ದೇವಾಲಯ
Coordinates: 16°07′N 81°01′E / 16.117°N 81.017°E / 16.117; 81.017
ದೇಶ India
ರಾಜ್ಯಆಂಧ್ರ ಪ್ರದೇಶ
ಪ್ರದೇಶಕರಾವಳಿ ಆಂಧ್ರ
ಪ್ರಧಾನ ಕಾರ್ಯಸ್ಥಳಭೀಮಾವರಮ್
ಮಂಡಲಗಳು20
Government
 • ಜಿಲ್ಲಾ ಕಲೆಕ್ಟರುಸಿ. ನಾಗರಾಣಿ, ಐ.ಎ.ಎಸ್[]
 • ಲೋಕ ಸಭಾ ಕ್ಷೇತ್ರಗಳುನರಸಾಪುರಂ
 • ಸಂಸದಭೂಪತಿ ರಾಜು ಶ್ರೀನಿವಾಸ ವರ್ಮಾ
 • ವಿಧಾನ ಸಭಾ ಕ್ಷೇತ್ರಗಳು07
Area
 • ಒಟ್ಟು
೨,೨೭೮ km2 (೮೮೦ sq mi)
Population
 (2011)[][]
 • ಒಟ್ಟು
೧೮,೪೪,೮೯೮
 • Density೮೧೦/km2 (೨೧೦೦/sq mi)
 • Urban
೪,೬೮,೯೨೪
ಜನಸಂಖ್ಯಾ ಅಂಕಿಅಂಶಗಳು
 • ಸಾಕ್ಷರತೆ74.63%
 • ಲಿಂಗ ಅನುಪಾತ1004
ಪಿನ್
534201[]
Vehicle registrationAP-37 (ಹಿಂದೆ)
AP–39 (30 ಜನವರಿ 2019ರಿಂದ)[]
ಪ್ರಮುಖ ಹೆದ್ದಾರಿಗಳುNH-16,NH-165, NH-216, NH-216A, NH-365BB, NH-516D, NH-516E
Websitewestgodavari.ap.gov.in

ಪಶ್ಚಿಮ ಗೋದಾವರಿ ಜಿಲ್ಲೆಯು ಆಂಧ್ರ ಪ್ರದೇಶದಲ್ಲಿರುವ ಒಂದು ಜಿಲ್ಲೆ. ಇದು ಪೂರ್ವ ಗೋದಾವರಿ ಜಿಲ್ಲೆಯ ಪಕ್ಕದಲ್ಲಿದೆ. ಕೆಳಗೋದಾವರಿಯ ಆಚೀಚೆ ಸಮುದ್ರದ ಅಂಚಿನವರೆಗೂ ಹಬ್ಬಿರುವ ಈ ಎರಡು ಜಿಲ್ಲೆಗಳು ಪರಸ್ಪರವಾಗಿ ಗೋದಾವರಿ ನದಿಯಿಂದ ಪ್ರತ್ಯೇಕಿಸಲ್ಪಟ್ಟು, ಗೋದಾವರಿಯ ಪೂರ್ವಕ್ಕಿರುವ ಭಾಗ ಪೂರ್ವ ಗೋದಾವರೀ ಜಿಲ್ಲೆಯೆಂದೂ, ಪಶ್ಚಿಮಕ್ಕಿರುವ ಭಾಗ ಪಶ್ಚಿಮ ಗೋದಾವರೀ ಜಿಲ್ಲೆಯೆಂದೂ ಪ್ರಣೀತವಾಗಿವೆ. ಪಶ್ಚಿಮ ಗೋದಾವರಿ ಜಿಲ್ಲೆಯ ವಿಸ್ತೀರ್ಣ 880 ಚ.ಮೈ.; ಇದರ ಜನಸಂಖ್ಯೆ 18,44,898 (2011). ಪಶ್ಚಿಮ ಗೋದಾವರಿ ಜಿಲ್ಲೆಯ ಆಡಳಿತ ಕೇಂದ್ರ ಭೀಮಾವರಮ್.[] ಹಿಂದೆ ಪಶ್ಚಿಮ ಗೋದಾವರಿ ಜಿಲ್ಲೆಯ ಆಡಳಿತ ಕೇಂದ್ರ ಏಲೂರು ಆಗಿತ್ತು. ಈಗ ಏಲೂರು ಸ್ವತಃ ಒಂದು ಜಿಲ್ಲೆಯಾಗಿದೆ.

ಪೂರ್ವ ಮತ್ತು ಪಶ್ಚಿಮ ಗೋದಾವರೀ ಜಿಲ್ಲೆಗಳ ಪ್ರದೇಶದ ಸ್ವಾಭಾವಿಕ ಲಕ್ಷಣ ಒಂದೇ ಸಮನಾಗಿಲ್ಲ. ವಾಯುವ್ಯ ಭಾಗ ಹೆಚ್ಚು ಫಲವತ್ತಾಗಿಲ್ಲ. ಅದು ಹಿಂದುಳಿದಿದೆ. ಗೋದಾವರಿಯ ಮುಖಜ ಭೂಮಿ ಪ್ರದೇಶ ತುಂಬ ಫಲವತ್ತಾಗಿದೆ. ದಕ್ಷಿಣ ಭಾರತದ ಬತ್ತದ ಕಣಜವೆಂದು ಇದು ಪ್ರಸಿದ್ಧವಾಗಿದೆ. ಈ ಎರಡೂ ಪ್ರದೇಶಗಳ ನಡುವಣ ಭಾಗ ಎತ್ತರವಾಗಿದೆ.

ಧವಳೇಶ್ವರ ಅಣೆಕಟ್ಟಿನಿಂದಾಗಿ ಗೋದಾವರೀ ಮುಖಜಭೂಮಿಯ ಪ್ರದೇಶದಲ್ಲಿ ವರ್ಷವಿಡೀ ಬತ್ತದ ಸಾಗುವಳಿ ಸಾಧ್ಯವಾಗಿದೆ. ಇಲ್ಲಿ ಬತ್ತವೇ ಮುಖ್ಯ ಬೆಳೆ. ಇತರ ಆಹಾರ ಧಾನ್ಯಗಳನ್ನೂ, ಬೇಳೆ, ಎಣ್ಣೆ ಬೀಜ, ಹೊಗೆಸೊಪ್ಪು ಮತ್ತು ಕಬ್ಬನ್ನೂ ಬೆಳೆಯುತ್ತಾರೆ.

ಪಶ್ಚಿಮ ಗೋದಾವರಿಯ ಏಲೂರಿನಲ್ಲಿ ಉಣ್ಣೆ ಜಮಖಾನೆಗಳು ತಯಾರಾಗುತ್ತವೆ. ಪೂರ್ವ ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿ ಉತ್ತಮ ಕೈಮಗ್ಗದ ಬಟ್ಟೆಗಳು ತಯಾರಾಗುತ್ತಿದ್ದುವು.

ಇತಿಹಾಸ

[ಬದಲಾಯಿಸಿ]

ಗೋದಾವರಿ ಜಿಲ್ಲೆ ಪ್ರದೇಶಗಳು ಒರಿಸ್ಸಾ ಮತ್ತು ವೆಂಗಿ ರಾಜರ ಆಳ್ವಿಕೆಗೆ ಒಳಪಟ್ಟಿದ್ದವು. ಸ್ಥಳೀಯ ಪಾಳೆಯಗಾರರು ಸ್ವತಂತ್ರರಾಗಲು ಆಗಿಂದಾಗ್ಗೆ ಪ್ರಯತ್ನಿಸುತ್ತಿದ್ದರು. 16ನೆಯ ಶತಮಾನದ ಆರಂಭದಲ್ಲಿ ಇಡೀ ಜಿಲ್ಲೆ ಮುಸ್ಲಿಂ ಆಕ್ರಮಣಕಾರರ ವಶವಾಯಿತು. ಕರ್ಣಾಟಕ ಪ್ರದೇಶದಲ್ಲಿ ಫ್ರೆಂಚ್ ಮತ್ತು ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಗಳ ಬಡಿದಾಟಗಳ ಅಂತ್ಯದಲ್ಲಿ ಇದು ಬ್ರಿಟಿಷರಿಗೆ ಸೇರಿತು (1765). ಸು. 6 ಚ.ಮೈ. ವಿಸ್ತೀರ್ಣದ ಯಾನಾನ್ ಮಾತ್ರ ಫ್ರೆಂಚರ ವಶದಲ್ಲಿ ಉಳಿದಿತ್ತು. ಭಾರತ ಸ್ವತಂತ್ರವಾದ ಮೇಲೆ, 1954ರಲ್ಲಿ ಅದು ಭಾರತಕ್ಕೆ ವರ್ಗವಾಯಿತು.[] ಹಳೆಯ ಗೋದಾವರಿ ಮತ್ತು ಕೃಷ್ಣಾ ಜಿಲ್ಲೆಗಳಿಂದ ಪೂರ್ವ ಮತ್ತು ಪಶ್ಚಿಮ ಗೋದಾವರೀ ಜಿಲ್ಲೆಗಳ ರಚನೆಯಾದ್ದು 1925ರಲ್ಲಿ.[]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ "AP: కొత్త జిల్లాల స్వరూపమిదే.. పెద్ద జిల్లా ఏదంటే?". Sakshi (in ತೆಲುಗು). 2022-04-03. Retrieved 2022-04-03.
  2. ೨.೦ ೨.೧ AP GO Number 158, Part-I, Extraordinary dated 16-Feb-2023 for GO MS No:54, Revenue (Lands IV), dated 16-02-2023
  3. https://westgodavari.ap.gov.in/
  4. Pincode List. indiapincodes.net.
  5. "New 'AP 39' code to register vehicles in Andhra Pradesh launched". The New Indian Express. Vijayawada. 31 January 2019. Archived from the original on 3 February 2019. Retrieved 9 June 2019.
  6. "History | West Godavari District, Government of Andhra Pradesh | India" (in ಅಮೆರಿಕನ್ ಇಂಗ್ಲಿಷ್). Retrieved 2022-09-25.
  7. More, J. B. Prashant (2007). The Telugus of Yanam and Masulipatnam: from French rule to integration with India (in ಇಂಗ್ಲಿಷ್). M.S. pp. 30, 201, 268.
  8. "West Godavari district profile". The Hindu. 15 April 2008. Retrieved 9 June 2015.