ಪವಿತ್ರ ಶಿಲುಬೆಯ ಇಗರ್ಜಿ ತಾಕೊಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚರಿತ್ರೆ[ಬದಲಾಯಿಸಿ]

ಪವಿತ್ರ ಶಿಲುಬೆಯ ಇಗರ್ಜಿ ತಾಕೊಡೆ Archived 2019-06-09 ವೇಬ್ಯಾಕ್ ಮೆಷಿನ್ ನಲ್ಲಿ. ೧೮೩೭ ಇಸವಿಯಲ್ಲಿ ಸ್ಥಾಪನೆಗೊಂಡಿತು. ಮೊದಲಿನ ಸಮಯದಲ್ಲಿ ಮೂಡುಬಿದ್ರಿ, ಅಲಂಗಾರು, ಪಾಲಡ್ಕಾ, ವೇಣೂರು, ಶಿರ್ತಾಡಿ, ಸಿದ್ಧಕಟ್ಟೆ ಮತ್ತು ಹತ್ತಿರದ ಜನಗಳೆಲ್ಲ ತಾಕೊಡೆ ಇಗರ್ಜಿಗೆ ಬರುತ್ತಿದ್ದರು. ತಾಕೊಡೆ ಇಗರ್ಜಿ ೧೮೫೦ ಇಸವಿಯಿಂದ ಈಗಿನವರೆಗೂ ಪ್ರೀತಿಯಿಂದ ಇಟ್ಟ ಇಗರ್ಜಿಯ ಪುಸ್ತಕಗಳು,ವಸ್ತುಗಳು ನೋಡಲಿಕ್ಕೆ ಸಿಗುತ್ತವೆ. ಮೊದಲು ಮೂಡುಬಿದ್ರಿ ಹತ್ತಿರದಲ್ಲಿ ಬೇರೆ ಇಗರ್ಜಿ ಇಲ್ಲದಿರುವ ಕಾರಣದಿಂದಾಗಿ ತಾಕೊಡೆ ಇಗರ್ಜಿಯನ್ನು ಮೂಡುಬಿದ್ರಿಯ ಇಗರ್ಜಿ ತಾಕೊಡೆ ಎಂದು ಕರೆಯುತ್ತಿದ್ದರು.

ಮೊದಲಿನ ರಚನೆ[ಬದಲಾಯಿಸಿ]

ಮೊದಲು ತಾಕೊಡೆ ಇಗರ್ಜಿ ಹುಲ್ಲಿನ ಮನೆಯಾಗಿತ್ತು. ೧೮೮೦ ಇಸವಿಯಲ್ಲಿ ಆಗಿನ ಧರ್ಮಗುರುಗಳಾಗಿರುವ ಲೋರೆನ್ಸ್ ಡಿಸೋಜಾರವರು ಇಗರ್ಜಿಯನ್ನು ಅಂಚಿನ ಮನೆಯಾನ್ನಾಗಿ ಮಾಡಿದರು. ಆಗ ಅಂಚನ್ನು ತರಲಿಕ್ಕೆ ನಾರಾವಿ ಕಾಡಿನಿಂದ ತಂದದ್ದು ಎಂದು ಚರಿತ್ರೆಯಲ್ಲಿ ಉಲ್ಲೇಖಗೊಂಡಿದೆ. ಅದರೆ ಮನೆಯನ್ನು ಕಟ್ಟಲು ಮರವನ್ನು ಹೊತ್ತುಕೊಂಡು ತರಲು ಕಷ್ಟ ಆಗುವುದರಿಂದ, ಮರವನ್ನು ನಾರಾವಿಯಿಂದ ಹರಿದುಕೊಂಡು ಹೋಗುವ, ತಾಕೊಡೆ ಹತ್ತಿರಕ್ಕೆ ಸೇರುವ ಫಾಲ್ಗುಣಿ ನದಿ ನೀರಿನಲ್ಲಿ ಬಿಟ್ಟರು ಮತ್ತು ತಾಕೊಡೆಯ ಜನರು ಅದನ್ನು ಎತ್ತಿ ತೆಗೆದರು ಎಂದು ಚರಿತ್ರೆಯಲ್ಲಿ ಉಲ್ಲೇಖಗೊಂಡಿದೆ.[೧]

ಹೊಸ ಇಗರ್ಜಿಯ ನಿರ್ಮಾಣ[ಬದಲಾಯಿಸಿ]

ಇಗರ್ಜಿ ನೊಡಲಿಕ್ಕೆ ಹಳೆಯ ಕಾಲದಾದುದ್ದರಿಂದ ಹೊಸ ಇಗರ್ಜಿಯನ್ನು ನಿರ್ಮಾಣ ಮಾಡಲು ಜನರು ಆಲೋಚನೆಯನ್ನು ಮಾಡುತ್ತಿದ್ದರು. ತಾಕೊಡೆ ಇರ್ಗಜಿಯ ಆಗಿನ ಧರ್ಮಗುರುಗಳಾದ ಅಲೋಶಿಯಸ್ ಸೆರಾ ಇವರು ೧೪ ಸಪ್ಟೆಂಬರ್ ೧೯೬೪ ಇಸವಿಯಲ್ಲಿ ಹೊಸ ಇಗರ್ಜಿಗೆ ಪೌಂಡೆಶನ್ ಕಲ್ಲು ಇಟ್ಟಿದ್ದರು. ಅಲ್ಲಿಯ ಎಲ್ಲಾ ಕ್ರಿಶ್ಚಿಯನ್ ಕುಟುಂಬರು ಇಗರ್ಜಿಯನ್ನು ನಿರ್ಮಾಣ ಮಾಡಲು ಸಹಾಯ ಮಾಡಿದರು. ಐದು ವರ್ಷ ತನಕ ಇಗರ್ಜಿ ನಿರ್ಮಾಣ ಆಗಿ, ೬ ಮೇ ೧೯೬೯ ಇಸವಿಯಲ್ಲಿ ಹೊಸ ಇಗರ್ಜಿಯ ಉದ್ಗಾಟನೆಯನ್ನು ಮಾಡಿದರು. ೯ ಆಗಸ್ಟ್ ೧೯೭೦ ಇಸವಿಯಲ್ಲಿ ಸಲಹಾ ಮಂಡಳಿ ಎಂಬುದನ್ನು ಅಸ್ತಿತ್ವಾಕ್ಕೆ ಬಂದಿತು. ಬಾಜಿಲ್ ಮೆಂಡಿಸ್ ಮತ್ತು ಫಿಲಿಪ್ ಲೋಬೊ ಇವರು ಘಾಂಟೆಯ ತೋರನ್ನು ಕೊಟ್ಟು ೧೧ ಮೇ ೧೯೭೫ ಇಸವಿಯಲ್ಲಿ ಉದ್ಗಾಟನೆಯನ್ನು ಮಾಡಿದರು.

ಮೂರು ಇಗರ್ಜಿಯ ಅಮ್ಮ[ಬದಲಾಯಿಸಿ]

ತಾಕೊಡೆ ಇಗರ್ಜಿಯಿಂದ ಶಿರ್ತಾಡಿ (೧೯೨೮), ವೇಣೂರು (೧೯೩೭) ಮತ್ತು ಗಂಟಾಲ್‌ಕಟ್ಟೆ Archived 2019-06-09 ವೇಬ್ಯಾಕ್ ಮೆಷಿನ್ ನಲ್ಲಿ. (೧೯೮೮) ಇಗರ್ಜಿಯಲ್ಲಿ ಸ್ವತಂತ್ರ ಇಗರ್ಜಿ ಆಗಿ ಜನನಗೊಂಡಿತು.

ಶಿರ್ತಾಡಿ ಇಗರ್ಜಿ[ಬದಲಾಯಿಸಿ]

೧೮೩೭ ರಿಂದ ೧೯೩೮ ರವರೆಗೆ ಶಿರ್ತಾಡಿ ಬಲಿಪೂಜೆಯ ಠಾಣೆ ತಾಕೊಡೆ ಇಗರ್ಜಿಯ ಅಧೀನವಾಗಿತ್ತು.೧೯೨೮ ಇಸವಿಯಲ್ಲಿ ಶಿರ್ತಾಡಿ ಸ್ವತಂತ್ರ ಇಗರ್ಜಿ ಆಯಿತು. ಆದರೆ ೧೯೩೮ ತನಕ ಶಿರ್ತಾಡಿ ಇಗರ್ಜಿಗೆ ಧರ್ಮಗುರುಗಳು ಇರಲ್ಲಿಲ್ಲ. ಇದರಿಂದಾಗಿ ೧೯೩೮ ತನಕ ತಾಕೊಡೆಯ ಧರ್ಮಗುರುಗಳು ಶಿರ್ತಾಡಿಯ ಜನರಿಗೆ ಅತ್ಮೀಯವಾಗಿ ಸಹಾಯ ಮಾಡುತ್ತಿದ್ದರು.[೨]

ವೇಣೂರು ಇಗರ್ಜಿ[ಬದಲಾಯಿಸಿ]

ತಾಕೊಡೆ ಇಗರ್ಜಿ ದೂರ ಇರುವುದರಿಂದ ವೇಣೂರಿನ ಜನರಿಗೆ ತುಂಬಾ ಕಷ್ಟ ಆಗುತ್ತಿತ್ತು. ರೆ|ಫಾ| ಎ.ಪಿಯಾದಾದೆ ಡಿಸೋಜಾ ಇವರು ವೇಣೂರು ಸ್ವತಂತ್ರ ಇಗರ್ಜಿ ಮಾಡಲು ಸಹಾಯ ಮಾಡಿದರು. ಇವರು ತಾಕೊಡೆಯ ಲಾಯಿಕ್ ಅಧ್ಯಕ್ಷರ ಜೊತೆಗೆ ಎತ್ತಿನ ಗಾಡಿಯಲ್ಲಿ ಕುಳಿತು ವೇಣೂರು ಇಗರ್ಜಿಗೆ ಸಾಗುತ್ತಿದ್ದರು. ೧೧ ವರ್ಷ ನಿರಂತರ ಸಹಾಯ ಮಾಡಿ ೧೯೩೭ ಇಸವಿಯಲ್ಲಿ ವೇಣೂರು ಇಗರ್ಜಿ ಸ್ವತಂತ್ರ ಇಗರ್ಜಿ ಆಗಿ ನಿರ್ಮಾಣಗೊಂಡಿತು.

ಗಂಟಾಲ್‌ಕಟ್ಟೆ ಇಗರ್ಜಿ[ಬದಲಾಯಿಸಿ]

೨೫ ನವೆಂಬರ್ ೧೯೮೦ ಇಸವಿಯಲ್ಲಿ ಗಂಟಾಲ್‌ಕಟ್ಟೆ ಇಗರ್ಜಿಯ ನಿರ್ಮಾಣಕ್ಕೆ ತಾಕೊಡೆಯ ಧರ್ಮಗುರುಗಳಾದ ರೆ|ಫಾ| ಸ್ಟೇನಿ ಲೋಬೊ ಇವರ ಸಹಾಯದಿಂದ ಮಂಗ್ಳುರ್ ಪ್ರಾಂತ್ಯದ ಆಗಿನ ಬಿಷಭ್‌ರಾಗಿರುವ ಬಾಜಿಲ್ ಎಸ್. ಡಿಸೋಜಾರವರು ಪೌಂಡೆಶನ್ ಕಲ್ಲು ಇಟ್ಟಿದ್ದರು. ಮೂರು ವರ್ಷ ಅಂದರೆ ೨ ಮೇ ೧೯೮೩ ಇಸವಿಯಲ್ಲಿ ಗಂಟಾಲ್‌ಕಟ್ಟೆ ಇಗರ್ಜಿಯು ಉದ್ಗಾಟನೆಗೊಂಡಿತು. ಆದರೆ ೫ ವರ್ಷ ನಂತರ ಅಂದರೆ ೧೯೮೮ ಇಸವಿಯಲ್ಲಿ ಗಂಟಾಲ್‌ಕಟ್ಟೆ ಸ್ವತಂತ್ರ ಇಗರ್ಜಿ ಆಗಿ ನಿರ್ಮಾಣಗೊಂಡಿತು.[೩]

ತಾಕೊಡೆ ಶಿಲುಬೆಯ ಮಾರ್ಗ[ಬದಲಾಯಿಸಿ]

೧೯೨೧ ಇಸವಿಯಲ್ಲಿ ತಾಕೊಡೆಯ ಧರ್ಮಗುರುಗಳಾದ ರೆ|ಫಾ| ಕೆಜೆಟನ್ ಡಿಸಿಲ್ವಾರವರು 'ಕರಿಂಜೆ ಪರ್ವತ'ದ ಮೇಲೆ ದೊಡ್ಡ ಗಾತ್ರದ ಶಿಲುಬೆಯನ್ನು ಸ್ಥಾಪಿಸಿ ಈ ಪರ್ವತಕ್ಕೆ ಶಿಲುಬೆಯ ಪರ್ವತ ಎಂದು ಹೆಸರು ಇಟ್ಟರು. ೧೯೭೦ ಇಸವಿಯಿಂದ ಈಸ್ಟರ್ ಹಬ್ಬದ ಮೊದಲನೇಯ ಅಧಿತ್ಯವಾರ ವರ್ಷಕೊಮ್ಮೆ ಈ ಶಿಲುಬೆಯ ಪರ್ವತದಲ್ಲಿ ಶಿಲುಬೆಯ ಹಾದಿ (ಯೇಸುವಿನ ಕಷ್ಟದ ಮಾರ್ಗದ ವಿವರಣೆ) ನಡೆಸಿಕೊಂಡು ಬರುತ್ತಾರೆ. ೨೦೦೨ ಇಸವಿಯಲ್ಲಿ ೬೦ ಫೀಟಿನ ಕೊಂಕ್ರಿಟಿಕರಣದ ಶಿಲುಬೆಯನ್ನು ಸ್ಥಾಪಿಸಲಾಗಿದೆ.

ತಾಕೊಡೆ ಇಗರ್ಜಿಯ ಶಾಲೆಗಳು[ಬದಲಾಯಿಸಿ]

  • ಸಂತ ಜೋಸೆಫ್ ಶಾಲೆ

ತಾಕೊಡೆ ಮತ್ತು ಹತ್ತಿರದ ಜನರು ಓದು ಬರಹ ಬರಲ್ಲಿಕ್ಕೆ ಮತ್ತು ಕಲಿಯಲ್ಲಿಕ್ಕೆ ೧೮೮೦ ರಲ್ಲಿ ತಾಕೊಡೆಯಾ ಸಂತ ಜೋಸೆಫ್ ಆಶ್ರಯ ಸ್ಥಾಪನೆಗೊಂಡಿತು. ಹೊಸಬೆಟ್ಟು ಗ್ರಾಮದ ಮಕ್ಕಳು ಕಾಲು ದಾರಿ ನಡೆದುಕೊಂಡು ಶಾಲೆಗೆ ಬರುತ್ತಿದ್ದರು. ಹಿಂದಿನ ನೂರು ವರ್ಷದಿಂದ ಈ ಶಾಲೆಗೆ ಸಾವಿರಾರು ಮಕ್ಕಳು ಕಲಿತುಕೊಂಡು ಬರುತ್ತಿದ್ದಾರೆ.

  • ಆದರ್ಶ್ ಹೈಸ್ಕೂಲ್

ತಾಕೊಡೆಯ ಮಕ್ಕಳಿಗೆ ಓದು ಬರಹ ಬರಲ್ಲಿಕ್ಕೆ ಮತ್ತು ಕಲಿಯಲ್ಲಿಕ್ಕೆ ಊರಿನಲ್ಲೇ ದೊರಕಬೇಕೆಂದು ಆಗಿನ ಧರ್ಮಗುರುಗಳಾದ ರೆ|ಫಾ| ಸ್ಟೇನಿ ಬಿ. ಲೋಬೊ ಮತ್ತು ಇಗರ್ಜಿಯ ಜನರು ೯ ಜೂನ್ ೧೯೮೧ ಇಸವಿಯಲ್ಲಿ ಆದರ್ಶ್ ಹೈಸ್ಕೂಲ್ ಸ್ಥಾಪನೆ ಮಾಡಿದರು. ಆಗ ಹೈಸ್ಕೂಲ್ ಸ್ಥಾಪನೆ ಆಗದೆ ಇರುವ ಕಾರಣ ಇಗರ್ಜಿಯ ಮುಂಭಾಗದಲ್ಲಿ ವಿದ್ಯಾಭ್ಯಾಸ ಕಲಿಸುತ್ತಿದ್ದರು. ೧೪ ಮೇ ೧೯೮೩ ರಲ್ಲಿ ಆದರ್ಶ್ ಹೈಸ್ಕೂಲ್ ಉದ್ಗಾಟನೆಗೊಂಡಿತು.[೪]

ತಾಕೊಡೆ ಇಗರ್ಜಿಗೆ ಸೇವೆಯನ್ನು ನೀಡಿದ ಧರ್ಮಗುರುಗಳು[ಬದಲಾಯಿಸಿ]

೯ ನೇ ಮತ್ತು ೨೦ ನೇ ಶತಮಾನದಲ್ಲಿ ತಾಕೊಡೆ Archived 2019-06-09 ವೇಬ್ಯಾಕ್ ಮೆಷಿನ್ ನಲ್ಲಿ. ಇಗರ್ಜಿಯ ಜನರು ಅತ್ಮೀಕಾ ಕಾರ್ಯಗಳಿಗೆ ಧರ್ಮಗುರುಗಳು ತಮ್ಮ ಸೇವೆಯನ್ನು ನೀಡಿದ್ದಾರೆ. ೧೮೩೭ ರಿಂದ ೧೮೫೦ ತನಕ ತಾಕೊಡೆ ಇಗರ್ಜಿಯಲ್ಲಿ ಸೇವೆಯನ್ನು ನೀಡಿರುವ ಧರ್ಮಗುರುಗಳ ಹೆಸರು ಇಗರ್ಜಿಯ ಚರಿತ್ರೆಯಲ್ಲಿ ಇಲ್ಲ. ೧೮೫೦ ಇಸವಿಯ ನಂತರ ತಾಕೊಡೆ ಇಗರ್ಜಿಯಲ್ಲಿ ಸೇವೆಯನ್ನು ನೀಡಿರುವ ಧರ್ಮಗುರುಗಳ ಹೆಸರು ಹೀಗಿವೆ:

ಕ್ರ.ಸಂ ಧರ್ಮಗುರುಗಳ ಹೆಸರು ಇಸವಿ
ಫಾ| ಜೆ.ಎಮ್ ರೆಬೆಲ್ಲೊ ೧೮೫೦-೧೮೫೪
ಫಾ| ಮನುಎಲ್ ವಾಸ್ ೧೮೫೪-೧೮೫೭
ಫಾ| ಎಸ್.ಎ ಮಸ್ಕರೇನಸ್ ೧೮೫೭-೧೮೫೮
ಫಾ| ಜೋನ್ ಕುವೆಲ್ಲೊ ೧೮೫೮-೧೮೬೦
ಫಾ| ಪಿ.ಎಲ್ ಪ್ಯಾಚಿಕೊ ೧೮೬೦-೧೮೬೨
ಫಾ| ಐ.ಎ ಫೆರ್ನಾಂಡಿಸ್ ೧೮೬೨-೧೮೬೫
ಫಾ| ಡಿ.ಬಿ ಟೆಲ್ಲಿಸ್ ೧೮೬೫-೧೮೬೭
ಫಾ| ಜಾವೊಸ್ ಡಿ ಕ್ರೂಜ್ ೧೮೬೭-೧೮೬೮
ಫಾ| ಐ ಬಫ್‌ತಿಸ್‌ತಾ ೧೮೬೮-೧೮೭೦
೧೦ ಫಾ| ಪೊನಾಟಿನೊ ಅಂದ್ರದೆ ೧೮೭೦-೧೮೭೪
೧೧ ಫಾ| ಜಾವೊಸ್ ಡಿ ಕ್ರೂಜ್ ೧೮೭೪-೧೮೭೪(ಜೂನ್-ನವೆಂಬರ್)
೧೨ ಫಾ| ಅಗುಸ್ತಿನ್ ರೆಬೆಲ್ಲೊ ೧೮೭೪-೧೮೭೭
೧೩ ಫಾ| ಲೊರೆನ್ಸ್ ಫೆರ್ನಾಂಡಿಸ್ ೧೮೭೭-೧೮೭೮
೧೪ ಫಾ| ಲೊರೆನ್ಸ್ ಡಿಸೋಜಾ ೧೮೭೮-೧೮೮೨
೧೫ ಫಾ| ಪಾಸ್ಕಾಲ್ ಎ ಪಿಂಟೊ ೧೮೮೨-೧೮೮೩
೧೬ ಫಾ| ಪೀಟರ್ ಮಸ್ಕರೇನಸ್ ೧೮೮೩-೧೮೮೮
೧೭ ಫಾ| ಅಲೆಕ್ಸ್ ಪಿಂಟೊ ೧೮೮೮-೧೯೦೪
೧೮ ಫಾ| ಪಾವೊಸ್ತಿನ್ ಕೋಟಿ ಆಕ್ಟೋಬರ್ ೧೯೦೪-ಫೆಬ್ರವರಿ ೧೯೦೫
೧೯ ಫಾ| ಎಮ್.ಜಿ.ಲಿಯೋನ್ಸ್ ಮಾರ್ಚ್ ೧೯೦೫-ಫೆಬ್ರವರಿ ೧೯೦೬
೨೦ ಫಾ| ಎಕ್ಸ್ ಆರಾನ್ನ ೧೯೦೬-೧೯೦೮
೨೧ ಫಾ| ಜೋಸೆಫ್ ಎಲ್ ಪಾಯ್ಸ್ ೧೯೦೮-೧೯೧೬
೨೨ ಫಾ| ಗ್ರೆಗೊರಿ ಲೋಬೋ ೧೯೧೬-೧೯೨೧
೨೩ ಫಾ| ಕ್ಯಾಜೆಟನ್ ಡಿ'ಸಿಲ್ವಾ ೧೯೨೧-೧೯೨೪
೨೪ ಫಾ| ಎ.ಎಫ್.ಡಿ'ಸಿಲ್ವಾ ೧೯೨೪-೧೯೨೮
೨೫ ಫಾ| ಎ.ಪೈದಾಡೆ ಡಿ'ಸೋಜಾ ೧೯೨೮-೧೯೩೮
೨೬ ಫಾ| ಲಿಯೊ ಕಾರ್ವಾಲೊ ೧೯೩೮-೧೯೪೧
೨೯ ಫಾ| ಪಿ.ವಿ.ಗೊನ್ಸಾಲ್ವಿಸ್ ೧೯೪೧-೧೯೪೨
೩೦ ಫಾ| ಆಂದ್ರೆ ಪಿಂಟೊ ೧೯೪೨-೧೯೪೮
೩೧ ಫಾ| ಆಲ್ಬರ್ಟ್ ಜಿ.ನಜ್ರೆತ್ ೧೯೪೮-೧೯೫೦
೩೨ ಫಾ| ಪೆಡ್ರಿಕ್ ಮೊನಿಸ್ ೧೯೫೦-೧೯೫೨
೩೩ ಫಾ| ಆಲ್ಫೊನ್ಸ್ ಕ್ಯಾಸ್ತೆಲಿನೊ ೧೯೫೨-೧೯೫೩
೩೪ ಫಾ| ಜೋನ್ ಬಾಬ್ತಿಸ್ಟ್ ಆಲ್ವಾರಿಸ್ ೧೯೫೩-೧೯೫೭
೩೫ ಫಾ| ಜೆ.ಎಲ್ ಫೆರ್ನಾಂಡಿಸ್ ೧೯೫೭-೧೯೫೯
೩೬ ಫಾ| ಚಾರ್ಲ್ಸ್ ಪಾಯ್ಸ್ ೧೯೫೯-೧೯೬೨
೩೭ ಫಾ| ಎಲೋಶಿಯಸ್ ಸೇರಾ ೧೯೬೨-೧೯೭೦
೩೮ ಫಾ| ಕ್ಲಿಪರ್ಡ್ ಡಿ'ಸೋಜಾ ೧೯೭೦-೧೯೭೭
೩೯ ಫಾ| ಸ್ಟೇನಿ ಬಿ.ಲೋಬೋ ೧೯೭೭-೧೯೮೬
೪೦ ಫಾ| ಹೆನ್ರಿ ಸಿಕ್ವೇರಾ ೧೯೮೬-೧೯೮೮
೪೧ ಫಾ| ಲೊರೆನ್ಸ್ ಡಿ'ಸೋಜಾ ೧೯೮೮-೧೯೯೫
೪೨ ಫಾ| ಜೆರಾಲ್ಡ್ ಡಿ'ಸೋಜಾ ೧೯೯೫-೨೦೦೨
೪೩ ಫಾ| ಹಿಲಾರಿ ಲೋಬೋ ೨೦೦೨-೨೦೦೯
೪೪ ಫಾ| ಮಾರ್ಕ್ ಕ್ಯಾಸ್ತೆಲಿನೊ ೨೦೦೯-೨೦೧೬
೪೫ ಫಾ| ನವೀನ್ ಡಿ'ಸೋಜಾ ೨೦೧೬-

ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2019-06-09. Retrieved 2019-06-09.
  2. http://www.facebook.com › Places › Moodbidri, India
  3. http://www.moodbidrichurch.org/.../123-parish- Archived 2019-06-09 ವೇಬ್ಯಾಕ್ ಮೆಷಿನ್ ನಲ್ಲಿ...
  4. http://www.facebook.com/.../stJoseph-higher...S..