ಪರ್ಪ್ಲೆಕ್ಸಿಟಿ ಎಐ
ಈ ಲೇಖನ ಅಥವಾ ವಿಭಾಗ ವಿಸ್ತರಣೆಯ ಅಥವಾ ಮಹತ್ವದ ಬದಲಾವಣೆಗಳ ಮಧ್ಯಂತರದಲ್ಲಿದೆ. ನೀವೂ ಲೇಖನದ ಅಭಿವೃದ್ಧಿಯಲ್ಲಿ ಸಂಪಾದನೆಗೆ ತೊಡಗಲು ಇಚ್ಛಿಸಿದಲ್ಲಿ, ಸ್ವಾಗತ. ಈ ಲೇಖನ ಅಥವಾ ವಿಭಾಗವನ್ನು ಬಹಳ ದಿನಗಳವರೆಗೆ ಸಂಪಾದಿಸದಿದ್ದಲ್ಲಿ, ದಯವಿಟ್ಟು ಈ ಟೆಂಪ್ಲೇಟನ್ನು ಅಳಿಸಿಹಾಕಿ. ಈ article ಕಡೆಯ ಬಾರಿ ಸಂಪಾದಿಸಿದ್ದು ಇವರು Mahaveer Indra (ಚರ್ಚೆ | ಕೊಡುಗೆಗಳು) 11808680 ಸೆಕೆಂಡು ಗಳ ಹಿಂದೆ. (ಅಪ್ಡೇಟ್) |
| ಅಭಿವೃದ್ಧಿಪಡಿಸಿದವರು |
|
|---|---|
| ಮೊದಲು ಬಿಡುಗಡೆ | ಡಿಸೆಂಬರ್ 7, 2022 |
| Engine | |
| ವಿಧ |
|
| ಅಧೀಕೃತ ಜಾಲತಾಣ | perplexity.ai |
ಪರ್ಪ್ಲೆಕ್ಸಿಟಿ ಎಐ (Perplexity AI) ಎಂಬುದು ಬಳಕೆದಾರರು ಕೇಳಿದ ಪ್ರಶ್ನೆಗಳಿಗೆ, ಜಾಲತಾಣಗಳಲ್ಲಿನ ಹುಡುಕಾಟಗಳ ಫಲಿತಾಂಶಗಳನ್ನು ಆಧರಿಸಿ, ಅದನ್ನು ಸಹಜ ಭಾಷೆಯ ಮಟ್ಟಕ್ಕೆ ಸಂಸ್ಕರಿಸಿ ಮತ್ತು ಸಾರಾಂಶರೂಪದಲ್ಲಿ ಉತ್ತರವನ್ನು ನೀಡುವ, ಕೃತಕ ಬುದ್ಧಿಮತ್ತೆ ಆಧಾರಿತ ವೆಬ್ ಹುಡುಕಾಟ ಎಂಜಿನ್ ಆಗಿದೆ. ಈ ಸಂಸ್ಥೆಯ ಮುಖ್ಯ ಕಛೇರಿಯು ಯುನೈಟೆಡ್ ಸ್ಟೇಟ್ಸ್‌ನ ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿದೆ. ಈ ಸಂಸ್ಥೆಯನ್ನು ೨೦೨೨ರಲ್ಲಿ ಸ್ಥಾಪಿಸಲಾಯಿತು. ಬಳಕೆದಾರರು ಪರ್ಪ್ಲೆಕ್ಸಿಟಿ ಎಐ ಜೊತೆಗೆ ಸಂವಾದ ರೂಪದಲ್ಲಿ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಬಹುದು.[೨]
ಪರ್ಪ್ಲೆಕ್ಸಿಟಿ ಎಐಅನ್ನು ಅರವಿಂದ್ ಶ್ರೀನಿವಾಸ್, ಡೆನಿಸ್ ಯಾರಟ್ಸ್, ಜಾನಿ ಹೋ ಮತ್ತು ಆಂಡಿ ಕಾನ್ವಿನ್ಸ್ಕಿ ಅವರುಗಳು ಖಾಸಗಿ ಒಡೆತನದ ಕಂಪನಿಯಾಗಿ ಸ್ಥಾಪಿಸಿದರು. ಡಿಸೆಂಬರ್ 7, 2022 ರಂದು ಪರ್ಪ್ಲೆಕ್ಸಿಟಿ ಎಐ, ಸರ್ಚ್ ಎಂಜಿನ್ ಅನ್ನು ಗೂಗಲ್ ಕ್ರೋಮ್ ಸೇರ್ಪಡೆ ರೂಪದಲ್ಲಿ ಬಿಡುಗಡೆ ಮಾಡಿತು. ಜೊತೆಗೆ ಆಪಲ್ ಮತ್ತು ಆಂಡ್ರಾಯ್ಡ್ ವೇದಿಕೆಗಳಿಗಾಗಿ ಕಿರುತಂತ್ರಾಂಶಗಳನ್ನು ಸಹ ಅದೇ ಹೊತ್ತಿನಲ್ಲಿ ಬಿಡುಗಡೆ ಮಾಡಿತು.[೧][೨][೩] ಜುಲೈ 2025 ರ ಹೊತ್ತಿಗೆ, ಕಂಪನಿಯ ಮೌಲ್ಯ US$18 ಬಿಲಿಯನ್ ಆಗಿತ್ತು.[೪]
ಪರ್ಪ್ಲೆಕ್ಸಿಟಿ ಎಐ, ಉಚಿತ ಮತ್ತು ಪಾವತಿಸಿದ- ಎರಡು ಆವೃತ್ತಿಗಳಲ್ಲಿ ಲಭ್ಯವಿದೆ. ಹಣ ಪಾವತಿಸಿ ಚಂದಾದಾರರಾದವರಿಗೆ ಪರ್ಪ್ಲೆಕ್ಸಿಟಿ ಎಐನಲ್ಲಿನ ಹೆಚ್ಚು ಮುಂದುವರಿದ ಭಾಷಾ ಮಾದರಿಗಳು ಮತ್ತು ಹೆಚ್ಚುವರಿ ವೈಶಿಷ್ಟ್ಯಗಳನ್ನು ಬಳಸಬಹುದಾಗಿದೆ.
ಪರ್ಪ್ಲೆಕ್ಸಿಟಿ ಎಐ ಪ್ರಸ್ತುತ ಹಕ್ಕುಸ್ವಾಮ್ಯ ಉಲ್ಲಂಘನೆ, ಅನಧಿಕೃತ ವಿಷಯಗಳ ಬಳಕೆ ಮತ್ತು ಟ್ರೇಡ್‌ಮಾರ್ಕ್ ವಿವಾದಗಳಿಗೆ ಸಂಬಂಧಿಸಿದಂತೆ ಕಾನೂನು ಸವಾಲುಗಳನ್ನು ಎದುರಿಸುತ್ತಿದೆ. ಬಿಬಿಸಿ, ಡೌ ಜೋನ್ಸ್ ಮತ್ತು ದಿ ನ್ಯೂಯಾರ್ಕ್ ಟೈಮ್ಸ್ ಸೇರಿದಂತೆ ಪ್ರಮುಖ ಮಾಧ್ಯಮ ಸಂಸ್ಥೆಗಳು, ಪರ್ಪ್ಲೆಕ್ಸಿಟಿ ಕಂಪನಿಯು ತಮ್ಮ ಅನುಮತಿಯಿಲ್ಲದೆ ತಮ್ಮ ವಿಷಯವನ್ನು ಬಳಸಿಕೊಂಡು, ತನ್ನ AI ಮಾದರಿಗಳಿಗೆ ತರಬೇತಿ ನೀಡುತ್ತಿದೆ ಎಂದು ಆರೋಪಗಳು ಕೇಳಿಬಂದಿವೆ.[೫][೬]
ಇತಿಹಾಸ
[ಬದಲಾಯಿಸಿ]ಸೇವೆಗಳು
[ಬದಲಾಯಿಸಿ]ಹೋಲಿಕೆ
[ಬದಲಾಯಿಸಿ]ಆರೋಪಗಳು
[ಬದಲಾಯಿಸಿ]ಇವನ್ನೂ ಓದಿ
[ಬದಲಾಯಿಸಿ]ಉಲ್ಲೇಖ
[ಬದಲಾಯಿಸಿ]- ↑ ೧.೦ ೧.೧ ೧.೨ "Perplexity AI". Golden. Archived from the original on August 7, 2023. Retrieved August 7, 2023.
- ↑ ೨.೦ ೨.೧ Wiggers, Kyle (April 5, 2023). "AI-powered search engine Perplexity AI lands $26M, launches iOS app". Techcrunch. Archived from the original on March 5, 2024. Retrieved May 5, 2024.
- ↑ Wiggers, Kyle (January 23, 2025). "Perplexity launches an assistant for Android". TechCrunch (in ಅಮೆರಿಕನ್ ಇಂಗ್ಲಿಷ್). Archived from the original on January 23, 2025. Retrieved January 24, 2025.
- ↑ Ghaffary, Shirin (July 18, 2025). "AI Startup Perplexity Valued at $18 Billion With New Funding". Bloomberg.
- ↑ "The NYT's cease and desist move against Perplexity AI". techtarget.com. Informa TechTarget. Retrieved 1 August 2025.
- ↑ "Perplexity AI Faces Copyright and Trademark Lawsuits Amid Intellectual Property Challenges". neuron.expert. Neuron Expert Сorporation. Retrieved 1 August 2025.