ವಿಷಯಕ್ಕೆ ಹೋಗು

ಪರಾಕಾಷ್ಠೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲೈಂಗಿಕ ಸುಖಾನುಭೂತಿಯ ಚರಮಹಂತವನ್ನು ಪರಾಕಾಷ್ಠೆ ಎಂದು ಕರೆಯಲಾಗುತ್ತದೆ. ದೇಹವು ಒತ್ತಡವನ್ನು ಬಿಡುಗಡೆ ಮಾಡುತ್ತದೆ ಮತ್ತು ಪೆರಿನಿಯಲ್ ಸ್ನಾಯುಗಳು, ಗುದ ಸ್ಪಿಂಕ್ಟರ್ ಮತ್ತು ಸಂತಾನೋತ್ಪತ್ತಿ ಅಂಗಗಳು ಲಯಬದ್ಧವಾಗಿ ಸಂಕುಚಿತಗೊಳ್ಳುತ್ತವೆ. ಪುರುಷರು ಸಾಮಾನ್ಯವಾಗಿ ಪರಾಕಾಷ್ಠೆಯನ್ನು ತಲುಪಿದಾಗ ಸ್ಖಲನವನ್ನು ಅನುಭವಿಸುತ್ತಾರೆ ಮತ್ತು ಮಹಿಳೆಯರು ಯೋನಿ ಗೋಡೆಯ ಸಂಕೋಚನವನ್ನು ಅನುಭವಿಸುತ್ತಾರೆ. ಲೈಂಗಿಕ ಚಟುವಟಿಕೆಯ ಸಮಯದಲ್ಲಿ ಅಥವಾ ಪರಾಕಾಷ್ಠೆಯನ್ನು ಅನುಭವಿಸುವಾಗ ಮಹಿಳೆಯರು ಸಹ ಸ್ಖಲಿಸಬಲ್ಲರು.

ಪರಾಕಾಷ್ಠೆ / ನಿಷ್ಕಾಸನ ನಾಲ್ಕು ಹಂತಗಳ ಮಾನವ ಲೈಂಗಿಕತೆಯಲ್ಲಿ ಬಹಳ ಮುಖ್ಯವಾದ ಭಾಗವಾಗಿದೆ. ಇದು ಲೈಂಗಿಕ ಸಂಭೋಗ ಮತ್ತು ಹಸ್ತಮೈಥುನದ ಸಮಯದಲ್ಲಿ ಅನುಭವಿಸಲ್ಪಡುತ್ತದೆ.

ಲೈಂಗಿಕ ಸಂಶೋಧಕರು ಲೈಂಗಿಕ ಪ್ರತಿಕ್ರಿಯೆಯ ಹಂತ ಹಂತದ ಮಾದರಿಗಳಲ್ಲಿ ಪರಾಕಾಷ್ಠೆಯನ್ನು ವ್ಯಾಖ್ಯಾನಿಸಿದ್ದಾರೆ. ಪರಾಕಾಷ್ಠೆಯ ಪ್ರಕ್ರಿಯೆ ವ್ಯಕ್ತಿಗಳ ನಡುವೆ ಬಹಳ ವ್ಯತ್ಯಾಸಗೊಳ್ಳಬಹುದಾದರೂ ಹಲವಾರು ಮೂಲಭೂತ ಶಾರೀರಿಕ ಬದಲಾವಣೆಗಳು ಇಲ್ಲಿ ಪ್ರಧಾನವಾದುವು.

ಪರಾಕಾಷ್ಠೆಯ ಅನುಭವ

[ಬದಲಾಯಿಸಿ]

ಇದು ದೈಹಿಕವಾಗಿ ಮತ್ತು ಮಾನಸಿಕವಾಗಿ ಏಕಕಾಲದಲ್ಲಿ ಅನುಭವಿಸುವ ಭಾವನೆಯಾಗಿದೆ. ಮೆದುಳು ಪರಾಕಾಷ್ಠೆಯ ಕೇಂದ್ರಬಿಂದುವಾಗಿದೆ.

ಮೆದುಳಿನ ರಚನೆ

ಪರಾಕಾಷ್ಠೆಯ ಸಮಯದಲ್ಲಿ ಮನುಷ್ಯರು ಜನನೇಂದ್ರಿಯಗಳಲ್ಲಿ ಮತ್ತು ದೇಹದಾದ್ಯಂತ ತೀವ್ರವಾದ ಆನಂದದ ಭಾವನೆಯನ್ನು ಅನುಭವಿಸುತ್ತಾರೆ. ಪರಾಕಾಷ್ಠೆಯ ಅನುಭವ ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ಪರಾಕಾಷ್ಠೆಯ ನಂತರ ಮುಖ, ಕುತ್ತಿಗೆ ಅಥವಾ ಎದೆ ಕೆಂಪು ಬಣ್ಣಕ್ಕೆ ತಿರುಗುವುದಿದೆ. ಎಂಡಾರ್ಫಿನ್‌ಗಳ ಬಿಡುಗಡೆಯಿಂದಲಾಗಿ ಮನುಷ್ಯರು ಸುಸ್ತಾಗುವುದು, ವಿಶ್ರಾಂತಿ ಪಡೆಯುವುದು ಮತ್ತು ತೀವ್ರವಾದ ಸಂತೋಷವನ್ನು ಅನುಭವಿಸುವುದು ಸಾಮಾನ್ಯ.

ಲೈಂಗಿಕ ಅಂಗಗಳು ಮತ್ತು ಅವುಗಳ ಸುತ್ತಲಿನ ಅನೇಕ ಸ್ನಾಯುಗಳನ್ನು ಸಂಕುಚಿತಗೊಳಿಸುವ ಮತ್ತು ವಿಸ್ತರಿಸುವ ಮೂಲಕ ದೇಹವು ಈ ಸ್ಥಿತಿಯನ್ನು ತಲುಪುತ್ತದೆ. ಪರಾಕಾಷ್ಠೆಯನ್ನು ಅನುಭವಿಸುವುದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞರು ತೀರ್ಮಾನಿಸುತ್ತಾರೆ. ಇದು ಮೆದುಳಿನಲ್ಲಿನ ಸಂತೋಷದ ರಾಸಾಯನಿಕ ಬದಲಾವಣೆಗಳಿಂದಾಗಿ ಎಂದು ಹೇಳಲಾಗುತ್ತದೆ. ಈ ಆನಂದದ ಭಾವನೆಯಲ್ಲಿ ನರಗಳು ಮತ್ತು ಹಾರ್ಮೋನುಗಳು ಪಾತ್ರವಹಿಸುತ್ತವೆ.

ಪರಾಕಾಷ್ಠೆಯ ಸಮಯದಲ್ಲಿ ಸಂಭವಿಸುವ ವಿಪರೀತ ಆನಂದ ಮತ್ತು ನಂತರದ ತೃಪ್ತಿ ಮಾನವ ತೃಪ್ತಿಗೆ ಮುಖ್ಯವಾಗಿದೆ. ಪುರುಷರು ಮತ್ತು ಮಹಿಳೆಯರು ಮತ್ತು ಟ್ರಾನ್ಸ್ಜೆಂಡರ್ ಜನರು ಇಬ್ಬರೂ ಪರಾಕಾಷ್ಠೆಯನ್ನು ಹೊಂದಬಹುದು. ಆದಾಗ್ಯೂ, ಅಲೈಂಗಿಕ ವ್ಯಕ್ತಿಗಳು ಲೈಂಗಿಕ ಬಯಕೆ ಅಥವಾ ಪರಾಕಾಷ್ಠೆಯನ್ನು ಅನುಭವಿಸುವುದಿಲ್ಲ. ಪರಾಕಾಷ್ಠೆಗಳು ವಾಸ್ತವವಾಗಿ ಬಲವಾದ ದೈಹಿಕ ಮತ್ತು ಮಾನಸಿಕ ಆನಂದವನ್ನು ಉಂಟುಮಾಡುತ್ತವೆ. ಆದರೆ ಇದು ನರಮಂಡಲದಿಂದ ಮಾತ್ರ ನಿಯಂತ್ರಿಸಲ್ಪಡುತ್ತದೆ. ಪರಾಕಾಷ್ಠೆ ಆರೋಗ್ಯಕರವಾಗಿದೆ, ಹೆಚ್ಚಾಗಿ ಮಾನಸಿಕವಾಗಿದೆ, ಪಾಲುದಾರರ ನಡುವಿನ ಅನ್ಯೋನ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ.[][]

ಮಹಿಳೆಯರಲ್ಲಿ

[ಬದಲಾಯಿಸಿ]

ಮಹಿಳೆಯರಲ್ಲಿ ಯೋನಿ ಮತ್ತು ಗುದದ್ವಾರದ ಸ್ನಾಯುಗಳು ಸರಿಸುಮಾರು ಸೆಕೆಂಡಿಗೆ ಒಮ್ಮೆ, ಸುಮಾರು ಐದರಿಂದ ಎಂಟು ಬಾರಿ ಸಂಕುಚಿತಗೊಳ್ಳುತ್ತದೆ. ಹಾಗೆಯೇ ಹೃದಯ ಮತ್ತು ಉಸಿರಾಟದ ವೇಗ ಹೆಚ್ಚಾಗುತ್ತದೆ. ಪರಾಕಾಷ್ಠೆ ಆಗುವಾಗ ಮತ್ತು ಅದಕ್ಕಿಂತ ಮೊದಲು ಯೋನಿ ಒದ್ದೆಯಾಗುತ್ತದೆ ಮತ್ತು ಅದು ದ್ರವವನ್ನು ಸ್ಖಲಿಸುತ್ತದೆ. ಸ್ಖಲಿಸುವ ಮಹಿಳೆಯರ ಶೇಕಡಾವಾರು ಪ್ರಮಾಣ 10 ರಿಂದ 70% ವರೆಗೆ ಇರಬಹುದೆಂದು ಸಂಶೋಧನೆಗಳು ಸೂಚಿಸುತ್ತವೆ. ಪರಾಕಾಷ್ಠೆಯ ನಂತರ ಚಂದ್ರನಾಡಿ ಹೆಚ್ಚು ಸೂಕ್ಷ್ಮವಾಗುತ್ತದೆ ಮತ್ತು ಅದರ ಸ್ಪರ್ಶ ಅಹಿತಕರವಾಗಬಲ್ಲುದು.[]

ಲೈಂಗಿಕ ಪರಾಕಾಷ್ಠೆಯನ್ನು ಅನುಭವಿಸುತ್ತಿರುವ ಸ್ತ್ರೀ

ಪುರುಷರಲ್ಲಿ

[ಬದಲಾಯಿಸಿ]

ಪುರುಷರಲ್ಲಿ, ಶಿಶ್ನ ಮತ್ತು ಗುದದ್ವಾರದ ಸ್ನಾಯುಗಳು ಪ್ರತಿ ಸೆಕೆಂಡಿಗೆ ಒಮ್ಮೆ ಐದರಿಂದ ಎಂಟು ಬಾರಿ ಸಂಕುಚಿತಗೊಳ್ಳುತ್ತದೆ. ಹಾಗೆಯೇ ಹೃದಯ ಮತ್ತು ಉಸಿರಾಟದ ವೇಗ ಹೆಚ್ಚಾಗುತ್ತದೆ. ಶಿಶ್ನವು ಸುಮಾರು 1 ರಿಂದ 2 ಚಮಚ ವೀರ್ಯವನ್ನು ಬಿಡುಗಡೆ ಮಾಡಬಲ್ಲುದು. ಪರಾಕಾಷ್ಠೆಯ ಸಮಯದಲ್ಲಿ ಸ್ಖಲನ ಸಂಭವಿಸದೆಯೂ ಇರಬಹುದು ಆದರೆ ಪರಾಕಾಷ್ಠೆ ಮತ್ತು ಸ್ಖಲನ ಸಾಮಾನ್ಯವಾಗಿ ಏಕಕಾಲದಲ್ಲಿ ಸಂಭವಿಸುತ್ತವೆ. ಪರಾಕಾಷ್ಠೆಯ ನಂತರ ಶಿಶ್ನದ ಮೇಲ್ಭಾಗ ಹೆಚ್ಚು ಸೂಕ್ಷ್ಮವಾಗುತ್ತದೆ ಮತ್ತು ಅದರ ಸ್ಪರ್ಶ ಅಹಿತಕರವಾಗಬಲ್ಲುದು.[]

ಲೈಂಗಿಕ ಪರಾಕಾಷ್ಠೆಯನ್ನು ಅನುಭವಿಸುತ್ತಿರುವ ಪುರುಷ

ವಿಧಾನ

[ಬದಲಾಯಿಸಿ]

ಸರಿಯಾದ ಭಂಗಿಗಳ ಆಯ್ಕೆ, ಕೂಡುವ ಮತ್ತು ವೇಧಿಸುವ ಬಗೆಗೆ ಪರಸ್ಪರ ಮಾತುಕತೆ, ಪರಸ್ಪರ ಲೈಂಗಿಕ ಪ್ರಚೋದನೆ, ಒಬ್ಬರಿಗೊಬ್ಬರು ಹಸ್ತಮೈಥುನ ಮಾಡುವುದು, ಕೆಗೆಲ್ಸ್ ವ್ಯಾಯಾಮ ಮಾಡುವುದು ಮತ್ತು ಪರಾಕಾಷ್ಠೆ ಸಮೀಪಿಸುತ್ತಿರುವ ಅನುಭವ ಆದಾಗಲೇ ವೇಧನವನ್ನು ನಿಧಾನಗೊಳಿಸುವ ಮೂಲಕ (ಅದು ಸ್ನಾಯುಗಳನ್ನು ನಿಯಂತ್ರಿಸುವ ಕಾರಣ) ಹೆಚ್ಚಿನ ಸುಖ ದೊರಕಬಲ್ಲುದು.[] []

ಪರಾಕಾಷ್ಠೆಯ ಮತ್ತೊಂದು ಲಕ್ಷಣವೆಂದರೆ ಅದು ಇಂದ್ರಿಯಗಳನ್ನು ಮಂದಗೊಳಿಸುತ್ತದೆ. ಇದು ಮೆದುಳಿನಲ್ಲಿನ ಪ್ರಚೋದನೆಯಿಂದಾಗಿ. ಈ ಮಂದಗೊಳಿಸುವಿಕೆಯು ಶಾಖ, ಶೀತ ಮತ್ತು ನೋವನ್ನು ಗ್ರಹಿಸುವ ಸಾಮರ್ಥ್ಯದ ಮೇಲೆ ಹಾಗೂ ದೃಷ್ಟಿ ಮತ್ತು ಶ್ರವಣದ ಮೇಲೆ ಪರಿಣಾಮ ಬೀರುತ್ತದೆ. ಪರಾಕಾಷ್ಠೆ ಹೊಂದಿದ ನಂತರ ಮಹಿಳೆ ಹೆಚ್ಚಿನ ಪ್ರೀತಿಯನ್ನು ಬಯಸುತ್ತಾಳೆ. ಪರಾಕಾಷ್ಠೆ ಹೊಂದಿದ ನಂತರ ಒಬ್ಬರಿಗೊಬ್ಬರು ವಿಮುಖವಾಗಿ ಮಲಗದೆ ಒಬ್ಬರನ್ನೊಬ್ಬರು ಆಲಿಂಗಿಸಿ ಮುದ್ದಿಸುವುದು ಆಫ್ಟರ್ ಪ್ಲೇಯ ಸರಿಯಾದ ವಿಧಾನ.[].

ಪರಾಕಾಷ್ಠೆಯ ಮಾದರಿಗಳು

[ಬದಲಾಯಿಸಿ]

ಹಲವು ವಿಧದ ಪರಾಕಾಷ್ಠೆಗಳಿವೆ, ಅವುಗಳಲ್ಲಿ ಕೆಲವನ್ನು ಕೆಳಗೆ ವಿವರಿಸಲಾಗಿದೆ:

ಕ್ಲಿಟೋರಲ್ ಪರಾಕಾಷ್ಠೆ: ಚಂದ್ರನಾಡಿಯ ಪ್ರಚೋದನೆಯಿಂದ ಪರಾಕಾಷ್ಠೆ ಸಂಭವಿಸುತ್ತದೆ. 2019 ರ ಲೇಖನವು 60% ಮಹಿಳೆಯರ ಪರಾಕಾಷ್ಠೆಗಳು ಕ್ಲೈಟೋರಲ್ ಪ್ರಚೋದನೆಯಿಂದಾಗಿ ಸಂಭವಿಸುತ್ತವೆ ಎಂದು ಹೇಳುತ್ತದೆ.

ಯೋನಿ ಪರಾಕಾಷ್ಠೆ: ಯೋನಿ ಪ್ರಚೋದನೆಯಿಂದ ಪರಾಕಾಷ್ಠೆ ಸಂಭವಿಸುತ್ತದೆ.

ಮಿಶ್ರ ಪರಾಕಾಷ್ಠೆ: ಕ್ಲೈಟೋರಲ್ ಮತ್ತು ಯೋನಿ ಪರಾಕಾಷ್ಠೆಗಳು ಒಟ್ಟಿಗೆ ಆಗುವುದನ್ನು ಮಿಶ್ರ ಪರಾಕಾಷ್ಠೆ ಎನ್ನಲಾಗುತ್ತದೆ.

ಗುದ ಪರಾಕಾಷ್ಠೆ: ಕೆಲವು ಮಹಿಳೆಯರು ಗುದ ಸಂಭೋಗದ ಸಮಯದಲ್ಲಿ ಪರಾಕಾಷ್ಠೆ ಅನುಭವಿಸುತ್ತಾರೆ.

ಜಿ-ಸ್ಪಾಟ್ ಪರಾಕಾಷ್ಠೆ: ಜಿ-ಸ್ಪಾಟ್‌ನ ಪ್ರಚೋದನೆಯ ಪರಿಣಾಮವಾಗಿ ಪರಾಕಾಷ್ಠೆ ಸಂಭವಿಸಬಹುದು.

ಬಹು ಪರಾಕಾಷ್ಠೆಗಳು: ಒಬ್ಬ ವ್ಯಕ್ತಿ ಅಲ್ಪಾವಧಿಯಲ್ಲಿ ಪರಾಕಾಷ್ಠೆಯ ಸರಣಿಯನ್ನು ಅನುಭವಿಸಬಹುದು. ಮಹಿಳೆಯರು ಕಡಿಮೆ ಅಪವರ್ತನ (ಚೇತರಿಕೆ) ಅವಧಿಯನ್ನು ಹೊಂದಿರುತ್ತಾರೆ ಎಂದು ಮಾಸ್ಟರ್ಸ್ ಮತ್ತು ಜಾನ್ಸನ್ ಗಮನಿಸುತ್ತಾರೆ, ಇದು ಕಡಿಮೆ ಅವಧಿಯಲ್ಲಿ ಬಹು ಪರಾಕಾಷ್ಠೆಗಳನ್ನು ಅನುಭವಿಸಲು ಅನುವು ಮಾಡಿಕೊಡುತ್ತದೆ.

ಚಿತ್ರಣ-ಪ್ರೇರಿತ: ದೈಹಿಕ ಪ್ರಚೋದನೆಯಿಲ್ಲದೆ ಚಿತ್ರಣಕ್ಕೆ ಪ್ರತಿಕ್ರಿಯೆಯಾಗಿ ಪರಾಕಾಷ್ಠೆಗಳು ಸಂಭವಿಸಬಹುದು.

ಮೊಲೆತೊಟ್ಟುಗಳ ಪರಾಕಾಷ್ಠೆ: ಮೊಲೆತೊಟ್ಟುಗಳ ಪ್ರಚೋದನೆಯಿಂದ ಒಬ್ಬ ವ್ಯಕ್ತಿ ಪರಾಕಾಷ್ಠೆಯನ್ನು ಹೊಂದಬಹುದು. ಮೊಲೆತೊಟ್ಟುಗಳ ಪ್ರಚೋದನೆ ಜನನಾಂಗದ ಪ್ರಚೋದನೆಯೊಂದಿಗೆ ಸಕ್ರಿಯಗೊಳ್ಳುವ ಮೆದುಳಿನ ಭಾಗವನ್ನು ಸಕ್ರಿಯಗೊಳಿಸುತ್ತದೆ.

ಮೇಲಿನ ಪಟ್ಟಿಯು ಸಮಗ್ರವಲ್ಲ ಮತ್ತು ಮನುಷ್ಯರು ಅನುಭವಿಸಬಹುದಾದ ಪರಾಕಾಷ್ಠೆಯ ಪ್ರಕಾರಗಳ ಕುರಿತು ಸಂಶೋಧನೆ ನಡೆಯುತ್ತಿದೆ. []

ಉಲ್ಲೇಖಗಳು

[ಬದಲಾಯಿಸಿ]
  1. "Differences in Orgasm Frequency Among Gay, Lesbian, Bisexual, and Heterosexual Men and Women in a U.S. National Sample".
  2. "Female orgasms: All your questions answered".
  3. ೩.೦ ೩.೧ ೩.೨ "Everything you need to know about orgasms".
  4. "ಉತ್ತಮ ಪರಾಕಾಷ್ಠೆ ಹೊಂದಲು ಇಲ್ಲಿವೆ ಸರಳ ಸಲಹೆಗಳು". ವಿಜಯಕರ್ನಾಟಕ (in Kannada). 12 May 2021. Retrieved 10 Aug 2014.{{cite news}}: CS1 maint: unrecognized language (link)
  5. "Relationship Tips : ಪರಾಕಾಷ್ಠೆ ಸಿಗ್ತಿಲ್ಲ ಅಂತಾ ಹೇಳೋದು ಹೇಗೆ?". asianetnews (in Kannada). 28 April 2023. Retrieved 10 Aug 2014.{{cite news}}: CS1 maint: unrecognized language (link)
  6. "6 Types of Orgasms and How to Have One (or More!)".