ಪದ್ಮಾವತಿ ದೇವಸ್ಥಾನ ವಡಂಬೈಲು

ವಿಕಿಪೀಡಿಯ ಇಂದ
(ಪದ್ಮಾವತಿ ಅಮ್ಮದೇವಸ್ಥಾನ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿರುವ ಜೋಗದಿಂದ ಸುಮಾರು ೧೨ ಕಿ.ಮೀ. ದೂರದಲ್ಲಿರುವ ವಡಂಬೈಲು ಎಂಬಲ್ಲಿ ಈ ಕ್ಷೇತ್ರವಿದೆ. ಶರಾವತಿ ವಿದ್ಯದಾಗಾರದ ಪ್ರದೇಶವಾದ್ದರಿಂದ ಜೋಗದಿಂದ ಮೊದಲು ಅನುಮತಿ ಪತ್ರವನ್ನು ತೆಗೆದುಕೊಂಡು ಹೋಗಬೇಕು. ಚೆಕ್ ಪೋಸ್ಟ್ ಕೂಡ ಇದೆ. ಪ್ರಕೃತಿಯ ಮಡಿಲಲ್ಲಿ ಶ್ರೀ ಪದ್ಮಾವತಿ ಅಮ್ಮನವರ ದೇವಾಲಯವಿದೆ. ಶರಾವತಿ ತಟದಲ್ಲಿರುವ ಈ ದೇವಾಲಯ ಶರಾವತಿಯ ಹಿನ್ನೀರಿನಿಂದ ಆವೃತವಾಗಿದೆ. ದೇವಾಲಯದ ಸುತ್ತಮುತ್ತಲ ಪ್ರದೇಶ ಹಸಿರು ವನರಾಜಿಯಿಂದ ಕಂಗೊಳಿಸುತ್ತಿದೆ. ಶಾಂತಿ ಧಾಮವಾಗಿರುವ ಈ ದೇವಾಲಯವುಜೈನ ಪರಂಪರೆಯ ಇತಿಹಾಸವನ್ನು ಹೊಂದಿದೆ. ಅತಿ ಎತ್ತರವಾಗಿರುವ ಆದಿಶೇಷನ ವಿಗ್ರಹವೂ ಇಲ್ಲಿ ಇದೆ. ಈ ದೇವಾಲಯಕ್ಕೆ ರಾಜ್ಯದ ಅನೇಕ ಕಡೆಗಳಿಂದ ಭಕ್ತಾದಿಗಳು ಬರುತ್ತಾರೆ. ಇಲ್ಲಿ ಬಂದ ಭಕ್ತಾದಿಗಳಿಗೆ ವಸತಿ ಊಟದ ವ್ಯವಸ್ಥೆಯೂ ಇದೆ.

ಇಲ್ಲಿಂದ ಸುಮಾರು ೨ ಕಿ.ಮೀ. ದೂರದಲ್ಲಿ ಒಂದು ಶಿವನ ದೇವಾಲಯವಿದೆ. ಇದಕ್ಕೆ ಮರಾಠಿಕೇರಿ ಶಿವಲಿಂಗ ಎಂದು ಕರೆಯುವರು. ಸುಮಾರು ೧೬ನೇ ಶತಮಾನದ ಇತಿಹಾಸ ಹೊಂದಿರುವ ಈ ದೇವಾಲಯವನ್ನು ರಾಣಿ ಚೆನ್ನ ಭೈರವದೇವಿಯು ನಿರ್ಮಿಸಿದಳು. ಶೈವ ಮತದವಳಾಗಿದ್ದ ರಾಣಿಯು ಗೇರುಸೊಪ್ಪೆಯ ಅಲ್ಲಲ್ಲಿ ಕೆಲವು ಶಿವಲಿಂಗವನ್ನು ಪ್ರತಿಷ್ಠಾಪಿಸಿದಳು. ಈ ದೇವಾಲಯದ ಶಿವಲಿಂಗವು ಬಿಳಿ ಬಣ್ಣದಲ್ಲಿದೆ.ಕರುನಾಡಿನಲ್ಲಿ ಎಲ್ಲೂ ಕಾಣ ಸಿಗದ ಅಪರೂಪದ ೨ನೇ ಶಿವಲಿಂಗ ಇದಾಗಿದೆ.