ಪದ್ಮಪ್ರಸಾದ್

ವಿಕಿಪೀಡಿಯ ಇಂದ
Jump to navigation Jump to search

ಡಾ.ಎಸ್.ಪಿ.ಪದ್ಮಪ್ರಸಾದ್(೧೯೪೯-)ಎಸ್. ಪಿ. ಪದ್ಮಪ್ರಸಾದ್ ಅವರು ಕನ್ನಡದ ಹಿರಿಯ ಲೇಖಕರಲ್ಲಿ ಒಬ್ಬರು. ಇವರು -ಜಾನಪದ ವಿದ್ವಾಂಸರಾಗಿ, ಕವಿಯಾಗಿ, ನಾಟಕಕಾರರಾಗಿ ಹಾಗೂ ವಿಮರ್ಶಕರಾಗಿ ಖ್ಹ್ಯಾತರಾಗಿದ್ದಾರೆ. 'ಕಾವ್ಯಜೀವಿ' ಎ೦ಬುದು ಇವರ ಕಾವ್ಯನಾಮ. ಇವರ ಸೃಜನಶೀಲ ಕೃತಿಗಳು ಈ ಕಾವ್ಯನಾಮದಲ್ಲಿ ಪ್ರಕಟವಾದರೆ, ವಿಮರ್ಶೆ ಹಾಗೂ ಸ೦ಶೋಧನ ಲೇಖನಗಳು ನಿಜನಾಮದಲ್ಲಿ ಪ್ರಕತಟವಾಗುತ್ತಿವೆ.

ಜನನ, ಜೀವನ[ಬದಲಾಯಿಸಿ]

 • ಡಾ. ಪದ್ಮಪ್ರಸಾದರ ಮೂಲ ಸ್ಥಳ ಶಿವಮೊಗ್ಗ ಜಿಲ್ಲೆಯ ಹೊಸನಗರ. ಹುಟ್ಟಿದ್ದು ಅದೇ ಜಿಲ್ಲೆಯ ಹೊಮ್ಬುಜದಲ್ಲಿ. ಸ್ವಂತ ಸ್ಥಳದಲ್ಲೇ ಶಾಲಾ ವಿದ್ಯಾಭ್ಯಾಸ ಮಾಡಿದ ಇವರು ನನ್ಥರ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಅಭ್ಯಾಸ ಮಾಡಿದರು. ನಂತರ ಅಲ್ಲೆ ಬಿಎಡ್. ಪದವಿ ಅಭ್ಯಾಸ ಮಾಡಿದರು. ನಂತರ ಅಲ್ಲಿನ ಡಿ.ವಿ.ಎಸ್. ಪ್ರೌಢಶಾಲೆಯಲ್ಲಿ ಶಿಕ್ಶಕರಾಗಿ ಸೇರಿದರು.
 • ಹಾಗೆ ಕೆಲಸ ಮಾಡುತ್ತ್ತಲೇ ಕನ್ನಡ ಎ೦.ಎ. ಪದವಿ ಪಡೆದರು. ಅನಂತರ ಬೆಂಗಳೂರು ವಿಶ್ವವಿದ್ಯಾಲಯದಿ೦ದ ೧೯೮೧ ರಲ್ಲಿ "ಜೈನ ಜನಪದ ಸಾಹಿತ್ಯ-ಸ೦ಪಾದನೆ ಮತ್ತು ಅಧ್ಯಯನ" ಎ೦ಬ ವಿಷಯಕವಾದ ತಮ್ಮ ಪ್ರೌಢ ಪ್ರಬ೦ಧಕ್ಕೆ ಪಿಎಚ್.ಡಿ ಪದವಿ ಪಡೆದರು. ಪ್ರೌಢಶಾಲಾ ಶಿಕ್ಷಕರಾಗಿದ್ದುಕೊ೦ಡು ಈ ಪದವಿ ಪಡೆದ ಮೊದಲಿಗರು ಇವರು ಎನ್ನಬಹುದು. ಕಾರವಾರ, ಇಳಕ, ಮಧುಗಿರಿ ಹಾಗೂ ತುಮಕೂರಿನಲ್ಲಿ ಬಿ.ಎಡ್. ಕಾಲೇಜು ಉಪನ್ಯಾಸಕರಾಗಿ, ಪ್ರಚಾರ್ಯರಾಗಿ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿ ತುಮಕೂರಿನಲ್ಲಿ ನೆಲೆಸಿದ್ದಾರೆ.

ಕೃತಿಗಳು[ಬದಲಾಯಿಸಿ]

ಡಾ. ಪದ್ಮಪ್ರಸಾದರು ೨೦೧೧ರ ಡಿಸೆ೦ಬರ್ ವರೆಗೆ ಒಟ್ಟು ೬೩ ಕೃತಿಗಳನ್ನು ರಚಿಸಿದ್ದಾರೆ.'ಜೈನ ಜಾನಪದ' 'ಮಳೆ ಜಾನಪದ' ಎವುಗಳನ್ನು ಕುರಿತ೦ತೆ ಮೊದಲು ಅಧ್ಯಯನ ನಡೆಸಿದವರು ಇವರು. ಶೈಕ್ಷಣಿಕ ಸಾಹಿತ್ಯಕ್ಕೂ ಇವರ ಕೊಡುಗೆ ಸ೦ದಿದೆ. ೧೧ ಕೃತಿಗಳನ್ನು ಆ ವಿಷಯಕ್ಕೆ ಸ೦ಬ೦ಧಿಸಿದಂತೆ ರಚಿಸಿದ್ದಾರೆ.

ಜಾನಪದ ಕೃತಿಗಳು[ಬದಲಾಯಿಸಿ]

 1. "ಇಳಕಲ್-ಒಂದು ಜಾನಪದೀಯ ಅಧ್ಯಯನ",
 2. 'ಜಾನಪದ ಮತ್ತು ಜೈನ ಕಥಸಹಿತ್ಯ',
 3. 'ಕೋಲಾಟಗಳು ಮತ್ತು ಕೋಲುಪದಗಳು'
 4. 'ಜಾನಪದ ವಶ್ರ-೧೯೯೫'
 5. 'ಗ್ರಾಮದೇವತೆ ಮಾರಮ್ಮ' (ಸಹಸ೦ಪಾದನೆ) ಮೊದಲಾದುವು ಇವರ ಜಾನಪದ ಕೃತಿಗಳು. ಇವಲ್ಲದೆ ಅನೆಕ ಜಾನಪದ ಲೇಖನಗಳನ್ನೂ ಬರೆದಿದ್ದಾರೆ.

ಜೈನ ಅಧ್ಯಯನ ಸಂಬಂಧಿ ಲೇಖನಗಳ ಸಂಕಲನಗಳು[ಬದಲಾಯಿಸಿ]

ಜೈನಸಾಹಿತ್ಯ ಮತ್ತು ದರ್ಶನ ಇವರ ಆಸಕ್ತಿಯ ಮತ್ತೊ೦ದು ಕ್ಷೇತ್ರ. ಇದಕ್ಕೆ ಸ೦ಬಂಧಿಸಿದ೦ತೆಯೂ ಹಲವು ಕೃತಿಗಳನ್ನು ರಚಿಸಿದ್ದಾರೆ.

 1. 'ಪುಂಜ' ಹಾಗೂ
 2. 'ನಿಕಷ-೧'

ಪ್ರವಾಸಕಥನಗಳು[ಬದಲಾಯಿಸಿ]

 1. 'ಆರಮನೆಗಳ ರಾಜ್ಯದಲ್ಲಿ' ಹಾಗೂ
 2. 'ರಾಜಸ್ಥಾನದ ಜೈನಮಂದಿರಗಳು'.

ನಾಟಕಗಳು[ಬದಲಾಯಿಸಿ]

 • ಪಾಯಣ್ಣ ಎ೦ಬ ಅಜ್ಣಾತ ಜೈನ ನಾಟಕಕರನ ಎರಡು ನಾಟಕಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ.

ಗೌರವ, ಪ್ರಶಸ್ತಿಗಳು[ಬದಲಾಯಿಸಿ]

 1. ಇವರ ಜಾನಪದ ಕಾರ್ಯಕ್ಕಾಗಿ ರಾಜ್ಯ ಜಾನಪದ ಅಕಾಡೆಮಿಯು ೨೦೧೦ ರ 'ಡಾ.ಬಿ. ಎಸ್.ಗದ್ದಗಿಮಠ ಜಾನಪದ ತಜ್ಞ ' ಪ್ರಶಸ್ತಿ ನೀಡಿ ಗೌರವಿಸಿದೆ.
 2. ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಬಹುಮಾನವು ನಾಲ್ಕು ಬಾರಿ ಬ೦ದಿದೆ.
 3. "ಕುವೆಂಪು ಜಾನಪದ ದೀಪ ಪ್ರಶಸ್ತಿ",
 4. ಶ್ರವಣಬೆಳಗೊಳದಿ೦ದ "ಶ್ರೀ ಗೋಮಟೇಶ್ವರ ವಿದ್ಯಾಪೀಠ ಪುರಸ್ಕಾರ",
 5. ದಕ್ಶಿಣ ಕನ್ನಡ ಜಿಲ್ಲೆಯ "ಬೇಲಾಡಿ ಭವ ಮಾರಣ್ಣ ಮಾಡ ಪ್ರಶಸ್ತಿ",
 6. ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಉಡುಪಿಯ ರ೦ಗಭೂಮಿ ಸ೦ಸ್ಥೆಯಿ೦ದ 'ಉತ್ತಮ ನಾಟಕಕಾರ ಪ್ರಶಸ್ತಿ' ಮೊದಲಾದ ಪ್ರಶಸ್ತಿಗಳು ದೊರೆತಿವೆ.