ವಿಷಯಕ್ಕೆ ಹೋಗು

ಪಗೋಡಾ (ನಾಣ್ಯ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಫ಼್ರೆಂಚ್ ಈಸ್ಟ್ ಇಂಡಿಯಾ ಕಂಪನಿ ಹೊರಡಿಸಿದ ಚಿನ್ನದ ಪಗೋಡಾ, ೧೭೦೫-೧೭೮೦.

ಪಗೋಡಾ ಚಲಾವಣೆಯ ಒಂದು ಏಕಮಾನವಾಗಿತ್ತು. ಈ ನಾಣ್ಯವನ್ನು ಚಿನ್ನ ಅಥವಾ ಅರ್ಧ ಚಿನ್ನದಿಂದ ತಯಾರಿಸಲಾಗುತ್ತಿತ್ತು. ಭಾರತೀಯ ರಾಜವಂಶಗಳು, ಜೊತೆಗೆ ಬ್ರಿಟಿಷರು, ಫ಼್ರೆಂಚರು ಮತ್ತು ಡಚ್ಚರು ಈ ನಾಣ್ಯವನ್ನು ಟಂಕಿಸುತ್ತಿದ್ದರು. ಇದನ್ನು ೪೨ ಫಣಮ್‍ಗಳಾಗಿ ವಿಭಜಿಸಲಾಗಿತ್ತು. ಮಧ್ಯಯುಗದ ದಕ್ಷಿಣ ಭಾರತದಲ್ಲಿನ ವಿವಿಧ ರಾಜವಂಶಗಳು ಪಗೋಡಾ ನಾಣ್ಯಗಳನ್ನು ಹೊರಡಿಸಿದ್ದವು. ಇವುಗಳಲ್ಲಿ ಹಾನಗಲ್ಲಿನ ಕದಂಬರು, ಗೋವಾದ ಕದಂಬರು, ಮತ್ತು ವಿಜಯನಗರ ಸಾಮ್ರಾಜ್ಯ ಸೇರಿವೆ.[]

ವಿದೇಶಿ ವ್ಯಾಪಾರಿಗಳು ಟಂಕಿಸಿದ ಪಗೋಡಾಗಳಲ್ಲಿ ಎರಡು ಪ್ರಕಾರಗಳಿದ್ದವು:

  • ನಕ್ಷತ್ರ ಪಗೋಡಾ ಅತ್ಯಂತ ಬೆಲೆಬಾಳುವಂಥದ್ದಾಗಿತ್ತು, ೧೦೦ ಪಗೋಡಾಗಳು ೩೫೦ ರೂಪಾಯಿಗಳಷ್ಟು ಬೆಲೆಬಾಳುತ್ತಿದ್ದವು. ಇವನ್ನು ಮದ್ರಾಸಿನಲ್ಲಿ ಈಸ್ಟ್‌ ಇಂಡಿಯ ಕಂಪನಿ ಹೊರಡಿಸಿತ್ತು.[]
  • ಪೋರ್ಟೊ ನೋವೊ ಪಗೋಡಾ ಎರಡನೆ ಬಗೆಯದು. ಇದನ್ನು ಟ್ಯೂಟಿಕಾರಿನ್‍ನಲ್ಲಿ ಡಚ್ಚರು ಮತ್ತು ಆರ್ಕಟ್‍ನ ನವಾಬರು ಕೂಡ ಹೊರಡಿಸಿದ್ದರು. ಇದು ನಕ್ಷತ್ರ ಪಗೋಡಾಕ್ಕಿಂತ ಶೇಕಡ ೨೫ ರಷ್ಟು ಕಡಿಮೆ ಬೆಲೆಬಾಳುತ್ತಿತ್ತು.[]

ಉಲ್ಲೇಖಗಳು

[ಬದಲಾಯಿಸಿ]
  1. "Southern India Coins". Med.unc.edu. Archived from the original on 2007-02-04. Retrieved 2007-03-20.
  2. "European East India Companies coins". Chennai Museum. Retrieved 2007-03-20.
  3. "glossary - pagoda". Archived from the original on 2007-01-26. Retrieved 2007-03-20. {{cite web}}: Unknown parameter |dead-url= ignored (help)