ಪಂಚಾಕ್ಷರಿ ಹಿರೇಮಠ

ವಿಕಿಪೀಡಿಯ ಇಂದ
Jump to navigation Jump to search

ಪಂಚಾಕ್ಷರಿ ಹಿರೇಮಠ ಅವರು ೧೯೩೩ ಜನೆವರಿ ೬ ರಂದು ರಾಯಚೂರು ಜಿಲ್ಲೆಯ ಕೊಪ್ಪಳ ತಾಲೂಕಿನ ಬಿಸರಹಳ್ಳಿ ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಬಸಮ್ಮ; ತಂದೆ ವೇದಮೂರ್ತಿ ಮಲಕಯ್ಯ. ಇವರ ಅಣ್ಣ ವೀರಭದ್ರಯ್ಯ ಇವರಿಗಿಂತ ಏಳು ವರ್ಷಕ್ಕೆ ದೊಡ್ಡವರು. ಕೇವಲ ಎರಡು ವರ್ಷದವರಿದ್ದಾಗ ಪಂಚಾಕ್ಷರಿ ತನ್ನ ತಂದೆಯನ್ನು ಕಳೆದುಕೊಂಡ. ಧೃತಿಗೆಡದ ತಾಯಿ ಇಬ್ಬರೂ ಮಕ್ಕಳನ್ನು ತಾನೇ ಸಾಕಿ ಸಲುಹಿದಳು.


ಬಿಸರಹಳ್ಳಿಯಲ್ಲಿ ಆರಂಭಿಕ ಶಿಕ್ಷಣ ಪಡೆದು, ಮುಂದಿನ ಶಿಕ್ಷಣಕ್ಕಾಗಿ ಪಂಚಾಕ್ಷರಿ ಕೊಪ್ಪಳಕ್ಕೆ ಬಂದಾಗ ಅವರಿಗೆ ೧೦- ೧೨ ವರ್ಷ ವಯಸ್ಸು. ಭಾರತ ಸ್ವತಂತ್ರವಾದರೂ ಸಹ ನಿಜಾಮಶಾಹಿ ಆಳಿಕೆಯಲ್ಲಿದ್ದ ಕೊಪ್ಪಳದಲ್ಲಿ ದಬ್ಬಾಳಿಕೆ ನಡೆದಿತ್ತು. ಸ್ವಾಮಿ ರಾಮಾನಂದ ತೀರ್ಥ, ಮುಂದಾಳ್ತನದಲ್ಲಿ ಹೈದರಾಬಾದ ವಿಮೋಚನಾ ಚಳುವಳಿ ಪ್ರಾರಂಭವಾಯಿತು. ೧೯೪೮ ಸಪ್ಟಂಬರ ೧೭ ರಂದು ಹೈದರಾಬಾದ ವಿಮೋಚನೆಯಾದ ಬಳಿಕ ಬಿಸರಹಳ್ಳಿಗೆ ಮರಳಿದ ಪಂಚಾಕ್ಷರಿ ಕೊಪ್ಪಳ, ಕಲಬುರ್ಗಿ ಗಳನ್ನೆಲ್ಲ ಸುತ್ತಾಡುತ್ತ ಕೆಲ ಕಾಲ ಕಳೆದರು.ಕೊನೆಗೊಮ್ಮೆ ಧಾರವಾಡ ಕ್ಕೆ ಬಂದಿಳಿದಾಗ ಇವರಿಗೆ ಇಪ್ಪತ್ತು ವರ್ಷ.

ಶಿಕ್ಷಣ[ಬದಲಾಯಿಸಿ]

ವಿದ್ಯಾಭ್ಯಾಸವನ್ನು ಮಧ್ಯದಲ್ಲಿಯೆ ನಿಲ್ಲಿಸಬೇಕಾಗಿ ಬಂದರೂ ಸಹ, ಪಂಚಾಕ್ಷರಿ ಹಿರೇಮಠ ಅವರು ಸ್ವಾಧ್ಯಾಯ ಬಲದಿಂದಲೆ ಸ್ನಾತಕೋತ್ತರ ಪದವಿ ಪಡೆದರು. ೧೯೮೫ರಲ್ಲಿ ಅಮೆರಿಕೆಯ ಅರಿಝೋನಾ ಜಾಗತಿಕ ವಿಶ್ವವಿದ್ಯಾಲಯದಿಂದ ( World University of Arizona ), ಡಿ.ಲಿಟ್ ಪದವಿಯನ್ನು ಪಡೆದ ಪ್ರಥಮ ಕನ್ನಡಿಗ.

ಸಾಧನೆ[ಬದಲಾಯಿಸಿ]

ಪಂಚಾಕ್ಷರಿ ಹಿರೇಮಠ ಪತ್ರಕರ್ತರಾಗಿ, ಪ್ರಕಾಶಕರಾಗಿ, ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ಸಾಹಿತ್ಯರಚನೆಯನ್ನು ಕನ್ನಡದಲ್ಲಿ ಅಲ್ಲದೆ ಉರ್ದು ಹಾಗು ಹಿಂದಿ ಗಳಲ್ಲಿ ಸಹ ಮಾಡಿದ್ದಾರೆ. ಉರ್ದು, ಹಿಂದಿ, ಗುಜರಾತಿ ಸಾಹಿತ್ಯವನ್ನಲ್ಲದೆ ರಶಿಯಾ, ಜಾರ್ಜಿಯಾ ಹಾಗು ಉಝ್ಬೇಕಿಸ್ತಾನ ದ ಸಾಹಿತ್ಯವನ್ನೂ ಸಹ ಕನ್ನಡಕ್ಕೆ ಅನುವಾದಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ೧೯೯೩ ರಲ್ಲಿ ನಿವೃತ್ತರಾದರು.

ಪಂಚಾಕ್ಷರಿ ಹಿರೇಮಠ ಅವರ ಕತೆಯು ಕೋರಿಯಾ ದಿಂದ ಪ್ರಕಾಶಿತವಾದ Asian Literature ಪುಸ್ತಕದಲ್ಲಿ ಸ್ಥಾನ ಪಡೆದಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಗಾಗಿ ಹಾಗು National Book Trust ಗಾಗಿ ಅನೇಕ ಪುಸ್ತಕಗಳನ್ನು ಪಂಚಾಕ್ಷರಿಯವರು ಅನುವಾದಿಸಿದ್ದಾರೆ.

೧೯೫೪ ರಿಂದಲೆ ಹಿರೇಮಠರವರು ಆಕಾಶವಣಿಯಲ್ಲಿ ಹಾಗು ಆಬಳಿಕ ದೂರದರ್ಶನದಲ್ಲಿ ಭಾಷಣ, ಕಾವ್ಯವಾಚನ, ನಾಟಕ, ಸಂದರ್ಶನ ಮೊದಲಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

೧೯೮೪ರಲ್ಲಿ ನೇಪಾಳ ಸಾಹಿತ್ಯ ಸಮಿತಿಯ ಆಹ್ವಾನದ ಮೇರೆಗೆ ನೇಪಾಳವನ್ನು ಸಂದರ್ಶಿಸಿದರು ಹಾಗು The Royal Nepali Academi ಯಿಂದ ಗೌರವಿಸಲ್ಪಟ್ಟರು.

೧೯೮೫ ರಲ್ಲಿ ಅಮೆರಿಕೆಯ ಅರಿಝೋನಾ ದಲ್ಲಿರುವ World University ಯಿಂದ ಗೌರವ ಡಿ.ಲಿಟ್ ಪದವಿ ಪಡೆದರು.

ಅದೇ ವರ್ಷ ಸಪ್ಟಂಬರದಲ್ಲಿ ಗ್ರೀಸ್ ದೇಶದ ಕೋರ್ಫೂ ದಲ್ಲಿ ನಡೆದ World Poets Meet ದಲ್ಲಿ ಭಾಗವಹಿಸಿದರು. ಅಲ್ಲಿಂದ ಇಜಿಪ್ತ ದೇಶಕ್ಕೆ ಪ್ರಯಾಣಿಸಿದಾಗ ರೇಡಿಯೊ ಇಜಿಪ್ತ ಇವರ ಸಂದರ್ಶನವನ್ನು ಪಡೆಯಿತು, ಮತ್ತು ಇವರ ಕೆಲ ಕವಿತೆಗಳನ್ನು ಪ್ರಸಾರ ಮಾಡಿತು.

೧೯೮೮ ನವಂಬರದಲ್ಲಿ ಹಿರೇಮಠರವರು ಬ್ಯಾಂಗ್‍ಕಾಕ್ ದಲ್ಲಿ ನಡೆದ Tenth World Conference ದಲ್ಲಿ ಥಾಯಿ ಸರಕಾರದ ಆಮಂತ್ರಣದ ಮೇರೆಗೆ ಭಾಗವಹಿಸಿ ಪ್ರಬಂಧವಾಚನ ಮಾಡಿದರು.

೧೯೮೮ರಲ್ಲಿ ಇವರ ' ಮಿತ್ರದೇಶದ ಕವಿತೆಗಳು ಈ ಕವನಸಂಕಲನಕ್ಕೆ The Soviet Land Nehru Award ದೊರೆಯಿತು.

೧೯೯೪ ರಲ್ಲಿ ಚೀನಾ ತೈಪೈ ದಲ್ಲಿ ನಡೆದ Fifteenth World Poets Conference ದಲ್ಲಿ ಭಾಗವಹಿಸಿದರು.

ಕೌಟಂಬಿಕ ಜೀವನ[ಬದಲಾಯಿಸಿ]

ಪಂಚಾಕ್ಷರಿ ಹಿರೇಮಠರವರ ಪತ್ನಿ ಶಾಂತಾ. ಮಕ್ಕಳು ಜಯದೇವ, ಮೃತ್ಯುಂಜಯ ಹಾಗು ವಿಜಯಶ್ರೀ .

ಸಾಹಿತ್ಯರಚನೆ[ಬದಲಾಯಿಸಿ]

ಕಾವ್ಯ[ಬದಲಾಯಿಸಿ]

 • ಚೈತ್ಯಾಕ್ಷಿ
 • ನೀ ರುದ್ರನಾಗು
 • ಗಾಳಿ-ಗಂಧ
 • ಮಿತ್ರದೇಶದ ಕವಿತೆಗಳು

ಕಥೆ[ಬದಲಾಯಿಸಿ]

 • ಎನ್ನಾಲೇಕ

ಪ್ರಬಂಧ/ವಿಮರ್ಶೆ[ಬದಲಾಯಿಸಿ]

 • ಕವೀಂದ್ರ ರವೀಂದ್ರರು
 • ಕವಿ-ಕಾವ್ಯ-ಕಲ್ಪನೆ
 • ಕವಿ-ಕಾವ್ಯ-ಚಿಂತನ
 • ಚೆಲುವಿನ ಅಲೆಗಳು
 • ಹದಿನಾರು ಪ್ರಬಂಧಗಳು
 • ಜ್ಞಾಣಪೀಠ ಪ್ರಶಸ್ತಿ ವಿಜೇತ- 'ಫಿರಾಕ್ ' ಗೋರಖಪುರಿ
 • ಮಹಾಯೋಗಿನಿ ಲಲ್ಲೇಶ್ವರಿ
 • ಭೂದಾನ
 • ಆರ್.ಸಿ.ಭೂಸನೂರಮಠ (ಸಂ)
 • ಉರ್ದು ಸಾಹಿತ್ಯ-ಒಂದು ಪರಿಚಯ

ಪತ್ರ ಸಾಹಿತ್ಯ[ಬದಲಾಯಿಸಿ]

 • ಈ ಬದುಕು ಬಂಗಾರ
 • ಏನೆಂಥ ಮಧುರವೀ ಬದುಕು (ಕರಂದೀಕರ ಸಾಹಿತ್ಯ ಬಹುಮಾನ ಪಡೆದಿದೆ).

ಇತಿಹಾಸ[ಬದಲಾಯಿಸಿ]

 • ಮುಕ್ತಿಕ್ಷೇತ್ರ ಉಳವಿ

ಜೀವನ ಚರಿತ್ರೆ[ಬದಲಾಯಿಸಿ]

 • ಹಾನಗಲ್ಲ ಕುಮಾರಸ್ವಾಮಿಗಳು
 • ವಿಜಯ ಮಹಾಂತ ಸ್ವಾಮಿಗಳು
 • ಪುಣ್ಯಚಿತ್ತರು

ಮಕ್ಕಳ ಸಾಹಿತ್ಯ[ಬದಲಾಯಿಸಿ]

 • ಚಾಕ್ಲೆಟ್ ಮತ್ತು ಇತರ ಕತೆಗಳು
 • ನೀತಿ ಕತೆಗಳು

ಸಂಪಾದನೆ[ಬದಲಾಯಿಸಿ]

 • ಮಣಿಮುಕುರ ಪ್ರಭೆ
 • ಶಿವಯೋಗ
 • ಶಿವಲಿಂಗದೀಪ್ತಿ
 • ಗವಿದೀಪ್ತಿ (ಇತರರೊಡನೆ)
 • ಶಿವದೇವ ( ಇತರರೊಡನೆ)
 • ಪದ್ಮಶ್ರೀ (ಇತರರೊಡನೆ)

ಅನುವಾದ[ಬದಲಾಯಿಸಿ]

 • ಬಯಲ ಬಾನಿನಲ್ಲಿ (ಹಿಂದಿ/ಕವನ)
 • ಭೂಮಾ (ಹಿಂದಿ/ಕವನ)
 • ಒಂದು ಮತ್ತು ಒಂದು ಎರಡು (ಹಿಂದಿ/ಕವನ)
 • ಇಂದ್ರಧನುಸ್ಸು (ಹಿಂದಿ/ಕವನ)
 • ಕಾಶ್ಮೀರದ ಹೂ (ಉರ್ದು/ಕಥೆ)
 • ಗುಲಾಬಿ ಹೂ (ಉರ್ದು/ಕಥೆ)
 • ನಾರಿ (ಹಿಂದಿ/ಕಾದಂಬರಿ)
 • ಮಗ್ಗ ಚೆಲ್ಲಿದ ಬೆಳಕು (ಹಿಂದಿ/ಕಾದಂಬರಿ)
 • ಬೋರಬನ್ ಕ್ಲಬ್ (ಉರ್ದು/ಕಾದಂಬರಿ)
 • ಜರಗಾವದ ರಾಣಿ (ಉರ್ದು/ಕಾದಂಬರಿ)
 • ಕಪ್ಪು ಹೊತ್ತಗೆ (ಗುಜರಾತಿ/ ಕಾದಂಬರಿ)
 • ಐವಾನೆ ಗಜಲ್ (ಉರ್ದು/ಕಾದಂಬರಿ)
 • ಕತ್ತಲೆಯೊಂದಿಗೆ (ಹಿಂದಿ/ಕಾದಂಬರಿ)
 • ಪುರಾತನ ಲಖನೌ (ಉರ್ದು/ಇತಿಹಾಸ)
 • ಭಾರತದ ಅರಸರು ಮತ್ತು ಶ್ರೀಸಾಮಾನ್ಯರ ಕತೆಗಳು (ಇಂಗ್ಲಿಷ/ಮಕ್ಕಳ ಕತೆಗಳು)
 • ದರೋಡೆಗಾರನ ಮಗ (ಹಿಂದಿ/ಮಕ್ಕಳ ಕತೆಗಳು)
 • ಈದಗಾ (ಉರ್ದು/ಮಕ್ಕಳ ಕತೆಗಳು)
 • ಮೂರು ಪಂಜಾಬಿ ನಾಟಕಗಳು (ಪಂಜಾಬಿ/ನಾಟಕ)
 • ಚಿತ್ರಾಂಗದಾ ಮತ್ತು ಇತರ ನಾಟಕಗಳು
 • ಪಾಂಚಾಲಿ ಶಪಥ ಮತ್ತು ಇತರ ನಾಟಕಗಳು
 • ನೀರು ತರುವ ಹಾದಿ ಮತ್ತು ಇತರ ನಾಟಕಗಳು