ನೈನ್ ಸಿಂಗ್ ರಾವತ್
ನೈನ್ ಸಿಂಗ್ ರಾವತ್ | |
---|---|
ಜನನ | October 21, 1830 |
ಮರಣ | ಫೆಬ್ರವರಿ 1, 1882 ಮೊರಾದಾಬಾದ್ |
ರಾಷ್ಟ್ರೀಯತೆ | ಭಾರತೀಯ |
ಇತರೆ ಹೆಸರು | Nain Singh Rawat |
ವೃತ್ತಿ | ಏಷ್ಯಾದ ಪರಿಶೋಧಕ |
ನೈನ್ ಸಿಂಗ್ ರಾವತ್ (ಅಕ್ಟೋಬರ್ 21, 1830 - ಫೆಬ್ರವರಿ 1, 1882), 19 ನೇ ಶತಮಾನದ ಮುಂಚಿನ ಪ್ರವರ್ತಕ ಪರಿಶೋಧಕರಾಗಿದ್ದರು. ಬ್ರಿಟೀಷರಿಗೆ ಹಿಮಾಲಯವನ್ನು ಪರಿಶೋಧಿಸಿದರು.ಅವರು ನೇಪಾಳದ ಮೂಲಕ ಟಿಬೆಟ್ಗೆ ವ್ಯಾಪಾರ ಮಾರ್ಗವನ್ನು ನಕ್ಷೆ ಮಾಡಿದರು,ಲಾಸಾದ ಸ್ಥಳ ಮತ್ತು ಎತ್ತರವನ್ನು ಮೊದಲ ಬಾರಿಗೆ ನಿರ್ಧರಿಸಿದರು,ಮತ್ತು ಪ್ರಮುಖ ಬ್ರಹ್ಮಪುತ್ರ ನದಿಯ ದೊಡ್ಡ ಭಾಗವನ್ನು ಮ್ಯಾಪ್ ಮಾಡಿದರು.[೧][೨]
ಆರಂಭಿಕ ಜೀವನ
[ಬದಲಾಯಿಸಿ]ರಾಯ್ ಬಹದ್ದೂರ್ ನೇಯ್ನ್ ಸಿಂಗ್ ರಾವತ್ ಅವರು 1830 ರಲ್ಲಿ ಜೊಹಾರ್ ಕಣಿವೆಯಲ್ಲಿನ ಭೋಟಿಯಾ ಹಳ್ಳಿಯಲ್ಲಿರುವ ಮಿಲಾಮ್ ಗ್ರಾಮದಲ್ಲಿ, ಲತಾ ಬುರಾರ ಮಗನಾಗಿ ಜನಿಸಿದರು, ಶಿಕ್ಷಣ ಪಡೆದ ನಂತರ ನೈನ್ ಸಿಂಗ್ ಅವರ ತಂದೆಗೆ ಸಹಾಯ ಮಾಡಿದರು. ಅವರು ಟಿಬೆಟ್ನಲ್ಲಿ ವಿವಿಧ ಕೇಂದ್ರಗಳನ್ನು ಅವರೊಂದಿಗೆ ಭೇಟಿ ಮಾಡಿದರು, ಟಿಬೆಟಿಯನ್ ಭಾಷೆ , ಸಂಪ್ರದಾಯ ಮತ್ತು ಮನೋಭಾವವನ್ನು ಕಲಿತರು ಮತ್ತು ಟಿಬೆಟಿಯನ್ ಜನರೊಂದಿಗೆ ಪರಿಚಿತರಾದರು. ಟಿಬೆಟಿಯನ್ ಭಾಷೆಯ ಈ ಜ್ಞಾನ ಮತ್ತು ಸ್ಥಳೀಯ ಸಂಪ್ರದಾಯಗಳು ಮತ್ತು ಪ್ರೋಟೋಕಾಲ್ ಗಳು "ಗೂಢಚಾರ ಅನ್ವೇಷಕ" ಎಂದು ನೈನ್ ಸಿಂಗ್ರವರ ಕೃತಿಗಳಲ್ಲಿ ಸೂಕ್ತವಾದವು. ತೀವ್ರತರವಾದ ಶೀತ ಪರಿಸ್ಥಿತಿಗಳ ಕಾರಣ, ಮಿಲಾಮ್ ಮತ್ತು ಮೇಲಿನ ಜೋಹಾರ್ ಕಣಿವೆಯಲ್ಲಿನ ಇತರ ಹಳ್ಳಿಗಳು ಜೂನ್ ತಿಂಗಳಿನಿಂದ ಅಕ್ಟೋಬರ್ ವರೆಗೆ ಕೆಲವು ತಿಂಗಳ ಕಾಲ ಮಾತ್ರ ವಾಸಿಸಲು ಯೋಗ್ಯ ಸಮಯ. ಈ ಸಮಯದಲ್ಲಿ ಪುರುಷರು ಪಶ್ಚಿಮ ಟಿಬೆಟ್ನಲ್ಲಿ ಜಿಯಾನಿಮಾ, ಗಾರ್ಟೊಕ್ ಮತ್ತು ಇತರ ಮಾರುಕಟ್ಟೆಗಳನ್ನು ಭೇಟಿ ಮಾಡುತ್ತಿದ್ದರು.
ಪರಿಶೋಧಕ
[ಬದಲಾಯಿಸಿ]- 1855 25 ವರ್ಷದ ರಾವತ್ರನ್ನು ,ಮೊದಲು ಜರ್ಮನಿಯ ಭೂಗೋಳಶಾಸ್ತ್ರಜ್ಞರು ,ವಿಜ್ಞಾನಿಗಳನ್ನು ಸರ್ವೆ ಆಫ್ ಇಂಡಿಯಾ ಕಚೇರಿಯಲ್ಲಿ ಶ್ಲ್ಯಾಗಿಂಟ್ವೀಟ್ ಸಹೋದರು ಇವರನ್ನು ಆಯ್ಕೆ ಮಾಡಿದರು.
- 1855 ಮತ್ತು 1857 ರ ನಡುವೆ ಜರ್ಮನ್ ರೊಂದಿಗೆ ನೈನ್ ಸಿಂಗ್ ಮೊದಲ ಪರಿಶೋಧನಾ ಪ್ರವಾಸ ಮಾಡಿದರು . ಅವರು ಲೇಕ್ಸ್ ಮನಸಾರಾವರ್ ಮತ್ತು ರಾಕಾಸ್ ತಾಲ್,ಗಾರ್ಟಾಕ್ ಮತ್ತು ಲಡಾಖ್ಗೆ ಪ್ರಯಾಣಿಸಿದರು.
- 1858 ರಿಂದ 1863 ರವರೆಗೆ ಮಿಲಮ್ನಲ್ಲಿರುವ ಗ್ರಾಮದಲ್ಲಿ ಸರ್ಕಾರಿ ಸ್ಥಳೀಯ ಶಾಲೆಯ ಮುಖ್ಯೋಪಾಧ್ಯಾಯರಾಗಿ ನೇಮಕಗೊಂಡರು.
- 1863 ರಲ್ಲಿ, ನೈನ್ ಸಿಂಗ್ ರಾವತ್ ಮತ್ತು ಅವರ ಸೋದರಸಂಬಂಧಿ ಮಣಿ ಸಿಂಗ್ ರಾವತ್ ಅವರು ಡೆಹ್ರಾಡೂನ್ನ ಗ್ರೇಟ್ ಟ್ರಿಗ್ನೋಮೆಟ್ರಿಕ್ ಸಮೀಕ್ಷಾ ಕಚೇರಿಗೆ ಕಳುಹಿಸಲ್ಪಟ್ಟರು, ಅಲ್ಲಿ ಅವರು ಎರಡು ವರ್ಷಗಳ ತರಬೇತಿಗೆ ಒಳಗಾಗಿದ್ದರು.ಇದರಲ್ಲಿ ವೈಜ್ಞಾನಿಕ ಉಪಕರಣಗಳು ಮತ್ತು ಅಳತೆ ಮತ್ತು ರೆಕಾರ್ಡಿಂಗ್ ಮತ್ತು ಮಾರುವೇಷದ ಕಲೆಗಳ ಚತುರ ವಿಧಾನಗಳ ಬಳಕೆಗೆ ತರಬೇತಿ ನೀಡಲಾಯಿತು
- ನೈನ್ ಸಿಂಗ್ ರಾವತ್ ಅಸಾಧಾರಣ ಬುದ್ಧಿವಂತರಾಗಿದ್ದರು ಮತ್ತು ಸೆಕ್ಸ್ಟಂಟ್ ಮತ್ತು ದಿಕ್ಸೂಚಿ ಮುಂತಾದ ವೈಜ್ಞಾನಿಕ ಸಾಧನಗಳನ್ನು ಸರಿಯಾಗಿ ಬಳಸಿದರು. ಅವರು ಎಲ್ಲಾ ಪ್ರಮುಖ ನಕ್ಷತ್ರಗಳು ಮತ್ತು ವಿಭಿನ್ನ ನಕ್ಷತ್ರಪುಂಜಗಳನ್ನು ಸುಲಭವಾಗಿ ಗುರುತಿಸುತಿದ್ದರು.
- ಪರಿವರ್ತಿತ ಬೌದ್ಧ ರೋಸರಿ ಅಥವಾ ಮಲಾವನ್ನು ಬಳಸಿಕೊಂಡು ಒಂದು ಚತುರ ವಿಧಾನದಿಂದ ದೂರವನ್ನು ದಾಖಲಿಸಲು ಅವರಿಗೆ ತರಬೇತಿ ನೀಡಲಾಯಿತು.108 ಮಣಿಗಳನ್ನು ಹೊಂದಿರುವ ಹಿಂದೂ ಅಥವಾ ಬೌದ್ಧ ಧರ್ಮದಂತೆಯೇ ಈ ರೋಸರಿ 100 ಮಣಿಗಳನ್ನು ಹೊಂದಿತ್ತು.
- ಅನುಮಾನವನ್ನು ತಪ್ಪಿಸಲು, ಈ ಪರಿಶೋಧಕರು ಸನ್ಯಾಸಿಗಳು ಅಥವಾ ವ್ಯಾಪಾರಿಗಳಾಗಿ ವೇಷಧರಿಸಿ ಕಾರ್ಯವನ್ನು ಕೈಗೊಳ್ಳುತ್ತಿದ್ದರು. .
- ಮಾಪನದ ಟಿಪ್ಪಣಿಗಳು ಲಿಖಿತ ಪ್ರಾರ್ಥನೆಗಳ ರೂಪದಲ್ಲಿ ಬರೆಯುತ್ತಿದ್ದರು. [೩]
ಗಮನಾರ್ಹ ಪರಿಶೋಧನೆಗಳು
[ಬದಲಾಯಿಸಿ]- 1865-66ರಲ್ಲಿ, ನೈನ್ ಸಿಂಗ್ ಕಠ್ಮಂಡೂದಿಂದ ಲಾಸಾಕ್ಕೆ 1200 ಮೈಲುಗಳಷ್ಟು ಪ್ರಯಾಣಿಸಿ ಅಲ್ಲಿಂದ ಮನಾಸ ಸರೋವರ ಮತ್ತು ಭಾರತಕ್ಕೆ ಪ್ರಯಾಣಿಸಿದರು.
- 1873-75ರಲ್ಲಿ ಲಾಥ್ ನಿಂದ ಲಾಧಕ್ ಮೂಲಕ ಲಾಸಾದಿಂದ ಅಸ್ಸಾಂಗೆ .ಕೊನೆಯ ಮತ್ತು ಅತ್ಯಂತ ದೊಡ್ಡ ಪ್ರಯಾಣವಾಗಿತ್ತು.
- 1865 ನೇಪಾಳ ಪ್ರಯಾಣ .
- ಲಾಸಾದಲ್ಲಿದ್ದಾಗ, ಅವರ ನಿಜವಾದ ಗುರುತನ್ನು ಅಲ್ಲಿ ವಾಸಿಸುತ್ತಿದ್ದ ಇಬ್ಬರು ಕಾಶ್ಮೀರಿ ಮುಸ್ಲಿಂ ವರ್ತಕರು ಕಂಡುಹಿಡಿದರು. ಅವರು ಇದನ್ನು ಅಧಿಕಾರಿಗಳಿಗೆ ವರದಿ ಮಾಡಲಿಲ್ಲ ಪಶ್ಚಿಮ ಟಿಬೆಟ್ನಲ್ಲಿ ಮನ್ಸಾರೋವರ್ ಸರೋವರದ ಮೂಲಕ ಭಾರತಕ್ಕೆ ಮರಳಿದರು.
- 1867 ರಲ್ಲಿ ಸಿಂಗ್ ಎರಡನೇ ಪ್ರಯಾಣದಲ್ಲಿ, ಅವರು ಪಶ್ಚಿಮ ಟಿಬೆಟ್ನ್ನು ಅನ್ವೇಷಿಸಿದರು ಮತ್ತು ಪ್ರಸಿದ್ಧ ಥೋಕ್ ಜಲುಂಗ್ ಚಿನ್ನದ ಗಣಿಗಳನ್ನು ಭೇಟಿ ಮಾಡಿದರು.
- 1873-75ರಲ್ಲಿ, ಅವರು ಕಾಶ್ಮೀರದ ಲೇಹ್ದಿಂದ ಲಾಸಾಗೆ ಪ್ರಯಾಣಿಸಿದರು, ತ್ಸಾಂಗ್ಪೋದ ಉದ್ದಕ್ಕೂ ಒಂದಕ್ಕಿಂತ ಹೆಚ್ಚು ಮಾರ್ಗದಲ್ಲಿ ಅವರು ತಮ್ಮ ಮೊದಲ ಪ್ರಯಾಣವನ್ನು ಕೈಗೊಂಡರು.
ಪ್ರಶಸ್ತಿ
[ಬದಲಾಯಿಸಿ]- ಪರಿಶೋಧನೆಯ ತನ್ನ ಅದ್ಭುತ ಸಾಹಸಗಳನ್ನು ಗುರುತಿಸಿ, ಕರ್ನಲ್ ಹೆನ್ರಿ ಯೂಲೆ '"ಅವನ ಅನ್ವೇಷಣೆಯು ಯಾವುದೇ ಜೀವಂತ ವ್ಯಕ್ತಿಗಳಿಗಿಂತ ಏಷ್ಯಾದ ಭೂಮಿಗೆ ಹೆಚ್ಚು ಮಹತ್ವದ ಜ್ಞಾನವನ್ನು ಸೇರಿಸಿದೆ"' ಎಂದು ಕಾಮೆಂಟ್ ಮಾಡಿದ್ದಾರೆ. .
- 1868 ರಲ್ಲಿ ರಾಯಲ್ ಜಿಯಾಗ್ರಫಿಕ್ ಸೊಸೈಟಿಯಿಂದ (RGS) ಕೆತ್ತಿದ ಚಿನ್ನದ ಕಾಲಮಾಪಕವನ್ನು ನೈನ್ ಸಿಂಗ್ ಗೆ ನೀಡಲಾಯಿತು.
- 1877 ರಲ್ಲಿ ಆರ್ಜಿಎಸ್ನ ವಿಕ್ಟೋರಿಯಾ ಅಥವಾ ಪ್ಯಾಟ್ರಾನ್ ಪದಕ ಪ್ರಶಸ್ತಿ ನೀಡಲಾಯಿತು.
- ಪ್ಯಾರಿಸ್ ಭೂಗೋಳಶಾಸ್ತ್ರಜ್ಞರ ಸಂಘವು ಸಹ ನೈನ್ ಸಿಂಗ್ರನ್ನು ಕೆತ್ತಿದ ಗಡಿಯಾರವನ್ನು ನೀಡಿತು.
- ಭಾರತ ಸರ್ಕಾರವು ಎರಡು ಗ್ರಾಮಗಳನ್ನು ಅವರಿಗೆ ಭೂ-ಅನುದಾನವಾಗಿ ನೀಡಿತು.
ನಿಧನ
[ಬದಲಾಯಿಸಿ]ನೈನ್ ಸಿಂಗ್ ರಾವತ್ 1882 ರ ಫೆಬ್ರವರಿ 1 ರಂದು ಕಾಲರಾ ಮೊರಾದಾಬಾದ್ನಲ್ಲಿ ನಿಧನರಾದರು.
ಗೌರವ
[ಬದಲಾಯಿಸಿ]ಗೂಗಲ್ ಡೂಡಲ್ ನೈನ್ ಸಿಂಗ್ ರಾವತ್ ರ ಹುಟ್ಟುಹಬ್ಬವನ್ನು ೨೧ ಅಕ್ಟೋಬರ್ ೨೦೧೭ ರಂದು ಆಚರಿಸಿ ಗೌರವಿಸಿದೆ. [೪]
ಉಲ್ಲೇಖಗಳು
[ಬದಲಾಯಿಸಿ]- ↑ The dates are tentative. The date of birth is based on the Google Doodle. The date of death is based on an obituary letter where Col. Edmund Smyth notes in April 1882 that Nain Singh died of Cholera at Moradabad around the "1st of February last". He mentions an obituary in "the Times" dated 15 March.
- ↑ https://www.google.com/doodles/nain-singh-rawats-187th-birthday
- ↑ "Walking with Nain Singh". www.thehindu.com , 21 October 2017.
- ↑ https://www.ndtv.com/india-news/google-doodle-celebrates-birthday-of-explorer-nain-singh-rawat-1765190 Google Doodle Celebrates Birthday Of Explorer Nain Singh Rawat