ವಿಷಯಕ್ಕೆ ಹೋಗು

ನೆಪೋಲಿಯನ್ ಬೋನಪಾರ್ತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ನೆಪೊಲಿಯನ್ ಬೊನಪಾರ್ಟೆ ಇಂದ ಪುನರ್ನಿರ್ದೇಶಿತ)
ನೆಪೋಲಿಯನ್ ೧
ಫ್ರೆಂಚ್‌ನ ಚಕ್ರವರ್ತಿ
ಇಟಲಿಯ ರಾಜ
ಸ್ವಿಸ್ ಒಕ್ಕೂಟದ ಮಧ್ಯವರ್ತಿ
ರೈನ್ ಒಕ್ಕೂಟದ ಸಂರಕ್ಷಕ
ನೆಪೋಲಿಯನ್ ಬೋನಪಾರ್ತ್
ರಾಜ್ಯಭಾರಮಾರ್ಚ್ ೨೦ ೧೮೦೪ – ಏಪ್ರಿಲ್ ೬ ೧೮೧೪
ಮಾರ್ಚ್ ೧ ೧೮೧೫ – ಜೂನ್ ೨೨ ೧೮೧೫
ಪಟ್ಟಧಾರಣೆಡಿಸೆಂಬರ್ ೨ ೧೮೦೪
ಪೂರ್ಣ ಹೆಸರುನೆಪೋಲಿಯನ್ ಬೋನಪಾರ್ತ್ (ಅಥವಾ) ನೆಪೋಲಿಯನ್ ಬೊನಪಾರ್ಟೆ
ಹುಟ್ಟು(೧೭೬೯-೦೮-೧೫)೧೫ ಆಗಸ್ಟ್ ೧೭೬೯
ಹುಟ್ಟುಸ್ಥಳಅಜಾಕಿಯೊ, ಕೋರ್ಸಿಕ, ಫ್ರಾಂಸ್
ಸಾವು5 May 1821(1821-05-05) (aged 51)
ಸಾವಿನ ಸ್ಥಳಲಾಂಗ್‌ವುಡ್ ಸೇಂಟ್ ಹೆಲೆನ
ಪೂರ್ವಾಧಿಕಾರಿಫ್ರೆಂಚ್ ಕೊನ್ಸುಲೇಟ್,ಜಾಕೊಬಿನ್, ಲುಯಿಸ್ ೧೬
ಉತ್ತರಾಧಿಕಾರಿಲೂಯಿ ೧೮ (ಕಾರ್ಯತಃ)
ನೆಪೋಲಿಯನ್ ೨ (ನ್ಯಾಯತಃ)
Consort toಜೋಸೆಫೀನ್ ಡಿ ಬ್ಯೂಹಾರ್ನೈಸ್
ಆಸ್ಟ್ರಿಯಾದ ಮೇರಿ ಲೂಯಿಸ್
ಸಂತತಿನೆಪೋಲಿಯನ್ ೨
ತಂದೆಕಾರ್ಲೊ ಬೋನಪಾರ್ತ್
ತಾಯಿಲೆತಿಜಿಯೊ ರಾಮೊಲಿನೊ

ನೆಪೋಲಿಯನ್ ಬೋನಪಾರ್ತ್ (ಅಥವಾ) ನೆಪೋಲಿಯನ್ ಬೊನಪಾರ್ಟೆ (ಫ್ರೆಂಚ್: Napoléon Bonaparte; ಆಗಸ್ಟ್ ೧೫ ೧೭೬೯ – ಮೇ ೫ ೧೮೨೧)[] ಫ್ರಾನ್ಸ್ ದೇಶದ ಸೈನ್ಯ ಮತ್ತು ರಾಜಕೀಯ ನಾಯಕ. ಈತನ ಕಾರ್ಯಗಳಿಂದಾಗಿ ೧೯ನೇ ಶತಮಾನದಲ್ಲಿ ಯುರೋಪ್‍ನ ರಾಜಕೀಯ ಇತಿಹಾಸವೇ ಬದಲಾಯಿತು. ನೆಪೋಲಿಯನ್ ನು ಫ್ರೆಂಚಿನ ಇತಿಹಸದಲ್ಲಿ ೧೭೮೯ರ ಕ್ರಾಂತಿಯ ಶಿಶುವಗಿ ಹೊರ ಹೊಮ್ಮಿದನು. ಜೊಸೆಫೈನ್ಳನ್ನು ಮದುವೆಯಾದರು. ಪ್ರಪಂಚವನ್ನೆ ಗೆಲ್ಲಬೇಕೆಂಬ ಆಸೆಯಿಂದ ಇವರು ವಿಶ್ವದಲ್ಲಿ ಯುದ್ಧಗಳನ್ನು ನಡೆಸಿದರು.ಕೊನೆಗೆ ವಾಟೆರ್ಲೂ ಯುದ್ಧದಲ್ಲಿ ಸೋಲನ್ನು ಅನುಭವಿಸಿ ಸೈಂಟ್ ಹೆಲೆನಎಂಬ ದ್ವೀಪದಲ್ಲಿ ತಮ್ಮ ಕೊನೆಯ ದಿನಗಳನ್ನು ಅನುಭವಿಸಿದರು.

ಬಾಲ್ಯ

[ಬದಲಾಯಿಸಿ]
ಯುವ ಸೈನಿಕ ನೆಪೋಲಿಯನ್

ನೆಪೋಲಿಯನ್ ಕೊರ್ಸಿಸಾ ಊರಿನ ಅಜ್ಜೈಕೋ ಗ್ರಾಮದಲ್ಲಿ ೧೫ನೇ ಆಗಸ್ಟ್ ೧೭೬೯ರಲ್ಲಿ ಹುಟ್ಟಿದ್ದು.ಎಂಟು ಮಕ್ಕಳಲ್ಲಿ ಎರಡೆಯವನಾದ ಇವನಿಗೆ ನೆಪೋಲೆಯೋನ್ ದಿ ಬ್ಯುಒನಪರ್ಟೆಎಂದು ನೇಮಿಸಿದರು.ಇವನ ತಂದೆ ಕಾರ್ಲೋ ಬೊನಪಾರ್ಟೆ ಫ್ರೆಂಚ್ ರಾಜ ಲುಯಿಸ್ ೧೬(louis XVI)ನ ಅರಮನೆಯಲ್ಲಿ ಕೊರ್ಸಿಸಾದ ಪ್ರತಿನಿಧಿಯಾಗಿದ್ದರು.

ಸೈನ್ಯ

[ಬದಲಾಯಿಸಿ]

ಸೀಜ್ ಆಫ್ ಟೂಲನ್ ಮತ್ತು ೧೩ ವೆಂಡೆಮಿಯರ್

[ಬದಲಾಯಿಸಿ]

೧೭೭೯ರಲ್ಲಿ ೯ವರ್ಷದ ನೆಪೋಲಿಯನ್ಬ್ರಿಯೆನ್ನ ಸೈನ್ಯವನ್ನು ಸೇರಿದ.೧೭೮೯ರ ಫ್ರೆಂಚ್ ಕ್ರಾಂತಿ ಫ್ರಾನ್ಸ್ ದೇಶದಲ್ಲಿ ಜಗಳಗಳನ್ನು ಉಂಟು ಮಾಡಿತ್ತು.೧೭೯೩ಯ "ಸೀಜ್ ಆಫ್ ಟೂಲನ್"ಯುದ್ಧದಲ್ಲಿ ನೆಪೋಲಿಯನ್ ಸೈನ್ಯವನ್ನು ಮುನ್ನಡಿಸಿ ಜಯವನ್ನು ತಂದನು.೫ ಅಕ್ಟೋಬರ್ ೧೭೯೫ರಲ್ಲಿ "೧೩ ವೆಂಡೆಮಿಯರ್"ರಲ್ಲಿಯು ಜಯ ಸಾದಿಸಿದ ಇವನನ್ನು ಯೋಗ್ಯ ಸೈನ್ಯ ನಾಯಕನೆಂದು ಗುರುತಿಸಿದರು.

ಇಟಲಿ ಮತ್ತು ಈಜಿಪ್ಟ್ ದೇಶಗಳಲ್ಲಿ ಚಳುವಳಿ

[ಬದಲಾಯಿಸಿ]

೧೭೯೬ರಲ್ಲಿ ಇಟಲಿ ದೇಶದ ಮೇಲೆ ಚಳುವಳಿ ನಡೆಸಿ ಆಸ್ಟ್ರಿಯ ಮತ್ತು ಸಾರ್ಡಿನಿಯಾ ಸೈನ್ಯಗಳನ್ನು ಸೋಲಿಸಿದನು.ಲೊಂಬಾರಿ ಹಾಗು ಮಂಟುವಾಗಳನ್ನು ವಶಪಡಿಸಿಕೊಂಡನು.೧೭೯೮ರಲ್ಲಿ ಈಜಿಪ್ಟ್ ದೇಶದ ಚಳುವಳಿ ಮಾಡಲು ಹೋದ ನೆಪೋಲಿಯನ್ ೧೭೯೯ರಲ್ಲಿ ಬ್ರುಮೈರ್ ಆಡಳಿತ ಆಕ್ರಮಣೆ(ಕೂಪ್)ಯಲ್ಲಿ ಕೈ ನೀಡಿದನು. ನೆಪೋ==ಪ್ರಾನ್ಸ್ ಚಕ್ರವರ್ತಿ==

ಆಲ್ಪ್ಸ್ ದಾಟುತ್ತಿರುವ ಬೊನಪಾರ್ಟೆ

ಅಕ್ಟೋಬರ್ ೧೭೯೯ರಲ್ಲಿ ನೆಪೋಲಿಯನ್ ಗೆಲುವಿನ ಯುದ್ಧಗಳ ನಂತರ ಪ್ಯಾರಿಸ್ಗೆ ವಾಪಾಸ್ ಬಂದನು.ಆ ಸಮಯದಲ್ಲಿ ಪ್ರಾನ್ಸ್ ಅವಸ್ಥೆ ಸರಿಯಾಗಿರಲಿಲ್ಲ.ಫ್ರೆಂಚ್ ಕ್ರಾಂತಿಯಾದ ಮೇಲೆ ಬಂದ ಜಾಕೊಬಿನ್ ಸರ್ಕಾರ ಬಿದ್ದು, ಫ್ರಾನ್ಸ್ ದೇಶವನ್ನು ಕೈಗೆ ತೆಗೆದುಕೊಂಡಿದ್ದ ದೈರೆಕ್ಟರಿ ಜಗಳವಾಡುತ್ತಿತ್ತು.ಈ ಕಾರಣ ನೆಪೋಲಿಯನ್ ಧಿಡೀರ್ ಸೈನ್ಯ ಕ್ರಾಂತಿಯನ್ನು ನಡೆಸಿ ಆಡಳಿತ ಆಕ್ರಮಣವನ್ನು ಮಾಡಿದನು(coup).

೧೮೦೦ರಲ್ಲಿ ನೆಪೋಲಿಯನ್ ಆಲ್ಪ್ಸ್ ಪರ್ವತಗಳನ್ನು ದಾಟಿ ತನ್ನ ಶಕ್ತಿಯನ್ನು ಖಚಿತ ಪಡಿಸಿಕೊಂಡನು.ಇವನನ್ನು ಸಾಮಾಜಿಕ ತೊಂದರೆ ನಿವಾರಕ" ಎಂದು ನೋಡತೊಡಗಿದರು.

ಪಟ್ಟಾಭಿಶೇಕ ಆದಮೇಲೆ ನೆಪೋಲಿಯನ್ ಬೊನಪಾರ್ಟೆ

೨ನೆ ಡಿಸಂಬರ್ ೧೮೦೪ರಲ್ಲಿ ಗ್ರಾಂಡ್ ಕೊರೋನೇಷನ್ ಕಾರ್ಯಕ್ರಮದಲ್ಲಿ ಎಲ್ಲರ ಮುಂದೆ ನೆಪೋಲಿಯನ್ ಪ್ರಾನ್ಸ್ ಚಕ್ರವರ್ತಿಎಂದು ಪಟ್ಟಾಭಿಶೇಕ ಮಾಡಿಸಿಕೊಂಡನು.೧೮೦೫ರಲ್ಲಿ ಇಟಲಿ ರಾಜನಾದ ಇವನಿಗೆ 'ಐರನ್ ಕ್ರೌನ್ ಅಫ್ ಲೊಂಬಾರ್ಡಿ'(ಲೊಂಬಾರ್ಡಿಯ ಕಿರೀಟ)ಯನ್ನು ತಲೆಯ ಮೇಲಿಟ್ಟರು.

ಸುಧಾರಣೆಗಳು

[ಬದಲಾಯಿಸಿ]
  1. ನೆಪೋಲಿಯನಿಕ್ ಕೋಡ್-ಇಡೀ ಫ್ರಾನ್ಸ್ ದೇಶದಲ್ಲಿ ಇವನ ಆಳ್ವಿಕೆಯಲ್ಲಿ ಕಾನೂನು ಕೋಡ್ ಮಾಡಿದ್ದನು.ಇದೇ ನೆಪೋಲಿಯನಿಕ್ ಕೋಡ್.ಇದರಲ್ಲಿ ಸಮಾನತೆ, ಜಾತ್ಯಾತೀತ ಮುಂತಾದ ಸರ್ಕಾರವನ್ನು ರೂಪಿಸಿದ್ದನು.ಆದರೆ ಫ್ರೆಂಚ್ ಕ್ರಾಂತಿಯು ಮಹಿಳೆಯರಿಗೆ ತಂದು ಕೊಟ್ಟ ಹಕ್ಕುಗಳನ್ನು ತೆಗೆದುಹಾಕಿದನು.
  2. ಧಾರ್ಮಿಕ ಸುಧಾರಣೆಗಳು-೧೮೦೧ರಲ್ಲಿ ಕೊಂಕೋರ್ಡಟ್ನಲ್ಲಿ ಕತೋಲಿಕ್ ಗಳ ಜತೆ ಶಾಂತಿ ಮಾಡಿದನು.
  3. ಆರ್ಥಿಕ ಸುಧಾರಣೆ-ಆರ್ಥಿಕತೆಯನ್ನು ಹೆಚ್ಚಿಸಲು ನೆಪೋಲಿಯನ್ ಹೊಸ ಕೈಗಾರಿಕಾ ಉದ್ಯಮವನ್ನು ಬೆಂಬಲಿಸಿದನು.
  4. ಲೋಕೋಪಯೋಗಿ- ರಸ್ತೆಗಳನ್ನು ಹಾಗು ನೀರಿನ ಕೊಡ್ಲುಗಳನ್ನು ತಯಾರಿಸಿಸಿ ಜನರಿಗೆ ಸಹಾಯ ಮಾಡಿದನು.ಶಿಕ್ಷಣದಲ್ಲು ಸುದಾರಣೆಯನ್ನು ತಂದ ಇವನು ಶಾಲೆಗಳನ್ನು ಸರ್ಕಾರದ ಕೆಳಗೆ ತೆಗೆದುಕೊಂಡು ಮಕ್ಕಳನ್ನು ಶಾಲೆಗೆ ಬರುವಹಾಗೆ ಮಾಡಿದನು.ಹಾಗೆಯೆ ಇಡೀ ಫ್ರಾನ್ಸ್ನಲ್ಲಿ ಏಕಪ್ರಕಾರದ ಅಳತೆ ಸಾಧನವನ್ನು ತಂದನು.
  5. ಯುದ್ಧ ಸುಧಾರಣೆ-ಯುದ್ಧ ತಂತ್ರಜ್ಞಾನ, ಸೇನಾ ನಡೆಸುವಿಕೆ ಹಾಗು ಆಯುಧ ವಿಜ್ಞಾನಕ್ಕೆ ಫ್ರಾನ್ಸ್ನಲ್ಲಿ ಇವನದ್ದೆ ಹೆಸರು.

ದಿ ಗ್ರಾಂಡ್ ಎಂಪೈರ್

[ಬದಲಾಯಿಸಿ]

ಚಕ್ರವರ್ತಿ ನೆಪೋಲಿಯನ್ನಿಗೆ ಇಡೀ ಜಗತ್ತನ್ನೇ ಗೆಲ್ಲಬೇಕೆಂಬ ಆಸೆಯಿತ್ತು.ಇದರಂತೆ ೧೮೦೫ರಲ್ಲಿ ಆಸ್ತರ್ಲಿಟ್ಜಿ ಯುದ್ಧದಲ್ಲಿ ಆಸ್ಟ್ರಿಯ ಮತ್ತು ರಷ್ಯಾ ಸೈನ್ಯಗಳನ್ನು ಸೋಲಿಸಿ, ೧೮೦೬ರಲ್ಲಿ ಜೇನ ಎಂಬ ಊರಿನಲ್ಲಿ ಪ್ರಷ್ಯಾ ಸೈನ್ಯವನ್ನು ಮುಳುಗಿಸಿದನು.ಅದೇ ವರ್ಷದಲ್ಲಿ ದಚ್ ರಾಜ್ಯವನ್ನು ಗೆದ್ದು ಗ್ರಾಂಡ್ ಎಂಪೈರ್ ಸೃಷ್ಟಿಸಿದನು.

೧೦೦ ದಿನಗಳು ಹಾಗು ಸೋಲು

[ಬದಲಾಯಿಸಿ]
ವಾಟರ್ಲೂ ಯುದ್ಧ

ನೆಪೋಲಿಯನ್ ಆಸೆ ಪೂರ್ಣವಾಗಲು ಲೈಪ್ಜಿಗ್ ಯುದ್ಧ ತಡೆಯಾಯಿತು.ಅದರಲ್ಲಿ ನೆಪೋಲಿಯನ್ ಮೊದಲನೇ ಸೂಲನ್ನು ನೋಡಿ ಎಲ್ಬಾ ದ್ವೀಪಕ್ಕೆ ಗಡಿಪಾರು ಮಾಡಲಾಯಿತು(sent for exile).ನೆಪೋಲಿಯನ್ ಅಲ್ಲಿಂದ ತಪ್ಪಿಸಿಕೊಂಡು ಪ್ರಾನ್ಸ್ಗೆವಾಪಸ್ ಬಂದನು.ಮತ್ತೊಮ್ಮೆ ರಾಜನಾಗಿ ೧೦೦ದಿನಗಳ ಕಾಲ ಪ್ರಾನ್ಸ್ ಆಳಿದನು. ವಾಟರ್ಲೂ ಯುದ್ಧದಲ್ಲಿ ಮತ್ತೊಮ್ಮೆ ಸೋಲನ್ನು ಅನುಭವಿಸಿ, ಸೈಂಟ್ ಹೆಲೆನ ದ್ವೀಪಕ್ಕೆ ಗಡಿಪಾರಾಗಿ ಹೋದನು.ವಾಟರ್ಲೂ ಅವನ ಕೊನೆಯ ಯುದ್ಧ.

ಕೊನೆಯ ದಿನಗಳು

[ಬದಲಾಯಿಸಿ]
ನೆಪೋಲೆಯನ್ ವಿಧಿವಶ

ನೆಪೋಲಿಯನ್ ಇನ್ನೈದು ವರ್ಷಗಳನ್ನು ಹೆಲೆನ ದ್ವೀಪದಲ್ಲೆ ಕಳೆದನು.ಇವನ ಆರೊಗ್ಯ ಅಸ್ಥಿರವಾಗಿದ್ದು ಟ್ಯೂಬರ್ಕ್ಯುಲೋಸಿಸ್ ಹಾಗು ಲಿವರ್ ತೊಂದರೆಗಳು ಅಂಟಿತ್ತು. ಮೇ ೫ ೧೮೨೧ರಂದು ಹೊಟ್ಟೆಯ ಕಾನ್ಸರ್ದಿಂದಾಗಿ ನೆಪೋಲಿಯನ್ ವಿಧಿವಶನಾದನು. ಆದರೆ ಇಂದಿಗು ಇವನ ಸಾವಿನ ಕಾರಣ ವಿವಾದಾಸ್ಪದವಾಗಿದ್ದು ನಿಘೂಡ ಎನ್ನಿಸುತ್ತದೆ.ಕೆಲುವರು ನೆಪೋಲಿಯನ್ ಸತ್ತಿದ್ದು ಕಾನ್ಸರ್ದಿಂದಾಗಿ ಎಂದರೆ ಕೆಲುವರು ಅವನನ್ನು ಅರ್ಸೆನಿಕ್ ವಿಷದಿಂದ ಸಾಯಿಸಿದ್ದು ಎನ್ನುತ್ತಾರೆ.

ಇಂದು ಕೂಡ

[ಬದಲಾಯಿಸಿ]
ಚೆರ್ಬೋ-ಒಕ್ಟೆವಿಲ್ಲ್ನಲ್ಲಿ ಇರುವ ನೆಪೋಲಿಯನ್ ಮೂರ್ತಿ.

ಇಂದಿಗೂ ಫ್ರಾನ್ಸ್ ದೇಶ ನೆಪೋಲಿಯನ್ ದಿನಗಳ ಬಗ್ಗೆ ಹೆಮ್ಮೆ ಪಡುತ್ತದೆ.ಇವನ ನೆಪೋಲಿಯನಿಕ್ ಕೋಡ್ ಈಗಿನ ಫ್ರೆಂಚ್ ಸಂವಿಧಾನವನ್ನು ರೂಪಿಸುತ್ತದೆ.ಆಯುಧ ವಿಜ್ಞಾನ, ಸೇನಾ ನಡವಳಿಕೆ, ಯುದ್ಧ ತಂತ್ರಜ್ಞಾನ ಈಗಲು ಬಳಿಕೆಯಲ್ಲಿದೆ. ವಿಶ್ವದ ಅಡಿಯಲ್ಲಿ ನೆಪೋಲಿಯನ್ ತನ್ನ ನಡತೆಯಿಂದ ಜನರ ಮನಗಳನ್ನು ಗೆದ್ದು, ಅವರಲ್ಲಿ ಮಹತ್ತರ ಬದಲಾವಣೆಯ ಕಲ್ಪನೆಯನ್ನು ಹಾಕಿದನು.ನೆಪೋಲಿಯನ್ ಇಡೀ ವಿಶ್ವವನ್ನು ಗೆಲ್ಲಲಿಕ್ಕಾಗದಿದ್ದರು, ಯುರೋಪ್ ಜನರಲ್ಲಿ ದೇಶಭಕ್ತಿ ಮನೋಭಾವನೆಯನ್ನು ರೋಪಿಸ

ವೈಯಕ್ತಿಕ ಜೀವನ

[ಬದಲಾಯಿಸಿ]
ಮೊದಲನೆ ಹೆಂಡತಿ ಜೋಸೆಫೈನ್
ಎರಡನೆ ಹೆಂಡತಿ ಮೇರಿ ಲುಯಿಸಿ

೧೭೯೬ರಲ್ಲಿ ನೆಪೋಲಿಯನ್ ಜೋಸೆಫೈನ್ಳನ್ನು ಮದುವೆಯಾದನು.ಜೋಸೆಫೈನ್ ಮಕ್ಕಳನ್ನು ಹೆರದ ಕಾರಣ ೧೮೧೦ರಲ್ಲಿ ಮೇರಿ ಲುಯಿಸಿಳನ್ನು ಮದುವೆಯಾದನು.ಇವರಿಬ್ಬರಿಗೆ ನೆಪೋಲಿಯನ್ ಚಾರ್ಲೆಸ್ ಎಂಬ ಮಗನು ಹುಟ್ಟಿದನು.ಅವನು ಮುಂದೆ ನೆಪೋಲಿಯನ್-೨ ಎಂದು ಪ್ರಸಿದ್ಧಿಯಾದನು.

ಉಲ್ಲೇಖಗಳು

[ಬದಲಾಯಿಸಿ]
  1. McLynn, Frank (1998). Napoleon. Pimlico.. p. 6. ISBN 0712662472.