ವಿಷಯಕ್ಕೆ ಹೋಗು

ನೀಳತೆ (ಖಗೋಳಶಾಸ್ತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಈ ಚಿತ್ರವು ಸೂರ್ಯನಿಂದ ಭೂಮಿಯ ಸ್ಥಿತಿಯ ನೀಳತೆಗಳನ್ನು (ಅಥವಾ ಕೋನವನ್ನು) ತೋರಿಸುತ್ತದೆ.

ನೀಳತೆ - ಖಗೋಳಶಾಸ್ತ್ರದಲ್ಲಿ ಉಪಯೋಗಿಸಲ್ಪಡುವ ಈ ಪದವು, ಭೂಮಿಯಿಂದ ನೋಡಿದಂತೆ ಸೂರ್ಯ ಮತ್ತು ಒಂದು ಗ್ರಹದ ನಡುವಿನ ಕೋನವನ್ನು ಸೂಚಿಸುತ್ತದೆ.

ಒಂದು ನೀಚ ಗ್ರಹವು ಸೂರ್ಯಾಸ್ತದ ನಂತರ ಗೋಚರಿಸಿದರೆ, ಅದು ತನ್ನ ಗರಿಷ್ಠ ಪೂರ್ವ ನೀಳತೆಯ ಬಳಿ ಇರುತ್ತದೆ. ನೀಚ ಗ್ರಹವು ಸೂರ್ಯೋದಯದ ಮುನ್ನ ಗೋಚರಿಸಿದರೆ, ಅದು ತನ್ನ ಗರಿಷ್ಠ ಪಶ್ಚಿಮ ನೀಳತೆಯ ಬಳಿ ಇರುತ್ತದೆ. ಬುಧ ಗ್ರಹದ ಗರಿಷ್ಠ ನೀಳತೆಗಳು (ಪೂರ್ವ ಅಥವಾ ಪಶ್ಚಿಮ) ೧೮° - ೨೮°ಗಳ ನಡುವೆ ಇರುತ್ತವೆ; ಶುಕ್ರ ಗ್ರಹದ ನೀಳತೆಗಳು ೪೫° - ೪೭°ಗಳ ನಡುವೆ ಇರುತ್ತವೆ. ಗ್ರಹಗಳ ಕಕ್ಷೆಗಳು ವೃತ್ತಾಕಾರದಲ್ಲಿರದೆ, ದೀರ್ಘವೃತ್ತಾಕಾರದಲ್ಲಿ ಇರುವುದರಿಂದ, ಈ ನೀಳತೆಗಳು ಒಂದು ಸ್ಥಿರ ಪ್ರಮಾಣದಲ್ಲಿರದೆ, ಬದಲಾಗುತ್ತವೆ.

ಬುಧವನ್ನು ವಸಂತ ವಿಷುವದ ಸಮಯದಲ್ಲಿ ಸಂಜೆಯ ಆಗಸದಲ್ಲಿ (ಅದು ಪೂರ್ವ ನೀಳತೆಯಲ್ಲಿದ್ದಾಗ) ಮತ್ತು ಶರದ್ ವಿಷುವದ ಸಮಯದಲ್ಲಿ ಹಗಲಿನ ಆಗಸದಲ್ಲಿ (ಅದು ಪಶ್ಚಿಮ ನೀಳತೆಯಲ್ಲಿದ್ದಾಗ) ನೋಡಬಹುದು. ಗ್ರಹಗಳು ತಮ್ಮ ಗರಿಷ್ಠ ನೀಳತೆಗಳನ್ನು ಮುಂದೆ ಎಂದು ಹೊಂದುತ್ತವೆ ಎಂದು ತಿಳಿಯಲು, ಖಗೋಳಶಾಸ್ತ್ರ ಕೋಷ್ಟಕಗಳನ್ನು ಅಥವಾ www.heavens-above.com ದಂತಹ ಅಂತರಜಾಲ ತಾಣಗಳನ್ನು ನೋಡಿ.

೨೦೦೭ರಲ್ಲಿ ಶುಕ್ರವು ಜೂನ್ ೯ರಂದು ಗರಿಷ್ಠ ಪೂರ್ವ ನೀಳತೆಯನ್ನೂ, ಮತ್ತು ಅಕ್ಟೋಬರ್ ೨೮ರಂದು ಗರಿಷ್ಠ ಪಶ್ಚಿಮ ನೀಳತೆಯನ್ನೂ ಹೊಂದುತ್ತದೆ. ಬುಧವು ಗರಿಷ್ಠ ಪೂರ್ವ ನೀಳತೆಗಳನ್ನು ಫೆಬ್ರವರಿ ೭, ಜೂನ್ ೨, ಮತ್ತು ಸೆಪ್ಟೆಂಬರ್ ೨೯ರಂದೂ, ಹಾಗೂ ಗರಿಷ್ಠ ಪಶ್ಚಿಮ ನೀಳತೆಗಳನ್ನು ಮಾರ್ಚ್ ೨೨, ಜುಲೈ ೨೦ ಮತ್ತು ನವೆಂಬರ್ ೮ರಂದು ಹೊಂದುತ್ತದೆ.

ಇವನ್ನೂ ನೋಡಿ

[ಬದಲಾಯಿಸಿ]